ಚಿಕ್ಕೋಡಿ: ಕರ್ನಾಟಕ ಗಡಿ ಭಾಗದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ( ಮಲ್ಟಿ ಸ್ಟೇಟ್) 5 ಸಾವಿರ ಕೋಟಿ ರೂಪಾಯಿ ಠೇವು ಸಂಗ್ರಹಿಸುವ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಹಾಗೂ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಜೊಲ್ಲೆ ಗ್ರೂಪ್ ಸಂಸ್ಥಾಪಕರಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ನೇತೃತ್ವದಲ್ಲಿ 1991ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಇಂದು ಕರ್ನಾಟಕ, ಮಹಾರಾಷ್ಟ್ರ …
Read More »ಗೋಕಾಕ:ಕಾರಿನಲ್ಲಿ ರಿವಾಲ್ವರ್ ಇಟ್ಟುಕೊಂಡು ಓಡಾಡ್ತಿದ್ದವನು ಲಾಕ್
ಬೆಳಗಾವಿ ಜಿಲ್ಲೆ ಗೋಕಾಕ್ ನಗರತ ಕೋರ್ಟ್ ಸರ್ಕಲ್ ನಲ್ಲಿ ಪತ್ತೆ. ಅನುಮಾನಾಸ್ಪದ ಕಾರನ್ನ ತಡೆದು ಗೋಕಾಕ್ ಪೊಲೀಸರಿಂದ ಪರಿಶೀಲನೆ. ಆಗ ಲೈಸನ್ಸ್ ರಿವಾಲ್ವಾರ್ ಕಾರ್ ಡ್ಯಾಶ್ ಬೋರ್ಡ್ ನಲ್ಲಿ ಪತ್ತೆ. ಕಾರ್ ಚಾಲಕ ಬಾಗಲಕೋಟೆ ಜಿಲ್ಲೆ ನಿವಾಸಿ ರಮೇಶ ಕೇಸರಗೊಪ್ಪ ಚೌವಾಣ 52 ಅರೇಸ್ಟ್. ರಿವಾಲ್ವಾರ್ ಲೈಸನ್ಸ್ ಬಾಗಲಕೋಟೆ ಜಿಲ್ಲೆಗೆ ಮಾತ್ರ ಸಿಮೀತ. ರಿವಾಲ್ವಾರ್ ನವೀಕರಣ ಮುಗಿದಿದ್ದರೂ ಪೊಲೀಸ್ ಠಾಣೆ ಜಮಾ ಮಾಡಿಲ್ಲ. ಹೀಗಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸ್ ದಾಖಲು. …
Read More »ಕರಾವಳಿಯಲ್ಲಿನ ವಾತಾವರಣ ಸುಧಾರಿಸಲು ಸರ್ಕಾರ ಶ್ರಮಿಸುತ್ತಿದೆ
ಬೆಳಗಾವಿ : ಕರಾವಳಿಯಲ್ಲಿ ಕೋಮು ಗಲಭೆಗಳ ಕಾರಣಕ್ಕೆ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂದಿರುವ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆಯಲ್ಲಿ ಅರ್ಥವಿದೆ ಎಂದಿರುವ ಸಚಿವ ದಿನೇಶ ಗುಂಡೂರಾವ್, ನಮ್ಮ ಸರ್ಕಾರ ಅಲ್ಲಿನ ವಾತಾವರಣ ಸುಧಾರಿಸಲು ಶ್ರಮಿಸುತ್ತಿದೆ ಎಂದು ಹೇಳಿದ್ದಾರೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದ ಬಳಿಕ ಕರಾವಳಿ ಭಾಗದ ವಾತಾವರಣ ಸುಧಾರಿಸಲು ಸಾಕಷ್ಟು ಕ್ರಮ ಕೈಗೊಂಡಿದ್ದರಿಂದ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಬಂಡವಾಳ ಹೆಚ್ಚು ಹೂಡಲಿಕ್ಕೆ …
Read More »ನೆಹರೂ ನಗರದ ಬಸವಣ್ಣ, ಮಹಾದೇವ ಮಂದಿರದಲ್ಲಿ ಮಹಾಶಿವರಾತ್ರಿ
ಬೆಳಗಾವಿ: ಮಹಾಶಿವರಾತ್ರಿ ಪ್ರಯುಕ್ತ ನೆಹರೂ ನಗರದಲ್ಲಿರುವ ಬಸವಣ್ಣ, ಮಹಾದೇವ ಮಂದಿರದಲ್ಲಿ ಸೋಮವಾರ ಮಹಾರುದ್ರ ಯಾಗ, ಹೋಮ ಹಾಗೂ ಮಹಾಪ್ರಸಾದ ಜರುಗಿತು. ಬೆಳಗ್ಗೆ ಗಣೇಶ ಪೂಜೆ, ಮಹಾದೇವನಿಗೆ ಅಭಿಷೇಕ, ಮಹಾರುದ್ರ ಹೋಮಗಳಲ್ಲಿ ನೆಹರೂ ನಗರ ಹಾಗೂ ಸುತ್ತಮುತ್ತಲಿನ ಭಕ್ತರು ಪಾಲ್ಗೊಂಡಿದ್ದರು. ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ, ಇತರ ಗಣ್ಯರು ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ದೇವಸ್ಥಾನ ಮಂಡಳಿಯ ಶಿವಾಜಿ ಠಕ್, ವಿಶ್ವನಾಥ ಪಾಟೀಲ, ವಿಜಯ …
Read More »ಕೆಲಸ ಮಾಡದ ಸಿಬ್ಬಂದಿಗಳ ವಿರುದ್ಧ ಕ್ರಮ
ಬೆಳಗಾವಿ : ಒಂದಿಬ್ಬರು ಮಾಡುವ ತಪ್ಪಿನಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಇದನ್ನು ತಡೆಗಟ್ಟುವ ಕಾರ್ಯವಾಗಬೇಕಿದ್ದು, ಯಾರೇ ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು. ಜಿಲ್ಲಾ ಪೊಲೀಸ್ ಇಲಾಖೆಯ ಮಾಸಿಕ ಪಥಸಂಚಲನ ಪರಿವೀಕ್ಷಿಸಿ ಮಾತನಾಡಿದ ಅವರು, ಖಾಕಿ ಬಟ್ಟೆಗೆ ತನ್ನದೇ ಆದ ಗೌರವವಿದೆ. ಕಿವಿ ಮತ್ತು ಕಣ್ಣು ಸಕ್ರಿಯವಾಗಬೇಕೆ ಹೊರತು ಕಿವುಡರು ಕುರುಡರಂತೆ ವರ್ತಿಸಬಾರದು. ಅಕ್ರಮಗಳ ವಿರುದ್ದ ಕ್ರಮ ಕೈಗೊಳ್ಳಲೇಬೇಕು. ಕೆಲಸ …
Read More »ಹುಟ್ಟುಹಬ್ಬದ ಸಂಭ್ರಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್: ಬೆಳಗಾವಿಯಲ್ಲಿ 2 ಕೋಟಿ ವೆಚ್ಚದ ಭವ್ಯ ಶಿವ ದೇಗುಲ ಲೋಕಾರ್ಪಣೆ!
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಇಂದು ತಮ್ಮ ಜನ್ಮದಿನದ ಅಂಗವಾಗಿ ಬೆಳಗಾವಿಯ ಜನತೆಗೆ ಭರ್ಜರಿ ಆಧ್ಯಾತ್ಮಿಕ ಉಡುಗೊರೆ ನೀಡಿದ್ದಾರೆ. ಸಹ್ಯಾದ್ರಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಮಹಾಬಳೇಶ್ವರ ದೇವಸ್ಥಾನವನ್ನು ಉದ್ಘಾಟಿಸಿದ ಸಚಿವರು, ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಮುತುವರ್ಜಿಯಿಂದ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಮಹಾಬಳೇಶ್ವರ ದೇವಸ್ಥಾನದ …
Read More »ಸವದತ್ತಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು: 100 ಹಾಸಿಗೆಗಳ ಆಸ್ಪತ್ರೆ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಗೆ ಶಂಕುಸ್ಥಾಪನೆ!
ನಮ್ಮ ಸವದತ್ತಿ ಕ್ಷೇತ್ರದ ಜನತೆಗೆ ಗುಣಮಟ್ಟದ ಹಾಗೂ ಸುಸಜ್ಜಿತ ವೈದ್ಯಕೀಯ ಸೇವೆ ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಇಂದು ಸವದತ್ತಿ ಪಟ್ಟಣದಲ್ಲಿ ಒಂದು ಮಹತ್ವದ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸವದತ್ತಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ನೂತನ ಕಟ್ಟಡದ ವಿಸ್ತರಣೆ ಹಾಗೂ ನವೀಕರಣ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭವು ಇಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕರ್ನಾಟಕ ಸರ್ಕಾರದ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ …
Read More »ವಿದ್ಯಾರ್ಥಿಗಳು ಶಿಕ್ಷಣದತ್ತ ಗಮನಹರಿಸಲಿ
ಅಥಣಿ ಗ್ರಾಮೀಣ: ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಕಲಿಕಾ ಗುಣಮಟ್ಟದಲ್ಲಿ ಯಶಸ್ವಿಯಾಗುತ್ತಿರುವುದು ಗ್ರಾಮೀಣ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕಾರಣ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ಸ್ನೇಹಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಲವಾರು ಸಾಹಿತಿಗಳು, ತತ್ತ್ವಜ್ಞಾನಿಗಳು ಕಾಯಕ ನಿಷ್ಠೆ ಹಾಗೂ ನಿರಂತರ ಪ್ರಯತ್ನದಿಂದ ಸಾಧಕರಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಇದನ್ನು ಅರಿತು ಮೊಬೈಲ್, …
Read More »ಇಷ್ಟಲಿಂಗ ಪೂಜೆಯಿಂದ ಸಂಕಷ್ಟ ದೂರ
ಅಥಣಿ: ಇಷ್ಟಲಿಂಗ ಪೂಜೆಯಿಂದ ಸಂಕಷ್ಟ ದೂರವಾಗುತ್ತವೆ. ಮಾನಸಿಕ ನೆಮ್ಮದಿ, ಶಾಂತಿ, ಸಮಾಧಾನ ಲಭಿಸಲು ನಿತ್ಯ ಲಿಂಗಪೂಜೆ ರೂಢಿಸಿಕೊಳ್ಳಬೇಕೆಂದು ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಇಲ್ಲಿನ ಗಚ್ಚಿನಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಸಹಜ ಶಿವಯೋಗ ಕಾರ್ಯಕ್ರಮದಲ್ಲಿ ಮಾತನಾಡಿ, ಭಕ್ತಿಭಾವದಿಂದ ಶಿವನನ್ನು ಆರಾಽಸಬೇಕು. ದಿನಕ್ಕೆ ಸೀಮಿತಗೊಳಿಸದೆ ನಿತ್ಯವೂ ಶಿವರಾತ್ರಿಯಾಗಬೇಕು. ಗಚ್ಚಿನಮಠದ ಶಿವರಾತ್ರಿ ಉತ್ಸವ ಮಾದರಿಯಾಗಿದೆ ಎಂದರು. ನಾವದಗಿಯ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯರು ಮಾತನಾಡಿ, ಪ್ರತಿಯೊಬ್ಬರೂ ಲಿಂಗಧಾರಿಗಳಾಗಿ ಇಷ್ಟಲಿಂಗ …
Read More »ಶಿವನ ಆರಾಧನೆಯಲ್ಲಿ ರಾಮದುರ್ಗ ಜನತೆ
ಶಿವನ ಕೈಲಾಸವೇ ಧರೆಗಿಳಿದ ಅನುಭವ ಎಲ್ಲಿ ನೋಡಿದರಲ್ಲಿ ಕೈಲಾಸನಾಥನ ನಾಮ ಸ್ಮರಣೆ ಭಕ್ತಿಯ ಭಾವಪರವಶದಲ್ಲಿ ಮುಳಗಿದ ಶಿವನ ಆರಾಧಕರು ಅಪಾರ ಸಂಖ್ಯೆಯ ಭಕ್ತಾದಿಗಳು ಶಿವನ ದರ್ಶನ ಪಡೆದುಕೊಂಡರು. ಈ ಭಕ್ತಿಯ ಜಾತ್ರೆ ನಡೆದಿದ್ದು ರಾಮದುರ್ಗ ಪಟ್ಟಣದ ಮುಳ್ಳೂರು ಗುಡ್ಡದ ರಾಮೇಶ್ವರಂ ನಲ್ಲಿರುವ ಅಶೋಕವನದ ಶಿವನಮೂರ್ತಿಯಲ್ಲಿ. ಪ್ರತಿ ವರ್ಷದಂತೆ ಮಹಾಶಿವರಾತ್ರಿಯ ಅಂಗವಾಗಿ ಬಹಳ ವಿಜೃಂಭಣೆಯಿಂದ ಶಿವನ ಪೂಜಾ ಕೈಂಕರ್ಯಗಳು ನಡೆಯುವುದರ ಮೂಲಕ ಪರಮೇಶ್ವರನ ಆರಾಧನೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶಿವ ಪ್ರತಿಷ್ಠಾನದ …
Read More »
Laxmi News 24×7