ಬೆಳಗಾವಿ -: ಕೋವಿಡ್-೧೯ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರ ಕುಟುಂಬಗಳಿಂದ ನೇರವಾಗಿ ಸೀರೆ ಖರೀದಿಸುವುದು ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಚಿವರಾದ ಶ್ರೀಮಂತ ಪಾಟೀಲ ಭರವಸೆ ನೀಡಿದರು. ಪ್ರವಾಸಿಮಂದಿರದಲ್ಲಿ ಮಂಗಳವಾರ (ಜೂ.9) ನಡೆದ ನೇಕಾರರ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಹೊಲಿಗೆ ಯಂತ್ರ ಖರೀದಿ, ವಿದ್ಯುತ್ ಮಗ್ಗಗಳ ಅಳವಡಿಕೆ …
Read More »ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆಗಾಗಿ ಸರಕಾರಕ್ಕೆ ಮನವಿ………….
ಚಿಕ್ಕೋಡಿ: ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಬದಲಾವಣೆಗಾಗಿ ಸುಪ್ರಿಂಕೋರ್ಟ್ ನೀಡಿರುವ ಆದೇಶವನ್ನು ಅನುಷ್ಠಾನಗೊಳಿಸಲು ಸರಕಾರ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶ ನೀಡುವಂತೆ ಒತ್ತಾಯಿಸಿ ಮಂಗಳವಾರ ಮೂಲ ಪರಿಶಿಷ್ಟ ಜಾತಿಗಳ ಒಕ್ಕೂಟದ ವತಿಯಿಂದ ಉಪವಿಭಾಗಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು. ಲಂಬಾಣಿ(ಬಂಜಾರ), ಭೋವಿ, ಕೊರಚ ಕೊರಮ ಮುಂತಾದ ಸಮುದಾಯದ ಜನರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯಲು ಸುಪ್ರಿಂಕೋರ್ಟ್ ಆದೇಶ ಮಾಡಿರುತ್ತದೆ. ಆದ್ದರಿಂದ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಗೆ ಸುಪ್ರಿಂಕೋರ್ಟ್ ಆದೇಶ ಅನುಷ್ಠಾನಗೊಳಿಸಲು ಸೂಚನೆ ನೀಡಬೇಕು.ಸುಪ್ರಿಂಕೋರ್ಟಿಗೆ ಅನುಪಾಲನ …
Read More »ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಒಗ್ಗಟ್ಟು
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ರಾಜ್ಯಸಭೆ ಟಿಕೇಟ್ ವಿಚಾರವಾಗಿ ನಡೆದ ಬೆಳಗಾವಿ ಜಿಲ್ಲೆಯ ನಾಯಕರ ಗುದ್ದಾಟ ರಾಜ್ಯ ರಾಜಕೀಯವನ್ನೆ ತಲ್ಲಣಗೊಳಿಸುವ ಮಟ್ಟಿಗೆ ಬಂದಿತ್ತು. ಅಂತಿಮವಾಗಿ ಇಬ್ಬರ ಜಗಳಗಳಲ್ಲಿ ಮೂರನೇಯವರು ಟಿಕೆಟ್ ಗಿಟ್ಟಿಸಿಕೊಂಡಿದ್ದು ಆಯಿತು. ಈಗ ರಾಜ್ಯಸಭೆ ಟಿಕೇಟ್ ವಂಚಿತರಾಗಿರುವ ರಮೇಶ ಕತ್ತಿ ಮತ್ತು ಅವರಿಗಾಗಿ ತೀವ್ರ ಲಾಬಿ ನಡೆಸಿದ್ದ ಸಹೋದರ ಉಮೇಶ ಕತ್ತಿ ಅವರಿಗೆ ಇಂದು ನಳೀನ್ …
Read More »ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ
ರಾಜ್ಯದ ಹಿರಿಯ ನಾಯಕರಾದ ಗೌರವಾನ್ವಿತ ಶ್ರೀ ಮಲ್ಲಿಕಾರ್ಜುನ ಖರ್ಗೆ ಜೀಯವರು ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಶ್ರೀ ಮಲ್ಲಿಕಾರ್ಜುನ ಖರ್ಗೆಜೀಯರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ ಉತ್ತುಂಗಕ್ಕೆ ಬೆಳಯಲಿ ಹಾಗೂ ಅವರ ಮಾರ್ಗದರ್ಶನವೂ ನಮ್ಮೆಲ್ಲ ಕಾಂಗ್ರೆಸ್ ಪಕ್ಷದವರಿಗೆ ದಾರಿದೀಪವಾಗಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ ಕೆ ಶಿವಕುಮಾರ ಜೀ, ವಿರೋಧ ಪಕ್ಷದ ನಾಯಕರಾದ …
Read More »ಬೆಳಗಾವಿ:…ಜವಳಿ ಸಚಿವ ಪಾಟೀಲ್ ತವರಿನಲ್ಲೇ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ
ಬೆಳಗಾವಿ: ಜವಳಿ ಸಚಿವ ಶ್ರೀಮಂತ ಪಾಟೀಲ್ ತವರು ಜಿಲ್ಲೆಯಲ್ಲೇ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಬಾಧೆ ತಡೆಯಲಾರದೆ ವಾರದಲ್ಲಿ ಮೂವರು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಬೆಳಗಾವಿ ನಗರದ ವಡಗಾಂವ ನಿವಾಸಿ ಸುಜಿತ್ ಉಪರಿ (38), ಹುಕ್ಕೇರಿ ತಾಲೂಕಿನ ಆನಂದಪುರ ನಿವಾಸಿ ಶಂಕರ (60), ವಡಗಾಂವ ನಿವಾಸಿ ಸುವರ್ಣ ಕಾಮ್ಕರ್ (47) ಆತ್ಮಹತ್ಯೆಗೆ ಶರಣಾದ ನೇಕಾರರು. ಕೊರೊನಾ ನಡುವೆ ಕೆಲಸವಿಲ್ಲದೇ ಕುಟುಂಬ ಸಾಗಿಸಲಾಗದೆ, ಸಾಲದ ಕಿರುಕುಳಕ್ಕೆ ಬೇಸತ್ತು ನೇಕಾರರು ಆತ್ಮಹತ್ಯೆಯತ್ತ ಮುಖ …
Read More »ಕೋರೆ ಕತ್ತಿ ಕಿತ್ತಾಟ,ಈರಣ್ಣಾ ಕಡಾಡಿಗೆ ಒಲಿದು ಬಂದ ರಾಜ್ಯ ಸಭಾ ಟಿಕೆಟ್……
ಬೆಳಗಾವಿ- ಇಬ್ಬರ ಜಗಳ ಮೂರನೇಯ ವ್ಯೆಕ್ತ ಗೆ ಯಾವ ರೀತಿ ಲಾಭ ಮಾಡಿ ಕೊಡುತ್ತದೆ ಎನ್ನುವದಕ್ಜೆ ಕೋರೆ ಕತ್ತಿ ಕಿತ್ತಾಟವೇ ಅದಕ್ಕೆ ಸಾಕ್ಷಿಯಾಗಿದ್ದು.ರಾಜ್ಯ ಸಭಾ ಟಿಕೆಟ್ ಈರಣ್ಣಾ ಕಡಾಡಿಗೆ ಒಲಿದು ಬಂದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣಾ ಕಡಾಡಿ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು ಬಿಜೆಪಿ ಹೈಕಮಾಂಡ್ ಪ್ರಾಮಾಣಿಕ ಕಾರ್ಯಕರ್ತನಿಗೆ ರಾಜ್ಯಸಭಾ ಟಿಕೆಟ್ ನೀಡಿದ್ದು ಕಿತ್ತಾಟ ನಡೆಸಿದ ಪ್ರಭಾವಿ ನಾಯಕರಿಗೆ ಅಚ್ಚರಿ ಮೂಡಿಸಿದೆ. …
Read More »ನಾವು ಆತ್ಮೀಯ ಸ್ನೇಹಿತನನ್ನ ಕಳ್ಕೊಂಡಿದ್ದೇವೆ: ರಾಧಿಕಾ ಸಂತಾಪ………….
ಬೆಂಗಳೂರು: ನಾವು ಇಂದು ಆತ್ಮೀಯ ಸ್ನೇಹಿತ ಚಿರುವನ್ನು ಕಳೆದುಕೊಂಡಿದ್ದೇವೆ ಎಂದು ನಟಿ ರಾಧಿಕಾ ಪಂಡಿತ್ ಚಿರಂಜೀವಿ ಸರ್ಜಾ ಅವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಚಿರಂಜೀವಿನ ಸಾವಿನ ಸುದ್ದಿ ತಿಳಿದ ತಕ್ಷಣ ಈ ಬಗ್ಗೆ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. “ನನಗೆ ಚಿರಂಜೀವಿ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ, ಸುಂದರ ಆತ್ಮ ನಮ್ಮನ್ನು ಬಿಟ್ಟು ಬೇಗನೇ ಹೋಗಿದೆ. ಹೀಗಾಗಿ ಪತ್ನಿ ಮೇಘನಾ, ಧ್ರುವ, ಅವರ ಅಮ್ಮ …
Read More »ಶ್ರೀ ರಮೇಶ ಜಾರಕಿಹೊಳಿ ಯವರಿಗೆ ಕುರುಬರ ವತಿಯಿಂದ ಸನ್ಮಾನಿಸಿ ಟಗರು ಕೊಡಲಾಯಿತು
ಗೋಕಾಕ : ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಗೊಕಾಕ ನಗರಕ್ಕೆ ಆಗಮಿಸಿದ್ದ ರಮೇಶ ಅಣ್ಣಾ ಜಾರಕಿಹೊಳಿ ಅವರಿಗೆ ಗೋಕಾಕ ತಾಲೂಕಿನ ಕುರುಬರ ವತಿಯಿಂದ ಸನ್ಮಾನಿಸಿ ಟಗರು ಕೊಡಲಾಯಿತು ………. ಅದೇ ಸಂದಭ೯ದಲ್ಲಿ ಬೆಳಗಾವಿ ಸುವರ್ಣ ಸೌದದ ಆವರಣದಲ್ಲಿ ದೇಶ ಪ್ರೇಮಿ ಕ್ರಾಂತಿಯ ಜ್ಯೋತಿ ಹಚ್ಚಿದ ಕ್ರಾಂತೀವಿರ ಸಂಗೊಳ್ಳಿ ರಾಯಣ್ಣನ ಬೃಹತ್ ಪ್ರತಿಮೆಯನ್ನು ಪ್ರತಿಸ್ಟಾಪಿಸಬೆಕೆಂದು ಕ್ರಾಂತೀವಿರ ಸಂಗೊಳ್ಳಿ ರಾಯಣ್ಣ ಸೇನೆಯ ವತಿಯಿಂದ ಹಾಗೂ ಸಮಾಜದ ಯುವಕರು ಹಾಗೂ ರಾಯಣ್ಣನ ಅಭಿಮಾನಿಗಳು ಮನವಿಯನ್ನು …
Read More »ವೀಕೆಂಡ್ ಬೆನ್ನಲ್ಲೇ ನೆಲಮಂಗಲದಲ್ಲಿ ಫುಲ್ ಟ್ರಾಫಿಕ್…………..
ಬೆಂಗಳೂರು: ವೀಕೆಂಡ್ ಬೆನ್ನಲ್ಲೇ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್ ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟೋಲ್ ಮೂಲಕ ಸಾವಿರಾರು ವಾಹನಗಳು ಹೊರ ಜಿಲ್ಲೆಗಳಿಗೆ ಪಯಣ ಬೆಳೆಸುತ್ತಿದೆ. ಜೂನ್ 8 ರಿಂದ 5ನೇ ಹಂತದ ಲಾಕ್ ಡೌನ್ ಸಡಿಲಿಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳು ಓಪನ್ ಆಗಲಿದ್ದು, ಹೀಗಾಗಿ ಜನರು ಇಂದೇ ಹೊರಟ್ರಾ ಅನ್ನೋ ಅನುಮಾನ ಮೂಡಿದೆ. ಯಾಕೆಂದರೆ ಗುಂಪು …
Read More »ಗೋಕಾಕ ನಗರದಲ್ಲಿ ರಮೇಶ್ ಜಾರಕಿಹೊಳಿಕೆಲವು ಮಹತ್ವ ವಿಷಯ ಗಳ ಬಗ್ಗೆ ಚರ್ಚೆ…………….
ಗೋಕಾಕ :ಇಂದು ಗೋಕಾಕ ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ ನಗರ ಅಭಿವೃದ್ಧಿಗೆ ಹೆಚ್ಚಿನ್ ಒತ್ತು: ಈಗಾಗಲೇ ನಗರಸಭೆ ಅಧಿಕಾರಿಗಳ ಮತ್ತು ಸದಸ್ಯರ ಸಭೆ ನಡೆಯಿಸಿ ನಗರದ ಸಮಗ್ರ ಅಭಿವೃದ್ಧಿಯನ್ನು ತ್ವರಿತವಾಗಿ ಮುಗಿಸಲು ಸೂಚಿಸಲಾಗಿದೆ ಆದಷ್ಟು ಬೇಗ ನಗಯದಲ್ಲಿ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವದು ಎಂದು ರಮೇಶ ಜಾರಕಿಹೊಳಿ ಹೇಳಿದರು ನಗರಸಭೆ ಅಧಿಕಾರಿಗಳು ಕಛೇರಿಗೆ ಬಂದ ಸಾರ್ವಜನಿಕ ರೊಂದಿಗೆ ಸರಿಯಾಗಿ ವರ್ತಿಸದೆ ಸತಾಯಿಸುತ್ತಿದ್ದಾರೆ ಎಂದು ಪತ್ರಕರ್ತರು …
Read More »