Breaking News

ಬೆಳಗಾವಿ

ಬಡವರ, ಹಿಂದುಳಿದವರ, ಯುವಕರ ಪ್ರಗತಿಗಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ಸದಾ ಸಿದ್ದ: ಯುವ ನಾಯಕ ರಾಹುಲ್‌ ಜಾರಕಿಹೊಳಿ

    ಬೆಳಗಾವಿ ದಕ್ಷಿಣ, ಉತ್ತರ ಮತಕ್ಷೇತ್ರದ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ವಿವಿಧ ಸಮುದಾಯದ ಸಮುದಾಯ ಭವನಗಳಿಗೆ ಕುರ್ಚಿ, ಸೌಂಡ್‌ ಸಿಸ್ಟಮ್‌ ಗಳ ವಿತರಣೆ ಬೆಳಗಾವಿ: ಎಲ್ಲಾ ಸಮಾಜದ ಬಡವರ, ಹಿಂದುಳಿದವರ, ಯುವಕರ ಪ್ರಗತಿಗಾಗಿ ಸತೀಶ್ ಜಾರಕಿಹೊಳಿ ಫೌಂಡೇಶನ್ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ ಎಂದು ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು.   ನಗರದ ಜಾಧವ ನಗರ ಕಚೇರಿಯಲ್ಲಿ ಬೆಳಗಾವಿ ದಕ್ಷಿಣ, ಉತ್ತರ ಮತಕ್ಷೇತ್ರದ ಮಸೀದಿ, …

Read More »

ಮೆಥೋಡಿಸ್ಟ್‌ ಸಂಸ್ಥೆಗೆ ಅಕ್ರಮ ಎಸಗಿರುವವರ ವಿರುದ್ದ ಕ್ರಮಕ್ಕೆ ಆಗ್ರಹ

    ಬೆಳಗಾವಿ: ಮೆಥೋಡಿಸ್ಟ್‌ ಚರ್ಚಗೆ ಸಂಬಂಧಿಸಿದ ಸಿಪಿಏಡ್‌ ಮೈದಾನ ಆಸ್ತಿಯನ್ನು ಗುತ್ತಿಗೆ ಆಧಾರದ ಮೇಲೆ ಮಾರಾಟ ಮಾಡಿ, ಸಂಸ್ಥೆಗೆ ಒಳಪಟ್ಟ 14 ಶಾಲೆ ಹಾಗೂ ಸಂಸ್ಥೆಯಲ್ಲಿನ ಹಣವನ್ನು ದುರುಪಯೋಗ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕ್ರೈಸ್ತ ಬಾಂಧವರ ವತಿಯಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.   ಇಲ್ಲಿನ ಮೆಥೋಡಿಸ್ಟ್‌ ಚರ್ಚ್‌ ನಿಂದ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ನಡೆಸಿ, ಮೆಥೋಡಿಸ್ಟ್‌ ಸಂಸ್ಥೆಯಲ್ಲಿ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ*

  ಗೋಕಾಕ : ತಾಲೂಕಿನ ಹಿರೇನಂದಿ ಗ್ರಾಮದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯಲ್ಲಿ ಆವರಣದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಿಸಿದರು. ಕಾರ್ಖಾನೆಯಲ್ಲಿ ಆವರಣದಲ್ಲಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೂಲಕ ಜಯಂತಿಯನ್ನು ಆಚರಿಸಿ ನಂತರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರು ಮಾತನಾಡಿ ಸೃಷ್ಟಿ ಮತ್ತು ಸೃಷ್ಟಿಯ ಸಂಕೇತ, ಕರಕುಶಲತೆಯಲ್ಲಿ ಅತ್ಯುನ್ನತ, ಶಿಲ್ಪಿ, ವಿಶ್ವಕರ್ಮ ಜೀ ಅವರನ್ನು ನೆನೆಯೋಣ, ಮತ್ತು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ& “ಶ್ರೇಷ್ಠ ಫೌಂಡೇಶನ್” ವತಿಯಿಂದ ಪ್ರತಿ ವಾರದಂತೆ ಈ ವಾರವು ಅನ್ನ ಸಂತರ್ಪಣೆ

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ ಗೋಕಾಕ : ತಾಲೂಕಿನ ಹಿರೇನಂದಿ ಗ್ರಾಮದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆಯಲ್ಲಿ ಆವರಣದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಿಸಿದರು.   ಕಾರ್ಖಾನೆಯಲ್ಲಿ ಆವರಣದಲ್ಲಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮೂಲಕ ಜಯಂತಿಯನ್ನು ಆಚರಿಸಿ ನಂತರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರು ಮಾತನಾಡಿ ಸೃಷ್ಟಿ ಮತ್ತು ಸೃಷ್ಟಿಯ ಸಂಕೇತ, ಕರಕುಶಲತೆಯಲ್ಲಿ ಅತ್ಯುನ್ನತ, ಶಿಲ್ಪಿ, ವಿಶ್ವಕರ್ಮ …

Read More »

2013-17ರಲ್ಲೂ ಪಿಎಸ್‌ಐ ನೇಮಕಾತಿ ಅಕ್ರಮ: ಬಿಜೆಪಿ

ಬೆಂಗಳೂರು: 2013ರಲ್ಲಿ ನಡೆದ ಪಿಎಸ್‌ಐ ಮತ್ತು ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದರ ಬಗ್ಗೆ ಮಾಹಿತಿ ಕಲೆಹಾಕಿದ್ದು, ಅವುಗಳ ತನಿಖೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ಪಿ.ರಾಜೀವ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘2013 ರಲ್ಲಿ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಪರೀಕ್ಷೆಯನ್ನೇ ಬರೆಯದ ಹಲವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅಂಥವರು ಕರ್ತವ್ಯಕ್ಕೂ ಹಾಜರಾಗಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಇದರ ಸುಳಿವು ಪಡೆದು ವರದಿ …

Read More »

ಆನಂದ ಮಾಮನಿ ಅನಾರೋಗ್ಯದ ಹಿನ್ನೆಲೆ ಬೆಳಗಾವಿಯಲ್ಲಿ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು ಮೃತ್ಯುಂಜಯ ಯಾಗ ಹೋಮಾ, ಉರುಳು ಸೇವೆ,

ಬೆಳಗಾವಿ: ಸವದತ್ತಿ ವಿಧಾನಸಭಾ ಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಅವರ ಅಭಿಮಾನಿಗಳು ಉರುಳು ಸೇವೆ, ಮೃತ್ಯುಂಜಯ ಯಾಗ ಹೋಮ ಮಾಡಿದ್ದಾರೆ.   ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಶಾಸಕ ಆನಂದ ಮಾಮನಿ ಗುಣಮುಖರಾಗಲಿ, ಆರೋಗ್ಯವಂತರಾಗಿ ಬರಲಿ ಎಂದು ಸವದತ್ತಿ ಕ್ಷೇತ್ರದ ಅವರ ಅಭಿಮಾನಿಗಳು ವಿಶೇಷ ಪೂಜೆ, ಉರುಳು ಸೇವೆ, ಮೃತ್ಯುಂಜಯ ಯಾಗ ಹೋಮ ಮಾಡಿದ್ದಾರೆ.

Read More »

ಮಹಡಿಯಿಂದ ಬಿದ್ದು ಬಾಲಕಿ ಸಾವು: ಅಂತ್ಯಸಂಸ್ಕಾರಕ್ಕೆ ನೆರವಾದ ಮುಸ್ಲಿಂ ಮುಖಂಡರು

ಬೆಳಗಾವಿ: ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದು ಗಾಯಗೊಂಡಿದ್ದ ಬಾಲಕಿ ಗುರುವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಉಡುಪಿ ಮೂಲದವರಾದ, ಕೆಲ ವರ್ಷಗಳಿಂದ ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ವಾಸವಾಗಿದ್ದ ವಿದ್ಯಾಶ್ರೀ ಹೆಗಡೆ (10) ಮೃತಪಟ್ಟ ಬಾಲಕಿ. ಗುರುವಾರ ಬೆಳಿಗ್ಗೆ ಮಹಡಿ ಮೇಲೆ ಹತ್ತಿ ಹೂವು ಕೀಳಲು ಹೋದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದಳು. ತೀವ್ರ ಗಾಯಗೊಂಡಿದ್ದ ಬಾಲಕಿಯನ್ನು ಇಲ್ಲಿನ ಮುಸ್ಲಿಂ ಸಮುದಾಯದ ಕೆಲವರು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ಸೇರಿದ್ದರು. …

Read More »

ಸಿದ್ದರಾಮೋತ್ಸವದಲ್ಲಿ ಮಿಸ್ಸಿಂಗ್​ ಆಗಿದ್ದ ಜಮಖಂಡಿ ವ್ಯಕ್ತಿ ಹುಬ್ಬಳ್ಳಿಯಲ್ಲಿ ಕೊನೆಗೂ ಪತ್ತೆ! ನಿಜವಾಯ್ತು ಸಿದ್ದು ‘ಭವಿಷ್ಯ’

ಬಾಗಲಕೋಟೆ: ಸಿದ್ದರಾಮೋತ್ಸವಕ್ಕೆ ತೆರಳಿ ನಾಪತ್ತೆಯಾಗಿದ್ದ ಬಾಗಲಕೋಟೆಯ ಗಿರಿಮಲ್ಲ ಖಂಡೇಕರ್ ಎಂಬುವವರು ಕೊನೆಗೂ ಒಂದೂವರೆ ತಿಂಗಳ ಬಳಿಕ ಕೊನೆಗೂ ಪತ್ತೆಯಾಗಿದ್ದಾರೆ. ಜಮಖಂಡಿ ತಾಲೂಕಿನ ಅಡಿಹುಡಿ ಗ್ರಾಮದ ನಿವಾಸಿ ಗಿರಿಮಲ್ಲ ಖಂಡೇಕರ್ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾರೆ. ಕಳೆದ ಅಗಸ್ಟ್​ 2 ರಂದು ಗ್ರಾಮಸ್ಥರ ಜತೆಗೆ ಇವರು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಆದರೆ ಮನೆಗೆ ವಾಪಸಾಗಿರಲಿಲ್ಲ. ಅಡಿಹುಡಿ ಗ್ರಾಮದಿಂದ ಬಸ್ ಮೂಲಕ 50 ಜನ ತೆರಳಿದ್ದ ಇವರು ವಾಪಸಾಗದೇ ಮನೆಯವರೆಲ್ಲರೂ ಚಿಂತೆಗೀಡಾಗಿದ್ದರು. ‘ದುಡ್ಡಿನ ಆಮಿಷ …

Read More »

ವಿಮ್ಸ್ ಆಸ್ಪತ್ರೆ ದುರಂತ: ಮೃತ ಮೂವರು ರೋಗಿಗಳ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಬಳ್ಳಾರಿ/ಬೆಂಗಳೂರು: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸಾವನ್ನಪ್ಪಿರುವ ಮೂವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ ಕೆ.ಆರ್.ವೃತ್ತದ ಯುವಿಸಿಇಯಲ್ಲಿ ಆಯೋಜಿಸಿದ್ದ ವಿಶ್ವೇಶ್ವರಯ್ಯ ಇಂಜಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ ಲೋಕಾರ್ಪಣೆ ಹಾಗೂ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ 162ನೇ ಜನ್ಮ ದಿನೋತ್ಸವದ ನಿಮಿತ್ತ ನಡೆದ ಅಭಿಯಂತರರ ದಿನಾಚರಣೆಯನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿದರು. …

Read More »

ಅಭಯ್ ಪಾಟೀಲ್ ಸುಳ್ಳು ಕೇಸ್‍ನಲ್ಲಿ ನನ್ನ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ: ಸುಜೀತ್ ಮುಳಗುಂದ ಆರೋಪ

ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಖೊಟ್ಟಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ನನಗೆ ಸೂಕ್ತ ರಕ್ಷಣೆ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೌದು 2012ರಲ್ಲಿ ಶಾಸಕ ಅಭಯ್ ಪಾಟೀಲ್ ವಿರುದ್ಧ ಕಾನೂನು ಬಾಹಿರವಾಗಿ ಆಸ್ತಿ ಗಳಿಸಿದ ಕುರಿತು ಲೋಕಾಯುಕ್ತ ನ್ಯಾಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ದೂರು ನೀಡಿದ್ದಾರೆ. ಇದರಿಂದ ಶಾಸಕ ಅಭಯ್ ಪಾಟೀಲ್ ಸುಮಾರು ಬಾರಿ …

Read More »