ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ದಿನ ಸಮೀಪಿಸುತ್ತಿದ್ದಂತೆಯೇ, ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರು ಭಾವನಾತ್ಮಕವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ‘ಅವರನ್ನ (ಪತಿ ಸುರೇಶ ಅಂಗಡಿ) ಮಧ್ಯ ದಾರಿಯಲ್ಲೇ ದೇವರು ಕರೆಸಿಕೊಂಡ. ಅವರು ನನ್ನ ಬಿಟ್ಟು ಹೊರಟ್ರು. ಅವರು ಜೀವನ ಪೂರ್ತಿ ನಿಮಗಾಗಿ ದುಡಿದವರು, ನೀವು ನನ್ನ ಕೈ ಬಿಡಬೇಡಿ’ ಎಂದು ಮತದಾರರನ್ನು ಕೋರುತ್ತಿದ್ದಾರೆ. ಹೀಗೊಂದು ಪೋಸ್ಟ್ ಅನ್ನು ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದೆ. …
Read More »ಬೆಳಗಾವಿ ಲೋಕಸಭಾ ಉಪಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರ ಮತಬೇಟೆ
ಬೆಳಗಾವಿ: ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಉಪಚುನಾವಣಾ ಅಖಾಡ ರಂಗೇರಿದ್ದು, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ಮತಬೇಟೆಗೆ ಅಖಾಡಕ್ಕೆ ಇಳಿದಿದ್ದು, ರಕ್ಷಾ ರಾಮಯ್ಯ ನೇತೃತ್ವದಲ್ಲಿ ಮೊದಗಾ ಗ್ರಾಮದಲ್ಲಿ ಬೈಕ್ ರ್ಯಾಲಿ ಕೈಗೊಳ್ಳುವ ಮುಖೇನ ಸತೀಶ್ ಜಾರಕಿಹೊಳಿ ಪರ ಮತ ಪ್ರಚಾರ ನಡೆಸಲಾಯಿತು. ಈ ವೇಳೆ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯನವರು ಯುವ ಕಾಂಗ್ರೆಸ್ ಶಕ್ತಿಯಿಂದಾಗಿಯೇ ಭಾರತವು ಇಂದು …
Read More »ಗೋಕಾಕ ಮತ್ತು ಅರಬಾವಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಬೆಳಗಾವಿಗೆ ಮತ್ತೆ ಸಿಎಂ B.S.Y.
ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಭಾರತೀಯ ಜನತಾ ಪಾರ್ಟಿ ಈಗ ಗೋಕಾಕ ಮತ್ತು ಅರಬಾವಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಗೋಕಾಕ ಮತ್ತು ಅರಬಾವಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಮತಗಳು ಹೆಚ್ಚಿದ್ದು, ಆ ಮತಗಳು ಸತೀಶ್ ಜಾರಕಿಹೊಳಿಗೆ ಹೋದಲ್ಲಿ ಬಿಜೆಪಿ ಬೆಳಗಾವಿ ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕ ಉಂಟಾಗಿದೆ. ರಮೇಶ …
Read More »”ಉತ್ತರ ಕರ್ನಾಟಕಕ್ಕೆ ಪ್ರಮುಖ ಇಲಾಖೆಗಳ ಕಚೇರಿ ಸ್ಥಳಾಂತರಕ್ಕೆ ಕಾನೂನಾತ್ಮಕ ಹೋರಾಟ”
ಬೆಂಗಳೂರು, ಎ. 11: ಉತ್ತರ ಕರ್ನಾಟಕದ ಜನತೆಯ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಪ್ರಮುಖ ಇಲಾಖೆಯ ಕಚೇರಿಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಸ್ಥಳಾಂತರಿಸಬೇಕು. ಈ ಕುರಿತಂತೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ರೈತರ ಅಭಿವೃದ್ದಿ ಸಂಘದ ಅಧ್ಯಕ್ಷ ಯಾಸೀರ್ ಜವಳಿ, ನ್ಯಾಯವಾದಿ ಶೇಖ್ ಸೌದ್ ತಿಳಿಸಿದ್ದಾರೆ. ರವಿವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿಯೇ ರಾಜ್ಯ ಸರಕಾರ ಗೆಜೆಟ್ ಹೊರಡಿಸಿ ಅನೇಕ ಪ್ರಮುಖ ಇಲಾಖೆ ಕಚೇರಿಗಳನ್ನು …
Read More »ಹನಿ ಟ್ರ್ಯಾಪ್ಗೆ ಬಳಸಿ ಕೊಳ್ಳಲಾಗಿದೆ ಎಂದುಉಲ್ಟಾ ಹೊಡೆದ್ರ ಸಿಡಿ ಲೇಡಿ.?
;ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬೀಗ್ ಟ್ವಿಸ್ಟ್ ಸಿಕ್ಕಿದೆ. ಯುವತಿ ಹೇಳಿಕೆಯಿಂದ ಕೇಸ್ ಹೊಸ ತಿರುವು ಪಡೆದುಕೊಂಡಿದೆ. ಸಿಡಿ ಲೇಡಿ ಎಸ್ ಐಟಿ ಅಧಿಕಾರಿಗಳ ಮುಂದೆ ಉಲ್ಟಾ ಹೊಡೆದಿದ್ದಾಳೆ. ಮತ್ತೊಮ್ಮೆ ಜಡ್ಜ್ ಮುಂದೆ ಹಾಜರು ಪಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾಳೆ. ನನ್ನನ್ನು ಹನಿ ಟ್ರ್ಯಾಪ್ ಗೆ ಬಳಸಿಕೊಂಡು ಈ ರೀತಿ ಕೃತ್ಯ ಎಸಲಾಗಿದ್ದು, ನರೇಶ್ ಗೌಡ , ಶ್ರವಣ್ ಅವರೇ ಕಾರಣ ಎಂದು ನೇರ ಆರೋಪ …
Read More »ಸುವರ್ಣ ವಿಧಾನ ಸೌಧದ ಸುತ್ತಲೂ ಸುಮಾರು ೧ ಕಿ.ಮೀ ಸುತ್ತಳತೆಯಲ್ಲಿ ಏ.೧೦ ರಿಂದ ಮೇ.೯ ಮಧ್ಯರಾತ್ರಿಯವರೆಗೆ ಸಿ.ಆರ್.ಪಿ.ಸಿ ೧೯೭೩ ಕಲಂ ೧೪೪ ಪ್ರಕಾರ ನಿಷೇಧಾಜ್ಞೆ
ಬೆಳಗಾವಿ – ಸುವರ್ಣ ವಿಧಾನ ಸೌಧದ ಸುತ್ತಲೂ ಸುಮಾರು ೧ ಕಿ.ಮೀ ಸುತ್ತಳತೆಯಲ್ಲಿ ಏ.೧೦ ರಿಂದ ಮೇ.೯ ಮಧ್ಯರಾತ್ರಿಯವರೆಗೆ ಸಿ.ಆರ್.ಪಿ.ಸಿ ೧೯೭೩ ಕಲಂ ೧೪೪ ಪ್ರಕಾರ ನಿಷೇಧಾಜ್ಞೆಯನ್ನು ವಿಧಿಸಿ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರಾದ ಡಾ|| ಕೆ. ತ್ಯಾಗರಾಜನ್ ಅವರು ಆದೇಶ ಹೊರಡಿಸಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುವರ್ಣ ವಿಧಾನ ಸೌಧದ ಬಳಿ ಕೆಲವು ಸಂಘ ಸಂಸ್ಥೆಯವರು, ಪ್ರತಿಭಟನಾಕಾರರು ಹಲವು ಬೇಡಿಕೆಗಳ ಈಡೇರಿಕೆಗಾಗಿ, ಚಿಕ್ಕಪುಟ್ಟ ವಿಷಯಗಳಿಗೆ …
Read More »ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಇನ್ನೆರಡು ದಿನಗಳಲ್ಲಿ ಪಾಲ್ಗೊಳ್ಳುವುದಾಗಿ ತಮಗೆ ತಿಳಿಸಿದ್ದಾರೆಂದ ಉಮೇಶ್ ಕತ್ತಿ
ಗೋಕಾಕ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೈಬಲಪಡಿಸಲು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಆಶೀರ್ವಾದ ಮಾಡುವಂತೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಮತದಾರರಲ್ಲಿ ಮನವಿ ಮಾಡಿದರು. ಅರಭಾವಿ ಮತಕ್ಷೇತ್ರದ ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ ಗ್ರಾಮಗಳಿಗೆ ತೆರಳಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರ ಪ್ರಚಾರಾರ್ಥ ಸಭೆಯಲ್ಲಿ …
Read More »ಸತೀಶ್ ಜಾರಕಿಹೊಳಿ ಅವರಿಗೆ ಮೇದಾರ ಸಮಾಜದ ವತಿಯಿಂದ ಅತ್ತುತ್ತಮ ಬೆಂಬಲ
ಬೆಳಗಾವಿ: ಬೆಳಗಾವಿ ಲೋಕಸಭಾ ಚುನಾವಣೆ ಎಲ್ಲರಲ್ಲೂ ಒಂದು ಕುತೂಹಲ ಮೂಡಿಸಿದೆ ದಿವಂಗತ ಸುರೇಶ್ ಅಂಗಡಿಯವರ ನಿಧನದ ನಂತರ ಬೆಳಗಾವಿಯಲ್ಲಿ ಚುನಾವಣೆ ರಂಗ ಜೋರಾಗಿಯೇ ನಡೆದಿದೆ.ಒಂದು ಕಡೆ ಬಿಜೆಪಿ ಪ್ರಚಾರ ಜೋರಾಗಿ ಆದ್ರೆ ಇನ್ನೊಂದು ಕಡೆ ಕಾಂಗ್ರೇಸ್ ಪಕ್ಷದ ಪ್ರಚಾರ ಇನ್ನು ಭರ್ಜರಿಯಾಗಿ ಸಾಗುತ್ತಿದೆ ಸತೀಶ್ ಜಾರಕಿಹೊಳಿ ಅವರ ಪ್ರಚಾರ ದಿನದಿಂದ ದಿನಕ್ಕೆ ಭರ್ಜರಿಯಾಗಿ ಸಾಗುತ್ತಿದ್ದು ಪ್ರತಿಯೊಂದು ಸಮಾಜದ ಜನ ಸತೀಶ್ ಜಾರಕಿಹೊಳಿ ಅವರ್ ಬೆಂಬಲಕ್ಕೆ ನಿಲ್ಲುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ …
Read More »ಬೆಳಗಾವಿ ಉಪಚುನಾವಣೆ | ಸೇವೆಯೇ ಶ್ರೀರಕ್ಷೆ ಎಂದ ಸತೀಶ ಜಾರಕಿಹೊಳಿ
ಬೆಲೆ ಏರಿಕೆ ಮತ್ತು ಅನುಕಂಪದ ಅಲೆ ಇವೆರಡರ ನಡುವಿನ ಸ್ಪರ್ಧೆಯ ಕಣದಂತೆ ಬೆಳಗಾವಿ ಉಪಚುನಾವಣೆಯ ಕಣ ಬದಲಾಗಿದೆ. ಇಬ್ಬರು ಪ್ರಬಲ ಅಭ್ಯರ್ಥಿಗಳು ತಮ್ಮ ಯೋಜನೆಗಳನ್ನು, ಆತಂಕಗಳನ್ನು ಹಾಗೂ ಯಶಸ್ಸಿನ ನಿರೀಕ್ಷೆಗಳನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ. *ಅಭ್ಯರ್ಥಿಯಾಗಿ ಹೇಗೆ ಸಮರ್ಥಿಸಿಕೊಳ್ತೀರಿ? ಸಂಘಟನೆ ಮಾಡುವವರು, ಈ ಭಾಗದಲ್ಲಿ ಪರಿಚಯ ಇರುವವರು ಬೇಕಾಗಿತ್ತು. ಮುಂಚಿನಿಂದಲೂ ಕೆಲಸ ಮಾಡುವವರಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ಶ್ರಮದ ಅಗತ್ಯವಿರುವುದಿಲ್ಲ ಎಂದು ಪಕ್ಷ ನನ್ನನ್ನು ಆಯ್ಕೆ ಮಾಡಿದೆ. *ಬೆಂಬಲಿಗರ ಪ್ರತಿಕ್ರಿಯೆ ಹೇಗಿದೆ? ಎರಡು …
Read More »ಮದ್ವೆಯಾಗಿ ಕೊಲ್ಹಾಪುರದಿಂದ ಬೆಳಗಾವಿಗೆ ಬಂದ್ರು – ಮೊದಲ ರಾತ್ರಿಯೇ ಕನ್ಯತ್ವ ಪರೀಕ್ಷೆ ಶೀಲ ಶಂಕಿಸಿ ವಿಚ್ಛೇಧನ
ಮುಂಬೈ: ಪತ್ನಿಯರ ಶೀಲ ಶಂಕಿಸಿ ಇಬ್ಬರು ಸಹೋದರಿಯರನ್ನು ಅವರ ಪತಿಯಂದಿರು ಮನೆಯಿಂದ ಹೊರ ಹಾಕಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಈ ಪತಿಯದಿರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಹಿನ್ನಲೆ: 2020ರಲ್ಲಿ ನವೆಂಬರ್‍ನಲ್ಲಿ ಕಂಬರ್ಜಾಟ್ ಸಮುದಾಯಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು, ಅದೇ ಸಮುದಾಯದ ಕರ್ನಾಟಕದ ಬೆಳಗಾವಿ ಒಂದೇ ಸಮುದಾಯದ ಯುವಕರನ್ನು ವಿವಾಹವಾದರು. ಮೊದಲ ರಾತ್ರಿಯಂದು ಸಮುದಾಯ ಸಂಪ್ರದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷೆಸಲಾಗಿದೆ. ಈ ಪರೀಕ್ಷೆಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ಆದರೆ …
Read More »