ಬೆಳಗಾವಿ

ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನಾ ವರದಿ ಅನುಷ್ಠಾನಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಿದ ಸರ್ಕಾರ

ಬೆಳಗಾವಿ: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಕುಡಿಯುವ ನೀರಿನ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಒಪ್ಪಿಗೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಮಹದಾಯಿ‌ ನದಿಗೆ ಅಣೆಕಟ್ಟು ನಿರ್ಮಾಣ ಮಾಡಿ. ಕಾಲುವೆ ಮುಖಾಂತರ 1.72 ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಲಪ್ರಭಾ ನದಿಗೆ ತಿರುಗಿಸುವ ಕಳಸಾ ನಾಲಾ ತಿರುವು ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನೆರಸೆ ಗ್ರಾಮದ ಬಳಿ ಬಂಡೂರ …

Read More »

ಕೋವಿಡ್ ಸೋಂಕಿತರಿಗೆ ದಿನಬಳಕೆ-ಮೆಡಿಕಲ್‌ ಕಿಟ್‌ ವಿತರಣೆ

ಗೋಕಾಕ: ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚುವ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ ಎಂದು ಹಿರಿಯ ತಜ್ಞ ವೈದ್ಯ ಡಾ| ಆರ್‌.ಎಸ್‌. ಬೆಣಚಿನಮರಡಿ ಹೇಳಿದರು. ಮಂಗಳವಾರ ಇಲ್ಲಿಯ ಎನ್‌ಎಸ್‌ಎಫ್‌ ಅತಿಥಿ ಗೃಹದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊರೊನಾ ರೋಗಿಗಳಿಗೆ ಕೊಡಮಾಡಿದ ದಿನಬಳಕೆಯ ಮತ್ತು ಮೆಡಿಕಲ್‌ ಕಿಟ್‌ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಲಾಕ್‌ಡೌನ್‌ ಸಮಯದಲ್ಲಿ ಅರಭಾವಿ ಕ್ಷೇತ್ರದ ಪ್ರತಿ ಕುಟುಂಬಕ್ಕೆ ದಿನಸಿ ಕಿಟ್‌ ವಿತರಿಸಿದ್ದ ಶಾಸಕರು ಈಗ …

Read More »

ಇಂದು ಹಾಪ್ ಸೆಂಚುರಿ ಬಾರಿಸಿದ ಕೊರೋನಾ: ನಗರದ ಒಂದೇ ಕುಟುಂಬದ ಹತ್ತು ಜನರಿಗೆ ತಗುಲಿದ ಸೋಂಕು

ಗೋಕಾಕ: ಗೋಕಾಕ ತಾಲೂಕಿನಲ್ಲಿ ಮಾರಣಾಂತಿಕ ಕೊರೋನಾ ಸೋಂಕು ಪ್ರಥಮ ಬಾರಿಗೆ ಹಾಪ್ ಸೆಂಚುರಿ ಬಾರಿಸಿದ್ದು ಒಂದೇ ಕುಟುಂಬದ 10 ಜನರಿಗೆ ಕೊರೋನಾ ಧೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.   ಗೋಕಾಕ ತಾಲೂಕಿನಲ್ಲಿ ಇಂದು ಒಟ್ಟು 57 ಪ್ರಕರಣಗಳು ವರದಿಯಾಗಿದ್ದು ಗೋಕಾಕ ನಗರದಲ್ಲಿಯೆ 24 ಸೋಂಕಿತರು ಪತ್ತೆಯಾಗಿದ್ದಾರೆ. ನಗರದ ವಿದ್ಯಾನಗರದ ಒಂದೇ ಕುಟುಂಬದ 10 ಜನರಿಗೆ ಕೊರೋನಾ ತಗುಲಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಗೋಕಾಕ …

Read More »

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಸತೀಶ ಜಾರಕಿಹೊಳಿ ಅವರು ಭೇಟಿ

ಬೆಳಗಾವಿ: ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಕಚೇರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿದರು. ಕಾಂಗ್ರೆಸ್ ಕಚೇರಿ ನವೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಪರಿಶೀಲನೆ ನಡೆಸಿದರು.‌ ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಾಟಾಂಬಳೆ, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಸುನೀಲ್ ಹಣುಮನ್ನವರ್, ಮಹೇಶ್ ಕಡಪಟ್ಟಿ, ಮಲಗೌಡಾ ಪಾಟೀಲ್ ಮುಂತಾದವರು ಇದ್ದರು.

Read More »

ಲಕ್ಷ್ಮಣ ಸವದಿ ಮುಂದಿನ ಸಿಎಂ’ – ಡಿಸಿಎಂ ಬೆಂಬಲಿಗರಿಂದ ಪೋಸ್ಟ್

ಬೆಂಗಳೂರು: ಡಿಸಿಎಂ ಲಕ್ಷ್ಮಣ ಸವದಿ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸವದಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಅಭಿಯಾನ ನಡೆಸುತ್ತಿದ್ದಾರೆ. ಈಗ ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗಿದ್ದು, ಈಗ ಬಿಜೆಪಿಯಲ್ಲಿ ಒಳಾಂಗಣ ರಾಜಕೀಯ ನಡೆಯುತ್ತಿದೆಯಾ ಎಂಬ ಅನುಮಾನಗಳು ಮೂಡಿವೆ. ಲಕ್ಷ್ಮಣ ಸವದಿಯವರು ದೆಹಲಿಗೆ ಹೋಗಿ ಕೇಂದ್ರ ನಾಯಕರನ್ನು ಭೇಟಿಯಾಗಿ ಬಂದ ನಂತರ ಈ ಪೋಸ್ಟ್ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಹಲವಾರು ಅನುಮಾನಗಳು ಮೂಡಿವೆ. ಈಗ …

Read More »

ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದರೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ

ಬೆಳಗಾವಿ:  ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿದರೆ ತುರ್ತು ಸಂದರ್ಭದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಅನುಕೂಲವಾಗುತ್ತದೆ. ಆದ್ದರಿಂದ ಮೂರು ದಿನಗಳಲ್ಲಿ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇಯ ಸಭಾಂಗಣದಲ್ಲಿ ಮಂಗಳವಾರ (ಜುಲೈ 28) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಗಾಲ ಆರಂಭಗೊಂಡಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ …

Read More »

ಬೆಳಗಾವಿ ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ದರ್ಶನ ಎಚ್.ವಿ.

ಬೆಳಗಾವಿ:  ಜಿಲ್ಲಾ ಪಂಚಾಯಿತಿ ನೂತನ ಸಿಇಒ ಆಗಿ ದರ್ಶನ ಎಚ್.ವಿ. ಅವರನ್ನು ನೇಮಕಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ದರ್ಶನ ಅವರನ್ನು ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಬೆಳಗಾವಿ ಜಿಪಂ ಸಿಇಒ ಆಗಿದ್ದ ಡಾ. ಕೆ.ವಿ ರಾಜೇಂದ್ರ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇಲ್ಲಿನ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಡಾ. ಕೆ.ವಿ ರಾಜೇಂದ್ರ ಅವರನ್ನು ದಕ್ಷಿಣ ಕನ್ನಡ …

Read More »

ಶೀಘ್ರದಲ್ಲಿಯೇ ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ ಕೇಂದ್ರಿಕೃತ ಆಮ್ಲಜನಕ ಪೂರೈಕೆಯ ಘಟಕ ಆರಂಭ : ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಕೊರೊನಾ ಸೋಂಕಿನ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವದರಿಂದ ಇದನ್ನು ಹೋಗಲಾಡಿಸಲು ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ಘಟಕವನ್ನು ಪ್ರಾರಂಭಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಕಿಟ್‍ಗಳನ್ನು ಹಸ್ತಾಂತರಿಸುವ ಮುನ್ನ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ದೂರವಾಣಿ ಮೂಲಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಕೊರೊನಾ ರೋಗಿಗಳಿಗೆ ಸಮರ್ಪಕ ಆಕ್ಸಿಜನ್ ವ್ಯವಸ್ಥೆ ಇಲ್ಲದ್ದರಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಗೋಕಾಕ ಮತ್ತು ಮೂಡಲಗಿ …

Read More »

ಗೋಕಾಕ ತಾಲೂಕಿನಲ್ಲಿ ಕೊರೋನಾದ ಅಲೆ ಜೋರಾಗಿದೆ

ಗೋಕಾಕ: ನಿನ್ನೇ ಸಂಜೆ ಮತ್ತು ಇವತ್ತು ಸೇರಿ   ಕೊರೋನಾ ಒಟ್ಟು 19 ಜನರಿಗೆ ತಗುಲಿದೆ. ಸೋಮವಾರ ಸಂಜೆ ಯಿಂದ   ಮಂಗಳವಾರ ಮುಂಜಾನೆವರೆಗೆ 19 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ. ನಗರದ ಹೆರಿಗೆ ತಜ್ಞರೊಬ್ಬರು ಮತ್ತು ಆಸ್ಪತ್ರೆ ಗ್ರೂಪ್ ಡಿ  ಸೇರಿದಂತೆ 9 ಜನರಿಗೆ , ಚಿಕ್ಕನಂದಿ -2 , ಕೌಜಲಗಿ -1 , ಕುಲಗೋಡ -1, ಮಮದಾಪೂರ -1, ರಾಜಾಪೂರ – 1, ಘಟಪ್ರಭಾ -1, ನಲ್ಲಾನಟ್ಟಿ – 2, …

Read More »

ಹೆರಿಗೆ ಆಸ್ಪತ್ರೆ ವೈದ್ಯರ ಎಡವಟ್ಟಿಗೆ ಇಡೀ ಗ್ರಾಮಕ್ಕೆ ಗಂಡಾಂತರ.. ಎಲ್ಲಿ?

ಬೆಳಗಾವಿ: ಚಿಕ್ಕೋಡಿ ಹೆರಿಗೆ ಆಸ್ಪತ್ರೆಯ ಸಿಬ್ಬಂದಿಯಿಂದ ಆದ ಮಹಾ ಎಡವಟ್ಟಿಗೆ ಇಡೀ ಗ್ರಾಮವೊಂದು ಆತಂಕಕ್ಕೆ ಒಳಗಾಗಿದೆ. ಬಾಣಂತಿಗೆ ಸೋಂಕು ಇರುವುದನ್ನು ಹೇಳದೇ ಆಸ್ಪತ್ರೆ ಸಿಬ್ಬಂದಿ ಡಿಸ್ಚಾರ್ಜ್‌ ಮಾಡಿದ್ದಾರೆ. ಇದರಿಂದ ಈಗ ಇಡೀ ಬಾವನಸೌಂದತ್ತಿ ಗ್ರಾಮಕ್ಕೆ ಗಂಡಾಂತರ ಎದುರಾಗಿದೆ. ಕಳೆದ ಮೂರು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಗೆ ಹೆರಿಗೆಯಾಗಿತ್ತು. ಹೆರಿಗೆಯಾದ ಬಳಿಕ ಬಾಣಂತಿಗೆ ಸೋಂಕಿರುವುದು ಹೇಳದೆ ವೈದ್ಯರು ಆಕೆಯನ್ನು ಮನೆಗೆ ಕಳುಹಿಸಿದ್ದರು. ನಿನ್ನೆ ಸಂಜೆ ಗ್ರಾಮವನ್ನ …

Read More »