Breaking News

ಬೆಳಗಾವಿ

ಕೊರೊನಾ: ಶಂಕಿತರ ಐವರಲ್ಲಿ, 2 ವರದಿಗಳು ನೆಗೆಟಿವ್: ಡಾ.ಎಸ್.ಬಿ. ಬೊಮ್ಮನಹಳ್ಳಿ

ಬೆಳಗಾವಿ : ಕೊರೊನಾ ಶಂಕಿತರನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅವರಲ್ಲಿ ಇಬ್ಬರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಯೋಗಾಲಯಕ್ಕೆ ಕಳಿಸಲಾದ ವರದಿಗಳ ಪೈಕಿ ಒಂದು ಮಾದರಿಯನ್ನು ಪರೀಕ್ಷೆಗೆ ಪರಿಗಣಿಸಿರುವುದಿಲ್ಲ. ಒಂದು ನೆಗೆಟಿವ್ ಬಂದಿರುತ್ತದೆ. ಆದ್ದರಿಂದ ಐದು ಮಾದರಿಗಳ ಪೈಕಿ ಎರಡು ಮಾದರಿಗಳು ನೆಗೆಟಿವ್ ಎಂದು ಅಧಿಕೃತ ಪ್ರಕಟಿಸಲಾಗಿದೆ. ಇನ್ನುಳಿದ 3 ಮಾದರಿಗಳ ವರದಿ‌ ನಿರೀಕ್ಷಿಸಲಾಗಿದೆ. ಹೊಸದಾಗಿ ಮತ್ತೊಂದು ಮಾದರಿಯನ್ನು ಪ್ರಯೋಗಾಲಯಕ್ಕೆ …

Read More »

ಕರ್ನಾಟಕ ವಿಧಾನಸಭೆಯ ಉಪಸಭಾಪತಿಯಾಗಿ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಆಯ್ಕೆ

ಕರ್ನಾಟಕ ವಿಧಾನಸಭೆಯ ಉಪಸಭಾಪತಿಯಾಗಿ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ ಆಯ್ಕೆಯಾಗಿದ್ದಾರೆ. ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಮಾಮನಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಅವರ ಆಯ್ಕೆ ಖಚಿತವಾಗಿದೆ. ಮಂಗಳವಾರ ಈ ಕುರಿತು ಅಧಿಕೃತ ಘೋಷಣೆಯಾಗಲಿದ್ದು, ಅಂದೇ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ತಮ್ಮ ತಂದೆಯೂ ಉಪಸಭಾಪತಿಯಾಗಿ ಕೆಲಸ ಮಾಡಿದ್ದರಿಂದ ತಮ್ಮನ್ನೂ ಉಪಸಭಾಪತಿ ಮಾಡಬೇಕೆನ್ನುವ ಬೇಡಿಕೆಯನ್ನು ಮಾಮನಿ ಮುಂದಿಟ್ಟಿದ್ದರು. ಆದರೆ ಅರಗ ಜ್ಞಾನೇಂದ್ರ ಕೂಡ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದರಿಂದ ತೊಡಕಾಗಿತ್ತು. …

Read More »

144 ಉಲ್ಲಂಘಿಸಿದರೆ ಕ್ರಿಮಿನಲ್  ಕೇಸ್!!

ಬೆಳಗಾವಿ: ಬೈಲಹೊಂಗಲದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿ ಸತ್ಯಕ್ಕೆ ದೂರುವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ  ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಆ ಭಾಗದ ವರದಿ ನೆಗೆಟಿವ್ ಬಂದಿರುವುದರಿಂದ ಜನರು ಆತಂಕಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 144 ಉಲ್ಲಂಘಿಸಿದರೆ ಕ್ರಿಮಿನಲ್  ಕೇಸ್!! ಈಗಾಗಲೇ 144  ಕಲಂ ಮೇರೆಗೆ ಐದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದು ಅಥವಾ ಒಟ್ಟಾಗಿ ಸಂಚರಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಒಂದು …

Read More »

144ಕಾಯ್ದೆ ಜಾರಿಗೆ 31 ಮಾರ್ಚ್ ವರಗೆ ಬಂದ್

ಘಟಪ್ರಭಾ :ಕರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರದಾನ ಮಂತ್ರಿಯವರು ಕರೆ ನೀಡಿದ ಜನತಾ ಕರ್ಪ್ಯೂಗೆ ಜನರಿಂದ ನಿನ್ನೆ ಪೂರ್ವ ಬೆಂಬಲ ವ್ಯಕ್ತವಾಗಿದೆ ಬೆಳಗಾವಿ ಜಿಲ್ಲೆಯ ಗೋಕಾಕ ಸೇರಿದಂತೆ ಘಟಪ್ರಭಾ,ಕೊಣ್ಣೂರ ಪಟ್ಟಣ ಸಂಪೂರ್ಣ ಬಂದ ಮಾಡಿ ಬೆಂಬಲ ವ್ಯಕ್ತ ಪಡಿಸಿದರು ತಮ್ಮಗೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಂಡು ಮನೆಯಿಂದ ಹೊರಗಡೆ ಬರದೆ ಕರ್ಪ್ಯೂಗೆ ಬೆಂಬಲ ಸೂಚಿಸಿ ಗೋಕಾಕ ತಾಲೂಕಿನ‌ ಜನತೆ ಪ್ರದಾನ ಮಂತ್ರಿ ತೆಗೆದುಕೊಂಡ ನಿರ್ಣಯವನ್ನು ಮನಪೂರ್ವಕವಾಗಿ ಸ್ವಾಗತಿಸಿದ್ದಾರೆ.   ಘಟಪ್ರಭಾ, …

Read More »

ಜನತಾ ಕರ್ಪ್ಯೂ ಬೆಂಬಲಿಸಿದ ರಾಜ್ಯದ ಜನತೆಗೆ ಸಚಿವ ರಮೇಶ ಜಾರಕಿಹೊಳಿ ಅಭಿನಂದನೆ

ಗೋಕಾಕ : ಮಾನವ ಕುಲಕ್ಕೇ ಮಹಾಮಾರಿಯಾಗಿ ರೂಪಿತವಾಗಿರುವ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಜನತಾ ಕರ್ಫ್ಯೂಗೆ ಜನತೆ ಬೆಂಬಲಿಸಿದ ಹಿನ್ನೆಲೆ ಮಾತಾನಾಡಿದ ಅವರು,ಕೊರೊನಾ ವೈರಸ್ ಸೋಂಕು ಸಾಮುದಾಯಿಕವಾಗಿ ಹರಡದಂತೆ ಇನ್ನು ಕೆಲ ವಾರಗಳ ಕಾಲ ಸ್ವಯಂ ಕರ್ಫ್ಯೂ ಆಚರಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಾವುಗಳು ಜಾಗೃತರಾಗಿದ್ದು ಈ ಸೋಂಕನ್ನು ಎದುರಿಸಿ ಸ್ವಸ್ಥ ಭಾರತವನ್ನು ನಿರ್ಮಿಸಬೇಕಾಗಿದೆ. ಇದಕ್ಕಾಗಿ …

Read More »

ಜನತಾ ಕರ್ಫ್ಯೂ ಉಲ್ಲಂಘಿಸಿ ನೂರಾರು ಜನರಿಗೆ ಊಟ ಹಾಕಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​; ವರದಿಗೆ ಹೋದ ವರದಿಗಾರನಿಗೆ ಧಮ್ಕಿ

ಬೆಳಗಾವಿ: ಇಂದು ಜನತಾ ಕರ್ಫ್ಯೂ ಇದ್ದರೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ತನಗೂ, ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸಿದ್ದಾರೆ. ಅದನ್ನು ಪ್ರಶ್ನಿಸಿದ ವರದಿಗಾರನಿಗೆ ಹೆಬ್ಬಾಳ್ಕರ್​ ಕುಟುಂಬ ಧಮ್ಕಿ ಹಾಕಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ಜನತಾ ಕರ್ಫ್ಯೂ ಉಲ್ಲಂಘನೆ ಮಾಡಿ ಮನೆ ಆವರಣದಲ್ಲಿ ಸಾರ್ವಜನಿಕ ಸಮಾರಂಭ ಆಯೋಜಿಸಿದ್ದಾರೆ. ಕಾರ್ಯಕರ್ತರು ಸೇರಿ ನೂರಾರು ಜನರಿಗೆ ಊಟ ಹಾಕುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಕರೊನಾ ವೈರಸ್ ನಿಯಂತ್ರಣಕ್ಕಾಗಿ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದರೂ …

Read More »

ನಾಳೆ ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್ ನಾ

ನಾಳೆ ರಾಜ್ಯಾದ್ಯಂತ ಸಾರಿಗೆ ಸೇವೆ ಬಂದ್ ನಾಳೆಯಿಂದ ಮಾರ್ಚ್‌ 31ರವರೆಗೆ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮಂಗಳೂರು ಕಲಬುರ್ಗಿ ಮೈಸೂರು ಧಾರವಾಡ ಚಿಕ್ಕಬಳ್ಳಾಪುರ ಕೊಡಗು ಮತ್ತು ಬೆಳಗಾವಿ ಅಗತ್ಯ ಸೇವೆಗಳು ಹೊರತುಪಡಿಸಿ ವಾಣಿಜ್ಯ ಚಟುವಟಿಕೆಗಳು ಲಾಕ್‌ ಡೌನ್

Read More »

ಜನತಾ ಕರ್ಫ್ಯೂ ವಿರೋಧಿಸಿ ಮನೆ ಹೊರಗೆ ಕೂತ ವಾಟಾಳ್

ಬೆಂಗಳೂರು: ಇಡೀ ವಿಶ್ವವೇ ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸಕ್ಕೆ ಆತಂಕಕ್ಕೊಳಗಾಗಿದೆ. ಇತ್ತ ಭಾರತದಲ್ಲೂ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ದೇಶಾದ್ಯಂತ ‘ಜತನಾ ಕರ್ಫ್ಯೂ’ ಜಾರಿಯಾಗಿದೆ. ಇದಕ್ಕೇ ರಾಜ್ಯದ ಜನತೆ ಕೂಡ ಸಾಥ್ ಕೊಟ್ಟಿದ್ದಾರೆ. ಆದ್ರೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ ತಮ್ಮ ಮನೆ ಗೇಟ್ ಮುಂದೆ ಖುರ್ಚಿ ಹಾಕಿಕೊಂಡು ಕುಳಿತು, ನಾನು ಮನೆ ಒಳಗೆ ಇರಲ್ಲ ಹೊರಗೆ ಇರ್ತಿನಿ ಎಂದು ಮುಖಕ್ಕೆ ಮಾಸ್ಕ್ ಧರಿಸಿ …

Read More »

ಜನತಾ ಕರ್ಫ್ಯೂ ಗೆ ಬೆಂಬಲಿಸಿದ ರಮೇಶ್ ಜಾರಕಿಹೊಳಿ

ಗೋಕಾಕ: ದೇಶಾದ್ಯಂತ ಕೊರೋನಾ ವೈರಸ್ ನ ಭೀತಿ ಎದುರಾಗಿರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ನಾಳೆ, ಮಾರ್ಚ್ 22ರ ಭಾನುವಾರದಂದು ಜನತಾ ಕರ್ಫ್ಯೂ ಆಚರಿಸುವಂತೆ ಕರೆ ನೀಡಿದ್ದು, ಭಾರತದ ಒಬ್ಬ ಜಾಗೃತ ಪ್ರಜೆಯಾಗಿ, ಸಂಕಲ್ಪ ಹಾಗೂ ಸಂಯಯದಿಂದ ಈ ’ಜನತಾ ಕರ್ಫ್ಯೂ’ ಪಾಲಿಸುವದು ನಮ್ಮೆಲ್ಲರ ಆದ್ಯ ಕರ್ತವ್ಯ. ನಾಳೆ ಸ್ವಯಂ ಪ್ರೇರಣೆಯಿಂದ ನಡೆಯಲಿರುವ ’ಜನತಾ ಕರ್ಫ್ಯೂ’ವನ್ನು ಬೆಂಬಲಿಸೋಣ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರು‌ ಜನರಲ್ಲಿ ಮನವಿ ಮಾಡಿದ್ದಾರೆ. …

Read More »

ಇಡೀ ರಾಷ್ಟ್ರವೇ ಭಾನುವಾರ ಜನತಾ ಕರ್ಫ್ಯೂದಲ್ಲಿದ್ದರೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಮ್ಮ ತಂಡದೊಂದಿಗೆ ಗಾರ್ಡನ್ ನಲ್ಲಿ, ಇದ್ದಾರಾ?…

ಇಡೀ ರಾಷ್ಟ್ರವೇ ಭಾನುವಾರ ಜನತಾ ಕರ್ಫ್ಯೂದಲ್ಲಿದ್ದರೆ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ತಮ್ಮ ತಂಡದೊಂದಿಗೆ ಗಾರ್ಡನ್ ನಲ್ಲಿದ್ದರು ಬೆಳಗಾವಿಯ ಛತ್ರಪತಿ ಶಿವಾಜಿ ಗಾರ್ಡನ್ ನಲ್ಲಿ ಅಭಯ ಪಾಟೀಲ ಭಾನುವಾರ ಬೆಳಗ್ಗೆ ತಮ್ಮ ಸಹವರ್ತಿಗಳೊಂದಿಗೆ ಡೆಟಾಲ್ ಸಿಂಪರಣೆಯಲ್ಲಿ ತೊಡಗಿದ್ದರು. ಕೊರೋನಾ ವೈರಸ್ ಹರಡದಂತೆ ಗಾರ್ಡನ್ ನಲ್ಲಿರುವ ಮಕ್ಕಳ ಆಟಿಕೆಗಳು, ಕುಳಿತುಕೊಳ್ಳುವ ಆಸನಗಳು ಸೇರಿದಂತೆ ಎಲ್ಲೆಡೆ ಡೆಟಾಲ್ ಸಿಂಪಡಿಸಿ ಸ್ವಚ್ಛಗೊಳಿಸಿದರು. ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿಯನ್ನು ಈ …

Read More »