ಬೆಳಗಾವಿ/ಚಿಕ್ಕೋಡಿ: ಚಿನ್ನ, ಹಣ ಕದಿಯುವುದನ್ನು ನೋಡಿದ್ದೇವೆ. ಇದೀಗ ಕೊರೊನಾ ಕಾಲದಲ್ಲಿ ಕಳ್ಳರು ಔಷಧಿಗಳನ್ನೂ ಕದಿಯಲು ಆರಂಭಿಸಿದ್ದು, ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಔಷಧಿ ಕದ್ದಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ. ಕೊರೊನಾ ಅಬ್ಬರದ ನಡುವೆ ಔಷಧಿ ಕಳ್ಳತನವಾಗುತ್ತಿದ್ದು, ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಔಷಧಿ ಕಳ್ಳತನವಾಗಿದೆ. ರೆಮ್‍ಡಿಸಿವಿರ್ ಎಂದು ಭಾವಿಸಿ ಪೋಲಿಯೋ ಇಂಜೆಕ್ಷನ್ ಕದ್ದಿದ್ದಾರೆ. ಪೋಲಿಯೋ ಔಷಧಿ ಎಂದು ಗೊತ್ತಾಗಿ ಸಂಗಮೇಶ್ವರ್ ನಗರದ ಬಳಿಯ ರಸ್ತೆಯಲ್ಲೇ ಔಷಧಿ ಎಸೆದು …
Read More »ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರು ರೋಗಿಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬೆಳಗಾವಿ: ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರು ರೋಗಿಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎರಡು ಗಂಟೆಯಲ್ಲಿ ನಾಲ್ವರು ರೋಗಿಗಳು ಕುಟುಂಬಸ್ಥರ ಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ನಾಲ್ಕು ಗಂಟೆಗಳ ಹಿಂದೆ 56 ವರ್ಷ ವ್ಯಕ್ತಿಯನ್ನ ಬೆಳಗಾವಿಯ ಬಿಮ್ಸ್ ಗೆ ಕರೆತರಲಾಗಿತ್ತು. ಆಕ್ಸಿಜನ್ ಬೆಡ್ ನೀಡುವಂತೆ ರೋಗಿಯ ಸಂಬಂಧಿ ಆಸ್ಪತ್ರೆಯ ಸಿಬ್ಬಂದಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ಬೆಡ್ ಸಿಗುವ ವೇಳೆಗಾಗಲೇ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದರಿಂದ …
Read More »ಚುನಾವಣಾ ಪ್ರಚಾರದ ವೆಳೆ ಸಿಎಂ ಪ್ರಾಥಮಿಕ ಸಂಪರ್ಕದಲ್ಲಿದ್ದ ಹೋಟೆಲ್ ಸಿಬ್ಬಂದಿ ಬೆಳಗಾವಿಯ ಹೋಟೆಲ್ ನ 12 ಸಿಬ್ಬಂದಿಗೆ ಇದೀಗ ಕೊರೊನಾ ಸೋಂಕು ಪತ್ತೆ
ಬೆಳಗಾವಿ: ಕೆಲ ದಿನಗಳ ಹಿಂದೆ ಬೆಳಗಾವಿ ಲೋಕಸಭಾ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಅಂದು ಸಿಎಂ ಯಡಿಯೂರಪ್ಪನವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಬೆಳಗಾವಿಯ ಹೋಟೆಲ್ ನ 12 ಸಿಬ್ಬಂದಿಗೆ ಇದೀಗ ಕೊರೊನಾ ಸೋಂಕು ಪತ್ತೆಯಾಗಿದೆ. ಏಪ್ರಿಲ್ 16ರಂದೆ ಈ ಸಿಬ್ಬಂದಿಗಳ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತಾದರೂ 20 ದಿನಗಳ ಬಳಿಕ ವರದಿ ಬಂದಿದ್ದು, ಇದೀಗ 12 ಜನರಲ್ಲಿ ಸೋಂಕು ದೃಢ್ಪಟ್ಟಿದೆ. …
Read More »ದೂರವಾಣಿ ಮೂಲಕ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಟಾಸ್ಕ್‍ಪೋರ್ಸ್ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ.
ಗೋಕಾಕ: ಕೊವಿಡ್ ಸೋಂಕಿತರ ಅನುಕೂಲಕ್ಕಾಗಿ ಗೋಕಾಕ ತಾಲೂಕಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದ್ದು, ಇದರಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಸೋಂಕಿತರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಸಿಗಲಿದೆ ಎಂದು ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಇಲ್ಲಿಯ ಎನ್.ಎಸ್.ಎಫ್. ಅತಿಥಿ ಗೃಹದ ಆವರಣದಲ್ಲಿ ಕೋವಿಡ್ ಸಂಬಂಧ ಗೋಕಾಕ್ ಮತ್ತು ಮೂಡಲಗಿ ತಾಲೂಕುಗಳ ಟಾಸ್ಕ್‍ಫೆÇೀರ್ಸ್ ಸಭೆಯನ್ನು ದೂರವಾಣಿ ಮೂಲಕ ನಡೆಸಿದ ಅವರು, ಕೊರೋನಾ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಬೇಕು. ಕೊರೋನಾ …
Read More »ಮೋದಿ ಯಾವ ಮಾರ್ಗದರ್ಶನ ನೀಡುತ್ತಾರೋ ಅದನ್ನು ಪಾಲಿಸಲಾಗುತ್ತದೆ. ಅವರು ಹೇಳಿದಂತೆ ಲಾಕ್ ಡೌನ್ ಬಗ್ಗೆ ತೀರ್ಮಾನ :B.S.Y.
ಮಿತಿ ಮೀರುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್ ದೌನ್ ಜಾರಿಯಾಗುವ ಸಾಧ್ಯತೆ ಇದ್ದು, ಇಂದು ಸಂಜೆ ನಿರ್ಧಾರ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರಧಾನಿ ಸೂಚನೆಗೆ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಸಿಎಂ, ಕೋವಿಡ್ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಏನು ನಿರ್ದೇಶನ ನೀಡುತ್ತಾರೆಯೋ ಅದನ್ನು ಪಾಲಿಸುವುದು ನಮ್ಮ ಜವಾಬ್ದಾರಿ. ಸುಪ್ರೀಂ ಕೋರ್ಟ್ ಸಲಹೆ ಸೇರಿದಂತೆ ಎಲ್ಲವನ್ನೂ ಇಂದು ನಡೆಯಲಿರುವ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ …
Read More »ಜನತೆ ನನಗೆ ಸೋತು ಗೆದ್ದಿರುವವರು ಎಂದು ಸರ್ಟಿಫಿಕೇಟ್ ನೀಡಿದ್ದಾರೆ: ಸತೀಶ್ ಜಾರಕಿಹೊಳಿ
ಬೆಳಗಾವಿ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಚುನಾವಣೆ ಆಯೋಗ ಗೆದ್ದಿರುವ ಸರ್ಟಿಫಿಕೇಟ್ ನೀಡಿರಬಹುದು. ಆದರೆ, ರಾಜ್ಯದ ಜನತೆ ನಮಗೆ ಸೋತು ಗೆದ್ದವರು ಎಂಬ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬೆಳಗಾವಿ ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಸೋತಿದ್ದರೂ ತೀವ್ರ ಪೈಪೋಟಿ ಕೊಟ್ಟಿದ್ದೇವೆ. ಸ್ವತಃ ಬಿಜೆ ಪಿ ನಾಯಕರೆ ಇದನ್ನು …
Read More »ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಬೆಳಗಾವಿ : ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಲಭ್ಯವಿರುವ ಬೆಡ್ ಗಳ ಮಾಹಿತಿಯನ್ನು ಪ್ರತಿದಿನ ವೆಬ್‌ಸೈಟ್ ಮೂಲಕ ಜನರಿಗೆ ನೀಡಬೇಕು; ಆಕ್ಸಿಜನ್, ರೆಮಿಡಿಸಿವಿರ್ ಮತ್ತಿತರ ಔಷಧೋಪಕರಣಗಳ ಕೊರತೆ ಉಂಟಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಅಗತ್ಯ ಚಿಕಿತ್ಸೆ …
Read More »ಕೊರೋನಾದಿಂದಾಗಿ 8 ದಿನದ ಅಂತರದಲ್ಲಿ ತಂದೆ, ತಾಯಿ, ಮಗ ಸಾವಿಗೀಡಾಗಿದ್ದಾರೆ.
ಬೆಳಗಾವಿ – ಕೊರೋನಾದಿಂದಾಗಿ 8 ದಿನದ ಅಂತರದಲ್ಲಿ ತಂದೆ, ತಾಯಿ, ಮಗ ಸಾವಿಗೀಡಾಗಿದ್ದಾರೆ. ಬೆಳಗಾವಿಯ ಬಾಕ್ಸೈಟ್ ರಸ್ತೆಯ ವಿದ್ಯಾನಗರದ ನಿವಾಸಿಗಳಾದ ಪಾರ್ವತಿ ಕೃಷ್ಣಾ ತೇರಗಾಂವ( 76), ನಿವೃತ್ತ ಉಪ ನೊಂದನಾಧಿಕಾರಿ ಕೃಷ್ಣಾ ಭೀಮಪ್ಪ ತೇರಗಾಂವ (80) ಮತ್ತು ಪ್ರಶಾಂತ ಕೃಷ್ಣಾ ತೇರಗಾಂವ್ (49) ಮೃತರಾದವರು.ಪಾರ್ವತಿ ಏ.24ರಂದು, ಕೃಷ್ಣಾ ಏ. 29ರಂದು ಹಾಗೂ ಪ್ರಶಾಂತ ಮೇ 3ರಂದು ಮೃತರಾದರು. ಕೃಷ್ಣಾ ಹಾಗೂ ಪ್ರಶಾಂತ ಸಬ್ ರಜಿಸ್ಟ್ರಾರ್ ಕಚೇರಿ ಕನ್ಸಲ್ಟಂಟ್ ಆಗಿ ಕೆಲಸ …
Read More »ಮೇ.12 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ, ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಆದೇಶ
ಬೆಳಗಾವಿ: ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಮೇ.12 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮುಂದುವರೆಸಿ, ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೋರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಏಪ್ರಿಲ್ 21ರ ರಾತ್ರಿ 9 ಗಂಟೆಯಿಂದ ಮೇ.4 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಹೊರಡಿಸಲಾಗಿತ್ತು. ಆದರೆ, ಕೊವಿಡ್ ಪ್ರಕರಣಗಳಲ್ಲಿ ಪ್ರತಿದಿನ ಹೆಚ್ಚಳ …
Read More »ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಸೋತಿದೆ, ಕಾಂಗ್ರೆಸ್ ಸೋತು ಗೆದ್ದಿದೆ.
ಬೆಳಗಾವಿ – ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದು ಸೋತಿದೆ, ಕಾಂಗ್ರೆಸ್ ಸೋತು ಗೆದ್ದಿದೆ. ಫಲಿತಾಂಶ ಬಿಜೆಪಿ ಆತ್ಮಾವಲೋಕನ ಮಾಡುವಂತೆ ಮಾಡಿದೆ. ಜನರು ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಕೇವಲ ಅನುಕಂಪದ ಮತಗಳಿಂದ ಮಂಗಲಾ ಅಂಗಡಿ ಗೆದ್ದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಮತ್ತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿದೆ. ಗೋಕಾಕ ಮತ್ತು ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿದರೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಬಿಜೆಪಿ ಶಾಸಕರೇ ಇರುವ …
Read More »
Laxmi News 24×7