ಗೋಕಾಕ (ಬೆಳಗಾವಿ ಜಿಲ್ಲೆ): ಹೃದಯಾಘಾತದಿಂದ ಮಂಗಳವಾರ ನಿಧನರಾದ ಯೋಧ ಬಾಳಪ್ಪ ಯಲಿಗಾರ (33) ಅವರ ಮೃತದೇಹವನ್ನು ಬುಧವಾರ ಅವರ ಹುಟ್ಟೂರಾದ ಗೋಕಾಕ ತಾಲ್ಲೂಕಿನ ಮೇಲ್ಮಟ್ಟಿಗೆ ತರಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ ಸುತ್ತಮುತ್ತಲಿನ ಗ್ರಾಮಗಳ ಜನ, ಯೋಧನ ಮೃತದೇಹಕ್ಕೆ ಗೌರವಪೂರ್ಣ ಸ್ವಾಗತ ಕೋರಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ ಹಾಗೂ ಡಿಎಆರ್ ಎಸ್ಪಿ ವೈ.ಕೆ. ಕಾಶಪ್ಪನವರ ಅವರು ಪುಷ್ಪಗುಚ್ಛ ಸಮರ್ಪಿಸಿ ಗೌರವ ಸಲ್ಲಿಸಿದರು. ಮಹಾರಾಷ್ಟ್ರದ ಔರಂಗಾಬಾದನಲ್ಲಿ ಮಂಗಳವಾರ ಮಧ್ಯಾಹ್ನ ಕೆಲಸದಲ್ಲಿ ಇದ್ದಾಗಲೇ …
Read More »ಕಾಕತಿ ಸಿಪಿಐ ಮೇಲೆ ಈ ವೇಳೆ ಕೆಂಡ ಕಾರಿದ ಹುಲ್ಲಿಯಾನೂರು ಗ್ರಾಮಸ್ಥರು
ಕಳೆದ ಭಾನುವಾರ ವರುದಕ್ಷಣೆ ತರುವಂತೆ ಒತಾಯಿಸಿ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ವಿವಾಹಿತೆ ರೇಣುಕಾಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಹುಲ್ಲಿಯಾನೂರು ಗ್ರಾಮಸ್ಥರು ಬುಧವಾರ ಪೆÇಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹೌದು ಕಳೆದ ಭಾನುವಾರ ಕಾಕತಿ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ನವ ವಿವಾಹಿತೆ ರೇಣುಕಾ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸುತ್ತಿರುವ ಪತಿಯ ಕುಟುಂಬ ಹಾಗೂ ಪ್ರಭಾವಿ ಬಿಜೆಪಿ ಮುಖಂಡರ ಅಣತೆಗೆ …
Read More »ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಬೆಳಗಾವಿಯಲ್ಲಿ ಕರವೆ ಕಾರ್ಯಕರ್ತರು ಪ್ರತಿಭಟನೆ
ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಬೆಳಗಾವಿಯಲ್ಲಿ ಕರವೆ ಕಾರ್ಯಕರ್ತರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಈ ವೇಳೆ ಕೇಂದ್ರದ ಹಿಂದಿ ಹೇರಿಕೆ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಹೌದು ಕರ್ನಾಟಕದಲ್ಲಿ ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿ ಬೆಳಗಾವಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು. ಸಂವಿಧಾನದಲ್ಲಿರುವ ಎಲ್ಲಾ ಭಾಷೆಗಳಿಗೆ ಸಮಾನ ಸ್ಥನಮಾನಗಳನ್ನು ನೀಡಬೇಕು. ಶಿಕ್ಷಣ ಹಾಗೂಐ ಉದ್ಯೋಗಗಳಲ್ಲಿ ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನ …
Read More »ಅತಿವೃಷ್ಟಿ: ಕಟ್ಟೆಚ್ಚರ ವಹಿಸಲು ತಾಕೀತು
ಕಾಗವಾಡ: ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಮನೆಗಳು ಬಿದ್ದಲ್ಲಿ ಮತ್ತು ಇನ್ನಿತರೆ ಯಾವುದೇ ಜೀವಹಾನಿ, ಅನಾಹುತಗಳು ಸಂಭವಿಸಿದಲ್ಲಿ 24 ಗಂಟೆ ಒಳಗಾಗಿ ಮೇಲಧಿಕಾರಿಗಳಿಗೆ ವರದಿ ಒಪ್ಪಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ನೋಡಲ್ ಅಧಿಕಾರಿ ಎಲ್.ವೈ. ರೂಡಗಿ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಅವರ ಆದೇಶದಂತೆ ಈ ಸಭೆ ಕರೆಯಲಾಗಿದೆ. ನೆರೆ ಹಾವಳಿ ಹಾಗೂ ಅತಿವೃಷ್ಠಿಯಿಂದ ನಿಮ್ಮ ಕ್ಷೇತ್ರಗಳ …
Read More »ಜಿಲ್ಲೆಯಲ್ಲಿ ಪೂರ್ಣ ಪ್ರಮಾಣ ಮನೆ ಬಿದ್ದವರಿಗೆ 24 ಗಂಟೆ ಒಳಗೆ ಪರಿಹಾರ: ಕಾರಜೋಳ
ಬೆಳಗಾವಿ: ಜಿಲ್ಲೆಯಲ್ಲಿ ಪೂರ್ಣ ಪ್ರಮಾಣ ಮನೆ ಬಿದ್ದವರಿಗೆ 24 ಗಂಟೆ ಒಳಗೆ ಪರಿಹಾರದ ಹಣ ಕೊಡಲಾಗುತ್ತಿದೆ. ರಾಜ್ಯದಲ್ಲೇ ಇದು ಅತ್ಯಂತ ವೇಗವಾಗಿ ನಡೆದ ಕೆಲಸ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ವಿಧಾನ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, 2019ರಲ್ಲಿ 46,959 ಮನೆಗಳಿಗೆ ₹ 828.67 ಪರಿಹಾರ ಕೊಟ್ಟಿದ್ದೇವೆ. 2019ರಲ್ಲಿ₹ 120.05 ಕೋಟಿ ಕೊಟ್ಟಿದ್ದೇವೆ. ಇಷ್ಟು ಪ್ರಮಾಣದಲ್ಲಿ ಪರಿಹಾರವನ್ನು 75 ವರ್ಷದಲ್ಲಿ ಯಾರೂ …
Read More »‘ಸಂಕಷ್ಟದಲ್ಲೂ ಸಮಚಿತ್ತದ ಆಲೋಚನೆ ಮಾಡಿ’
ಬೆಳಗಾವಿ: ನಮ್ಮಲ್ಲಿನ ಸಮಚಿತ್ತದ ಯೋಚನೆಗಳು ಆತ್ಮಹತ್ಯೆಯ ವಿಚಾರಗಳನ್ನು ದೂರಗೊಳಿಸುತ್ತವೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಅಭಿಪ್ರಾಯ ಪಟ್ಟರು. ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಾನಸಿಕ ರೋಗ ಚಿಕಿತ್ಸಾ ವಿಭಾಗ ಹಾಗೂ ನರ್ಸಿಂಗ್ ಸೈನ್ಸ್ ವಿಭಾಗದ ಸಹಯೋಗದಲ್ಲಿ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷಣ ಮಾತ್ರದ …
Read More »ಜಿಲ್ಲಾಮಟ್ಟದ ಕ್ರೀಡಾಕೂಟಗಳ ಗುಂಪು ಕ್ರೀಡೆ ಹಾಗೂ ಆಟೋಟಗಳನ್ನು ಸೆ.30ರೊಳಗಾಗಿ ಮುಗಿಸಬೇಕು : ಬಸವರಾಜ ನಾಲತವಾಡ
ಬೆಳಗಾವಿ: ಈ ಬಾರಿಯ ಜಿಲ್ಲಾಮಟ್ಟದ ಕ್ರೀಡಾಕೂಟಗಳ ಗುಂಪು ಕ್ರೀಡೆ ಹಾಗೂ ಆಟೋಟಗಳನ್ನು ಸೆ.30ರೊಳಗಾಗಿ ಮುಗಿಸಬೇಕು ಎಂದು ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆ ಉಪನಿರ್ದೇಶಕ ಬಸವರಾಜ ನಾಲತವಾಡ ತಿಳಿಸಿದರು. ಈ ಸಂಬಂಧ ನಗರದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವ ಯಾವ ತಾಲ್ಲೂಕಿನಲ್ಲಿ ಗುಂಪು ಆಟಗಳನ್ನು ಆಯೋಜಿಸಬೇಕು ಎಂದು ಈಗಲೇ ನಿರ್ಧರಿಸಬೇಕು. ಎಲ್ಲ ಕ್ರೀಡೆಗಳನ್ನೂ ಅಚ್ಚುಕಟ್ಟಾಗಿ ನೆರವೇರಿಸಬೇಕು ಎಂದು ಸೂಚಿಸಿದರು. ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ …
Read More »ಇಂಚಿಂಚಿಗೂ ಸಮಸ್ಯೆ ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ ಇಂಚಲ ಗ್ರಾಮ
ಬೈಲಹೊಂಗಲ: ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೆಯಾದ ಕೊಡುಗೆ ನೀಡುವಲ್ಲಿ ಜಿಲ್ಲೆಯಲ್ಲಿ ಹೆಸರು ಮಾಡಿದ ಊರು ಇಂಚಲ. ಆದರೆ, ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ. ಈ ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆ ಇದೆ. 300ಕ್ಕೂ ಅಧಿಕ ಶಿಕ್ಷಕರು ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸೇವೆಯಲ್ಲಿದ್ದಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿದ ಗ್ರಾಮ ಎಂಬ ಖ್ಯಾತಿ ದಶಕಗಳಿಂದಲೂ ಈ ಊರಿಗೆ ಇದೆ. ಶಿಕ್ಷಣ ಮಾತ್ರವಲ್ಲದೇ ಸರ್ಕಾರದ ಎಲ್ಲ …
Read More »ಯಶಸ್ಸು ಗಳಿಸಲು ಸರಳ ಶಿಸ್ತು ಸಾಕು’
ಬೆಳಗಾವಿ: ಯಶಸ್ಸು ಎನ್ನುವುದು ಕೆಲವು ಸರಳ ಶಿಸ್ತುಗಳಿಗಿಂತ ಕೂಡಿರುತ್ತದೆ. ಅದು ಹೆಚ್ಚೇನೂ ಇಲ್ಲ, ಪ್ರತಿದಿನ ಅಭ್ಯಾಸ ಹಾಗೂ ಸತತ ಪ್ರಯತ್ನದ ಫಲವಾಗಿ ಅದನ್ನು ಗಳಿಸಲು ಸಾಧ್ಯವೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಎಂಬಿಎ ವಿಭಾಗದ ಅಧ್ಯಕ್ಷ ಪ್ರೊ.ತ್ಯಾಗರಾಜ ಹೇಳಿದರು. ಕೆಎಲ್‍ಇ ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ 2021-2022ನೇ ಸಾಲಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಕ್ರೀಡಾ- ಸಾಂಸ್ಕೃತಿಕ ಚಟುವಟಿಕೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಂಗಳವಾರ ಮುಖ್ಯ ಅತಿಥಿಯಾಗಿ ಮಾತನಾಡಿದರು. …
Read More »ಕೇಂದ್ರ ಸರ್ಕಾರದ ಒತ್ತಾಯ ಪೂರ್ವಕ ಹಿಂದಿ ದಿವಸ ವಿರೋಧಿಸಿ ಇಂದು ಕರವೇ ಪ್ರೊಟೆಸ್ಟ್ :ದೀಪಕ ಗುಡಗನಟ್ಟಿ
ಕೇಂದ್ರ ಸರ್ಕಾರ ಒತ್ತಾಯ ಪೂರ್ವಕವಾಗಿ ಹಿಂದಿ ಭಾಷೆಯನ್ನು ಹೇರಲು, ಹಿಂದಿ ದಿವಸ ಆಚರಣೆ ಮಾಡುತ್ತಿರುವದನ್ನು ವಿರೋಧಿಸಿ,ಹಿಂದಿ ದಿವಸ ಆಚರಣೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ನಾಳೆ ಬುಧವಾರ ದಿನಾಂಕ 14-9-2022 ರಂದು ಮಧ್ಯಾಹ್ನ 12 ಗಂಟೆಗೆ ಬೆಳಗಾವಿಯ ರೇಲ್ವೆ ನಿಲ್ಧಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಿದೆ. ರೇಲ್ವೆ ನಿಲ್ಧಾಣದ ವೃತ್ತದಿಂದ ರೇಲ್ವೆ ನಿಲ್ದಾಣದ ಕಚೇರಿಯವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಮಾದ್ಯಮ ಪ್ರತಿನಿಧಿಗಳು ಆಗಮಿಸಬೇಕೆಂದು ಕೋರುತ್ತೇನೆ.
Read More »