Breaking News

ಬೆಳಗಾವಿ

ಬೆಳಗಾವಿ: ಪ್ರಾಣಾಪಾಯಕ್ಕೆ ಸಿಲುಕಿದ ಶ್ವಾನಗಳು

ಬೆಳಗಾವಿ: ಸತತ ಮಳೆಯಿಂದಾಗಿ ಇಲ್ಲಿನ ಬಳ್ಳಾರಿ ನಾಲಾ (ದೊಡ್ಡ ಚರಂಡಿ) ಉಕ್ಕಿ ಹರಿಯುತ್ತಿರುವುದರಿಂದ ತಾಲ್ಲೂಕಿನ ಹಲಗಾ ಸಮೀಪದ ಗದ್ದೆಯೊಂದರಲ್ಲಿನ ಶೆಡ್‌ ಜಲಾವೃತವಾಗಿದ್ದು, ಅಲ್ಲಿದ್ದ 45ಕ್ಕೂ ಹೆಚ್ಚಿನ ನಾಯಿಗಳಿಗೆ ಪ್ರಾಣಾಪಾಯ ಎದುರಾಗಿದೆ. ನಗರದ ಪ್ರಾಣಿ ಪ್ರೇಮಿಗಳಾದ ಶಂಕರ ಹಾಗೂ ಅವರ ಪುತ್ರಿ ಶ್ವೇತಾ ದೊಡ್ಡಮನಿ ಅವರು ಬೀದಿ ನಾಯಿಗಳನ್ನು ಹಿದಿಡು ತಂದು ಅಲ್ಲಿ ಸಾಕುತ್ತಿದ್ದರು. ಈಚೆಗೆ ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಅನ್ನ-ಆಹಾರ ಸಿಗದೆ ಕಂಗಾಲಾಗಿದ್ದ ಕೆಲವು ನಾಯಿಗಳನ್ನು ಕೂಡ ಅಲ್ಲಿ ತಂದು …

Read More »

ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಶುಕ್ರವಾರ ೮೭ ಕೊರೋನಾ ವರದಿಗಳು ದೃಢ

ಗೋಕಾಕ: ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ಶುಕ್ರವಾರ ೮೭ ಕೊರೋನಾ ವರದಿಗಳು ದೃಢಪಟ್ಟಿವೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು, ಗೋಕಾಕ ನಗರದಲ್ಲಿಯೆ ಇಂದು ಒಂದೇ ದಿನದಲ್ಲಿ ಹಾಪ್ ಸೆಂಚುರಿ ಸಮೀಪಿಸಿದ್ದು, ನಗರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಒಂದೇ ದಿನ ೪೭ ಕ್ಕೆ ಬಂದು ತಲುಪಿದೆ. ಗ್ರಾಮೀಣ ಪ್ರದೇಶ ಅಂಕಲಗಿಯಲ್ಲಿ ೧೮ ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಮೂಡಲಗಿ …

Read More »

ಆರ್ ಟಿ ಓ ಕಚೇರಿ ರಸ್ತೆಯ ಎರಡೂ ಬದಿಗೆ ವಾಹನಗಳ ಪಾರ್ಕಿಂಗ್ ಶುಲ್ಕ ವಸೂಲಿ……

ಬೆಳಗಾವಿ- ವಾಹನಗಳ ಪಾರ್ಕಿಂಗ್ ಗೆ ಸ್ಥಳವಿಲ್ಲ,ಆದರೂ ಆರ್ ಟಿ ಓ ಕಚೇರಿ ರಸ್ತೆಯ ಎರಡೂ ಬದಿಗೆ ವಾಹನಗಳ ಪಾರ್ಕಿಂಗ್ ಮಾಡಲು ಬೆಳಗಾವಿಯ ಕಾಂಟೋನ್ಮೆಂಟ್ ಬೋರ್ಡ್ ಅನುಮತಿ ನೀಡಿದೆ. ಈ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲು ಗುತ್ತಿಗೆದಾರನನ್ನು ನೇಮಿಸಿ.ಯಾವ ವಾಹನಕ್ಕೆ ಎಷ್ಟು ಶುಲ್ಕ ಎನ್ನುವದರ ಬಗ್ಗೆ ಆರ್ ಟಿ ಓ ಕಚೇರಿಯ ಬಳಿ ಕಾಂಟೋನ್ಮೆಂಟ್ ಬೋರ್ಡ್ ದೊಡ್ಡ ಫಲಕ ಹಾಕಿದೆ. ರಸ್ತೆಯ ಇಕ್ಕೆಲುಗಳಲ್ಲಿ ವಾಹನಗಳು ಪಾರ್ಕಿಂಗ್ …

Read More »

ಸವದತ್ತಿ ಬಳಿಯ ನವಿಲುತೀರ್ಥ ಆಣೆಕಟ್ಟೆಗೆ ಹರಿದುಬರುತ್ತಿದ್ದ ಭಾರೀ ಪ್ರಮಾಣದ ನೀರಿನಲ್ಲಿ ಗುರುವಾರ ಧಿಡೀರ್ ಕುಸಿತ ಎಚ್ಚರಿಕೆಯಿಂದರಲೂ ಮುನ್ಸೂಚನೆ

ಬೆಳಗಾವಿ: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಆಣೆಕಟ್ಟೆಗೆ  ಹರಿದುಬರುತ್ತಿದ್ದ ಭಾರೀ ಪ್ರಮಾಣದ ನೀರಿನಲ್ಲಿ ಗುರುವಾರ ಧಿಡೀರ್ ಕುಸಿತ ಉಂಟಾಗಿದೆ. ಖಾನಾಪುರ ಮತ್ತು ಬೈಲಹೊಂಗಲದ ಸುತ್ತಮುತ್ತಲೂ  ಮಳೆಯು ನಿಂತಿದ್ದು, ಬಿಸಿಲಿನ ವಾತಾವರಣ ಉಂಟಾಗಿದ್ದರಿಂದ ಒಳಹರಿವಿನಲ್ಲಿ ಗಮನಾರ್ಹ ಬದಲಾವಣೆಯಾಗಿದೆ.    ಒಟ್ಟು 37.7 ಟಿ ಎಮ್ ಸಿ  ಸಾಮರ್ಥ್ಯದ ಆಣೆಕಟ್ಟಿನಲ್ಲಿ ಸದ್ಯ 22 ಟಿ ಎಮ್ ಸಿ ನೀರಿನ ಸಂಗ್ರಹವಿದೆ.ಒಟ್ಟು 2079.5 …

Read More »

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಂದ್ರಿಕೃತ ಆಮ್ಲಜನಕ ಪೂರೈಕೆ ಘಟಕಕ್ಕೆ ಚಾಲನೆ

ಮೂಡಲಗಿ : ಹೆಚ್ಚುತ್ತಿರುವ ಕೊರೋನಾ ಸೊಂಕಿನ ಹಿನ್ನೆಲೆಯಲ್ಲಿ ಸೊಂಕಿತರ ಆರೈಕೆಗಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅವಿರತವಾಗಿ ಶ್ರಮಿಸುತ್ತಿದ್ದು, ಅವರ ಜನಪರ ಕಾಳಜಿಯು ನಮ್ಮ ನಾಡಿಗೆ ಮಾದರಿಯಾಗಿದೆ ಎಂದು ತಹಶೀಲ್ದಾರ ದಿಲ್‍ಶಾದ್ ಮಹಾತ್ ಶ್ಲಾಘಿಸಿದರು. ಬುಧವಾರದಂದು ಕೊರೋನಾ ಸೊಂಕಿತರಿಗೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಂದ್ರಿಕೃತ ಆಮ್ಲಜನಕ ಪೂರೈಕೆ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಸೊಂಕಿತರಿಗೆ ತಮ್ಮ ಅನನ್ಯ ಸೇವೆ ನೀಡುವ ಮೂಲಕ ಅವರ ಪ್ರೀತಿಗೆ …

Read More »

ನದಿ ತೀರದ ಗ್ರಾಮಗಳಿಗೆ ಪ್ರವಾಹ ಬೀತಿ ಸೇತುವೆಗಳು ಜಲಾವೃತ, ಸಂಚಾರ ಸ್ಥಗಿತ

ಮೂಡಲಗಿ: ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ ನದಿಯಿಂದ ಘಟಪ್ರಭಾ ನದಿಗೆ ಗುರುವಾರದಂದು ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವದರಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರ ಭಾಗದಲ್ಲಿ ಭಾರಿ ಮಳೆ ಮೈದುಂಬಿ ಸುರಿಯುತ್ತಿರುವ ಘಟಪ್ರಭೆ ನದಿ ಮೈದುಂಬಿ ಹರಿಯುತ್ತಿದ್ದು ಮೂಡಲಗಿ ತಾಲೂಕಿನ ಸುಣಧೋಳಿ, ಕಮ¯ದಿನ್ನಿ, ಹುಣಶ್ಯಾಳ ಪಿ.ವಾಯ್, ಢವಳೇಶ್ವರ, ಅವರಾದಿ ಹಾಗೂ ಗೋಕಾಕ ತಾಲೂಕಿನ ಉದಗಟ್ಟಿ …

Read More »

ಪ್ರವಾಹ ಸಮಸ್ಯೆ ಎದುರಾದರೆ ಅದನ್ನು ಎದುರಿಸುವ ಎಲ್ಲ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ: ತಹಶೀಲ್ದಾರ ಪ್ರಕಾಶ ಹೂಳೆಪ್ಪಗೋಳ

ಗೋಕಾಕ: ಪ್ರವಾಹ ಸಮಸ್ಯೆ ಎದುರಾದರೆ ಅದನ್ನು ಎದುರಿಸುವ ಎಲ್ಲ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಗೋಕಾಕ ತಹಶೀಲ್ದಾರ ಪ್ರಕಾಶ ಹೂಳೆಪ್ಪಗೋಳ ಹೇಳಿದರು. ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಪ್ರವಾಹ ಸಮಸ್ಯೆ ಇನ್ನೂ ಎದುರಾಗಿಲ್ಲ. ಹಿರಣ್ಯಕೇಶಿ, ಮಾರ್ಕಂಡೇಯ  ನದಿಗಳಲ್ಲಿ  ನೀರು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಮತ್ತು ಶಿರೂರು ಡ್ಯಾಂನಿಂದ  ನೀರು ಬಿಡುಗಡೆಯಾಗಿದೆ ಹೀಗಾಗಿ ನದಿಗಳು ತುಂಬಿ ಹರಿಯುತ್ತಿವೆ. ಹಿಡಕಲ್ ಜಲಾಶಯ ಇನ್ನೂ ಅರ್ಧದಷ್ಟು ಖಾಲಿಯಿದೆ. ಅದು ಭರ್ತಿಯಾಗುವರೆಗೂ ಪ್ರವಾಹ …

Read More »

ಸೊಂಕಿತರ ಆರೈಕೆಗಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅವಿರತವಾಗಿ ಶ್ರಮಿ

ಮೂಡಲಗಿ : ಹೆಚ್ಚುತ್ತಿರುವ ಕೊರೋನಾ ಸೊಂಕಿನ ಹಿನ್ನೆಲೆಯಲ್ಲಿ ಸೊಂಕಿತರ ಆರೈಕೆಗಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅವಿರತವಾಗಿ ಶ್ರಮಿಸುತ್ತಿದ್ದು, ಅವರ ಜನಪರ ಕಾಳಜಿಯು ನಮ್ಮ ನಾಡಿಗೆ ಮಾದರಿಯಾಗಿದೆ ಎಂದು ತಹಶೀಲ್ದಾರ ದಿಲ್‌ಶಾದ್ ಮಹಾತ್ ಶ್ಲಾಘಿಸಿದರು. ಬುಧವಾರದಂದು ಕೊರೋನಾ ಸೊಂಕಿತರಿಗೆ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೇಂದ್ರಿಕೃತ ಆಮ್ಲಜನಕ ಪೂರೈಕೆ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಸೊಂಕಿತರಿಗೆ ತಮ್ಮ ಅನನ್ಯ ಸೇವೆ ನೀಡುವ ಮೂಲಕ ಅವರ ಪ್ರೀತಿಗೆ …

Read More »

ತಂದೆಯ ಜೊತೆ ಆಸ್ಪತ್ರೆಗೆ ಬಂದಿದ್ದ ಯುವಕ ಕಟ್ಟಡ ಮೇಲಿಂದ ಬಿದ್ದು ಸಾವ

ಬೆಳಗಾವಿ:  ತಂದೆಯ ಜೊತೆ ಆಸ್ಪತ್ರೆಗೆ ಬಂದಿದ್ದ ಯುವಕ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ನಗರದ ಕಡೋಲ್ಕರ್ ಗಲ್ಲಿಯಲ್ಲಿ  ಘಟನೆ ನಡೆದಿದ್ದು, ಕಟ್ಟಡ ಮೇಲಿಂದ ಯುವಕ ಬಿದ್ದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.  ಹಿಂಡಲಗಾ ಗ್ರಾಮದ ರೋಹನ್ ಕುಪ್ಪೇಕರ್(25) ಮೃತ ದುರ್ದೈವಿ. ಕಟ್ಟಡ ಮೇಲಿಂದ ಯುವಕ ಬೀಳಲು ನಿಖರ ಕಾರಣ ಪತ್ತೆಯಾಗಿಲ್ಲ. ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಬೆಳಗಾವಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಯುವಕನ ಮೃತದೇಹ ರವಾನಿಸಿದ್ದಾರೆ. …

Read More »

ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಮುಂದುವರೆದಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.

ಬೆಳಗಾವಿ:  ಜಿಲ್ಲೆಯಾದ್ಯಂತ ಗುರುವಾರವೂ ಮಳೆ ಮುಂದುವರೆದಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹುಕ್ಕೇರಿ ತಾಲ್ಲೂಕಿನ ಶಿರೂರು ಬಳಿ ಮಾರ್ಕಂಡೇಯ ನದಿಗೆ 9,500 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.  3.69 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ 3.40 ಟಿಎಂಸಿ ಅಡಿಗಳಷ್ಟು ನೀರು ಭರ್ತಿಯಾಗಿದೆ. ಘಟಪ್ರಭಾ ನದಿಗೂ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹಿಡಕಲ್‌ ಬಳಿ ಜಲಾಶಯಕ್ಕೆ 43,402 ಕ್ಯುಸೆಕ್‌ ನೀರು …

Read More »