Breaking News

ಬೆಳಗಾವಿ

ನಗರದಲ್ಲಿ ಇಂದು ‘ಆರೋಗ್ಯ ಹಸ್ತ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.

ಗೋಕಾಕ್ : ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮಹತ್ವದ ಯೋಜನೆ ರೂಪಿಸಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ‘ಆರೋಗ್ಯ ಹಸ್ತ’ಕ್ಕೆ ಚಾಲನೆ ನೀಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿ ಇಂದು ‘ಆರೋಗ್ಯ ಹಸ್ತ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು. ‘ಜನರ ಆರೋಗ್ಯ ಹಾಗೂ ದೂರದೃಷ್ಟಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಹೊಸ ಯೋಜನೆ ರೂಪಿಸಿದೆ. ಪ್ರತಿಯೊಬ್ಬರಿಗೆ ಕೋವಿಡ್ ಬಗ್ಗೆ ಇರುವ ಭಯವನ್ನು ದೂರ ಮಾಡುವುದರ ಜತೆಗೆ ಜಾಗೃತಿ …

Read More »

ಜಾಗನೂರಿನ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ

ಚಿಕ್ಕೋಡಿ ಉಪವಿಭಾಗವೂ ಸೇರಿ ಹಲವೆಡೆ ಬೈಕ್ ಕಳ್ಳತನ ಮಾಡಿದ ಜಾಗನೂರಿನ ಆರೋಪಿಯನ್ನು ಚಿಕ್ಕೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 5 ಬೈಕ್ ವಶಪಡಿಸಿಕೊಂಡಿದ್ದಾರೆ. ಚಿಕ್ಕೋಡಿ, ಮಹಾಲಿಂಗಪುರ, ಉಳ್ಳಾಗಡ್ಡಿ ಖಾನಾಪುರ, ಅಂಕಲಗಿ, ಹುಕ್ಕೇರಿ ಕಡೆ ಬೈಕ್ ಕಳ್ಳತನ ಮಾಡಿದ ಆರೋಪದ ಮೇಲೆ ಚಿಕ್ಕೋಡಿ ತಾಲೂಕು ಜಾಗನೂರು ಗ್ರಾಮದ ರವಿ ಮಾರುತಿ ಗಣಾಚಾರ ಎಂಬ ಯುವಕನನ್ನು ಚಿಕ್ಕೋಡಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತನಿಂದ 1.15 ಲಕ್ಷ ರೂ ಮೌಲ್ಯದ 5 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಿಎಸ್‍ಐ …

Read More »

ನೀರು ಪೂರೈಕೆ ಯೋಜನೆ ಪ್ರಗತಿ ಪರಿಶೀಲನೆ

ಬೆಳಗಾವಿ: ತಾಲ್ಲೂಕಿನ ತುಮ್ಮರಗುದ್ದಿ, ಕುಂದರಗಿ, ಬಸವಸನಕೊಳ್ಳ ಹಾಗೂ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯಕ್ಕೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಿರ್ದೇಶಕಿ ದೀಪಾ ಕುಡಚಿ ಮಂಗಳವಾರ ಭೇಟಿ ನೀಡಿದರು. ಮಂಡಳಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕುಡಿಯುವ ನೀರು ಪೂರೈಕೆ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ‘ಸೆ. 15ರಂದು ಬೆಂಗಳೂರಿನಲ್ಲಿ ಮಂಡಳಿ ಸಭೆ ನಡೆಯಲಿದೆ. ಮಂಡಳಿತ ಅಧ್ಯಕ್ಷರೊಂದಿಗೆ ಚರ್ಚಿಸಿ, ಅಭಿವೃದ್ಧಿ ಕೆಲಸಕ್ಕೆ ವೇಗ ನೀಡಲಾಗುವುದು. ಎಲ್ಲ ಕಾಮಗಾರಿಗಳನ್ನು …

Read More »

ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಮಾಮನಿ ನೇಮಕ

ಸವದತ್ತಿ / ಉಗರಗೋಳ: ಇಲ್ಲಿನ ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರನ್ನಾಗಿ ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಕ್ಷೇತ್ರದ ಶಾಸಕರೂ ಆದ ಆನಂದ ಮಾಮನಿ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೋಮವಾರ ಆದೇಶ ಹೊರಡಿಸಿದ್ದಾರೆ. ‘2018ರ ಮಾರ್ಚ್‌ 23ರಂದು 16 ಸದಸ್ಯರನ್ನು ಒಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ಸರ್ಕಾರ ರಚಿಸಿತ್ತು. ಅದರ ಅಧಿಕಾರದ ಅವಧಿ ಮುಗಿದಿದ್ದು, ಹೊಸದಾಗಿ ರಚನೆ ಆಗಬೇಕಿದೆ. ಅಲ್ಲಿವರೆಗೆ ಅಧ್ಯಕ್ಷರನ್ನಾಗಿ ಆನಂದ ಮಾಮನಿ ಅವರನ್ನು ನೇಮಿಸಲಾಗಿದೆ’ ಎಂದು …

Read More »

ರಾಜಕೀಯದ ನಿಖರ ಭವಿಷ್ಯದ ಮೂಲಕ ಖ್ಯಾತಿಗಳಿಸಿದ್ದ ಪಂ.ಶ್ರೀಪಾಲ್‌ ಇನ್ನಿಲ್ಲ

ಅಥಣಿ  : ರಾಜಕೀಯ ಭವಿಷ್ಯ ನುಡಿಯುವ ಮೂಲಕ ಖ್ಯಾತಿಗಳಿಸಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿಯ ಪಂಡಿತ ಶ್ರೀಪಾಲ್‌ ಉಪಾಧ್ಯೆ (78) ಮಂಗಳವಾರ ಬೆಳಗ್ಗೆ ನಿಧನರಾದರು. ನ್ಯುಮೋನಿಯಾದಿಂದ ಬಳಲುತ್ತಿದ್ದ ಉಪಾಧ್ಯೆ ಅವರು ಬೆಳಗಿನ ಜಾವ 6.30ಕ್ಕೆ ನಿಧನರಾದರು.1985ರಲ್ಲಿ ಚುನಾವಣೆಗೆ ಸ್ಪರ್ಧಿಸದ ಆ ಧೀಮಂತ ವ್ಯಕ್ತಿ ಮುಖ್ಯಮಂತ್ರಿ ಆಗ್ತಾರೆ ಎಂದು ಕವಡೆ ಭವಿಷ್ಯ ನುಡಿದಿದ್ದರು. ಅದರಂತೆ ಅಂದು ಚುನಾವಣೆಗೆ ಸ್ಪರ್ಧಿಸದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. 2018ರ ವಿಧಾನಸಭೆ ಚುನಾವಣೆ ವೇಳೆ ಎಚ್‌.ಡಿ.ಕುಮಾರಸ್ವಾಮಿಯೇ …

Read More »

ಕೊರೊನಾ ಸೋಂಕಿನಿಂದ ಧೃತಿಗೆಡಬೇಡಿ 2ನೇ ಬಾರಿ ಅರಭಾವಿ ಕ್ಷೇತ್ರದಲ್ಲಿ 2.50 ಲಕ್ಷ ಮಾಸ್ಕ್ ವಿತರಣೆ : ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯ ಸುರಕ್ಷತೆಗಾಗಿ ಅರಭಾವಿ ಕ್ಷೇತ್ರದ ಪ್ರತಿ ಮನೆ ಮಾಸ್ಕ್ ವಿತರಿಸಲಾಗುತ್ತಿದೆ ಎಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ‘ಕೊರೊನಾ ಜಾಗತಿಕ ಸಾಂಕ್ರಾಮಿಕ ರೋಗವಾಗಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿರುವ ಪ್ರತಿ ಮನೆಗಳಿಗೆ ಮಾಸ್ಕ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಎರಡನೆಯ ಹಂತದಲ್ಲಿ 2.50 ಲಕ್ಷ ಮಾಸ್ಕ್ ಗಳನ್ನು …

Read More »

ನಟಿ ಸಂಜನಾ ಜತೆ ಶಾಸಕ ಜಮೀರ್ ಅಹಮ್ಮದ್ಹೆಸರು ಕೇಳಿ ಬಂದಿರುವ ವಿಚಾರವಾಗಿ ಶಾಸಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

ಹುಕ್ಕೇರಿ : ಡ್ರಗ್ಸ್ ದಂಧೆ ಜಾಲದಲ್ಲಿ ನಟಿ ಸಂಜನಾ ಜೊತೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಹೆಸರು ಕೇಳಿ ಬಂದಿರುವ ವಿಚಾರವಾಗಿ ಶಾಸಕ ಸತೀಶ್ ಜಾರಕಿಹೊಳಿ  ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಜಮೀರ್ ಇಲ್ಲ. ಹೀಗಾಗಿ ಅವರೊಂದಿಗೆ ಹೊಲಿಕೆ ಮಾಡುವುದು ಸರಿಯಲ್ಲ. ನಟಿ ಸಂಜನಾ ಜತೆ ಶಾಸಕ ಜಮೀರ್ ಅಹಮ್ಮದ್ ಪಾರ್ಟಿಗೆ ಹೋದರೆ ಅಥವಾ ತಿರುಗಾಡಿದ್ರೆ ಏನೂ ಸಂಬಂಧವಿಲ್ಲ. ಡ್ರಗ್ಸ್ ತೆಗೆದುಕೊಂಡರೆ, ಮಾರಾಟ ಮಾಡಿದರೆ …

Read More »

ಬೆಳಗಾವಿ: ‘ಬೃಹತ್‌ ಇ- ಲೋಕ ಅದಾಲತ್‌’ 19ರಂದು

ಬೆಳಗಾವಿ: ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದಿಂದ ಸೆ. 19ರಂದು ‘ಬೃಹತ್‌ ಇ-ಲೋಕ ಅದಾಲತ್‌’ ಹಮ್ಮಿಕೊಳ್ಳಲಾಗಿದೆ.   ‘ಕಲಂ 138 (ಎನ್‌ಐ ಆಕ್ಟ್) ಅಡಿ ನೋಂದಾಯಿಸಿದವು, ಮೋಟಾರು ವಾಹನ ಅಪಘಾತ ಪರಿಹಾರ, ಸಾಲ ವಸೂಲಾತಿ ಮತ್ತು ವ್ಯಾಜ್ಯ ಪೂರ್ವ, ಕೌಟುಂಬಿಕ ಹಾಗೂ ಜೀವನಾಂಶ ಮತ್ತು ಸಿವಿಲ್ ಹಾಗೂ ಎಲ್ಲ ರೀತಿಯ ಪ್ರಕರಣಗಳನ್ನು ಆನ್‌ಲೈನ್‌ ಮೂಲಕ ರಾಜಿ ಮಾಡಿ ಇತ್ಯರ್ಥಗೊಳಿಸಲಾಗುವುದು. ಅದಾಲತ್‌ಗೆ ಸಂಬಂಧಿಸಿದಂತೆ ಎಲ್ಲ ನ್ಯಾಯಾಲಯಗಳಲ್ಲೂ ಪೂರ್ವಭಾವಿ ಕಾರ್ಯಕ್ರಮಗಳು ನಡೆಯುತ್ತಿವೆ. …

Read More »

ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾರ್ಗ ಯೋಜನೆಗೆ ಅನುಮೋದನೆ: ಸುರೇಶ್ ಅಂಗಡಿ

ಬೆಳಗಾವಿ,  : ಉತ್ತರ ಕರ್ನಾಟಕ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಕಿತ್ತೂರು-ಧಾರವಾಡ ನಡುವೆ ನೇರ ರೈಲು ಮಾರ್ಗ ಯೋಜನೆಗೆ ಅನುಮೊದನೆ ದೊರೆತಿದ್ದು, ಈ ಯೋಜನೆಗೆ 927.40 ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ. ಸೋಮವಾರ ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆ ಅನುಷ್ಠಾನಗೊಂಡಲ್ಲಿ ಪ್ರಮುಖ ನಗರಗಳಾದ ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಗೆ ಕಡಿಮೆ ಸಮಯದಲ್ಲಿ ಸಂಪರ್ಕ ಸಾಧ್ಯವಾಗಲಿದೆ. ಜತೆಗೆ ಮುಂದಿನ ವರ್ಷಗಳಲ್ಲಿ …

Read More »

ಹುಬ್ಬಳ್ಳಿ-ಬೆಳಗಾವಿ ನಡುವಿನ ಹೊಸ ಮಾರ್ಗಕ್ಕೆ ರೈಲ್ವೆ ಮಂಡಳಿ ಅನುಮೋದನೆ

ಹುಬ್ಬಳ್ಳಿ: ಕಿತ್ತೂರು ಮತ್ತು ಧಾರವಾಡದ ಮಾರ್ಗವಾಗಿ ಬೆಳಗಾವಿ ಮತ್ತು ಹುಬ್ಬಳ್ಳಿ ನಡುವಿನ 73 ಕಿಲೋಮೀಟರ್ ಉದ್ದದ ಹೊಸ ರೈಲ್ವೆ ಮಾರ್ಗದ ಯೋಜನೆಗೆ ರೈಲ್ವೆ ಮಂಡಳಿ ಅನುಮೋದಿಸಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ಕಚೇರಿ ಸೋಮವಾರ ಪ್ರಕಟಿಸಿದೆ. ಇದರಂತೆ, ಹೊಸ ಮಾರ್ಗ ಬೆಳಗಾವಿ-ಹುಬ್ಬಳ್ಳಿ ನಡುವಿನ ಪ್ರಯಾಣದ ಸಮಯವನ್ನು ಕನಿಷ್ಠ ಒಂದು ಗಂಟೆಯವರೆಗೆ ಕಡಿಮೆ ಮಾಡುವ ಸಾಧ್ಯತೆಯಿದೆ. ರಸ್ತೆ ಮಾರ್ಗಕ್ಕೆ ಹೋಲಿಸಿದರೆ ಇದು ಸುಮಾರು 31 ಕಿಲೋಮೀಟರ್ ದೂರವನ್ನು ಕಡಿಮೆ ಮಾಡುತ್ತದೆ. ಧಾರವಾಡ ಮತ್ತು …

Read More »