Breaking News

ಬೆಳಗಾವಿ

ನೋ ಪ್ರೊಟೆಸ್ಟ್ ನಥಿಂಗ ಡಿಸಿಪಿ ವಿಕ್ರಂ ಅಮಟೆ ಖಡಕ್ ಎಚ್ಚರಿಕೆ ಪ್ರತಿಭಟನೆ ಕೈ ಬಿಟ್ಟ ಎಂಇಎಸ್

ಬೆಳಗಾವಿ  – ಯಾವುದೇ ಕಾರಣದಿಂದ ಪ್ರತಿಭಟನೆಗೆ ಅವಕಾಶವಿಲ್ಲ. ಹಾಗೊಮ್ಮೆ ಪ್ರತಿಭಟನೆಗಿಳಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಪಿ ವಿಕ್ರಂ ಅಮಟೆ ನೀಡಿದ ಗಂಭೀರ ಎಚ್ಚರಿಕೆಗೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಬಾಲ ಮುದುಡಿಕೊಂಡಿದೆ. ಗುರುವಾರ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಪ್ರತಿಭಟನೆ ಕೈ ಬಿಟ್ಟಿವೆ. ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಕನ್ನಡ ಧ್ವಜ ಹಾಕಿರುವುದನ್ನು ಪ್ರತಿಭಟಿಸಿ ಎಂಇಎಸ್ ಗುರುವಾರ ಬೃಹತ್ ಪ್ರತಿಭಟನೆ ಮಾಡುವುದಾಗಿ ಹೇಳಿತ್ತು. ಇದಕ್ಕಾಗಿ ಎಲ್ಲ ಕಡೆ ಸಿದ್ಧತೆ …

Read More »

ಕಾಕತಿ ವ್ಯಾಪ್ತಿಯಲ್ಲಿ ಬಿಂದಾಸ್ ಕಳ್ಳತನ..!

ಬೆಳಗಾವಿಯಲ್ಲಿ ಕಳ್ಳರ ಕೈಚಳಕ ಮತ್ತಷ್ಟು ಬಲಗೊಳ್ಳುತ್ತಿದೆ. ಮನೆಗಳ್ಳತನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಕಾಕತಿ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಕಳ್ಳರು ಮಾತ್ರ ಬಿಂದಾಸ್ ಆಗಿ ಕಳ್ಳತನ ಮಾಡುತ್ತಿದ್ದಾರೆ. ಯಾಕೆಂದರೆ ಬಹುಶಃ ಇಲ್ಲಿಯವರೆಗೆ ಆಗಿರುವ ಕಳ್ಳತನಗಳಲ್ಲಿ ಒಂದೇ ಒಂದು ಕಳ್ಳತನ ಪ್ರಕರಣವನ್ನು ಅಲ್ಲಿನ ತನಿಖಾಧಿಕಾರಿಗಳು ಪತ್ತೆ ಹಚ್ಚಿಲ್ಲ. ಹೀಗಾಗಿ ಬಹುಶಃ ಕಳ್ಳರು ಇಲ್ಲಿ ಬಿಂದಾಸಾಗಿ ಹಾಡಹಗಲೇ ಮನೆಗಳಿಗೆ ಕನ್ನ ಹಾಕಿ ದೊಚುತ್ತಿದ್ದಾರೆ. ನಿನ್ನೆ (ಮಂಗಳವಾರ 19) ಮಧ್ಯಾಹ್ನ 12 ಗಂಟೆ ಸುಮಾರಿಗೆ …

Read More »

ಬೆಳಗಾವಿಯ 19 ವರ್ಷದ ಯುವತಿ ಕಾಣೆ

ಬೆಳಗಾವಿ : ಅನಗೋಳ ನಿವಾಸಿಯಾದ 19 ವರ್ಷದ ಸ್ವಾತಿ ಸದಾನಂದ ಕಮ್ಮಾರ ಜ.4 ರಂದು ಕಾಣೆಯಾಗಿದ್ದಾಳೆ. ಪಾಂಗೂಳ ಗಲ್ಲಿಯಲ್ಲಿರುವ ಸಾಯಿ ಲಕ್ಷ್ಮಿ ಇಂಡೋಲಿಯನ್ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗಿದ್ದಳು. ಸಂಜೆ 4 ಗಂಟೆಗೆ ಮಾಲೀಕರಿಂದ 1400 ರೂಪಾಯಿ ಹಣ ಪಡೆದು ಕೆಲಸಕ್ಕೆ ಬರುವುದಿಲ್ಲವೆಂದು ಮರಳಿದ್ದಾಳೆ. ಆದರೆ ಮನೆಗೆ ಬಾರದೆ ಕಾಣೆಯಾಗಿದ್ದು, ಬೆಳಗಾವಿ ಮಾರ್ಕೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಾತಿ ಸದಾನಂದ ಕಮ್ಮಾರ 5 ಪೂಟ 1 ಇಂಚು ಎತ್ತರವಿದ್ದು, …

Read More »

ಆಸ್ತಿ ವಿವಾದ : ಬೆಳಗಾವಿಯಲ್ಲಿ 4 ವರ್ಷದ ಬಾಲಕನ ಕೊಲೆಗೈದ ಪಾಪಿ

    ಬೆಳಗಾವಿ : ಆಸ್ತಿ ವಿವಾದಕ್ಕೆ ಸಮಂಧಿಸಿದಂತೆ 4 ವರ್ಷದ ಬಾಲಕನನ್ನ ಕೊಲೆ ಮಾಡಿದ ಘಟನೆ ಸವದತ್ತಿ ತಾಲ್ಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದಿದೆ. ಮಾರುತಿ ವಿರೇಶ್ ಸಂಕಣ್ಣವರ ಹತ್ಯೆಯಾದ ಬಾಲಕ. ಈರಪ್ಪ ಬಸಪ್ಪ ಸಂಕಣ್ಣ(35) ಕೊಲೆ ಆರೋಪಿಯಾಗಿದ್ದು, ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ತನಿಖೆ‌ ನಡೆಸಿದ್ದಾರೆ.

Read More »

ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ.

ಬೆಂಗಳೂರು: ಆಬಾಲ ವೃದ್ಧರಾದಿಯಾಗಿ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿರೋ ‘ಚೀನಿ ವೈರಸ್’ ಕೊರೊನಾಗೆ ಇಷ್ಟು ದಿನ ವ್ಯಾಕ್ಸಿನ್ ಬಂದ್ರೆ ಸಾಕಪ್ಪಾ ಅಂತ ಜನ ಕಾಯುತ್ತಿದ್ದರು. ಆದ್ರೆ ಕೊವಿಶೀಲ್ಡ್ ವ್ಯಾಕ್ಸಿನ್ ವಿತರಣೆಯ ಮಹಾಯಜ್ಞಕ್ಕೆ ಚಾಲನೆ ಸಿಕ್ಕು ನಾಲ್ಕನೇ ದಿನ ಆದರೂ ಟಾರ್ಗೆಟ್ ರೀಚ್ ಆಗೋಕೆ ಒದ್ದಾಡುವಂತಾಗಿದೆ. ಪ್ರಾಣ ಉಳಿಸೋ ಸಂಜೀವಿನಿ, ಜೀವಾಮೃತ ಅಂತೆಲ್ಲಾ ಕರೆಸಿಕೊಳ್ತಿದ್ದ ವ್ಯಾಕ್ಸಿನ್‍ಗೆ ಡಿಮ್ಯಾಂಡೇ ಇಲ್ಲ. ರಾಜ್ಯವೂ ಸೇರಿದಂತೆ ದೇಶಾದ್ಯಂತ ಮೊದಲ ಹಂತದ ಕೊರೋನಾ ವಾರಿಯರ್ಸ್ ವ್ಯಾಕ್ಸಿನೇಷನ್‍ಗೆ ನಿರೀಕ್ಷಿತ …

Read More »

ಗಡಿ ಉಸ್ತುವಾರಿ ಸಚಿವರನ್ನು ನೇಮಿಸುವಂತೆ ಕನ್ನಡಪರ ಹೋರಾಟಗಾರರ ಒತ್ತಾಯ

ಬೆಳಗಾವಿ,ಜ.19- ರಾಜ್ಯ ಸರಕಾರಕ್ಕೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಿ. ಬೆಂಗಳೂರಿನ ಎಂಎಸ್ ಬಿಲ್ಡಿಂಗ್ ನಲ್ಲಿರುವ ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಗಡಿ ಸಂರಕ್ಷಣಾ ಆಯೋಗ ಬೆಳ ಗಾವಿಯ ಸುವರ್ಣ ಸೌಧಕ್ಕೆ ಕೊಡ ಬೇಕು ಎಂದು ಹಿರಿಯ ಕನ್ನಡಪರ ಹೋರಾಟಗಾರ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿಭಾಗದ ಬಗ್ಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ …

Read More »

ಮಹಾರಾಷ್ಟ್ರ ಉದ್ಭವವಾಗಿದ್ದೆ ಕನ್ನಡ ನೆಲದಿಂದ’

ಬೆಳಗಾವಿ: ‘ಬೆಳಗಾವಿಯೂ ಐತಿಹಾಸಿಕ ಕಾಲದಿಂದಲೂ, ವರ್ತಮಾನದಲ್ಲೂ ಹಾಗೂ ಭವಿಷ್ಯದಲ್ಲೂ ಕನ್ನಡಿಗರದೆ. ಇದರಲ್ಲಿ ಯಾವುದೇ ಸಂಶಯ ಬೇಡ. ಹಾಗೆ ನೋಡಿದರೆ ಇಂದಿನ ಮಹಾರಾಷ್ಟ್ರವು ಹಿಂದೊಮ್ಮೆ ಕನ್ನಡ ನೆಲವಾಗಿತ್ತು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದ್ದಾರೆ. ‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ’ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ‍ಪ್ರಕಟಣೆ ನೀಡಿರುವ ಅವರು, ‘ಮಹಾರಾಷ್ಟ್ರ ಹಾಗೂ ಮರಾಠಿ ಭಾಷೆ ಉದ್ಭವವಾಗಿದ್ದೆ ಕನ್ನಡ …

Read More »

ಗಡಿ ವಿಚಾರದ ಬಗ್ಗೆ ಉದ್ಧವ್ ಠಾಕ್ರೆ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ : ಸತೀಶ್ ಜಾರಕಿಹೊಳಿ

ಬೆಳಗಾವಿ : ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಉದ್ಧವ್ ಠಾಕ್ರೆ ಅವರು ಗಡಿ ವಿಚಾರದ ಬಗ್ಗೆ ಈ ಹಿಂದೆ ಕೂಡ ಮಾತನಾಡಿದ್ದರು. ಹೀಗಾಗಿ ಅವರ ಹೇಳಿಕೆ ಬಗ್ಗೆ ಅಷ್ಟೊಂದು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಗಡಿ ವಿಚಾರ ಬಂದಾಗ ನಮ್ಮ ಪಕ್ಷದ ವತಿಯಿಂದ ಯಾವುದೇ …

Read More »

ಮಹಾ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ ಖಂಡಿಸಿ..ಬೆಳಗಾವಿಯಲ್ಲಿ ಉದ್ಧವ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ..!

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರೋವರೆಗೂ ಹೋರಾಡೋಣ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೇ ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ರಾಜ್ಯಾಧ್ಯಂತ ವಿವಿಧ ಕನ್ನಡ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಅದೇ ರೀತಿ ಬೆಳಗಾವಿಯಲ್ಲಿಯೂ ಕನ್ನಡಪರ ಸಂಘಟನೆಗಳು ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿವೆ. ಗಡಿ ವಿಚಾರದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮಹಾರಾಷ್ಟ್ರ …

Read More »

ಗಡಿ ವಿಚಾರದಲ್ಲಿ ಮಹಾ ಸಿಎಂ ಉದ್ಧವ್ ಉದ್ಧಟತನ ಪ್ರದರ್ಶನ..ಸಿಎಂ ಬಿಎಸ್‍ವೈ ಆಕ್ರೋಶ

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕøತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ ಎಂದು ಉದ್ಧವ್ ಠಾಕ್ರೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದರು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಟ್ವೀಟ್ ಮೂಲಕ ತಕ್ಕ ಉತ್ತರ ನೀಡಿರುವ ಸಿಎಂ ಬಿಎಸ್‍ವೈ ಹೀಗಿರುವಾಗ …

Read More »