ಬೆಳಗಾವಿ: ‘ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ಬೇಗ ಬಗೆಹರಿಸಲು ಸುಪ್ರೀಂಕೋರ್ಟ್‌ನಲ್ಲಿ ಪ್ರತ್ಯೇಕ ಪೀಠ ಸ್ಥಾಪಿಸಲು ಬೇಡಿಕೆ ಸಲ್ಲಿಸಲಾಗುವುದು’ ಎಂದು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಶಂಭುರಾಜ್ ದೇಸಾಯಿ ಹೇಳಿದ್ದಾರೆ. ಮಹಾರಾಷ್ಟ್ರದ ಮುಂಬೈನಲ್ಲಿ ಬುಧವಾರ ಕಾನೂನು ತಜ್ಞರು, ಎಂಇಎಸ್ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳ ಜತೆ ಮಾತಾಡಿದರು. ‘ಈ ಗಡಿ ಸಮಸ್ಯೆ ಇನ್ನೂ ಪರಿಹಾರ ಆಗದಿರುವುದು ಸರಿಯಲ್ಲ. ಈಗಾಗಲೇ ಮೂರು ಬಾರಿ ವಿಚಾರಣೆಗೆ ಪಟ್ಟಿಯಲ್ಲಿ ಬಂದು ಮತ್ತೆ ಕೈಬಿಡಲಾಗಿದೆ. …
Read More »ಅಂಕಲಗಿ | ‘ನಗೆ ಹಬ್ಬ’ ಕಾರ್ಯಕ್ರಮ 26ರಂದು
ಅಂಕಲಗಿ: ಇಲ್ಲಿನ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಫೆ.26ರಂದು ಸಂಜೆ 5 ಗಂಟೆಗೆ ಗಂಗಾವತಿ ಪ್ರಾಣೇಶ ಹಾಗೂ ಅವರ ತಂಡದವರು ‘ನಗೆ ಹಬ್ಬ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ‘ಪ್ರಾಣೇಶ ತಂಡದಲ್ಲಿ ಬಸವರಾಜ ಮಹಾಮನಿ, ನರಸಿಂಹ ಜೋಶಿ, ಅಜೇಯ ಸಂಕೇಶ್ವರ, ತುಕಾರಾಮ ಬೀದರ್ ಅವರಿದ್ದಾರೆ. ಅಂಕಲಗಿಯ ಅಡವಿ ಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು’ ಎಂದು ಪ್ರಾಯೋಜಕ ಸುರೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
Read More »ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರಿ ಪ್ರಿಯಾಂಕಾ ಸ್ಪರ್ಧಿಸಲ್ಲ: ಸತೀಶ ಜಾರಕಿಹೊಳಿ
ಬೆಳಗಾವಿ: ‘ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನನ್ನ ಪುತ್ರಿ ಪ್ರಿಯಾಂಕಾಗೆ ಟಿಕೆಟ್ ನೀಡುವ ವಿಷಯ ಚರ್ಚೆಯಾಗಿದೆ. ಆದರೆ, ಟಿಕೆಟ್ ಕೊಡಲು ನಾವು ಪಕ್ಷದ ವರಿಷ್ಠರಿಗೆ ಶಿಫಾರಸು ಮಾಡಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ‘ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಲಕ್ಷ್ಮಣರಾವ್ ಚಿಂಗಳೆ, ಗಜಾನನ ಬುಟಾಳಿ ಸೇರಿ ಹಲವು ಆಕಾಂಕ್ಷಿಗಳಿದ್ದಾರೆ. ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಲು ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತೇವೆ ಹೊರತು ನಮ್ಮ …
Read More »ಶ್ರೀ ಕ್ಷೇತ್ರ ಕೋಟುರ ಪರಮಾನಂದ ದೇವಸ್ಥಾನದ ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಯುವ ನಾಯಕ ಸಂತೋಷ ಜಾರಕಿಹೊಳಿ ಅವರು ಭಾಗಿ
ಶ್ರೀ ಕ್ಷೇತ್ರ ಕೋಟುರ ಪರಮಾನಂದ ದೇವಸ್ಥಾನದ ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಯುವ ನಾಯಕ ಸಂತೋಷ ಜಾರಕಿಹೊಳಿ ಅವರು ಭಾಗಿ. ಯರಗಟ್ಟಿ : ಕೋಟೂರು ಶಿವಾಪೂರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಕೋಟುರ ಪರಮಾನಂದ ದೇವಸ್ಥಾನದ ನವಗ್ರಹ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಯುವ ನಾಯಕ ಸಂತೋಷ ಜಾರಕಿಹೊಳಿ ಅವರು ಭಾಗವಹಿಸಿದ್ದರು. ಸೋಮವಾರ ದಿನಾಂಕ 19-02-2024 ರಂದು ಜರುಗಿದ ಕಾರ್ಯಕ್ರಮದಲ್ಲಿ ಯುವ ನಾಯಕ ಹಾಗೂ ಸೌಭಾಗ್ಯ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ …
Read More »ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ಊರಿನ ಮುಖಂಡರಿಗೆ, ರೈತರಿಗೆ ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗದವರಿಗೆ ಸತ್ಕಾರ
ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಕಟ್ಟಡದ ಉದ್ಘಾಟನೆ ನಿಮಿತ್ತವಾಗಿ ಆಧ್ಯಾತ್ಮಿಕ ನಾಟಕವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಪೂಜ್ಯರಿಗೆ, ಊರಿನ ಮುಖಂಡರಿಗೆ, ರೈತರಿಗೆ ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗದವರಿಗೆ ಸತ್ಕಾರ ಮಾಡಿದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಯುವ ನಾಯಕ ಸಂತೋಷ …
Read More »ಮಗನ ಶವದ ಮುಂದೆ ‘ಸಿದ್ದರಾಮಯ್ಯ’ ಸರ್ಕಾರದ 2 ಸಾವಿರ ರೂ. ನೆನೆದ ತಾಯಿ: ವಿಡಿಯೋ ವೈರಲ್!!
ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಂದ ನಂತ್ರ, ಮಹಿಳೆಯರು ಪುಲ್ ಖುಷ್ ಆಗಿದ್ದಾರೆ. ಬಡತನದ ಬೇಗೆಯಲ್ಲಿ ಇದ್ದಂತ ಅದೆಷ್ಟೋ ಯಜಮಾನಿಯರಿಗೆ ಗೃಹ ಲಕ್ಷ್ಮೀ ಯೋಜನೆ ಸಂಸಾರದ ನೊಗವನ್ನೇ ಮುನ್ನೆಡೆಸೋ ಶಕ್ತಿಯನ್ನು ನೀಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಅನಾರೋಗ್ಯದಿಂದ ಸಾವನ್ನಪ್ಪಿದಂತ ಮಗನ ಶವದ ಮುಂದೆ ತಾಯಿಯೊಬ್ಬಳು ಕಣ್ಣೀರಿಡುತ್ತಲೇ ಗೃಹಲಕ್ಷ್ಮೀ ಯೋಜನೆ ಬಗ್ಗೆ ಆಡುವ ಮಾತು ಮನ ಮಿಡಿಸುತ್ತದೆ. ಆ ಬಗ್ಗೆ ಮುಂದೆ ಓದಿ. ಸೋಷಿಯಲ್ ಮೀಡಿಯಾದಲ್ಲಿ ಒಂದು …
Read More »ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಚಿವೆಯಾಗಿ ಹೆಚ್ಚು ಕಡಿಮೆ ಒಂದು ವರ್ಷ ಕಳೆಯುತ್ತಾ ಬಂದರೂ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಶುರುವಾಗಿಲ್ಲ:B.J.P.
ಬೆಳಗಾವಿ: ಜಿಲ್ಲೆಯ ಬಿಜೆಪಿ ಮುಖಂಡರು (BJP leaders)ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅವರ ವಿರುದ್ಧ ಒಂದು ವಿನೂತನ ಪ್ರತಿಭಟನೆ (protest) ನಡೆಸಿದರು. ಇದು ನಿಸ್ಸಂದೇಹವಾಗಿ ಎಲ್ಲರಿಗೂ ಮೆಚ್ಚಿಗೆಯಾಗುವ ರೀತಿಯ ಪ್ರತಿಭಟನೆ. ಗೌಜು ಗದ್ದಲ, ಧಿಕ್ಕಾರದ ಘೋಷಣೆ-ಮೊದಲಾವುಗಳಿಲ್ಲದ ಸರಳ ಮತ್ತು ಅತ್ಯಂತ ಪರಿಣಾಮಕಾರಿ ಪ್ರತಿಭಟನೆ. ತಮ್ಮ ಆಕ್ಷೇಪಣೆ, ದೂರು-ದುಮ್ಮಾನಗಳನ್ನು ಒಂದು ಮನವಿ ಪತ್ರದ ರೂಪದಲ್ಲ್ಲಿ ಅವರು ಸಲ್ಲಿಸಿದ್ದಾರೆ. ನಗರದಲ್ಲಿರುವ ಕಚೇರಿಗೆ ಬಿಜೆಪಿ ಮುಖಂಡರು ಬಂದಾಗ ಸಚಿವೆ …
Read More »ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಅದ್ದೂರಿ ರೊಟ್ಟಿ ಜಾತ್ರೆ
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದ ಯಲ್ಲಾಲಿಂಗೇಶ್ವರ ಮಠದ ಆವರಣದಲ್ಲಿ ಹತ್ತೂರು ಗ್ರಾಮದ ಸಾವಿರಾರು ಮಹಿಳೆಯರು ಎರಡು ವಾರಗಳ ಕಾಲ ರೊಟ್ಟಿ ಮಾಡಿ, ಬಳಿಕ ಮಠವೊಂದಕ್ಕೆ ಸಮರ್ಪಣೆ ಮಾಡಿದ್ದರು. ತಲೆ ಮೇಲಿನ ಬುತ್ತಿ ಗಂಟಿಗೆ ತಿರಂಗಾ ಧ್ವಜವನ್ನು ಹಾಕಿದ್ದು ವಿಶೇಷವಾಗಿತ್ತು. ಅಷ್ಟಕ್ಕೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರೊಟ್ಟಿ ಬುತ್ತಿ ಜಾತ್ರೆ ಮಾಡೋದ್ಯಾಕೆ? ಈ ರೊಟ್ಟಿ ಬುತ್ತಿ ಜಾತ್ರೆ ಸ್ಟೋರಿ ಇಲ್ಲಿದೆ.ತಲೆ ಮೇಲೆ ಬುತ್ತಿ ಹೊತ್ತು ಸಾಗುತ್ತಿರುವ ಮಹಿಳೆಯರು, ತ್ರಿವರ್ಣ …
Read More »ಭಾವನೆ ಶುದ್ದವಾಗಿದ್ದರೆ ಭಾಗ್ಯಕ್ಕೆ ಕೊರತೆ ಇರುವುದಿಲ್ಲ: ನ್ಯಾಯಾಧೀಶರು ಎಂ.ಬಿ.ಕುಡವಕ್ಕಲಿಗೇರ
ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ಸಾಂಸ್ಕೃತಿಕ, ಕ್ರೀಡಾ ಹಾಗೂ ಕಾನೂನು ಸೇವಾ ಘಟಕದ ಉದ್ಘಾಟನಾ ಸಮಾರಂಭ ಗೋಕಾಕ : ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ, ವಿದ್ಯಾರ್ಥಿಗಳು ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ಪಾಲ್ಗೊಂಡು ಆರೋಗ್ಯವಂತರಾಗಿರೆಂದು ಬೆಳಗಾವಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಬಿ.ಕುಡವಕ್ಕಲಿಗೇರ ಹೇಳಿದರು. ಶುಕ್ರವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ಸಾಂಸ್ಕೃತಿಕ, ಕ್ರೀಡಾ ಹಾಗೂ ಕಾನೂನು ಸೇವಾ ಘಟಕದ …
Read More »ಚಿದಾನಂದ ಸವದಿಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ
ಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು ತೂಗಿ ಲೋಕಸಭಾ ಟಿಕೆಟ್ ನೀಡಲು ಮುಂದಾಗಿದೆ. ಚಿಕ್ಕೋಡಿ ಕ್ಷೇತ್ರಕ್ಕೆ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹಾಘೂ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಅವರ ಹೆಸರುಗಳು ಕೇಳಿ ಬಂದಿವೆ. ಬಿಜೆಪಿ ಪಕ್ಷದತ್ತ ವಾಲುತ್ತಿರುವ ಸವದಿಯನ್ನ ಪಕ್ಷದಲೇ ಉಳಿಸಿಕೊಳ್ಳಲು ಪುತ್ರನಿಗೆ ಟಿಕೆಟ್ ನೀಡಬಹುದು ಎನ್ನಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ …
Read More »