Breaking News

ಬೆಳಗಾವಿ

ಮನೆಗಳ್ಳತನ ಮಾಡಿದ ಕಳ್ಳಿ ಬಂಧನ: 68.74 ಗ್ರಾಂ ಬಂಗಾರದ ಆಭರಣ ಜಪ್ತಿ

ಬೆಳಗಾವಿ: ಮನೆ ಕಳ್ಳತನ ಮಾಡಿದ ಕಳ್ಳಿಯನ್ನು ಬಂಧಿಸಿರುವ ಬೆಳಗಾವಿ ಪೊಲೀಸರು ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಸುರೇಖಾ ಕೊಂ. ಬಸವರಾಜ ತಳವಾರ,  (40) ಎಂಬ ಕಳ್ಳಿಯನ್ನು ಬಂಧಿಸಿದ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿ ಕಳ್ಳತನ ಮಾಡಿದ ಬಂಗಾರದ ಆಭರಣಗಳು ತನ್ನ ವಶದಲ್ಲಿ ಇಟ್ಟುಕೊಂಡ ಬಗ್ಗೆ ಹೇಳಿಕೆ ನೀಡಲು ಆರೋಪಿತಳ ವಶದಿಂದ ಕಳ್ಳತನ ಮಾಡಿದ 9.27.990 ರೂ. ಮೌಲ್ಯದ 68.74 ಗ್ರಾಂ ಬಂಗಾರದ ಆಭರಣಗಳು …

Read More »

ಬೆಳಗಾವಿಯ ಸಾಯಿ ಮಂದಿರದಲ್ಲಿ ರಾಮನವಮಿ ಸಂಭ್ರಮ: ಖಾಸಬಾಗ ಮಂದಿರದಲ್ಲಿ ಪ್ರಥಮ ವಾರ್ಷಿಕೋತ್ಸವದ ಸಡಗರ

ಇಂದು ಬೆಳಗಾವಿ ನಗರದಲ್ಲಿ ರಾಮನವಮಿಯ ಉತ್ಸಾಹ ಮನೆ ಮಾಡಿದೆ. ನಗರದ ರಾಮ ಮಂದಿರ ಮತ್ತು ಸಾಯಿ ಮಂದಿರಗಳಲ್ಲಿ ರಾಮನವಮಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಬೆಳಗಾವಿ ಖಾಸಬಾಗದ ರಾಘವೇಂದ್ರ ಕಾಲನಿಯಲ್ಲಿ ವರ್ಷದ ಹಿಂದೆ ನಿರ್ಮಾಣಗೊಂಡು ರಾಮನವಮಿಯ ದಿನವೇ ಲೋಕಾರ್ಪಣೆಗೊಂಡ ಶ್ರೀ ಸಾಯಿ ಮಂದಿರದಲ್ಲಿ ಶ್ರೀರಾಮನವಮಿ ಮತ್ತು ಮಂದಿರ ಪ್ರಥಮ ವಾರ್ಷೀಕೋತ್ಸವವನ್ನು ಉತ್ಸಾಹದಿಂದ ಆಚರಿಸಲಾಯಿತು. ರಾಮನವಮಿಯ ನಿಮಿತ್ಯ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಸಾಯಿಬಾಬಾರಿಗೆ ಅಭಿಷೇಕ, ಅಲಂಕಾರ, ಹೋಮ …

Read More »

ವೀರಭದ್ರಪ್ಪಾ ಗಂಗಪ್ಪಾ ಮಾದಮ್ಮನವರ ನಿಧನ

ಬೆಳಗಾವಿ ಸಮೀಪದ ಮಾರಿಹಾಳ ಗ್ರಾಮದ ಗಣ್ಯ ವ್ಯಕ್ತಿಗಳು ಸಹಕಾರಿ ಧುರಿಣರಾಗಿ ಮುತ್ಸದ್ದಿ ರಾಜಕಾರಣಿಗಳು ಗ್ರಾಮದ ಮಾದಮ್ಮನವರ ಕಾಕಾ ಎಂದೆ ಹೆಸರುವಾಸಿಯಾಗಿದ್ದ ಗ್ರಾಮದ ವೀರಭದ್ರಪ್ಪಾ ಗಂಗಪ್ಪಾ ಮಾದಮ್ಮನವರ (80) ವಯೋಸಹಜ ಅನಾರೋಗ್ಯದಿಂದ ಗುರುವಾರ ನಿಧನರಾದರು. ಮೃತರಿಗೆ ಬೆಳಗಾವಿ (ಗ್ರಾ) ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ಸೆರಿದಂತೆ ಮೂರು ಜನ ಗಂಡು ಮಕ್ಕಳು ಒರ್ವ ಹೆಣ್ಣು ಮಕ್ಕಳು ಅಪಾರ ಬಂಧು-ಬಳಗ ಹೊಂದಿದ್ದಾರೆ. ಗ್ರಾಮದ ಪ್ರಮುಖ ಧಾರ್ಮಿಕ ಸ್ಥಾನಗಳಾದ ನವಗ್ರಹ ದೇವಸ್ಥಾನ, …

Read More »

ಬೆಳಗಾವಿಯಲ್ಲಿ ಭೀಮ್ ಆರ್ಮಿ ಏಕತಾ ಮಿಷನ್ ಲೋಕಾರ್ಪಣೆ; ನೂತನ ಪದಾಧಿಕಾರಿಗಳ ಪದಗ್ರಹಣ

ಕುಂದಾನಗರಿ ಬೆಳಗಾವಿಯಲ್ಲಿ ಇಂದು ಭೀಮ್ ಆರ್ಮಿ ಏಕತಾ ಮಿಷನ್ ಸಂಘಟನೆಯ ಕರ್ನಾಟಕ ರಾಜ್ಯ ಘಟಕದ ಲೋಕಾರ್ಪಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗಾಗಿ ಶ್ರಮಿಸುವುದಾಗಿ ಸಂಘಟನೆ ಘೋಷಿಸಿದೆ. ಬೆಳಗಾವಿಯಲ್ಲಿ ಇಂದು ನಡೆದ ಭೀಮ್ ಆರ್ಮಿ ಏಕತಾ ಮಿಷನ್‌ನ ಕರ್ನಾಟಕ ರಾಜ್ಯ ಘಟಕದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಸಂಘಟನೆಯ ರಾಜ್ಯ ಗೌರವಾಧ್ಯಕ್ಷರಾಗಿ ತುಕಾರಾಂ …

Read More »

ಅಕ್ಕ-ತಂಗಿಯರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಚಿಕ್ಕೋಡಿ:ಶಾಲೆಯಿಂದ ಮನೆಗೆ ಮರಳುತ್ತಿದ್ದ ಇಬ್ಬರು ಅಕ್ಕ-ತಂಗಿಯರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮೇಖಳಿ ಗ್ರಾಮದ ಅನುದಾನಿತ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಾದ ಜಯಶ್ರೀ ಕೋಟರೆ ಮತ್ತು ಭಾಗ್ಯಶ್ರೀ ಕೋಟರೆ ಅವರು ಶಾಲೆ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ನಾಗರಮುನ್ನೋಳಿ ಗ್ರಾಮದಿಂದ ರಾಯಬಾಗ ಪಟ್ಟಣದ ಕಡೆಗೆ …

Read More »

ಬೆಳಗಾವಿಯ ನಾಯಕರಿಗೆ ಉಪಕದನ ಗೆಲ್ಲಿಸುವ ಜವಾಬ್ದಾರಿ – ಕಾಂಗ್ರೆಸ್ ಹೈಕಮಾಂಡ್ ಆದೇಶ

ಬೆಳಗಾವಿ: ಗಡಿಜಿಲ್ಲೆಯ ಮೂವರು ಘಟಾನುಘಟಿ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್  ಉಪಚುನಾವಣೆಯಲ್ಲಿ ಗೆಲ್ಲಿಸುವ ಟಾಸ್ಕ್ ನೀಡಿದೆ. ಸೂಚನೆ ಬೆನ್ನಲ್ಲೇ ಬೆಳಗಾವಿ ನಾಯಕರು ಅಖಾಡಕ್ಕಿಳಿದಿದ್ದಾರೆ. ಬಾಗಲಕೋಟೆ  ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಹೊಣೆಗಾರಿಕೆ ಸಚಿವ ಸತೀಶ್ ಜಾರಕಿಹೊಳಿ ಹೆಗಲಿಗೆ ಹಾಕಿದ್ದಾರೆ. ದಾವಣಗೆರೆಯಲ್ಲಿ  ಗೆಲ್ಲಿಸುವ ಜವಾಬ್ದಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆನೀಡಲಾಗಿದೆ. ಈ ಎರಡೂ ಕ್ಷೇತ್ರದಲ್ಲಿ ಸ್ಟಾರ್ ಪ್ರಚಾರಕರಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರನ್ನು  ಹೈಕಮಾಂಡ್ ನೇಮಕ ಮಾಡಿದೆ. ಸಂಘಟನಾ ಚತುರತೆ ಹಿನ್ನೆಲೆ ಮೂವರು ನಾಯಕರಿಗೆ …

Read More »

ಏಕಾಗ್ರತೆ ಇಟ್ಟುಕೊಳ್ಳಲು ಪರಮಾತ್ಮನ ಸಾಾತ್ಕಾರದಿಂದ ಸಾಧ್ಯ

ಯರಗಟ್ಟಿ: ಸದಾ ಚಂಚಲತೆಯಿಂದ ಕೂಡಿದ ಮನುಷ್ಯನ ಮನಸ್ಸುನ್ನು ಏಕಾಗ್ರತೆಯಲ್ಲಿ ಇಟ್ಟುಕೊಳ್ಳಲು ನಿರಂತರ ಪ್ರಯತ್ನ, ಸಾಧನೆ, ಪರಮಾತ್ಮನ ಸಾಾತ್ಕಾರದಿಂದ ಮಾತ್ರ ಸಾಧ್ಯ ಎಂದು ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು. ತಾಲೂಕಿನ ರೈನಾಪುರ ಗ್ರಾಮದ ಶ್ರದ್ಧಾನಂದ ಆಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾ ಜಪಯ ಕಾರ್ಯಕ್ರಮ ಹಾಗೂ 18ನೇ ವೇದಾಂತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಗುರುವಿನ ಮಾರ್ಗದರ್ಶನ, ಸತ್ಸಂಗಗಳ ಮೂಲಕ ಬದುಕನ್ನು ಹಸನು ಮಾಡಿಕೊಂಡು ಮನಸ್ಸನ್ನು ನಿರ್ಮಲವಾಗಿ ಇಟ್ಟುಕೊಳ್ಳಬೇಕು ಎಂದರು. ಶಿಂದೋಗಿ ಮುಕ್ತಾನಂದ …

Read More »

ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಿ

ನೇಸರಗಿ: ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳುವ ಮೂಲಕ ಸಮಾಜಮುಖಿ ಕಾರ್ಯ ಕೈಗೊಳ್ಳಬೇಕು ಎಂದು ಪ್ರೊ.ಮಹಾಂತೇಶ ಅವ್ವಕ್ಕನವರ ಹೇಳಿದರು. ಸಮೀಪದ ಮತ್ತಿಕೊಪ್ಪ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೇಸರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಹಾಗೂ ಶಿಕ್ಷಕರ ಮಾರ್ಗದರ್ಶನ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಡಾ.ಕೀರನಾಯ್ಕ ಗಡ್ಡಿಗೌಡರ ಮಾತನಾಡಿದರು. ಯೋಜನಾಧಿಕಾರಿ ಎಸ್​.ಎಸ್​.ಚವತ್ರಿಮಠ, ಗ್ರಾಪಂ …

Read More »

ರಾಜೀವ ಗಾಂಧಿ ಯೂನಿವರ್ಸಿಟಿಗೆ  ಮೂರನೇ ರ್ಯಾಂಕ್​ ಪಡೆದ ಡಾ.ಸ್ನೇಹಾ

ಬೈಲಹೊಂಗಲ: ನಗರದ ಕಡಬಿ ಗಲ್ಲಿಯ ಡಾ.ಸ್ನೇಹಾ ಮಲ್ಲಿಕಾರ್ಜುನ ಅಂಗಡಿ ಅವರು ಬೆಂಗಳೂರು ಮೆಡಿಕಲ್​ ಕಾಲೇಜ್​ ಮತ್ತು ರಿಸರ್ಚ್​ ಇನ್ಸಿಟ್ಯೂಟ್​ನಲ್ಲಿ ಎಂಸಿಎಚ್​ ಪೀಡಿಯಾಟ್ರಿಕ್​ ಸರ್ಜರಿ ಕೋರ್ಸ್​ನಲ್ಲಿ ಉತ್ತಮ ಲಿತಾಂಶ ಪಡೆದು ರಾಜೀವ ಗಾಂಧಿ ಯೂನಿವರ್ಸಿಟಿಗೆ  ಮೂರನೇ ರ್ಯಾಂಕ್​ ಪಡೆದಿದ್ದಾರೆ. ತಂದೆ ಡಾ.ಮಲ್ಲಿಕಾರ್ಜುನ ಅಂಗಡಿ ಹಾಗೂ ತಾಯಿ ಡಾ.ವಿದ್ಯಾ ದುಗಾನಿ ಕಳೆದ 45 ವರ್ಷಗಳಿಂದ ಆರೋಗ್ಯ ಸೇವೆ ನೀಡುತ್ತಿದ್ದಾರೆ.

Read More »

ಮುರಗೋಡ ದುರ್ಗಾದೇವಿ ಜಾತ್ರಾ ಮಹೋತ್ಸವ ಆರಂಭ

ಮುರಗೋಡ: ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮಾ.30ರವರೆಗೆ ಜರುಗಲಿದೆ. ದುರ್ಗಾದೇವಿಯ ದ್ವಾರ ಬಾಗಿಲು ಪೂಜೆ ನೆರವೇರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಮಾ.25ರಂದು ಬಸವೇಶ್ವರ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಗುವುದು. ಮಾ.26ರಂದು ವಿವಿಧ ಕಲಾ ಹಾಗೂ ಭಜನಾ ತಂಡದಿಂದ ಭಜನೆ ಜಾಗರಣೆ ಕಾರ್ಯಕ್ರಮ ಜರುಗಲಿದೆ. ಮಾ.27ರಂದು ಬೆಳಗ್ಗೆ ದುರ್ಗಾದೇವಿಗೆ ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಸಲ್ಲಿಸಲಾಗುವುದು. ಸಂಜೆ 5 ಗಂಟೆಗೆ ವಿವಿಧ ವಾದ್ಯ …

Read More »