Breaking News

ಬೆಳಗಾವಿ

ಸೈನಿಕ ತರಬೇತಿಗೆ ಶೀಘ್ರ ಕೇಂದ್ರ ಸ್ಥಾಪನೆ

ಯಮಕನಮರಡಿ: ಪೊಲೀಸ್‌, ಸೇನೆ ಸೇರುವ ಇಚ್ಛೆಯುಳ್ಳ ಜಿಲ್ಲೆಯ ಹಾಗೂ ಮತಕ್ಷೇತ್ರದ ಯುವಕರಿಗೆ ಉಚಿತ ತರಬೇತಿ ನೀಡಲು ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ವ್ಯಾಪ್ತಿಯಲ್ಲಿ 10 ಎಕರೆ ಜಮೀನಿನಲ್ಲಿ ಒಂದು ತರಬೇತಿ ಕೇಂದ್ರವನ್ನು ತೆರೆದು ಮಾಜಿ ಸೈನಿಕರಿಂದ ತರಬೇತಿ ನೀಡಲಾಗುವುದು ಎಂದು ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಅವರು ರವಿವಾರ ಹುಕ್ಕೇರಿ ತಾಲೂಕಿನ ಬರಗನಾಳ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಶ್ರೀ ಅಕ್ಕಮಹಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ …

Read More »

ಸಕಲ ಗೌರವಗಳೊಂದಿಗೆ 18 ತಿಂಗಳ ಹಿಂದೆಯಷ್ಟೆ ಸೇನೆ ಸೇರಿದ್ದ ಯೋಧನ ಅಂತ್ಯಕ್ರಿಯೆ

ಚಿಕ್ಕೋಡಿ(ಬೆಳಗಾವಿ): ಕಳೆದ ಮೂರು ದಿನದ ಹಿಂದೆ ದೆಹಲಿಯಲ್ಲಿ ಸಾವನ್ನಪ್ಪಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಯೋಧ ಅನೀಲ್ ಶಿವಾಜಿ ಶಿಂಗಾಯಿ(23) ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ಸ್ವಗ್ರಾಮದಲ್ಲಿ ಭಾನುವಾರ ಸಂಜೆ ನಡೆಯಿತು. ಕಳೆದ 18 ತಿಂಗಳ ಹಿಂದೆಯಷ್ಟೆ ಸೈನಿಕ ಸೇವೆಗೆ ಸೇರಿದ್ದರು. ದೆಹಲಿಯಲ್ಲಿನ ರಾಜಪುಟಾನ ರಿಫಾಯಿಲ್ ದಲ್ಲಿ ತರಬೇತಿ ಮುಗಿಸಿದ್ದರು. ನಂತರ ಕಳೆದ ಮಾರ್ಚ್‍ನಲ್ಲಿ ಕರೋಶಿ ಗ್ರಾಮಕ್ಕೆ ಆಗಮಿಸಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ …

Read More »

ಕ್ಯಾಬಿನೇಟ್ ದರ್ಜೆಯ ಸ್ಥಾನಮಾನದೊಂದಿಗೆ ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ ಆದೇಶ ಹೊರಡಿಸಿದೆ.:ಶಂಕರಗೌಡ ಪಾಟೀಲ

ಬೆಳಗಾವಿ-:ಬೆಳಗಾವಿ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲರು ಬಿಜೆಪಿ ಸರ್ಕಾರದಲ್ಲಿ ಲಾಟ್ರಿ ಮೇಲೆ ಲಾಟ್ರಿ ಹೊಡೆಯುತ್ತಲೇ ಬಂದಿದ್ದು,ಇವರಿಗೆ ಸರ್ಕಾರ ಉನ್ನತ ಹುದ್ದೆ ನೀಡಿ ಇಂದು ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಬೆಳಗಾವಿಯ ಬಿಜೆಪಿ ಮುಖಂಡ ಶಂಕರಗೌಡ ಪಾಟೀಲರನ್ನು ಸರ್ಕಾರ ಇಂದು ಕ್ಯಾಬಿನೇಟ್ ದರ್ಜೆಯ ಸ್ಥಾನಮಾನದೊಂದಿಗೆ ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿ ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆದು ಇಂದು ದೆಹಲಿಯ ವಿಶೇಷ ಪ್ರತಿನಿಧಿಯನ್ನಾಗಿ …

Read More »

ಬೆಳಗಾವಿಯಲ್ಲಿ 12ಸಾವಿರದ ಗಡಿ ದಾಡಿದ ಸೋಂಕಿತರ ಸಂಖ್ಯೆ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 357 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರೊಂದಿಗೆ, ಇಲ್ಲಿನ ಸೋಂಕಿತರ ಸಂಖ್ಯೆ 12ಸಾವಿರದ (12,090) ಗಡಿ ದಾಡಿದೆ. ತಾಲ್ಲೂಕಿನ ಸಾಂಬ್ರಾ ಏರ್‌ಮನ್‌ ತರಬೇತಿ ಶಾಲೆ (ಎಟಿಎಸ್)ಯಲ್ಲಿ ಒಂದೇ ದಿನ 69 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು (ರಾಮದುರ್ಗ, ಬೈಲಹೊಂಗಲ, ಹುಕ್ಕೇರಿ ಮತ್ತು ಬೆಳಗಾವಿ ತಾಲ್ಲೂಕಿನ ತಲಾ ಒಬ್ಬರು) ಸಾವಿಗೀಡಾಗಿದ್ದಾರೆ. ಅವರಿಗೆ ಉಸಿರಾಟದ …

Read More »

ಅವಹೇಳನಕಾರಿ ಪೋಸ್ಟ್ ಮಾಡುವವರ ವಿರುದ್ಧ ಕ್ರಮ: ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಪೋಸ್ಟ್ ರಾಯಣ್ಣ, ಶಿವಾಜಿ ಅಭಿಮಾನಿಗಳನ್ನು ಕೆರಳಿಸುವಂತಿವೆ.

ಬೆಳಗಾವಿ: ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥವಾಗಿದೆ. ಆದರೆ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಮಾಡುತ್ತಿರುವ ಪೋಸ್ಟ್ ರಾಯಣ್ಣ, ಶಿವಾಜಿ ಅಭಿಮಾನಿಗಳನ್ನು ಕೆರಳಿಸುವಂತಿವೆ. ಪೀರನವಾಡಿ ವೃತ್ತದಲ್ಲಿ ಸ್ಥಾಪನೆ ಆಗಿರೋ ರಾಯಣ್ಣ ಪ್ರತಿಮೆ ವಿದಾದ ಸೌಹಾರ್ದತೆಯಿಂದ ಇತ್ಯರ್ಥ ಪಡಿಸಲಾಗಿದೆ. ಆದರೆ  ಸಾಮಾಜಿಕ ಜಾಲತಾಣದಲ್ಲಿ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿವೆ. ಶಿವಾಜಿ ಪರವಾಗಿ ಅನೇಕರು ಪೋಸ್ಟ್ ಗಳನ್ನು ಹಾಕಿದ್ರೆ, ರಾಯಣ್ಣನ ಪರವಾಗಿಯೂ ಅನೇಕರು ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಇದರಿಂದ ಅನಗತ್ಯ ಗೊಂದಲಗಳು ಸೃಷ್ಠಿಯಾಗುತ್ತಿದೆ. …

Read More »

ಅಂಜುಮನ್ ಸಂಸ್ಥೆ ಅಧ್ಯಕ್ಷ ರಾಜು ಸೇಠ್ ಅವರು  ಯುವಕರ ತಂಡ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ, ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿ : ಕೊರೊನಾ ಸೋಂಕಿನಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿ, ಮುಸ್ಲೀಂ ಯುವಕರು ಮಾನವೀಯತೆ ಮೆರೆದಿದ್ದಾರೆ. ಇಲ್ಲಿನ ಸರಾಫ್ ಗಲ್ಲಿಯಲ್ಲಿನ 70 ವರ್ಷದ ವೃದ್ಧ ನಿನ್ನೆ ಸಾವನ್ನಪ್ಪಿದ್ದರು. ಆದರೆ ಕೊರೊನಾ ಸೋಂಕಿಗೆ ಭಯ ಪಟ್ಟಿರುವ ಜನರು ಅಂತ್ಯಕ್ರಿಯೆಗೆ ಬಾರದೆ ಇರುವ ಹಿನ್ನೆಲೆಯಲ್ಲಿ ಮುಸ್ಲೀಂ ಯುವಕರೇ ಹಿಂದೂ ಧರ್ಮದ ವಿಧಿವಿದಾನಗಳ ಪ್ರಕಾರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರೆವೇರಿಸಿದ್ದಾರೆ. ಅಂಜುಮನ್ ಸಂಸ್ಥೆ ಅಧ್ಯಕ್ಷ ರಾಜು ಸೇಠ್ ಅವರು  ಯುವಕರ ತಂಡವನ್ನು ರಚಿಸಿದ್ದು, …

Read More »

ಜೀವನದಲ್ಲಿ ಎಲ್ಲವನ್ನ ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ.: ಸತೀಶ್ ಜಾರಕಿಹೊಳಿ

ಪಾಶ್ಚಾಪೂರ:  ‘ಜೀವನದಲ್ಲಿ ಎಲ್ಲವನ್ನ ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ. ಆದ ಕಾರಣ ಪ್ರಯತ್ನ ನಿಮ್ಮದಾದರೆ, ಪ್ರೋತ್ಸಾಹ ನಮ್ಮದಾಗಲಿದೆ’ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಅಕ್ಕಮಹಾದೇವಿ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಹಾಯ ಸಂಘಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ‘ಕಳೆದ ತಿಂಗಳೇ ಸಂಘಗಳ ಉದ್ಘಾಟನೆ ನಡೆಯಬೇಕಿತ್ತು. ಆದರೆ ಹಲವು ಕಾರಣಗಳಿಂದ ವಿಳಂಬವಾಯಿತು. ಆದರೂ ಸಹ ವ್ಯವಸ್ಥಿತವಾಗಿ …

Read More »

536 ಮಂದಿ ಗುಣಮುಖ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 276 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ಶನಿವಾರ ತಿಳಿಸಿದೆ. ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. 536 ಮಂದಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

Read More »

11 ಹೊಸ ಏತ ನೀರಾವರಿ ಯೋಜನೆ ಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌

ಬೆಳಗಾವಿ: ಜಿಲ್ಲೆಗೆ 11 ಹೊಸ ಏತ ನೀರಾವರಿ ಯೋಜನೆ ಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರ ಪ್ರಸ್ತಾಪಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಅನುಮತಿ ನೀಡಿದೆ. ನಿನ್ನೆ ನಡೆದ ನಿಗಮದ ಅಂದಾಜು ಪರಿಶೀಲನಾ ಸಭೆಯಲ್ಲಿ ಈ 11 ಏತ ನೀರಾವರಿ ಯೋಜನೆ ಗಳ ಅನುಷ್ಠಾನಕ್ಕೆ ಸಂಬಂಧಿಸಿ ಚರ್ಚೆ ನಡೆಸಿ, ಈ ಯೋಜನೆಗಳಿಗೆ ಅವಶ್ಯವಿರುವ 9.91 ಟಿಎಂಸಿ ನೀರನ್ನು ಹಂಚಿಕೆ‌ ಮಾಡಲು ಸಹಾ  …

Read More »

ಕೋವಿಡ್  ನಿಯಂತ್ರಣ ಗೊಳಿಸುವಲ್ಲಿ ಸರ್ಕಾರ  ಸಂಪೂರ್ಣ ವಿಫಲ,ಮೋದಿ  ರಾತ್ರಿ 8 ಗಂಟೆಗೆ ಟಿವಿಲಿ ಬರುತ್ತಾರೆ ಎಂದ್ರೆ ದೇಶಕ್ಕೆ ಏನೇ ಕಾದಿದೆ:ಸತೀಶ್ ಜಾರಕಿಹೊಳಿ

ಬೆಳಗಾವಿ: ಪ್ರಧಾನಿ ಮೋದಿ  ರಾತ್ರಿ 8 ಗಂಟೆಗೆ ಟಿವಿಲಿ ಬರುತ್ತಾರೆ ಎಂದ್ರೆ ದೇಶಕ್ಕೆ ಏನೇ ಕಾದಿದೆ ಎಂದೇ ಅರ್ಥ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕುಟುಕಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ 1 ವಾರ ಸಮಯ ಕೊಡಬೇಕಿತ್ತು. ಜನರು ತಮ್ಮ ಊರುಗಳಿಗೆ ಸೇರುತ್ತಿದ್ದರು. ಆ ಬಳಿಕ ಲಾಕ್ ಡೌನ್ ಮಾಡಬೇಕಿತ್ತು. ಆದರೆ ಒಮ್ಮೆಲೆ  ಲಾಕ್ ಡೌನ್ ಮಾಡಿದ್ದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿಯಿತು ಎಂದರು. ಕೋವಿಡ್  ನಿಯಂತ್ರಣ …

Read More »