Breaking News

ಬೆಳಗಾವಿ

ಬೆಳಗಾವಿಗೆ ಗಡಿ ಸಂರಕ್ಷಣ ಆಯೋಗ ಕಚೇರಿ ಕೂಗು

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಗಡಿ ವಿವಾದ ಮತ್ತೆ ಸದ್ದು ಮಾಡುತ್ತಿರುವುದು ಗಡಿ ಭಾಗದಲ್ಲಿ ಹಲವು ಹೊಸ ಚಟುವಟಿಕೆಗಳಿಗೆ ಜೀವ ನೀಡಿದೆ. ಗಡಿ ಅಭಿವೃದ್ಧಿಗಾಗಿರುವ ಕಚೇರಿಗಳ ಸ್ಥಾಪನೆ ವಿಷಯ ಪ್ರಧಾನವಾಗಿ ಮುನ್ನೆಲೆಗೆ ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೆಲವು ದಿನಗಳ ಹಿಂದೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸಿಎಂಗಳ ಸಭೆ ನಡೆಸಿ ಎರಡೂ ರಾಜ್ಯಗಳ ಗಡಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡುವ ವಿಷಯ ಪ್ರಸ್ತಾವಿಸಿದ ಬಳಿಕ ಸುವರ್ಣ …

Read More »

ಕುಮ್ಕಿ ಜಮೀನು ಸಮಸ್ಯೆಗೆ ಪರಿಹಾರ: ಸಚಿವ ಆರ್‌. ಅಶೋಕ್‌

ಸುವರ್ಣವಿಧಾನಸೌಧ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಐದಾರು ಜಿಲ್ಲೆಗಳಲ್ಲಿರುವ ಕುಮ್ಕಿ ಜಮೀನು ಸಮಸ್ಯೆ ಕುರಿತಾಗಿ ಸಾಧಕ-ಬಾಧಕಗಳು, ಕಾನೂನು ಪರಿಣಾಮಗಳನ್ನು ಕೂಲಂಕುಷವಾಗಿ ಚರ್ಚಿಸಿ ಪರಿಹಾರ ರೂಪದಲ್ಲಿ ಹೊಸ ಕಾಯ್ದೆ ತರುವ ಚಿಂತನೆ ಸರ್ಕಾರದ್ದಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ. ಪರಿಷತ್‌ನಲ್ಲಿ ಬುಧವಾರ ಬಿಜೆಪಿ ಸದಸ್ಯ ಪ್ರತಾಪ ಸಿಂಹ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕ ಚಿಂತನೆ ಹೊಂದಿದೆ ಎಂದು ತಿಳಿಸಿದರು. ಕನ್ನಡ, …

Read More »

ಮಿತಿಮೀರಿದ ಅಡಿಕೆ ಬೆಳೆಯಿಂದ ಅಸಮತೋಲನ: ಸದನ ಆತಂಕ

ಬೆಳಗಾವಿ: ಬೇಕಾಬಿಟ್ಟಿಯಾಗಿ ಅಡಿಕೆ ಬೆಳೆಯನ್ನು ಬಯಲುಸೀಮೆ ಸಹಿತ ಹಲವು ಜಿಲ್ಲೆಗಳಲ್ಲಿ ವಿಸ್ತರಣೆ ಮಾಡುತ್ತಿರುವುದು ಅಪಾಯಕಾರಿ. ಇದರಿಂದ ಮುಂದೆ ಬೆಳೆಗಳ ಅಸಮತೋಲನ ಉಂಟಾಗುವ ಭೀತಿ ಇದೆ ಎಂಬ ಕಳವಳ ಬುಧವಾರ ವಿಧಾನಸಭೆಯಲ್ಲಿ ವ್ಯಕ್ತವಾಯಿತು.   ಕೃಷಿ ಎದುರಿಸುತ್ತಿರುವ ಅತಿವೃಷ್ಟಿ ಮತ್ತಿತರ ಸಮಸ್ಯೆಗಳಿಂದ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ನಡೆಯುತ್ತಿದ್ದ ಚರ್ಚೆ ವೇಳೆ ಗೃಹಸಚಿವ ಆರಗ ಜ್ಞಾನೇಂದ್ರ ವಿಷಯ ಪ್ರಸ್ತಾವಿಸಿ, ಅಡಿಕೆ ಬೆಳೆ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವುದನ್ನು ನೋಡಿದರೆ ಅದುವೇ ರೈತರಿಗೆ ಮಾರಕವಾಗುವ ದಿನಗಳು …

Read More »

ಕೈಗಾರಿಕೆಗಳಿಗೆ ಜಮೀನು: ಭೂ ಲೆಕ್ಕ ಪರಿಶೋಧನೆಗೆ ಆದೇಶ

ಬೆಳಗಾವಿ: “ಕರ್ನಾಟಕ ಕೈಗಾರಿಕಾ ಪ್ರದೇಶಾಭಿ ವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಕೈಗಾರಿಕೆಗಳ ಸ್ಥಾಪನೆಗೆ ಸ್ವಾಧೀನಪಡಿಸಿಕೊಂಡ ಜಮೀನಿನ ಸಮಗ್ರ ಲೆಕ್ಕ ಪರಿಶೋಧನೆಗೆ (ಲ್ಯಾಂಡ್‌ ಆಡಿಟ್‌) 3 ತಿಂಗಳ ಹಿಂದೆ ಆದೇಶಿಸಲಾಗಿದೆ. ವರದಿ ಬಂದ ಕೂಡಲೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕದ ಮೇಲಿನ ಚರ್ಚೆ ವೇಳೆ ಮಾತ ನಾಡಿ, ಉಕ್ಕು ಮತ್ತು ಉಷ್ಣ ಸ್ಥಾವರ ಸೇರಿದಂತೆ ವಿವಿಧ ಕೈಗಾರಿಕೆಗಳ …

Read More »

ಕೋವಿಡ್‌: ಆರೋಗ್ಯ ಸೌಲಭ್ಯಗಳ ಪರಿಶೀಲನೆ

ಬೆಳಗಾವಿ: ಕೋವಿಡ್‌-19 ಪರಿಸ್ಥಿತಿ ಎದುರಿಸಲು ಆರೋಗ್ಯ ಸೌಲಭ್ಯಗಳ ಸನ್ನದ್ಧತೆ ಖಾತ್ರಿಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಅಣಕು ಪರೀಕ್ಷೆ ನಡೆಯಿತು. ಕೊರೊನಾ 4ನೇ ಅಲೆಯಲ್ಲಿ ಸೋಂಕಿತರು ಚಿಕಿತ್ಸೆಗೆ ದಾಖಲಾದರೆ, ಯಾವುದೇ ತೊಂದರೆಯಾಗದಿರುವುದನ್ನು ಖಚಿತಪಡಿಸಿಕೊಳ್ಳಲು ದ್ರವೀಕೃತ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳು, ಸರಬರಾಜು ವ್ಯವಸ್ಥೆ, ತೀವ್ರ ನಿಗಾ ಘಟಕಗಳು ಮತ್ತು ಇತರೆ ಸೌಲಭ್ಯ ಪರೀಕ್ಷಿಸಲಾಯಿತು.   ಜಿಲ್ಲಾಸ್ಪತ್ರೆಯಲ್ಲಿ ನಿತ್ಯ 30 ಕೆ.ಎಲ್‌ ಸಾಮರ್ಥ್ಯದ ದ್ರವೀಕೃತ ವೈದ್ಯಕೀಯ ಆಮ್ಲಜನಕ …

Read More »

ಕಳಪೆ ಕಾಮಗಾರಿ 15 ದಿನಗಳಲ್ಲಿ ಹದಗೆಟ್ಟರಸ್ತೆ

ಖಾನಾಪುರ: ಪಟ್ಟಣದಿಂದ ಕೇವಲ ನಾಲ್ಕು ಕಿ.ಮೀ ಅಂತರದಲ್ಲಿರುವ ರಾಮಗುರವಾಡಿ ಗ್ರಾಮ ಹಲವು ಮೂಲಸೌಕರ್ಯಗಳ ಕೊರತೆಯಿಂದ ಬಡವಾಗಿದೆ. ಜಾಂಬೋಟಿ- ಜತ್ತ ರಾಜ್ಯ ಹೆದ್ದಾರಿಯಿಂದ ಉತ್ತರ ದಿಕ್ಕಿಗೆ 1 ಕಿ.ಮೀ ಅಂತರದಲ್ಲಿರುವ ಈ ಗ್ರಾಮಕ್ಕೆ ಸರಿಯಾದ ಸಂಪರ್ಕ ರಸ್ತೆಯೇ ಇಲ್ಲ. ಇದು ಇಲ್ಲಿನ ಬಹುಮುಖ್ಯ ಸಮಸ್ಯೆ. ರಸ್ತೆ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಬಸ್‌ಗಳು ಗ್ರಾಮದೊಳಗೆ ಬರುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತೊಂದರೆ ಅನುಭವಿಸುವುದು ತಪ್ಪಿಲ್ಲ. 2,000 ಜನಸಂಖ್ಯೆ ಹೊಂದಿರುವ ರಾಮಗುರವಾಡಿ ಗ್ರಾಮದಲ್ಲಿ ಸ್ಥಳೀಯ …

Read More »

ಮಕ್ಕಳಿಂದ ಕಲಾಪ ವೀಕ್ಷಣೆ

ಬೆಳಗಾವಿ: ಒಂದೆಡೆ ಪ್ರೇಕ್ಷಣೀಯ ಸ್ಥಳಗಳು, ದೇವಾಲಯಗಳಿಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದರೆ, ಮತ್ತೊಂದೆಡೆ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.   ಇಲ್ಲಿ ಡಿ.19ರಿಂದ ಆರಂಭಗೊಂಡ ವಿಧಾನಮಂಡಲ ಚಳಿಗಾಲದ ಅಧಿವೇಶನ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಈ ಮಧ್ಯೆ, ಸಾವಿರಾರು ವಿದ್ಯಾರ್ಥಿಗಳೂ ಹೆಜ್ಜೆ ಹಾಕುತ್ತಿರುವುದರಿಂದ ಭವ್ಯ ಸೌಧವೀಗ ‘ಶೈಕ್ಷಣಿಕ ಪ್ರವಾಸ’ದ ಕೇಂದ್ರವಾಗಿ ಬದಲಾಗಿದೆ. ಸೌಧದ ಅಂಗಳದಲ್ಲಿ ಮಕ್ಕಳ ಕಲರವ ಕಂಡುಬರುತ್ತಿದೆ. 10 ಸಾವಿರ …

Read More »

ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು”ಎಂದ ಏಕನಾಥ ಶಿಂಧೆ

ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಭಾಲ್ಕಿ ಸಹಿತ ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು”ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಇಂದು ಮಂಗಳವಾರ ಮಧ್ಯಾಹ್ನ ಮಹಾರಾಷ್ಟ್ರದ ನಾಗ್ಪೂರದಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲಾಯಿತು. ಅಧಿವೇಶನದಲ್ಲಿ ಗಡಿವಿವಾದ ಕುರುತು ವ್ಯಾಪಕ ಚರ್ಚೆ ನಡೆಯಿತು. ಮಹತ್ವದ ಅಂಶಗಳು ಇಲ್ಲಿವೆ; 1) ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ  ಏಕನಾಥ ಶಿಂಧೆ ಅವರು ಕರ್ನಾಟಕದ ಗಡಿಭಾಗದಲ್ಲಿ ನಡೆದ ಚಳವಳಿಯಲ್ಲಿ ಮಡಿದ ಮರಾಠಿ ಭಾಷಿಕರನ್ನು ಹುತಾತ್ಮರೆಂದು ಪರಿಗಣಿಸಿ …

Read More »

ಕೆಪಿಟಿಸಿಎಲ್‌ ಮಾದರಿ ಪಿಎಸ್‌ಐಗೆ ಏಕಿಲ್ಲ? PSI ನೇಮಕಾತಿ ‍ಪರೀಕ್ಷೆ ಪಾಸಾದವರ ಅಳಲು

ಬೆಳಗಾವಿ: ಕೆಪಿಟಿಸಿಎಲ್‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಿಗಳನ್ನು ಬಿಟ್ಟು, ಉಳಿದವರಿಗೆ ನೇಮಕಾತಿ ಆದೇಶ ನೀಡಲು ರಾಜ್ಯ ಸಾರ್ಕಾರ ನಿರ್ಧರಿಸಿದೆ. ಇದೇ ರೀತಿಯ ನಿಲುವನ್ನು 545 ಪಿಎಸ್‌ಐ ನೇಮಕಾತಿ ‍ಪರೀಕ್ಷೆ ಬರೆದವರ ಬಗ್ಗೆ ಏಕೆ ತಾಳುತ್ತಿಲ್ಲ ಎಂದು ಅಭ್ಯರ್ಥಿಗಳು ಪ್ರಶ್ನೆ ಎತ್ತಿದ್ದಾರೆ.   ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ, ಒಎಂಆರ್‌ ಶೀಟ್‌ ತಿದ್ದುವ ಮೂಲಕ ಅಕ್ರಮ ಎಸಗಲಾಗಿದೆ. ಇದೇ ಮಾದರಿಯ ಅಕ್ರಮಗಳು ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿಯಲ್ಲೂ ನಡೆದಿವೆ. …

Read More »

ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಅನುದಾನಿತ ಶಾಲಾ ಕಾಲೇಜುಗಳಲ್ಲಿ 2006 ರ ನಂತರ ನೇಮಕ ಹೊಂದಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ. ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯವಿಲ್ಲದೆ ಅನುದಾನಿತ ನೌಕರರಿಗೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಜಿ.ಹನುಮಂತಪ್ಪ, ಮುತ್ತುರಾಜ ಎಮ್.ಎಮ್., ಎಸ್.ಎಮ್.ಮಾಮೂಲದಾರ, …

Read More »