ಚಿಕ್ಕೋಡಿ:ನಗರದ ಶ್ರೀ ಮಹಾದೇವ ತ್ರಿಲಿಂಗ ದೇವಾಲಯದ ನೂತನ ರಥೋತ್ಸವ ಮತ್ತು ಕಳಸದ ಪುರ ಪ್ರವೇಶ ಕಾರ್ಯಕ್ರಮವು ಉತ್ಸಾಹದಿಂದ ಜರುಗಿತು. ಶ್ರೀ ಶೈಲ ಜಗದ್ಗುರು ಡಾ! ಚನ್ನಸಿಧ್ದ ರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ, ಚಿಕ್ಕೋಡಿಯ ಸಂಪದನಾ ಮಹಾಸ್ವಾಮಿಜಿ, ಕಬ್ಬೂರು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮಿಜಿ ಹಾಗೂ ಎಂಎಲ್ಸಿ ಪ್ರಕಾಶ ಹುಕ್ಕೇರಿ ಅವರ ದಿವ್ಯ ಸಾನಿಧ್ಯದಲ್ಲಿ ಚಿಕ್ಕೋಡಿ ನಗರ ಬಸನಿಲ್ದಾಣದಿಂದ ಮಹಾದೇವ ದೇವಾಲಯಕ್ಕೆ …
Read More »ವಿಕಸಿತ ಭಾರತ ಸಾಧಿಸುವ ಗುರಿ
ಕಲಬುರಗಿ: ಕೇಂದ್ರ ಬಜೆಟ್ ಭವಿಷ್ಯಕ್ಕೆ ಪೂರಕವಾಗಿದ್ದು, ವಿಕಸಿತ ಭಾರತದ ಗುರಿ ಹೊಂದಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು. ವಿವಿಯಲ್ಲಿ ವ್ಯವಹಾರ ಅಧ್ಯಯನ ನಿಕಾಯ ಸೋಮವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವ್ಯವಹಾರ ಅಧ್ಯಯನ ವಿದ್ಯಾರ್ಥಿಗಳಿಗೆ ಬಜೆಟ್ ಚರ್ಚೆ ತುಂಬ ಪ್ರಮುಖ ವಿಷಯ. ಬಜೆಟ್, ಭಾರತೀಯ ಆರ್ಥಿಕತೆ ಮತ್ತು ವ್ಯವಹಾರದ ಮೇಲೆ ಅದರ ಪ್ರಭಾವ ವಿಶ್ಲೇಷಿಸಬೇಕು. ಈಗ ಭಾರತ ವಿಶ್ವದಲ್ಲಿ ಅತ್ಯಂತ ಬಲಿಷ್ಠ ಆರ್ಥಿಕತೆಯಾಗಿದೆ. …
Read More »ನಕಲಿ ದಾಖಲೆ ಸೃಷ್ಟಿ ಸಬ್‌ರಜಿಸ್ಟ್ರಾರ್ ಬಂಧನ
ಚಿಕ್ಕೋಡಿ:ನಕಲಿ ದಾಖಲೆ ಸೃಷ್ಟಿಸಿ ಜಮೀನು ಖರೀದಿ, ಮಾರಾಟ ಮಾಡಿಸಿದ ಆರೋಪದಡಿ ಹುಕ್ಕೇರಿ ತಾಲೂಕಿನ ಉಪನೋಂದಣಿ ಅಧಿಕಾರಿ ಮಡಿವಾಳಯ್ಯ ಬಾನಿಮಠ (34), ಬಾಂಡ್ ರೈಟರ್ ಆನಂದ ದಡ್ಡಿಮನಿ(35) ಪೊಲೀಸರು ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದಲ್ಲಿರು 2.1 ಎಕರೆ ಜಮೀನಿಗೆ ಬಂಧಿತರು ನಕಲಿ ದಾಖಲೆ ಸೃಷ್ಟಿಸಿ ಹುಕ್ಕೇರಿ ಉಪನೋಂದಣಿ ಕಚೇರಿಯಲ್ಲಿ ಬೇರೆ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಮಾಡಿಸಿ ಮಾರಾಟ ಮಾಡಿದ್ದರು. ಈ ಅಕ್ರಮಕ್ಕೆ ಉಪನೋಂದಣಿ ಅಧಿಕಾರಿ ಸೇರಿ ಹಲವರು ಭಾಗಿಯಾಗಿರುವ ಕುರಿತು …
Read More »ಚಿಕ್ಕೋಡಿ ತಾಲೂಕಿನ 4 ಏತ ನೀರಾವರಿ ಯೋಜನೆಗೆ 2 ಕೋಟಿ ಅನುದಾನ ಮಂಜೂರು: ಎಂಎಲ್ಸಿ ಪ್ರಕಾಶ ಹುಕ್ಕೇರಿ
ಚಿಕ್ಕೋಡಿ:ನನ್ನ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯ ಇಂಗಳಿ ಗ್ರಾಮದ-2 ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮಗಳ ಒಟ್ಟು 04 ಏತ ನೀರಾವರಿ ಯೋಜನೆಗಳ 159 ಎಕರೆ ಜಮೀನುಗಳಿಗೆ ರೂ. 2.00 ಕೋಟಿಗಳ ಅನುದಾನ ಮಂಜೂರಾಗಿದೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಂಜೂರಾದ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ ಅವರು ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯಲ್ಲಿ ಇಂಗಳಿ, ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮದ …
Read More »ಪರಸ್ಪರ ಒಪ್ಪಿಗೆಯಿಂದ ಪ್ರೇಮವಿವಾಹ ಇಬ್ಬರ ಸಾವಿಗೆ ಕಾರಣ
ಚಿಕ್ಕೋಡಿ: ಪರಸ್ಪರ ಒಪ್ಪಿಗೆಯಿಂದ ಯುವಕ-ಯುವತಿ ಮಾಡಿಕೊಂಡ ಪ್ರೇಮವಿವಾಹ ಇಬ್ಬರ ಸಾವಿಗೆ ಕಾರಣವಾಗಿದೆ. ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಠಾಣೆ ವ್ಯಾಪ್ತಿಯ ಕಮತನೂರಿನ ಪ್ರೇಮಿಗಳಿಬ್ಬರೂ ಕುಟುಂಬಸ್ಥರಿಗೆ ತಿಳಿಯದಂತೆ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ. ತಂಗಿ ಮನೆತನದ ಕಳೆದಿದ್ದಾಳೆಂದು ಬೇಸರಗೊಂಡು ವಧುವಿನ ಅಣ್ಣ ಪ್ರಶಾಂತ ನಿಕ್ಕಂ(೨೫)ಬುಧವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾದ ಯುವಕನನ್ನು ಪ್ರೀತಿಸುತ್ತಿದ್ದ ಮತ್ತೋರ್ವ ಯುವತಿ ಕಮತನೂರ ಗ್ರಾಮದ ರಕ್ಷಿತಾ ಕಾಂಬಳೆ (20), ತನಗೆ ಮೋಸವಾಗಿದೆ ಎಂಬ ನೋವಿನಿಂದ ಅದೇ …
Read More »ಚಿಕ್ಕೋಡಿ ಕೆ ಎಲ್ ಇ ಕಾಲೇಜಿಗೆ ನಾವೀನ್ಯ ಪ್ರಯೋಗಾಲಯ ರಚನೆಗೆ 1.25 ಕೋಟಿ ರೂಪಾಯಿ ಅನುದಾನ
ಚಿಕ್ಕೋಡಿಯ ಕೆ.ಎಲ್.ಇ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸಾಯನ್ಸ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಿನೋದ ಬಿರಾದರ (ಪ್ರಿನ್ಸಿಪಾಲ್ ಇನವೆಸ್ಟಿಗೆಟರ್) ಹಾಗೂ ಇಲೆಕ್ಟ್ರಾನಿಕ್ಸ್ ಆಯ್ಯಂಡ್ ಕಮ್ಯುನಿಕೆಶನ್ ವಿಭಾಗದ ಪ್ರಾಧ್ಯಾಪಕರಾದ ಡಾ. ಸಂಜಯ ಪುಜಾರಿ (ಕೊ-ಪ್ರಿನ್ಸಿಪಾಲ್ ಇನವೆಸ್ಟಿಗೆಟರ್) ಇವರು ಪ್ರಸ್ತಾಪಿಸಿದ ಇಂಟೆಲಿಜೆನ್ಸ್ ಸಿಸ್ಟಮ್ ಆಯ್ಯಂಡ್ ಕಾಗ್ನಿಟಿವ್ ಕಂಪ್ಯೂಟಿಂಗ್ ವಿಷಯದ ನಾವೀನ್ಯ ಪ್ರಯೋಗಾಲಯ ರಚನೆಗೆ ಸಲ್ಲಿಸಿದ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಐಟಿ-ಬಿಟಿ ವಿಭಾಗವು ಲಿಪ್ ಯೋಜನೆಯಡಿ 1.25 ಕೋಟಿ ರೂಪಾಯಿ ಅನುದಾನವನ್ನು …
Read More »ಕೋಣದ ಬರ್ತ್‌ಡೇಗೆ 300 ಜನಕ್ಕೆ ಊಟ, 10 ಕೇಜಿ ಕೇಕ್,ಚಿಕ್ಕೋಡಿ ತಾಲೂಕಿನ ಚಿಕ್ಕಲವಾಳ ಗ್ರಾಮದಲ್ಲಿ ಅಪರೂಪದ ಆಚರಣೆ
ಮನೆ ಮಗನಂತೆ ಬೆಳೆಸಿದ ಕೋಣದ ಒಂದು ವರ್ಷದ ಜನ್ಮದಿನ ಆಚರಿಸುವ ಮೂಲಕ ಚಿಕ್ಕಲವಾಳ ಗ್ರಾಮದ ಯುವಕ ಮಾದರಿಯಾಗಿದ್ದಾನೆ. ಗ್ರಾಮದ ಕೂಲಿಕಾರ ಸಂಜಯ ರಾಮಚಂದ್ರ ಸಠಾಲೆ(30) ಮನೆಯಲ್ಲಿ ಐದು ಎಮ್ಮೆಗಳನ್ನು ಸಾಕಿದ್ದಾರೆ. ಕಬ್ಬು ಕಟಾವು ಹಂಗಾಮಿನಲ್ಲಿ ಕೂಲಿ ಕಾರ್ಮಿಕನಾಗಿ ಕಾರ್ಯ ಮಾಡುವ ಇವರಿಗೆ ಇರುವುದು ಕೇವಲ 10 ಗುಂಟೆ ಜಮೀನು ಮಾತ್ರ. ಬೇರೆಯವರ ಜಮೀನಿನಿಂದ ಎಮ್ಮೆಗಳಿಗೆ ಮೇವು ತಂದು ಸಲಹುತ್ತಾರೆ. ಗುಜರಾತಿನ ಮುರ್ರಾ ಜಾತಿ ಎಮ್ಮೆಗಳನ್ನು ಸಾಕಿರುವ ಇವರು ಒಂದು ಎಮ್ಮೆಗೆ …
Read More »ಚಿಕ್ಕೋಡಿ ಜಿಲ್ಲೆ ಮಾಡಿದಲ್ಲಿ,ಅಂಬೇಡ್ಕರ್ ಎಂದು ಹೆಸರಿಡಿ
ಚಿಕ್ಕೋಡಿ ಜಿಲ್ಲೆ ಮಾಡಿದಲ್ಲಿ,ಅಂಬೇಡ್ಕರ್ ಎಂದು ಹೆಸರಿಡಿ ಚಿಕ್ಕೋಡಿ : ಬೆಳಗಾವಿ ಜಿಲ್ಲೆ ವಿಭಜಿಸಿ ನೂತನ ಜಿಲ್ಲೆಯನ್ನಾಗಿ ಮಾಡಿದಲ್ಲಿ ಚಿಕ್ಕೋಡಿಗೆ ಬಾಬಾಸಾಹೇಬ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲೆಯನ್ನಾಗಿ ನಾಮಕರಣ ಮಾಡುವಂತೆ ಒತ್ತಾಯಿಸಿ ಡಾ.ಅಂಬೇಡ್ಕರ ಜನ ಜಾಗೃತಿ ಸೇವಾ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚಿಕ್ಕೋಡಿ ನೆಲದಲ್ಲಿ ಡಾ.ಅಂಬೇಡ್ಕರ ಅವರು ನಡೆದಾಡಿರುವ ಇತಿಹಾಸವಿದೆ. ಅವರ ಹೆಸರು ನಾಮಕರಣ ಮಾಡಿದಲ್ಲಿ ಕಾಂಗ್ರೆಸ್ ಸರಕಾರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದರು. ಚಿಕ್ಕೋಡಿ ಜಿಲ್ಲೆಗಾಗಿ ದಲಿತಪರ …
Read More »ಒಂದು ಎಕರೆಗೆ 180 ಟನ್ ಕಬ್ಬು ಇಳುವರಿ,ಮಾಜಿ ಶಾಸಕ ಶಾಮ ಘಾಟಕೆಯವರ ಪ್ರಗತಿಪರ ಕೃಷಿ
ಚಿಕ್ಕೋಡಿ:ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಮಾಜಿ ಶಾಸಕ ಶಾಮ ಘಾಟಗೆಯವರ ಜಮೀನಿನಲ್ಲಿ ಎಕರೆಗೆ 180 ಟನ್ ಕಬ್ಬು ಬೆಳೆಸಿ ದಾಖಲೆ ನಿರ್ಮಿಸಿ,ಇತರ ರೈತರಿಗೆ ಮಾದರಿಯಾಗಿದ್ದಾರೆ. ಮಾಜಿ ಶಾಸಕ ಶಾಮ ಘಾಟಗೆಯವರು ಕೇವಲ ಒಬ್ಬ ರಾಜಕಾರಣಿ ಆಗದೆ, ಕೃಷಿಯಲ್ಲೂ ಅಷ್ಟೇ ಆಸಕ್ತಿಯಿಂದ ಮುತುವರ್ಜಿ ವಹಿಸಿ ಎಕರೆಗೆ 180 ಟನ್ ಕಬ್ಬು ಬೆಳೆದು ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಒಂದು ಎಕರೆ ಜಮೀನಿನಲ್ಲಿ 40 ಟನ್ ಹಸಿ ಮೆಣಸಿನಕಾಯಿ, ಒಂದು ಎಕರೆ ಜಮೀನಿನಲ್ಲಿ …
Read More »ಚಿಕ್ಕೋಡಿ ಜಿಲ್ಲೆ ರಚನೆಗೆ ಬಹಳ ದಿನ ಹಿಡಿಯಲ್ಲ: ಸಚಿವ ಹೆಚ್.ಕೆ.ಪಾಟೀಲ್
ಚಿಕ್ಕೋಡಿ: “ಚಿಕ್ಕೋಡಿ ಜಿಲ್ಲಾ ರಚನೆಗೆ ಈಗಾಗಲೇ ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿಗಳೊಂದಿಗೆ ಸಭೆ ಮಾಡಿದ್ದಾರೆ. ಮುಂದಿನ ಹೆಜ್ಜೆಗಳನ್ನಿಡಲು ಬೇಗ ಪ್ರಕ್ರಿಯೆ ಆರಂಭವಾಗಬಹುದು” ಎಂದು ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು. ಚಿಕ್ಕೋಡಿ ನ್ಯಾಯಾಲಯದ ನೂತನ ಕಟ್ಟಡ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಈ ಕುರಿತಾಗಿ ಸಿಎಂ ಸಿದ್ದರಾಮಯ್ಯನವರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ ಮಾಡಿದ್ದಾರೆ. ಸಚಿವರೂ ಕೂಡ ಚಿಕ್ಕೋಡಿ, ಬೆಳಗಾವಿ, ಗೋಕಾಕ್ ಜನರೊಂದಿಗೆ ಸಭೆ ನಡೆಸಿದ್ದಾರೆ” ಎಂದರು. …
Read More »
Laxmi News 24×7