Breaking News

ಬೆಳಗಾವಿ

ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಬೆಳಗಾವಿ ಜಿಲ್ಲೆ ಒಂದು ಇಲ್ಲ

ರಾಜ್ಯದಲ್ಲಿ ಇಂದು ಹೊಸದಾಗಿ 8 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟೂ ಸೋಂಕಿತರ ಸಂಖ್ಯೆ 520ಕ್ಕೇರಿದೆ. ಕಲಬುರ್ಗಿಯಲ್ಲಿ ಇಂದು 6 ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರು ಹಾಗೂ ಗದಗದಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ. ಬೆಳಗಾವಿ ಸೇರಿದಂತೆ ರಾಜ್ಯದ ಬೇರೆ ಯಾವುದೇ ಭಾಗಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಕಲಬುರ್ಗಿಯಲ್ಲಿ ಪತ್ತೆಯಾಗಿರುವ 6 ಪ್ರಕರಣಗಳಲ್ಲಿ ನಾಲ್ವರು ಮಹಿಳೆಯರು. 22 ಹಾಗೂ 28 ವರ್ಷದ ಯುವತಿಯರಿಗೂ ಸೋಂಕು ತಗುಲಿದೆ.

Read More »

ಒಟ್ಟಾರೆಯಾಗಿ ಬೆಳಗಾವಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಒಟ್ಟು 794 ದಾಳಿ…….

ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಿರುತ್ತದೆ.  ದಿನಾಂಕ 24-03-2020 ರಿಂದ ಇಲ್ಲಿಯವರೆಗೆ ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು- ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ,ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿರುತ್ತದೆ.  ಒಟ್ಟಾರೆಯಾಗಿ ಬೆಳಗಾವಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಒಟ್ಟು …

Read More »

ಯೋಧನನ್ನು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಿರುವುದು ಖಂಡನೀಯ:ಸಚಿವರ ಕಿಡಿ

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ತನ್ನ ಮನೆ ಮುಂದೆ ವಾಹನ ತೊಳೆಯುತ್ತಿದ್ದ ಯೋಧನನ್ನು ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಿರುವುದು ಖಂಡನೀಯ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಯೋಧನೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಬ್ಬ ಯೋಧ ಎನ್ನುವುದನ್ನೂ ಗಮನಿಸದೇ ಸಾರ್ವಜನಿಕವಾಗಿ ಹಿಂಸಿಸಿ, ಒಬ್ಬ ಕೈದಿಯಂತೆ ಕೈಗೆ ಕೋಳ ತೊಡಿಸಿ ಬಂಧಿಸಿರುವುದನ್ನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಲು ಸಾಧ್ಯವಿಲ್ಲ ಎಂದು ಸಚಿವರು ಕಿಡಿ ಕಾರಿದ್ರು. …

Read More »

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರು ಸಿ.ಆರ್.ಪಿ.ಎಫ್ ಯೋಧನ ಮೇಲೆ ಹಲ್ಲೆ ನಡೆಸಿ ಬೇಡಿ ತೋಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರು ಸಿ.ಆರ್.ಪಿ.ಎಫ್ ಯೋಧನ ಮೇಲೆ ಹಲ್ಲೆ ನಡೆಸಿ ಬೇಡಿ ತೋಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಏಪ್ರಿಲ್ 23ರಂದು ಈ ಘಟನೆ ನಡೆದಿದ್ದು, ಯೋಧ ಸಚಿನ ಸಾವಂತ್ ಅವರನ್ನು ಪೊಲೀಸ್ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸದಲಾಗ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಪಿ.ಎಫ್ ಕೋಬ್ರಾ ಕಮಾಂಡೋ ಯೋಧನಿಗೆ ಬೇಡಿ ಹಾಕಿ ಕೂರಿಸಿದ್ದ …

Read More »

ಲಾಕ್ ಡೌನ್: 794 ಅಬಕಾರಿ ದಾಳಿ- ಮದ್ಯ, ವಾಹನ ಸೇರಿದಂತೆ 1.10 ಕೋಟಿ ಮೌಲ್ಯದ ವಸ್ತು ಜಪ್ತಿ

ಬೆಳಗಾವಿ, ಏ.೨೭(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಿರುತ್ತದೆ. ದಿನಾಂಕ 24-03-2020 ರಿಂದ ಇಲ್ಲಿಯವರೆಗೆ ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು- ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ, ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿರುತ್ತದೆ. …

Read More »

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಾರತಮ್ಯ ಸಲ್ಲದು: ಸತೀಶ ಜಾರಕಿಹೊಳಿ

ಚಿಕ್ಕೋಡಿ: ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ಅವರು ಕೊರೋನಾ ಸೋಂಕು ಕುರಿತು ಜಾಗೃತಿ ಬಗ್ಗೆ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಯಾವ ರೀತಿ ‌ನಾವು ಶ್ರಮಿಸಬೇಕು ಪಕ್ಷದ ಕಾರ್ಯಕರ್ತರು ಹೇಗೆಲ್ಲ ಸ್ಪಂದನೆ ನೀಡಬೇಕು ಎಂಬುದರ ಕುರಿತು ಇಲ್ಲಿನ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ‌ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಟಿಯಲ್ಲಿ‌‌ ಮಾತನಾಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಾರತಮ್ಯ ಸಲ್ಲದು ಎಂದು ಹರಿಹಾಯ್ದರು. ಕೇಂದ್ರ ಸರ್ಕಾರ ನೇರವಾಗಿ ವಿವಿಧ ಯೊಜನೆಗಳ ಫಲಾನುಭವಿಗಳಿಗೆ ಹಣ ನೀಡುವ …

Read More »

ಕೊರೋನಾ ಪರಿಹಾರ ನಿಧಿಗೆ1.15 ಸಾವಿರ ರೂ. ಚೆಕ್ ಸತೀಶ ಜಾರಕಿಹೊಳಿ ಸ್ವೀಕರಿಸಿದರು.

ಚಿಕ್ಕೋಡಿ: ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಇಂದು 1.15 ಸಾವಿರ ರೂ. ಚೆಕ್ ಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ವೀಕರಿಸಿದರು. ರಾಯಬಾಗ ತಾಲೂಕಿನ‌ ಹಾರೂಗೇರಿ ಪಟ್ಟಣದ ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ ಅವರು ವ್ಯಯಕ್ತಿಕವಾಗಿ 1 ಲಕ್ಷ ರೂ ಮತ್ತು ನದಲಾಪುರ ಗ್ರಮದ ನಂದೀಶ್ವರ ಪ್ರಾಥಮಿಕ ‌ಕೃಷಿ ಪತ್ತಿನ ಸಂಘ ವತಿಯಿಂದ 15 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, …

Read More »

ಗುಜರಾತ ರಾಜ್ಯಪಾಲರು ಹಾಗು ಗುಜರಾತಿನ ಸಂಸದರ ಮನವಿಗೆ ಕರ್ನಾಟಕ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳಿಗೆ ಅಹ್ಮದಾಬಾದ್ ಗೆ ತೆರಳಲು ಅನುಮತಿ

ಬೆಳಗಾವಿ- ಗುಜರಾತ ರಾಜ್ಯಪಾಲರು ಹಾಗು ಗುಜರಾತಿನ ಸಂಸದರ ಮನವಿಗೆ ಕರ್ನಾಟಕ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳಿಗೆ ಅಹ್ಮದಾಬಾದ್ ಗೆ ತೆರಳಲು ಅನುಮತಿ ನೀಡಿದೆ‌. ಸಾರಿಗೆ ಸಂಸ್ಥೆಯ ಮೂರು ರಾಜಹಂಸ ಬಸ್ ಗಳಲ್ಲಿ ಸುಮಾರು 45 ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಗುಜರಾತಿಗೆ ತೆರಳಿದ್ದಾರೆ. ನಿನ್ನೆ ಸಂಜೆ ಈ ಮೂರು ಬಸ್ಸು ಗಳು ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಡಿಸೈಲ್ ತುಂಬಿಸಿಕೊಂಡು ಮುಂದಕ್ಕೆ ಸಾಗಿವೆ …

Read More »

ಕಾಂಗ್ರೆಸ್ ಮುಖಂಡರು ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ರಾಜಕೀಯ ಲಾಭ ಪಡೆಯುತ್ತಿದ್ದಾರೆ: ಮಹೇಶ ಕುಮಟಳ್ಳಿ

ಅಥಣಿ: ಕಾಂಗ್ರೆಸ್ ಮುಖಂಡರು ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಶಾಸಕ‌ ಮಹೇಶ ಕುಮಟಳ್ಳಿ ಕಿಡಿಕಾರಿದ್ದಾರೆ. ಶಾಸಕ‌ ಮಹೇಶ ಕುಮಟಳ್ಳಿ ಕಾಣೆಯಾಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ‌ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಖಂಡರನಷ್ಟು ಕೀಳು ರಾಜಕೀಯಕ್ಕೆ ನಾನು ಇಳಿಯಲ್ಲ. ಅಧಿಕಾರಿಗಳು ಹಾಗೂ ಜನರ ಮಧ್ಯೆ ಇದ್ದು, ಕೊರೊನಾ ಸೋಂಕು ಹರಡದಂತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದರು.‌ ಪ್ರತಿನಿತ್ಯ ಅವರ ಮನೆಗೆ ಹೋಗಿ ಭೇಟಿ …

Read More »

ತರಾತುರಿಯಲ್ಲಿ ಮಾಡಿದ ಲಾಕಡೌನ್ ನಿಂದ ಸಮಸ್ಯೆಯಾಗಿದೆ: ಸತೀಶ ಜಾರಕಿಹೋಳಿ

    ಕೊಣ್ಣೂರ :ಕೊರೋನಾ ತಡೆಗಟ್ಟಲು ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅನೂಕೂಲವಾಗುಂತಹ ಕೆಲಸ ರಾಜ್ಯ ಸರ್ಕಾರ ಮಾಡಬೇಕಾಗಿದೆ ಎಂದು ಗೋಕಾಕ ತಾಲೂಕಿನ ಕೊಣ್ಣೂರಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಪಿಸಿಸಿಯ ಕಾರ್ಯಾದಕ್ಷರಾದ ಸತೀಶ ಜಾರಕಿಹೋಳಿಯವರು ಬೇಟಿ ನೀಡಿ ವೈದ್ಯರ ಜೊತೆ ಚರ್ಚಿಸಿ ಅಲ್ಲಿನ ಕುಂದುಕೊರತೆಗಳನ್ನು ವಿಚಾರಿಸಿ ಮಾಸ್ಕ ವಿತರಿಸಿದರು ಇದೆ ಸಂದರ್ಭದಲ್ಲಿ ಮಾದ್ಯಮದವರಿಗೆ ಉತ್ತರಿಸಿದ ಅವರು ನಮ್ಮ ಪಕ್ಷದ ವತಿಯಿಂದ ಒಂದು ಲಿಸ್ಟ್ ಮಾಡಿ ಬಡವರಿಗೆ ತಲುಪಿಸುವಂತೆ ಮುಖ್ಯಮಂತ್ರಿಗಳಿಗೆ …

Read More »