Breaking News

ಬೆಳಗಾವಿ

ವ್ಯಕ್ತಿ ಬಂಧನ: 15 ದ್ವಿಚಕ್ರವಾಹನ ವಶಕ್ಕೆ

ಅಥಣಿ: ದ್ವಿಚಕ್ರ ವಾಹನಗಳ ಕಳವು ಆರೋಪದ ಮೇಲೆ ಇಲ್ಲಿನ ಪೊಲೀಸರು ವ್ಯಕ್ತಿಯೊಬ್ಬರನ್ನು ಗುರುವಾರ ಬಂಧಿಸಿದ್ದಾರೆ. ತಾಲ್ಲೂಕಿನ ಶಿರಹಟ್ಟಿಯ ರಮಜಾನ ಹುಸೇನಸಾಬ ಐನಾಪುರ (27) ಬಂಧಿತ. ‘ಜಿಲ್ಲೆ, ಬಾಗಲಕೋಟೆ ಹಾಗೂ ನೆರೆಯ ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾದ ₹ 5 ಲಕ್ಷ ಮೌಲ್ಯದ 15 ದ್ವಿಚಕ್ರವಾಹನಗಳನ್ನು ಆರೋಪಿಯಿಂದ ಜಪ್ತಿ ಮಾಡಲಾಗಿದೆ. ಪ್ರಕರಣ ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ದ್ವಿಚಕ್ರವಾಹನಗಳ ಕಳವು ಪ್ರಕರಣ ಹೆಚ್ಚುತ್ತಿದ್ದುದ್ದರಿಂದ ಡಿಎಸ್‌ಪಿ ಎಸ್.ವಿ. …

Read More »

ಅಕ್ಕ ಮತ್ತು ತಮ್ಮ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ………..

ಬೆಳಗಾವಿ- ಬೆಳಗಾವಿ ನಗರದ ಶಹಾಪೂರ ಪ್ರದೇಶದ ಆಚಾರಿಗಲ್ಲಿಯಲ್ಲಿ ವಯಸ್ಕರ ಅಕ್ಕ ಮತ್ತು ತಮ್ಮ ಇಬ್ಬರೂ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನದ ಹಿಂದೆ ಆಚಾರಿಗಲ್ಲಿಯ ಮನೆಯಲ್ಲಿ ಅಕ್ಕ ಮತ್ತು ತಮ್ಮ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ಮನೆಯಿಂದ ದುರ್ವಾಸನೆ ಬಂದು,ಪ್ರಕರಣ ಇವತ್ತು ಬೆಳಕಿಗೆ ಬಂದಿದೆ. 61 ವರ್ಷ ವಯಸ್ಸಿನ ಯದುಕುಲೇಶ ನಾಯಿಕ,70 ವರ್ಷದ ಪಂಕಜಾ ರಾಮಚಂದ್ರ ನಾಯಿಕ,ಆತ್ಯಹತ್ಯೆ ಮಾಡಿಕೊಂಡಿದ್ದು,ಇಬ್ಬರೂ ಅವಿವಾಹಿತರಾಗಿದ್ದರು,ಮನೆಯಲ್ಲಿ ಬೇರೆ ಯಾರೂ ಇಲ್ಲದಿರುವದರಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಬೆಳಕಿಗೆ …

Read More »

ಬೆಳಗಾವಿ ಸೂಪರ್ ಕಾಪ್ ಮಾರ್ಕೆಟ್ ಸ್ಟೇಷನ್ ಇಂದ ವರ್ಗಾವಣೆ………

ಬೆಳಗಾವಿ- ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮಣಿ ಅವರ ವರ್ಗಾವಣೆಯಾಗಿದ್ದು ಅವರ ವರ್ಗಾವಣೆಯಿಂದ ತೆರುವಾದ ಸ್ಥಾನಕ್ಕೆ ಮಾರ್ಕೆಟ್ ಎಸಿಪಿಯಾಗಿ ಸದಾಶಿವ ಕಟ್ಟೀಮನಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಇಂದು ನಾರಾಯಣ ಭರಮಣಿ ಅವರು ಸದಾಶಿವ ಕಟ್ಟೀಮನಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು ನಾರಾಯಣ ಭರಮಣಿ ಅವರನ್ನು ಸರ್ಕಾರ ಖಾನಾಪೂರ ತರಬೇತಿ ಶಾಲೆಗೆ ವರ್ಗಾವಣೆ ಮಾಡಿದೆ. ಮಾರ್ಕೆಟ್ ಎಸಿಪಿಯಾಗಿ ನಾರಾಯಣ ಭರಮಣಿ ಅವರು ಬೆಳಗಾವಿ ಮಹಾನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡುವಲ್ಲಿ ಪ್ರಮುಖ …

Read More »

ಕನ್ನಡ, ಮರಾಠಿ ಎರಡೂ ಭಾಷೆಯಲ್ಲಿ ಇರುವ ನಾಮಫಲಕ ಅಳವಡಿಕೆ ಮಾಡಿದ ಅವರು,ರಾಯಣ್ಣ, ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸೌಹಾರ್ದತೆಯ ಸಂದೇಶ

ಬೆಳಗಾವಿ- ಜಿಲ್ಲಾಡಳಿದ ರಾಜಿ ಸಂಧಾನದ ಒಪ್ಪಂದದಂತೆ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು ಇಂದು ಪೀರನವಾಡಿ ಜಂಕ್ಷನ್ ನಲ್ಲಿ ಛತ್ರಪತಿ ಶಿವಾಜಿ ಸರ್ಕಲ್ ಎಂದು ಕನ್ನಡ,ಮರಾಠಿ ಎರಡೂ ಭಾಷೆಯಲ್ಲಿರುವ ಫಲಕವನ್ನು ಅನಾವರಣಗೊಳಿಸಿದರು. ಇಂದು ಬೆಳಿಗ್ಗೆಯೇ ಜಮಾಯಿಸಿದ ನೂರಾರು ಶಿವಾಜಿ ಅಭಿಮಾನಿಗಳು,ಪಟಾಕಿ ಸಿಡಿಸಿ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಹಾಗೂ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಫಲಕವನ್ನು ಅನಾವರಣ ಮಾಡಿದ್ರು ಪೀರನವಾಡಿ ನಾಕಾ ಬಳಿ ‘ಶಿವಾಜಿ ಚೌಕ್’ ಅಂತಾ ನಾಮಫಲಕ ಅನಾವರಣ ಮಾಡಲಾಯಿತು,9 X …

Read More »

ಬೆಳೆ-ಮನೆ ಹಾನಿ ಪ್ರಾಮಾಣಿಕ ಸರ್ವೇಗೆ ಸೂಚನೆ

ರಾಮದುರ್ಗ: ಪ್ರವಾಹದಿಂದಾಗಿ ಹಾನಿಗೊಳಗಾದ ಬೆಳೆ ಹಾಗೂ ಮನೆಗಳ ಸರ್ವೇ ಕಾರ್ಯವನ್ನು ಜಂಟಿಯಾಗಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಮಾಡಬೇಕು. ಏನಾದರೂ ಲೋಪದೋಷ ಎಸಗಿದಲ್ಲಿ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ಖಡಕ ಸೂಚನೆ ನೀಡಿದರು. ಸ್ಥಳೀಯ ತಾಪಂ ಸಭಾಭವನದಲ್ಲಿ ಮಂಗಳವಾರ ಪ್ರವಾಹಕ್ಕೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ಬಾರಿ ತಪ್ಪು ನಡೆಯಬಾರದು. ಆ ಸಂದರ್ಭದಲ್ಲಿ ಮಾಡಿದ ತಪ್ಪು ಇನ್ನೂವರೆಗೂ ಬಗೆಹರಿಯುತ್ತಿಲ್ಲ. ನೋಡಲ್‌ …

Read More »

ಸಿದ್ದಪ್ಪ ಕನಮಡ್ಡಿ ಕೊಲೆ ಪ್ರಕರಣ: ₹ 30.48 ಲಕ್ಷ, ಮಾರಕಾಸ್ತ್ರ ವಶ

ಗೋಕಾಕ: ಇಲ್ಲಿ ಮೇ 6ರಂದು ನಡೆದಿದ್ದ ಯುವ ಮುಖಂಡ, ಆದಿಜಾಂಬವ ನಗರ ಬಡಾವಣೆಯ ನಿವಾಸಿ ಸಿದ್ದಪ್ಪ ಅರ್ಜುನ ಕನಮಡ್ಡಿ ಕೊಲೆ ಪ್ರಕರಣದ ತನಿಖೆ ವೇಳೆ ಆರೋಪಿಗಳು ಮತ್ತು ಅವರ ಸಹಚರರ ಮನೆಗಳ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿದ ಪೊಲೀಸರು, ₹ 30.48 ಲಕ್ಷ ನಗದು, ಮಾರಕಾಸ್ತ್ರ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.     ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದರು. ‘ಇಲ್ಲಿನ …

Read More »

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ  ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಿದ್ದಪ್ಪ  ಓ. ಹಲಸಗಿ (53)  ನಿಧನ

ಬೆಳಗಾವಿ – ಕೊರೋನಾದಿಂದಾಗಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ  ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಸಿದ್ದಪ್ಪ  ಓ. ಹಲಸಗಿ (53)  ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೂ ಸೋಂಕು ತಗುಲಿರುವುದಾಗಿ ಗೊತ್ತಾಗಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕೊರೋನಾ ವ್ಯಾಪಿಸುತ್ತಿರುವ ಕುರಿತು ಪ್ರಗತಿವಾಹಿನಿ ಈ ಹಿಂದೆಯೇ ವರದಿ ಪ್ರಕಟಿಸಿತ್ತು. ಹಲವು ದಶಕಗಳ ಸುದೀರ್ಘ ಶೈಕ್ಷಣಿಕ ಜೀವನದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ …

Read More »

ಗೋಕಾಕ ನಲ್ಲಿ ಸಿದ್ದು ಕನಮಡ್ಡಿ ಕೊಲೆಗೆ ಹೊಸ ತೀರವು

ಗೋಕಾಕ : ಬೆಳಗಾವಿ ಜಿಲ್ಲಾ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಕಳೆದ ನಾಲ್ಕು ತಿಂಗಳ ಹಿಂದೆ ನಡೆದಿದ್ದ ದಲಿತ ಯುವಕನ ಕೊಲೆ ಪ್ರಕರಣದ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ನಿ‌ನ್ನೆ ರಾತ್ರಿ ಆರೋಪಿಗಳ ಮನೆಗಳ ಮೇಲೆ ಸರ್ಚ್ ವಾರಂಟ್ ಜೊತೆಗೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಮಾರಕಾಸ್ತ್ರ, ಮಾದಕ ವಸ್ತು ಸೇರಿದಂತೆ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಕಳೆದ ನಾಲ್ಕು ತಿಂಗಳ …

Read More »

ನಿಸ್ವಾರ್ಥ ಭಕ್ತಿಯಿಂದ ಫಲ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರ ರುದ್ರಾಕ್ಷಿಮಠ, ಬೆಳಗಾವಿ —– ಹರಿದ ಗೋಣಿಯಲೊಬ್ಬ ಕಳವೆಯ ತುಂಬಿದ ಇರುಳೆಲ್ಲ ನಡೆದನಾ ಸುಂಕಕಂಜಿ ಕಳವೆಯೆಲ್ಲ ಹೋಗಿ ಬರಿ ಗೋಣಿ ಉಳಿಯಿತ್ತು ಅಳಿಮನದವನ ಭಕ್ತಿ ಇಂತಾಯಿತ್ತು ರಾಮನಾಥ ಮಾನವನ ಜೀವನ ತುಂಬಾ ಸೂಕ್ಷ್ಮವಾದುದು. ಆತನ ಬದುಕಿನಲ್ಲಿ ನಿಷ್ಠೆಯ ಸೇವೆ, ಪ್ರಾಮಾಣಿಕತೆ, ತ್ಯಾಗಕ್ಕೆ ಬೆಲೆ ಇದ್ದೇ ಇರುತ್ತದೆ. ಒಬ್ಬ ವ್ಯಕ್ತಿಯು ಹರಿದ ಗೋಣಿ ಚಿಲದಲ್ಲಿ ಭತ್ತವನ್ನು ತುಂಬಿಟ್ಟಿದ್ದ. ಭತ್ತವನ್ನು ಹೊಲದಿಂದ ಹಗಲಿನಲ್ಲಿ ಮನೆಗೆ ಸಾಗಿಸಿದರೆ ತೆರಿಗೆಯವರು ಸುಂಕ ವಿಧಿಸಬಹುದು …

Read More »

ಇಂಡಿಯನ್ ಎಕ್ಸ್ ಪ್ರೆಸ್: ಎನ್ ಜಿ ಓಗೆ ಆಯಂಬುಲೆನ್ಸ್ ದಾನ ನೀಡಿದ ಶಾಸಕ ಅನಿಲ್ ಬೆನಕೆ

ಬೆಳಗಾವಿ: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಡಿದ ವರದಿ ಹಿನ್ನೆಲೆಯಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಹೆಲ್ಪ್ ಫಾರ್ ನೀಡಿ ಎಂಬ ಎನ್ ಜಿ ಓಗೆ ಆಯಂಬುಲೆನ್ಸ್ ಕೊಡುಗೆ ನೀಡಿದ್ದಾರೆ. ಆಗಸ್ಟ್ 31 ರಂದು ಕೋವಿಡ್ ಸ್ಪೆಷಲ್ ವರ್ಕರ್, ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಈ ವೇಳೆ ಎನ್ ಜಿ ಕಾರ್ಯಕರ್ತ ಸುರೇಂದತ್ರ ಅಂಗೋಲ್ಕರ್ ಆಯಂಬುಲೆನ್ಸ್ ಬೇಕೆಂದು ಮನವಿ ಮಾಡಿದ್ದರು. ಶಾಸಕ ಅನಿಲ್ ಬೆನಕೆ ಶಾಸಕರ ನಿಧಿಯನ್ನು …

Read More »