ಆರೋಗ್ಯ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಹರ್ಷ ಗುಪ್ತ ಸಾಹೇಬರ ವರ್ಗಾವಣೆ ಸರ್ಕಾರದ ಅತ್ಯಂತ ಕೆಟ್ಟ ನಿರ್ಧಾರವಾಗಿದೆ ಎಂದು ಸತ್ಯಪ್ಪ ವಿಷಾದ ವ್ಯಕ್ತಪಡಿಸಿದರು. ಈ ಬಗ್ಗೆ ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಅವರು ಮಾತನಾಡಿ ಶ್ರೀ ಹರ್ಷ ಗುಪ್ತ ಸಾಹೇಬರು ತಮ್ಮ 30 ವರ್ಷಗಳ ಸೇವಾ ಅವಧಿಯಲ್ಲಿ 26 ಬಾರಿ ಏಕಾಏಕಿ ವರ್ಗಾವಣೆಯಾಗಿದ್ದು ಈ ಬಾರಿಯೂ ಸರ್ಕಾರ ಆರೋಗ್ಯ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದ …
Read More »ಖಾನಾಪುರ ಗ್ರಾಮದ ಶಿವಲಿಂಗ ಹಾದಿಮನಿ ನಿಧನ
ಗೋಕಾಕ ತಾಲೂಕಿನ ಖಾನಾಪುರ ಗ್ರಾಮದ ಹಿರಿಯರು ಹಾಗೂ ಗೌರವಾನ್ವಿತ ಪಂಚರಾದ ಶಿವಲಿಂಗ ಹಾದಿಮನಿ ಅವರು ನಿಧನ ಹೊಂದಿದ್ದಾರೆ. ಅವರ ಅಗಲಿಕೆಯಿಂದ ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಗ್ರಾಮಸ್ಥರಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸರಳ ಸ್ವಭಾವ, ಸಮಾಜಮುಖಿ ಚಿಂತನೆ ಮತ್ತು ಗ್ರಾಮಾಭಿವೃದ್ಧಿಗೆ ಮಾಡಿದ ಸೇವೆಗಳ ಮೂಲಕ ಅವರು ಎಲ್ಲರ ಮನಗಳಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ದೊರಕಲಿ.
Read More »ಅಂತರರಾಜ್ಯ ಕಳ್ಳನ ಬಂಧನ : 7 ಬೈಕ್ ಜಪ್ತಿ
ಗೋಕಾಕ : ಅಂತರರಾಜ್ಯ ಬೈಕ್ ಕಳ್ಳನನ್ನು ಬಂಧಿಸಿರುವ ಗೋಕಾಕ ಶಹರ ಪೊಲೀಸರು, ₹3.84 ಲಕ್ಷ ಮೌಲ್ಯದ 7 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ. ಕೋಲ್ಹಾಪೂರ ಜಿಲ್ಲೆಯ ಗಡಹಿಂಗ್ಲಜ.ಹಾಲಿವಾಸ ರಾಮದುರ್ಗ ತಾಲೂಕಿನ ಕಡಕೋಳ ಗ್ರಾಮದ ರಮೇಶ ಮನೋಹರ ಸುತಾರ (36) ಬಂಧಿತ ಕಳ್ಳ. ಮಾ 30 ರಂದು ನಗರದ ಬಸ್ ನಿಲ್ದಾಣದಲ್ಲಿ ಬೈಕ್ ಕಳುವಾಗಿತ್ತು. ಈ ಕುರಿತು ಗೋಕಾಕ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಪತ್ತೆಗೆ ವಿಶೇಷ ತಂಡ …
Read More »ಸಾವಳಗಿಯಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿ – ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಭಕ್ತರ ಅಪಾರ ಸ್ಪಂದನೆ
ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಶೂನ್ಯ ಸಿಂಹನಾದೀಶ್ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸನ್ನಿಧಿ ಸಿದ್ದ ಸಂಸ್ಥಾನ ಪೀಠ ಸುಕ್ಷೇತ್ರ ಸಾವಳಗಿ .ಮಹಾಸನ್ನಿದಿ ಅವರ ನೇತೃತ್ವದಲ್ಲಿ ಭಕ್ತಿಭಾವ ಮತ್ತು ವೈಭವದೊಂದಿಗೆ ಅದ್ದೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಅಭಿಷೇಕಗಳು ನೆರವೇರಿದವು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ …
Read More »ಶಾಸಕ ರಮೇಶ ಜಾರಕಿಹೊಳಿ ಅವರಿಂದ ದೈವಿ ವನ ನಿರ್ಮಾಣ ಕಾಮಗಾರಿಗೆ ಚಾಲನೆ
ಗೋಕಾಕ: ನಗರದ ಜನತೆ ಮತ್ತು ಭಕ್ತರಿಗಾಗಿ ಶ್ರೀ ಚೌಡೇಶ್ವರಿ ದೈವಿ ವನ ನಿರ್ಮಾಣ ಮಾಡಲಾಗುತ್ತಿದೆ. ಗೋಕಾಕ ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತಿರುವದಾಗಿ ಶಾಸಕ ರಮೇಶ ಜಾರಕಿಹೊಳಿ ತಿಳಿಸಿದರು. ಅವರು, ನಗರದ ಕಡಬಗಟ್ಟಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಸುಮಾರು ೧ಕೋಟಿ ರೂಗಳ ವೆಚ್ಚದಲ್ಲಿ ಅರಣ್ಯ ಇಲಾಖೆಯಿಂದ ಶುಕ್ರವಾರದಂದು ಚೌಡೇಶ್ವರಿ ದೈವಿ ವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಗೋಕಾಕ ನಗರ ಹಾಗೂ ತಾಲೂಕಿನ ಅಭಿವೃದ್ಧಿಗಾಗಿ ಅನೇಕ ಜನಪರ …
Read More »ಕೆಇಬಿ ನಿರ್ಲಕ್ಷ್ಯ: ಮೂರು ಲಕ್ಷ ಮೌಲ್ಯದ ಟಿವಿ, ಫ್ರಿಜ್ ಹಾನಿ
ಗೋಕಾಕ: ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕೆಇಬಿ (ವಿದ್ಯುತ್ ಇಲಾಖೆ) ನಿರ್ಲಕ್ಷ್ಯದಿಂದಾಗಿ ದೊಡ್ಡ ಮಟ್ಟದ ಆರ್ಥಿಕ ನಷ್ಟ ಸಂಭವಿಸಿದೆ. ಅಚಾನಕ್ ವಿದ್ಯುತ್ ವೋಲ್ಟೇಜ್ ಏರಿಳಿತದಿಂದ ಮನೆಗಳಲ್ಲಿ ಬಳಸುತ್ತಿದ್ದ ಟಿವಿ, ಫ್ರಿಜ್ ಸೇರಿದಂತೆ ಅನೇಕ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಸ್ಥಳೀಯರ ಮಾಹಿತಿ ಪ್ರಕಾರ, ಸುಮಾರು ₹3 ಲಕ್ಷ ಮೌಲ್ಯದ ಟಿವಿ ಮತ್ತು ಫ್ರಿಜ್ ಉಪಕರಣಗಳು ಸಂಪೂರ್ಣವಾಗಿ ಸುಟ್ಟು ಹಾಳಾಗಿವೆ. ವಿದ್ಯುತ್ ಸರಬರಾಜಿನಲ್ಲಿ ನಿಯಂತ್ರಣದ ಕೊರತೆ ಮತ್ತು ಸರಿಯಾದ ನಿರ್ವಹಣೆಯಿಲ್ಲದೆ ಈ ಘಟನೆ ಸಂಭವಿಸಿದೆ …
Read More »ಕ್ಷೇತ್ರದಲ್ಲಿ ಎಲ್ಲ ಸಮುದಾಯ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕೆಲಸ
ಗೋಕಾಕ: ಸಾಮಾಜಿಕ ನ್ಯಾಯದ ರೂವಾರಿ ಬಸವಣ್ಣನವರ ಅನುಭವ ಮಂಟಪದ ಮಾದರಿಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಎಲ್ಲ ಸಮುದಾಯ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗೋಕಾಕ ತಾಲೂಕಿನ ತಳಕಟ್ಟನಾಳ ಗ್ರಾಮದಲ್ಲಿ ಬುಧವಾರ ವಿವಿಧ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಅರಬಾವಿ ಕ್ಷೇತ್ರದಲ್ಲಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಜಾತಿ, ಮತ, ಪಂಥಗಳ ಬೇಧ ಭಾವ ಮಾಡದೇ ಬಸವಣ್ಣನವರ ತತ್ವಾದರ್ಶ ಅಳವಡಿಸಿಕೊಂಡು ಜನೋಪಯೋಗಿ ಕೆಲಸ ಮುಂದುವರೆಸಿಕೊಂಡು …
Read More »ಅಂಕಲಗಿ ಘಟಕ ಹೋಮ್‌ಗಾರ್ಡಗೆ ಮುಖ್ಯಮಂತ್ರಿಗಳ ಸೇವಾ ಪದಕ ಶಾಸಕರಿಂದ ಸತ್ಕಾರ
ಗೋಕಾಕ: ತಾಲೂಕಿನ ಅಂಕಲಗಿ ಘಟಕ ಹೋಮ್‌ಗಾರ್ಡ ಆಗಿರುವ ಹೊಳೆಪ್ಪಾ ಬಸವಣ್ಣಿ ನೇಸರಗಿ ಅವರಿಗೆ ೨೦೨೫ರ ಮುಖ್ಯಮಂತ್ರಿಗಳ ಸೇವಾ ಪದಕ ದೊರೆತಿರುವುದಕ್ಕಾಗಿ ಶಾಸಕ ರಮೇಶ ಜಾರಕಿಹೊಳಿ ಅವರು ನಗರದ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು. ಹೊಳೆಪ್ಪಾ ನೇಸರಗಿ ಅವರ ಸಮರ್ಪಣಾ ಮನೋಭಾವವನ್ನು ಗುರುತಿಸುವುದು ಮತ್ತು ಪ್ರೋತ್ಸಾಹಿಸುವುದು. ದೀರ್ಘಕಾಲದ ಸೇವೆ ಬಂದೋಬಸ್ತ್ ಕರ್ತವ್ಯ, ತುರ್ತು ಸಂದರ್ಭಗಳಲ್ಲಿ ಅಗ್ನಿ ಸುರಕ್ಷತೆ, ಮತ್ತು ಶೌರ್ಯ ಪ್ರದರ್ಶಿಸಿದ ಕಾರಣ ಸಿಎಂ ಪದಕ ಲಭಿಸಿದ್ದು ಇಂಥಹ ಸಿಬ್ಬಂದಿಗಳಿಗೆ …
Read More »ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲಿ
ಮಮದಾಪುರ: ಕತ್ತಲದಿಂದ ಅಧರ್ಮ ಜ್ಯೋತಿ ಮಾಯವಾಗಿ ಬೆಳಕಿನಡೆಗೆ ಧರ್ಮದ ಜ್ಯೋತಿ ನಿರಂತರವಾಗಿ ಬೆಳಗಲಿ ಎಂದು ನದಿ ಇಂಗಳಗಾಂವನ ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಗುರುಲಿಂಗ ಜಂಗಮ ಮಠದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯುಗಾದಿ ಮಹೋತ್ಸವ, ಶರಣ ಸಂಸ್ಕೃತಿ ಹಾಗೂ ಪ್ರವಚನ ಮಂಗಲೋತ್ಸವದ ಧರ್ಮಸಭೆಯಲ್ಲಿ ಮಾತನಾಡಿದರು. ಮುರುಘೇಂದ್ರ ಶಿವಯೋಗಿಗಳು ಅಥಣಿಯಿಂದ ಅಂಕಲಗಿ ಅಡವಿಸಿದ್ದೇಶ್ವರ ಮಠದವರೆಗೆ ಪಾದಯಾತ್ರೆ ಮೂಲಕ ಸಂಚರಿಸುವ ಸಂದರ್ಭದಲ್ಲಿ ತೆಪ್ಪೋತ್ಸವ ನೆರವೇರಿಸಿದ ಕೊಳವಿ ಗ್ರಾಮದ ಗುರುಲಿಂಗ ಜಂಗಮ …
Read More »ರಂಜಾನ್ ವೇಳೆ 1 ತಿಂಗಳ ಕಠಿಣ ಉಪವಾಸ ಮಾಡಿದ 10ವರ್ಷದ ಬಾಲಕ,6 ವರ್ಷದ ಬಾಲಕಿ!
ಘಟಪ್ರಭಾ: ಪವಿತ್ರ ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ಹನಿ ನೀರು ಕುಡಿಯದೆ ಮುಸ್ಲಿಂ ಬಾಂಧವರು ಕಟ್ಟುನಿಟ್ಟಾದ ಉಪವಾಸ ಪಾಲನೆ ಮಾಡುತ್ತಾರೆ.ಇಂತಹ ಕಠಿಣ ಉಪವಾಸ ಒಂದು ತಿಂಗಳವರೆಗೆ ಮಾಡೋದು ಕೆಲವೊಂದು ಸಲ ದೊಡ್ಡವರಿಗೂ ಕಷ್ಟವಾಗುತ್ತದೆ.ಆದರೆ,ಇಂತಹ ಕಠಿಣ ಉಪವಾಸವನ್ನು ಒಂದು ತಿಂಗಳವರೆಗೆ ಕಟ್ಟು ನಿಟ್ಟಾಗಿ ಆಚರಿಸುವ ಮೂಲಕ ಘಟಪ್ರಭಾ ಪಟ್ಟಣದಲ್ಲಿ ಇಬ್ಬರು ಸಹೋದರ,ಸಹೋದರಿ ಗಮನ ಸೆಳೆದಿದ್ದಾರೆ. ಘಟಪ್ರಭಾ ಪಟ್ಟಣದ ಬಸವ ನಗರದದಲ್ಲಿರುವ ಫಾರೂಖ್ ಅತ್ತಾರ ಎಂಬುವರ ಮಕ್ಕಳಾದ 10ವರ್ಷದ ಪುತ್ರ ಫಹೀಮ್ ಹಾಗೂ …
Read More »
Laxmi News 24×7