ರಾಜ್ಯದಲ್ಲಿ ವಾಯುವ್ಯ ಪದವೀಧರ, ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣಾ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಹೌದು ಬೆಳಗಾವಿ ನಗರದ ಖಾಸಗಿ ಹೋಟಲ್‌ನಲ್ಲಿ ರಾಜ್ಯದಲ್ಲಿ ನಡೆಯಲಿರುವ ಪರಿಷತ್ ಚುನಾವಣೆ ಕುರಿತಂತೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸಭೆಯಲ್ಲಿ, ಮಾಜಿ ಸಚಿವ ಎ ಬಿ ಪಾಟೀಲ್, ವೀರಕುಮಾರ್ ಪಾಟೀಲ್ ಭಾಗಿ ಮೊದಲಾದ ಕಾಂಗ್ರೆಸ್ ಹಿರಿಯ ನಾಯಕರು ಭಾಗಿಯಾಗಿದ್ದರು. ಈ …
Read More »ಕಲ್ಲಿನ ದೇವರ ವಿಗ್ರಹವನ್ನೂ ಬಿಡದ ಖದೀಮರು
ಚಿಕ್ಕೋಡಿ: ದೇವಸ್ಥಾನದ ಕಲ್ಲಿನ ದೇವರ ಮೂರ್ತಿಯನ್ನೇ ಕಳ್ಳರು ಕದ್ದೋಯ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಕೊಕಟನೂರ ಗ್ರಾಮದ ಐತಿಹಾಸಿಕ ದೇವಸ್ಥಾನವಾಗಿದ್ದ ಬಿರೇಶ್ವರ ದೇವಸ್ಥಾನದ ಕಲ್ಲಿನ ವಿಗ್ರಹವನ್ನು ಎತ್ತಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ದೇವರ ಮೂರ್ತಿಯನ್ನು ನಿಧಿಗಳ್ಳರು ಅಥವಾ ವಾಮಾಚಾರ ಮಾಡುವ ಖದೀಮರು ಕದ್ದಿರಬಹದು ಎನ್ನುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಬೆಳಗಿನ ಜಾವ ಪೂಜೆಗಾಗಿ ಅರ್ಚಕರು ಬಂದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು …
Read More »ಬೆಳಗಾವಿ: ‘ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಗಿ ಮೊದಲಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದಾಗಿದೆ’
ಬೆಳಗಾವಿ: ‘ಮನೆ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಡೆಂಗಿ ಮೊದಲಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದಾಗಿದೆ’ ಎಂದು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಹಾಗೂ ಟಿಎಚ್‌ಒ ಕಾರ್ಯಾಲಯಗಳ ಸಹಯೋಗದಲ್ಲಿ ಇಲ್ಲಿನ ವಡಗಾವಿಯ ಮಾಧವಾಪುರದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಮಳೆಯಾದಾಗ ಡೆಂಗಿ, ಮಲೇರಿಯಾ, ಚಿಕೂನ್ …
Read More »ಜಲಾಶಯ ನೀರು ಬಿಡುಗಡೆ- ಮಹಾರಾಷ್ಟ್ರದ ಜತೆ ಸಮನ್ವಯ, ಮಾಹಿತಿ ವಿನಿಮಯಕ್ಕೆ ಸಿಎಂ ಬೊಮ್ಮಾಯಿ ಸೂಚನೆ
ಬೆಳಗಾವಿ: ಎಲ್ಲೆಡೆ ಮಳೆಯಾಗುತ್ತಿರುವುದರಿಂದ ನೆರೆಯ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಸಾಧ್ಯತೆ ಇರುತ್ತದೆ. ಆದ್ದರಿಂದ ಆ ರಾಜ್ಯದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಅಲ್ಲಿನ ಮಳೆಯ ಪ್ರಮಾಣ, ಜಲಾಶಯಗಳ ಸಂಗ್ರಹ ಮತ್ತಿತರ ವಿಷಯಗಳ ಕುರಿತು ನಿರಂತರವಾಗಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಸಂಭವನೀಯ ಪ್ರವಾಹ ನಿರ್ವಹಣೆಯ ಸಿದ್ಧತೆಗೆ ಸಂಬಂಧಿಸಿದಂತೆ ಶನಿವಾರ(ಮೇ 21) ಮುಖ್ಯಮಂತ್ರಿಗಳು …
Read More »ಗೋಕಾಕ ನಗರದಲ್ಲಿ ಹೆರಾಯಿನ್,ಗಾಂಜಾ ವಶ:ನಾಲ್ವರ ಬಂಧನ
ಗೋಕಾಕ ನಗರದಲ್ಲಿ ಹೆರಾಯಿನ್,ಗಾಂಜಾ ವಶ:ನಾಲ್ವರ ಬಂಧನನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ. ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ಬೆಳಗಾವಿಯ ಅಬ್ದುಲ್‌ಖಾದಿರ @ಜಿಯಾ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನೇದ್ದರಲ್ಲಿ) ನಲ್ಲಿ ನಿಷೇಧಿತ ಹೇರಾಯಿನ್ (ಪೆನ್ನಿ) ಮಾದಕ ವಸ್ತು ಮತ್ತು …
Read More »ಸಂಭಾವ್ಯ ಪ್ರವಾಹ ಮತ್ತು ಅತೀವೃಷ್ಟಿ ನಿಯಂತ್ರಣ ಸಲುವಾಗಿ ಪೂರ್ವಭಾವಿ ಸಭೆ
ಗೋಕಾಕ: ನಿರಂತರ ಮಳೆ ಹಾಗೂ ಮುಂದೆ ಬರಬಹುದಾದ ಪ್ರವಾಹ ಭೀತಿಯನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿಗಳಾದ ಶ್ರೀ ಬಸವರಾಜ ಕುರಿಹುಲಿ ಅವರು ತಾಲೂಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ತಹಶೀಲ್ದಾರ ಕಛೇರಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ನಿಯಂತ್ರಣದ ಬಗ್ಗೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಪಂಚಾಯತ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳನ್ನು …
Read More »ರಾಜ್ಯಕ್ಕೆ ಮೂರನೆಯ ಸ್ಥಾನ ಪಡೆದ ಗೋಕಾಕ ಮಯೂರ ಶಾಲೆಯ ವಿದ್ಯಾರ್ಥಿನಿ, ಶುಭ ಹಾರೈಸಿದ M.L.C. ಲಖನ ಜಾರಕಿಹೊಳಿ ಅವರು
ಗೋಕಾಕ:ವಿಧಾನ ಪರಿಷತ್ ಸದಸ್ಯ ಹಾಗೂ ಮಯೂರ ಶಾಲೆಯ ಅಧ್ಯಕ್ಷ ರಾದ ಲಖನ ಜಾರಕಿಹೊಳಿ ಅವರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಎಲ್ಲ ಕಡೆ ಸುಮಾರು ಜನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಅದೇರೀತಿ ಗೋಕಾಕ ನಗರದ ಮಯೂರ ಶಾಲೆಯ ಮಕ್ಕಳು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಸಂಜನಾ ಆರ್ ತುಬಚಿ,96.68 ಶೇಕಡಾ ವಾರು ಅಂಕ ಗಳಿಸಿದ್ದು ಮಯೂರ ಶಾಲೆಯ ಕೀರ್ತಿಯನ್ನು …
Read More »ಮೂಡಲಗಿ ಪಟ್ಟಣದ ವಿಶೇಷ: ಎತ್ತುಗಳ ಶರ್ಯತ್ತಿನ ರೋಮಾಂಚನ
ಬೆಳಗಾವಿ): ‘ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ, ಸರದಾರ ನನ್ನೆತ್ತು, ಸಾರಂಗ ಬರುವಾಗ ಸರ್ಕಾರವೆಲ್ಲ ನಡುಗ್ಯಾವೊ…’ ಎಂದು ರೈತರು ಭೂಮಿಯಲ್ಲಿ ದುಡಿಯುವ ಎತ್ತುಗಳ ಬಗ್ಗೆ ವ್ಯಕ್ತಪಡಿಸುವ ಅಭಿಮಾನ-ಪ್ರೀತಿಗೆ ಪಾರವೇ ಇಲ್ಲ. ಅದರ ಮುಂದುವರಿದ ಭಾಗವಾಗಿ ಇಲ್ಲಿ ಶರ್ಯತ್ತುಗಳನ್ನು ನಡೆಸುವುದು ಇಲ್ಲಿನ ಟ್ರೆಂಡ್ ಆಗಿದೆ. ಶಿವಬೋಧರಂಗ ಜಾತ್ರೆಯಲ್ಲಿ ನಡೆಯುವ ಎತ್ತುಗಳ ಸ್ಪರ್ಧೆಯೂ ಗಮನಸೆಳೆಯುತ್ತದೆ. ಕಟ್ಟುಮಸ್ತಾದ ಎತ್ತುಗಳ ಠಾವು, ಎತ್ತುಗಳ ಮುಗದಾನು ಹಿಡಿದು ಹೆಜ್ಜೆ ಹಾಕುವ ಕುಸ್ತಿ ಪೈಲ್ವಾನರಂತಹ ರೈತರ ನಡಿಗೆಯು …
Read More »ಏಣಗಿ ಬಾಳಪ್ಪ ಕುರಿತ ಕೃತಿ ಮೇ 22ರಂದು ಬಿಡುಗಡೆ
ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ, ರಂಗ ಸಂಪದ ಹಾಗೂ ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವಗಳ ಕುರಿತು ಗಣೇಶ ಅಮೀನಗಡ ನಿರೂಪಿಸಿದ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿಯ 8ನೇ ಮುದ್ರಣದ ಬಿಡುಗಡೆ ಸಮಾರಂಭವನ್ನು ಇಲ್ಲಿನ ರಾಣಿ ಚನ್ನಮ್ಮ ವೃತ್ತ ಸಮೀಪದ ಕನ್ನಡ ಸಾಹಿತ್ಯ ಭವನದಲ್ಲಿ ಮೇ 22ರಂದು ಸಂಜೆ 4ಕ್ಕೆ ಆಯೋಜಿಸಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸರಜೂ ಕಾಟ್ಕರ್ ಬಿಡುಗಡೆ ಮಾಡಲಿದ್ದಾರೆ. …
Read More »ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದ ಶಿಲ್ಪಾ ರಾಜು ಪರ್ನಾಕರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 ಅಂಕ ಪಡೆದು ಸಾಧನೆ ತೋರಿದ್ದಾರೆ.
ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿನ ಕೃಷಿ ಜಮೀನುಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದ ಶಿಲ್ಪಾ ರಾಜು ಪರ್ನಾಕರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 ಅಂಕ ಪಡೆದು ಸಾಧನೆ ತೋರಿದ್ದಾರೆ. ಓದು-ಬರಹ ಬಾರದ ತಂದೆ-ತಾಯಿಗೆ ಹೆಮ್ಮೆಯ ಭಾವ ನೀಡಿದ್ದಾರೆ. ಪತ್ರಾಸಿನ ಮನೆ, ಮನೆಯ ಅಂಗಳದಲ್ಲಿ ಜಾನವಾರು, ನಿತ್ಯ ಹೊಲದ ಕೆಲಸ ಮತ್ತು ಕೂಲಿ ಮಾಡಿಕೊಂಡೆ ಬದುಕಿನ ಬಂಡಿ ಜಗ್ಗುವ ಅವಿಭಕ್ತ ಕುಂಟುಂಬವಿದು. ಕೊರತೆಗಳ ನೆಪವನ್ನು ಬದಿಗಿಟ್ಟು ಸಾಧನೆ ತೋರಿದ್ದಾರೆ. ಗ್ರಾಮದ ಅಂಬೇಡ್ಕರ್ …
Read More »
Laxmi News 24×7