Breaking News

ಬೆಳಗಾವಿ

ಒಂದು ದಿನದ ಮಗುವನ್ನ ದೇವಸ್ಥಾನದಲ್ಲಿ ಬಿಟ್ಟು ಹೋದ ಪಾಪಿಗಳು

ಚಿಕ್ಕೋಡಿ/ಬೆಳಗಾವಿ: ಒಂದು ದಿನದ ನವಜಾತ ಗಂಡು ಮಗುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹೊರವಲಯದ ಬಸವೇಶ್ವರ ದೇವಸ್ಥಾನದಲ್ಲಿ ಹೆರಿಗೆಯ ನಂತರ ಗಂಡು ಮಗುವನ್ನು ಕೈಚೀಲದಲ್ಲಿ ಇಟ್ಟು ಪರಾರಿಯಾಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆಗೆ ಮಗು ಅಳುವಿನ ಧ್ವನಿ ಕೇಳಿದ ಸ್ಥಳೀಯರು ಮಗುವನ್ನು ರಕ್ಷಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಶಾ ಕಾರ್ಯಕರ್ತೆಯರು ಹಾಗೂ …

Read More »

ಗಲ್ಲಿ- ಗಲ್ಲಿಗೆ ತೆರಳಿ ಜಾಗೃತಿ ಮೂಡಿಸಿದ ಸ್ಥಳಿಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು.

  ಗೋಕಾಕ: ತಾಲೂಕಿನ ಧುಪದಾಳ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಸೇರಿದಂತೆ ಪೋಲಿಸ್ ಇಲಾಖೆ ಅಧಿಕಾರಿಗಳ ವತಿಯಿಂದ ಧುಪದಾಳ ಗ್ರಾಮದಲ್ಲಿ ಪ್ರತಿ ಗಲ್ಲಿ ಗಲ್ಲಿಗಳಿಗೆಯ ಮನೆ ಮನೆಗಳಿಗೆ ತೆರಳಿ ಮನೆ ಬಿಟ್ಟು ಹೊರಗೆ ಬರದಂತೆ ಅಂಗನವಾಡಿ ಕಾರ್ಯಕರ್ತೆ ಮನವಿ ಮಾಡಿಕೊಳ್ಳುವ ಮೂಲಕ ಕೊರೊನೋ ವೈರಸ್ ಬಗ್ಗೆ ಮುದ್ರಣ ಪತ್ರಿಕೆ ನೀಡಿ ಜಾಗೃತಿ ಮೂಡಿಸಲಾಗಿತ್ತು. ಇನ್ನು ಈ ಕೊರೊನೋ ಜಾಗೃತಿಯಲ್ಲಿ ಪೋಲಿಸ್ ಅಧಿಕಾರಿಗಳು , ಆರೋಗ್ಯ …

Read More »

ಸುದ್ದಿ ಮಾಡಲು ಹೋದ ವರದಿಗಾರನಿಗೆ ಮ್ಯಾನೆಜರನಿಂದ ದರ್ಪ

ಜಗತ್ತಿನ ತುಂಬ ಕರೊನಾ ವೈರಸ್ ತಡೆಯುವ ಬಗ್ಗೆ ಮುಂಜಾಗೃತೆಗಾಗಿ ಸರಕಾರ ಎಲ್ಲ ಇಲಾಖೆಗಳಿಗೆ ಸೂಚನೆ ಮಾಡಿದೆ ಆದರೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲ್ಲಿರುವ ಕೆನರಾ ಬ್ಯಾಂಕ ಮ್ಯಾನೇಜರ್ ಕಲ್ಲಪ್ಪ ತೇಲಿ ಎಂಬ ಮ್ಯಾನೆಜರ ನಿಯಮ ಉಲ್ಲಂಘನೆ ಮಾಡಿ ಬ್ಯಾಂಕಿನ ಒಳಗಡೆ ಯಾರನ್ನು ತೆಗೆದುಕೊಳ್ಳದೆ ಹೊರಗಡೆ ಗ್ರಾಹಕರನ್ನು ನಿಲ್ಲಿಸಿ ಸತಾಯಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸುದ್ದಿ ಮಾಡಲು ತೆರಳಿದ ವರದಿಗಾರನ ಮೇಲೆ ದರ್ಪ ತೊರಿದ್ದಲ್ಲದೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಲ್ಲದೆ ನೀವು …

Read More »

ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ – ಸಮಾಜಕ್ಕೆ ಮಾದರಿಯಾದ ಕುಟುಂಬ

ಚಿಕ್ಕೋಡಿ (ಬೆಳಗಾವಿ): ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದ್ದು, ಸಭೆ ಸಮಾರಂಭ ಮತ್ತು ಮದುವೆಗಳು ರದ್ದಾಗಿವೆ. ಆದರೆ ಬೆಳಗಾವಿಯ ಜೋಡಿಯೊಂದು ಸಾಮಾಜಿಕ ಜಾಲತಾಣದ ಮೂಲಕ ಮದುವೆಯ ನಿಶ್ಚಿತಾರ್ಥ ನೆರವೇರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಹಾಗೂ ಶಿಕ್ಷಕರಾಗಿರುವ ಪ್ರಕಾಶ್ ಪಾಟೀಲ್ ಅವರು ತಮ್ಮ ಪುತ್ರಿ ಆಶಾ ಪಾಟೀಲ್ ಅವರ ನಿಶ್ಚಿತಾರ್ಥವನ್ನು ಬಾಗಲಕೋಟೆಯ ಮಹಾಂತೇಶ್ ಜೊತೆಗೆ ನೆರವೇರಿಸಿದರು. ಅತಿ ಸರಳವಾಗಿ ಸಾಮಾಜಿಕ ಜಾಲತಾಣದ …

Read More »

ಚಿಕ್ಕೋಡಿ ಪಟ್ಟಣದಲ್ಲಿ ಬುಧುವಾರ 52 ದ್ವಿಚಕ್ರವಾಹಗಳನ್ನು ಸೀಜ್ ಮಾಡಿದ್ದಾರೆ.

ಚಿಕ್ಕೋಡಿ : ಲಾಕ್‍ಡೌನ್ ಇದ್ದರೂ ಮನೆಯಿಂದ ಹೊರಗೆ ಬರಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡರೂ ಕೇಳದೇ ಅನಾವಶ್ಯಕವಾಗಿ ರಸ್ತೆಯಲ್ಲಿ ಅಡ್ಡಾಡಿ ಲಾಕ್‍ಡೌನ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಬುಧುವಾರ 52 ದ್ವಿಚಕ್ರವಾಹಗಳನ್ನು ಸೀಜ್ ಮಾಡಿದ್ದಾರೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ತೊಲಗಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಹೇರಲಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಲಾಕ್‍ಡೌನ್ ಪಾಲಿಸಿ ಎಂದು ಪೊಲೀಸರು ಮನವಿ ಮಾಡಿದರೂ ಕೇಳದ ಹಿನ್ನೆಲೆಯಲ್ಲಿ ಬುಧೂವಾರ ಡಿವೈಎಸ್ಪಿ ಮನೋಜ ನಾಯಿಕ …

Read More »

ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಆರೋಗ್ಯ ನಿರೀಕ್ಷಕರ ಸಂಘದಿಂದ ಹಣ ಸಹಾಯ ಮಾಡಿದರು

ಗೋಕಾಕ :ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕಾಗಿ ಆರೋಗ್ಯ ನಿರೀಕ್ಷಕರ ಸಂಘ ಗೋಕಾಕ ತಾಲ್ಲೂಕು ವತಿಯಿಂದ ಪ್ರದಾನಮಂತ್ರಿ ವಿಪತ್ತು ಪರಿಹಾರ ನಿಧಿಗೆ 10ಸಾವಿರ ರೂಪಾಯಿ ನೀಡಲಾಯಿತು. ಗೋಕಾಕ ತಾಲೂಕಿನ ಆರೋಗ್ಯ ನಿರೀಕ್ಷಕರ ಸಂಘದಿಂದ ಕೊರೋನಾ ವೈರಸ್ ಹಿನ್ನಲೆಯಲ್ಲಿ ಕೇಂದ್ರಸರ್ಕಾರ ಕೋರಿರುವ ಆರ್ಥಿಕ ನೆರವಿಗೆ ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ॥ಅಂಟಿನ್ ಸರ್ ಮುಖಾಂತರ ಹತ್ತು ಸಾವಿರ ರೂಪಾಯಿಗಳನ್ನು ಸಂದಾಯ ಮಾಡಲಾಯಿತು . ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ನಿರೀಕ್ಷಕರ ಸಂಘದ ಪದಾಧಿಕಾರಿಗಳಾದ ಶ್ರೀ …

Read More »

ಲಾಕ್‌ಡೌನ್ ಹಂತಹಂತವಾಗಿ ತೆರವು ಗೊಳಿಸಲು ಕೇಂದ್ರ ಕ್ರಮ‌ ಕೈಗೊಳ್ಳಬೇಕು‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೇಳಿದರು.

ಗೋಕಾಕ: ದೇಶದ ಆರ್ಥಿಕ ಪರಿಸ್ಥಿತಿಯನ್ನು ಕೂಡ ಗಮನದಲ್ಲಿಟ್ಟುಕೊಂಡು ಏಪ್ರಿಲ್ 14 ರ ನಂತರ ಲಾಕ್‌ಡೌನ್ ಹಂತಹಂತವಾಗಿ ತೆರವು ಗೊಳಿಸಲು ಕೇಂದ್ರ ಕ್ರಮ‌ ಕೈಗೊಳ್ಳಬೇಕು‌ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ‌ ಹೇಳಿದರು. ಇಂದು ಇಲ್ಲಿನ‌ ಗೃಹ ಕಚೇರಿ ಹಿಲ್‌ ಗಾರ್ಡನ್ ನಲ್ಲಿ ಪತ್ರಕರ್ತರಿಗೆ ಮತ್ತು ನಗರಸಭೆ ಸದಸ್ಯರಿಗೆ ಸ್ಯಾನಿಟೈಜರ್ ಮತ್ತು ಮಾಸ್ಕ್ ವಿತರಿಸಿದ ಬಳಿಕ ಅವರು ಮಾತನಾಡಿದರು. ಕೊರೋನಾ ಸೊಂಕು ಹರಡದಂತೆ ಲಾಕ್ ಡೌನ್ ಒಂದೇ ಉಪಾಯವಾಗಿದ್ದು ಸಹ ದೇಶದ …

Read More »

ಪಟ್ಟಣ ಶಾಂತಿ ಸೌಹಾರ್ದತೆ , ಐಕ್ಯತೆಗೆ ಹೆಸರುವಾಸಿ

ಮೂಡಲಗಿ ಪಟ್ಟಣ ಶಾಂತಿ ಸೌಹಾರ್ದತೆ , ಐಕ್ಯತೆಗೆ ಹೆಸರುವಾಸಿಯಾಗಿದ್ದು ಮಾದರಿ ಕೂಡ ವಾಗಿದೆ. ಈಗ ಕರೋನಾ ಕಂಟಕದಿಂದ ದೇಶ ಗಂಡಾಂತರದಲ್ಲಿದೆ ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಈ ಮಹಾ ಮಾರಿಯನ್ನು ಓಡಿಸಲು ನಮಗೆ ಸಹಕಾರ ನೀಡಿ . ದಿನದಿಂದ ದಿನಕ್ಕೆ ಕೊರೋನಾ ಸೋಂಕು ನಿರಂತರ ಹರಡುತ್ತಿದೆ ಆದ ಕಾರಣ ಮುಸ್ಲಿಂ ಬಾಂಧವರು ನಾಳೆ ದಿ.9ರಂದು ಆಚರಿಸುವ ಶಭೆ ಏ ಬಾರಾತ ನ್ನು ಮಸೀದಿ ಕಬ್ರಸ್ಥಾನಗಳಿಗೆ ಹೋಗದೆ ತಮ್ಮ ತಮ್ಮ ಮನೆಯಲ್ಲಿ ನಮಾಜ …

Read More »

ಮಗು ಕಣ್ಣಿರು ಸುರಿಸುವುದನ್ನು ನೋಡಿದೆರ ನಿಮ್ಮ ಕರುಳೂ ಕಿತ್ತು ಬರುವುದರಲ್ಲಿ ಸಂದೇಹವಿಲ್ಲ.

ಬೆಳಗಾವಿ – ಕೊರೋನಾ ವಿಶ್ವವನ್ನೇ ಎಂತಹ ಸಂಕಷ್ಟಕ್ಕೆ ದೂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಾವಿರ ಸಾವಿರ ಜನ ಪ್ರಣಾ ಕಳೆದುಕೊೆಡಿದ್ದರೆ, ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿ ಒದ್ದಾಡುತ್ತಿದ್ದಾರೆ. ಇದೆಲ್ಲ ಒಂದು ಮುಖವಾದರೆ ಇಲ್ಲಿ ಅದರ ಇನ್ನೊಂದು ಮುಖವಿದೆ. ಈ ವೀಡಿಯೋ ನೋಡಿ ಇಲ್ಲಿರುವ ಕಂದಮ್ಮ ಅಮ್ಮಾ ಎಂದು ಅಳುವುದನ್ನು ನೋಡಿದರೆ, ಆ ಅಮ್ಮಾ ಅಲ್ಲೇ ಇದ್ದರೂ ಮಗುವನ್ನು ಮುದ್ದಿಸಲಾಗದೆ ಕಣ್ಣಿರು ಸುರಿಸುವುದನ್ನು ನೋಡಿದೆರ ನಿಮ್ಮ ಕರುಳೂ ಕಿತ್ತು ಬರುವುದರಲ್ಲಿ ಸಂದೇಹವಿಲ್ಲ. …

Read More »

ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮೇಲೆ ಕಿಡಿಗೇಡಿಗಳು ಹಲ್ಲೆ ನಡಿಸಿದರು

ರಾಯಬಾಗ ತಾಲೂಕಿನ ಕುಡಚಿಯಲ್ಲಿ ಕೊರೋನಾ ವೈರಸ್ 4 ಪ್ರಕರಣಗಳು ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮೊದಲ ಹಂತ ಅಂದರೆ ಪ್ರಾಥಮಿಕವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದ 40 ಜನರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಇನ್ನೂ ಎರಡನೇ ಹಂತದಲ್ಲಿ ಇರುವ ಜನರನ್ನು ಪತ್ತೆ ಹಚ್ಚಲು ಹಾಗೂ ಆರೋಗ್ಯ ವಿಚಾರದಲ್ಲಿ ಸಮೀಕ್ಷೆ ಕಾರ್ಯ ನಡೆಸಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಮುಂದಾದ ಸಂದರ್ಭದಲ್ಲಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನಲೆಯಲ್ಲಿ ಕುಡಚಿ …

Read More »