Breaking News

ಬೆಳಗಾವಿ

ಕೆಂಪು, ಹಳದಿ ಬಾವುಟ ಹಾಕಿಕೊಂಡು ಓಡಾಡಿದ್ರೆ ಅಟ್ಟಾಡಿಸಿ ಹೊಡೀತಾನಂತೆ…!!

ಬೆಳಗಾವಿ: ಕನ್ನಡಿಗರನ್ನೆ ಅಟ್ಟಾಡಿಸಿ ಹೊಡ್ತಿವಿ ಎಂದು ಬೆಳಗಾವಿಯಲ್ಲಿ ಎಂಇಎಸ್ ಮುಖಂಡ ಹೂಂಕರಿಸಿ ಸಂಕಷ್ಟಕ್ಕೆ ಬಿದ್ದಿದ್ದಾನೆ. ಬೆಳಗಾವಿ ನೆಲದಲ್ಲಿ ನಿಂತುಕೊಂಡು ಈ ರೀತಿ ಧಮ್ಕಿ ಹಾಕಿದವ ಎಂಇಎಸ ಮುಖಂಡ ಶುಭಂ ಸಾಳುಂಕೆ. ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಎರಡು ಒಂದಾಗಿವೆ ಎಂದಿರುವ ಸಾಳುಂಕೆ, ಹಳದಿ ಕೆಂಪು ಬಣ್ಣದ ಶಾಲು ಧರಿಸಿದವರನ್ನು ಸಿಕ್ಕ ಸಿಕ್ಕಲ್ಲಿ ನಾವು ಹೊಡ್ತಿವಿ ಎಂದಿದ್ದಾನೆ. ನಮ್ಮ ಶಾಂತಿಯುತ ಹೋರಾಟವನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಕನ್ನಡಿಗರು ಮತ್ತು ಸರಕಾರಕ್ಕೆ ಎಚ್ಚರ …

Read More »

ಶಿವಸೇನೆ ಕಚೇರಿ ಮುಚ್ಚಿಸಲು ವಾಹನಗಳ ಜಪ್ತಿಗೆ ಕನ್ನಡ ಕ್ರಿಯಾ ಸಮಿತಿ ಆಗ್ರಹ

  ಕರ್ನಾಟಕ, ಕನ್ನಡಿಗರ ವಿರುದ್ಧವೇ ನಾಡದ್ರೋಹಿ ಚಟುವಟಿಕೆ ನಡೆಸುವ ಶಿವಸೇನೆಗೆ ಕರ್ನಾಟಕದ ನೆಲದಲ್ಲಿಯೇ ಕಾರ್ಯಾಲಯ ನಡೆಸಲು ಅವಕಾಶ ಮಾಡಿಕೊಡುವದು ಎಷ್ಟು ಸರಿ? ನಮ್ಮ ವಿರುದ್ಧವೇ ಪಿತೂರಿ ನಡೆಸುವ ಇಂಥ ಸಂಘಟನೆಯ ವಾಹನಗಳು ನಮ್ಮ ಮುಂದೆಯೇ ನಾಮಫಲಕ ಹಾಕಿಕೊಂಡು ಸಂಚರಿಸಲು ಅವಕಾಶ ಮಾಡಿಕೊಡುವದು ಎಷ್ಟು ಸಮಂಜಸ?   ಕೂಡಲೇ ಶಿವಸೇನೆಯ ಬೆಳಗಾವಿ ಕಾರ್ಯಾಲಯವನ್ನು ಮುಚ್ಚಿಸಬೇಕು ಮತ್ತು ಈ ಸಂಘಟನೆಯ ವಾಹನಗಳನ್ನು ಜಪ್ತಿ ಮಾಡಬೇಕೆಂದು ಆಗ್ರಹಿಸುವ ಮನವಿಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ …

Read More »

ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು:ಪ್ರಿಯಾಂಕಾ ಜಾರಕಿಹೊಳಿ

ಯಮಕನಮರಡಿ: “ಮಹಿಳೆಯರು ಕಾಯ್ದೆ, ಕಾನೂನುಗಳನ್ನು ತಿಳಿದುಕೊಳ್ಳಬೇಕು. ಸಮಾಜದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಿಂದೇಟು ಹಾಕಬಾರದು” ಎಂದು ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಗ್ರಾಮದಲ್ಲಿ ಸಂಜೀವಿನಿ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳು, ಯಮಕನಮರಡಿ, ಹತ್ತರಗಿ ಹಾಗೂ ಜಿಲ್ಲಾ ಸ್ತ್ರೀ ಒಕ್ಕೂಟ ಮತ್ತು ಹುಕ್ಕೇರಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಅಮೇರಿಕಾದಲ್ಲಿ 1914ರಲ್ಲಿ …

Read More »

ಶಾಕಿಂಗ್‌ ನ್ಯೂಸ್‌ : ಬೆಳಗಾವಿಯಲ್ಲಿ ಒಂದೇ ಕುಟುಂಬದ 19 ಮಂದಿಗೆ ಕರೋನ ಸೊಂಕು.!

ಬೆಳಗಾವಿ : ಒಂದೇ ಕುಟುಂಬದ 19 ಮಂದಿಗೆ ಕರೋನ ಸೊಂಕು ಕಂಡು ಬಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ, ರಾಯಭಾಗ ತಾಲೂಕಿನ ಸೌಂದತ್ತಿ ಗ್ರಾಮದ ಒಂದೇ ಕುಟುಂಬದ 19 ಮಂದಿಗೆ ಕರೋನ ಸೊಂಕು ಈಡಾಗಿದ್ದಾರೆ ಎನ್ನಲಾಗಿದ್ದು, ಮಹಾರಾಷ್ಟ್ರದಲ್ಲಿ ನಡೆದ ಸಂಬಂಧರಿಕರ ಕಾರ್ಯಕ್ರಮವೊಂದರಲ್ಲಿ ಈ ಕುಟಂಬ ಭಾಗವಹಿಸಿ ವಾಪಸ್ಸು ತಮ್ಮೂರಿಗೆ ಬಂದಿತ್ತು, ಈ ವೇಳೆ ಅವರಿಗೆ ಕರೋನ ಟೆಸ್ಟ್‌ ಮಾಡಿಸಲಾಗಿದೆ. ನಿನ್ನೆ ಕುಟಂಬದ ಐವರಿಗೆ ಕರೋನ ಸೊಂಕು ಇರೋದು ದೃಡಪಟ್ಟಿದ್ದು, ಇಂದು …

Read More »

ಆ ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದ್ರೆ ಸಾಲದು; ಸತೀಶ್ ಜಾರಕಿಹೊಳಿ

ಬೆಳಗಾವಿ : ಆ ಯುವತಿ ವಿಡಿಯೋದಲ್ಲಿ ಹೇಳಿಕೆ ನೀಡಿದರೆ ಸಾಲದು, ಅಧಿಕೃತವಾಗಿ ಮುಂದೆ ಬಂದು ತನಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಿಡಿ ಪ್ರಕರಣದ ಕುರಿತು ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಗೆ ಮುಂದೆ ಬಂದು ಹೇಳಿದ್ದಾರೋ ಹಾಗೆಯೇ ಆ ಯುವತಿ ಕೂಡ ಮುಂದೆ ಬಂದು ತನಗಾದ ಅನ್ಯಾಯದ ಬಗ್ಗೆ ಹೇಳಿಕೊಳ್ಳಬೇಕು ಆಗ ಮಾತ್ರ …

Read More »

ರಮೇಶ ಜಾರಕಿಹೊಳಿ ಅಭಿಮಾನಿಗಳಿಂದ ಗೋಕಾಕದಲ್ಲಿ ಪ್ರತಿಭಟನೆ

ಸಿಡಿ ಪ್ರಕರಣಕ್ಕೆ ಸಂಬಂದಪಟ್ಟವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿಗಳು ಗೋಕಾಕದಲ್ಲಿ ಪ್ರತಿಭಟನೆ ನಡೆಸಿದರು. ಗೋಕಾಕ ಬಸವೇಶ್ವರ ವೃತ್ತದಲ್ಲಿ ಭಾನುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿಗಳು, ಸಿಡಿ ಪ್ರಕರಣಕ್ಕೆ ಸಂಬಂದಪಟ್ಟವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನೆ ನಿರತ ಮಹಿಳೆ ಮಾತನಾಡಿ, ರಾಜಕೀಯ ಮಾಡಲಿ ಆದರೆ ಹೆಣ್ಣನ್ನು ಮುಂದೆ ಇಟ್ಟುಕೊಂಡು ಶಿಖಂಡಿ ತರಹ …

Read More »

ವರ್ಚಸ್ಸಿಗೆ ಧಕ್ಕೆ ಆಗೋದಿಲ್ಲ,ನಮ್ಮವರು ನಮ್ಮ ಜೊತೆಗಿದ್ದಾರೆ.

ಬೆಳಗಾವಿ-ರಮೇಶ್ ಜಾರಕಿಹೊಳಿ‌ ಸಿಡಿ ಪ್ರಕರಣ,ಎಸ್‌ಐಟಿ ಪ್ರಕರಣಕ್ಕೆ ತನಿಖೆ ಕೊಟ್ಟಿದ್ದು ಸದ್ಯದ ಮಟ್ಟಿಗೆ ಸ್ವಾಗತ ಮಾಡ್ತೇನೆ,ಎಂದು,ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಯಾವ ಹಂತಕ್ಕೆ ತನಿಖೆ ಮಾಡ್ತಾರೆ ಏನ್ ಮಾಡ್ತಾರೆ ಕಾದು ನೋಡಬೇಕು, ನಾವು ಸದ್ಯಕ್ಕೆ ಎಸ್‌ಐಟಿ ತನಿಖೆ ಕೊಟ್ಟಿದ್ದು ಸ್ವಾಗತ ಮಾಡುತ್ತೇವೆ, ಹೇಗೆ ಇನ್ವೆಸ್ಟಿಗೇಷನ್ ಮಾಡ್ತಾರೆ ಅದರ ಮೇಲೆ ಅವಲಂಬಿತವಾಗಿದೆ. ಕೇಸ್ ದಾಖಲಾಗಿಲ್ಲ, ವಿಚಾರಣೆ ಮಾಡುವ ಅಧಿಕಾರ ಮಾತ್ರ ಕೊಟ್ಟಿದ್ದಾರೆ, ನಿನ್ನೆ …

Read More »

ಕರ್ನಾಟಕ-ಮಹಾರಾಷ್ಟ್ರ ನಡುವೆ ಬಸ್ ಸಂಚಾರ ಸ್ಥಗಿತ ಕೊಲ್ಹಾಪುರದಲ್ಲಿ ಗಲಾಟೆ ಹಿನ್ನೆಲೆ

ಬೆಳಗಾವಿ:ಕೊಲ್ಹಾಪುರದಲ್ಲಿ ನಡೆದ ಗಲಾಟೆ ಬೆನ್ನಲ್ಲೇ ಕರ್ನಾಟಕ ಹಾಗೂ ಮಾಹಾರಾಷ್ಟ್ರ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರತಿದಿನ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ 400 ಬಸ್ ಗಳು ಸಂಚರಿಸುತ್ತಿದ್ದವು. ಇನ್ನು ಮಹಾರಾಷ್ಟ್ರದಿಂದ ಬೆಳಗಾವಿಗೆ 58 ಬಸ್ ಗಳು ಸಂಚರಿಸುತ್ತಿದ್ದವು. ಆದರೆ ಗಲಾಟೆ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ನಡುವಿನ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿನ್ನೆ ಕೊಲ್ಹಾಪುರದಲ್ಲಿ ಗಲಾಟೆ ನಡೆದಿದ್ದು, ಇದೇ ಕಾರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Read More »

ಗೌರವಕ್ಕೆ ಧಕ್ಕೆಯಾಗಿರಬಹುದು, ನಮ್ಮೊಂದಿಗೆ ಬೆಂಬಲಿಗರಿದ್ದಾರೆ: ಸತೀಶ ಜಾರಕಿಹೊಳಿ

ಬೆಳಗಾವಿ: ‘ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಸ್ವಾಗತಾರ್ಹ. ಆದರೆ, ಯಾವುದೇ ಪ್ರಕರಣದಲ್ಲಾಗಲಿ ಎಸ್‌ಐಟಿ ವರದಿಯನ್ನಷ್ಟೇ ನೀಡುತ್ತದೆ. ಎಫ್‌ಐಆರ್ ದಾಖಲಾದರೆ ಮಾತ್ರ ಅಪರಾಧಿಗಳಿಗೆ ಶಿಕ್ಷೆ ನೀಡಲು ಸಾಧ್ಯ’ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಎಸ್‌ಐಟಿ ರಚನೆ ಬಗ್ಗೆ ಜೆಡಿಎಸ್ ಮುಖಂಡ ಎಚ್‌.ಡಿ. ಕುಮಾರಸ್ವಾಮಿ ಅವರು ಸೇರಿದಂತೆ ಕೆಲವು ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯ …

Read More »

ಮಾಸಿಕ ಸುವಿಚಾರ ಚಿಂತನ ಕಾರ್ಯಕ್ರಮ

ಘಟಪ್ರಭಾ: ಸಮೀಪದ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ಸಿದ್ದಲಿಂಗ ಸಮುದಾಯ ಭವನದಲ್ಲಿ ದಿ.13 ರಂದು ಮುಂಜಾನೆ 12 ಗಂಟೆಗೆ 128 ನೇ ಮಾಸಿಕ ಸುವಿಚಾರ ಚಿಂತನ ಗೋಷ್ಠಿ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಶ್ರೀ ಮಠದ ಪೀಠಾಧಿಕಾರಿ ಶ್ರೀ ನಿಜಗುಣ ದೇವರು, ಅಧ್ಯಕ್ಷತೆಯನ್ನು ಚಿಕ್ಕಹಂಚಿನಾಳ ಶಿವಾನಂದ ಮಠದ ಶಾಂತಾನಂದ ಸ್ವಾಮಿಗಳು ವಹಿಸುವರು. ಶ್ರೀಗಳ ಕಿರೀಟ ಮಹಾಪೂಜೆ ಜರಗುವುದು. ಅನ್ನ ದಾಸೋಹವನ್ನು ಗುರುಸಿದ್ದ ಕರಬನ್ನಿ ಹಾಗೂ …

Read More »