Breaking News

ಬೆಂಗಳೂರು

ಫ್ಲೈಓವರ್​ ಮೇಲೆ ಭೀಕರ ಅಪಘಾತ; ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಇಬ್ಬರು ಸ್ಥಳದಲ್ಲೇ ಸಾವು..

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದ್ದು, ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಇಬ್ಬರ ದೇಹಗಳು ಛಿದ್ರಗೊಂಡಿವೆ. ಫ್ಲೈ ಓವರ್ ಮೇಲೆ ಓವರ್ ಟೇಕ್​ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ವೇಗವಾಗಿ ಬಂದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನಕ್ಕೂ ಅಪ್ಪಳಿಸಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಕೂಡ ತೀರ ಜಖಂಗೊಂಡಿದ್ದು, ಸ್ಥಳಕ್ಕೆ ಪರಪ್ಪನ …

Read More »

ತಿಂಗಳಿಗೆ ಮೂರು ಲೀಟರ್‌ ಸೀಮೆಎಣ್ಣೆ ವಿತರಣೆ: ಕತ್ತಿ

ಬೆಂಗಳೂರು: ಸಮರ್ಪಕ ವಿದ್ಯುತ್‌ ಸಂಪರ್ಕ ಹೊಂದಿಲ್ಲದ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುತ್ತಿರುವ ಪಡಿತರ ಕುಟುಂಬಗಳಿಗೆ ದೀಪ ಉರಿಸುವ ಉದ್ದೇಶಕ್ಕೆ ವಿತರಿಸುತ್ತಿರುವ ಸೀಮೆಎಣ್ಣೆ ಪ್ರಮಾಣವನ್ನು 3 ಲೀಟರ್‌ಗಳಿಗೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಉಮೇಶ ಕತ್ತಿ ತಿಳಿಸಿದರು. ಪರಿಷತ್‌ನಲ್ಲಿ ಬಿಜೆಪಿಯ ಶಾಂತರಾಮ ಸಿದ್ದಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ‘ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಪಡಿತರ ಕುಟುಂಬಗಳಿಗೆ ಅಡುಗೆಗಾಗಿ ತಿಂಗಳಿಗೆ ತಲಾ 3 ಲೀಟರ್‌ …

Read More »

ಅಧಿವೇಶನ ಆರಂಭದ ಮೊದಲ ದಿನವೇ ಹನ್ನೊಂದು ಐಎಎಸ್ ಅಧಿಕಾರಿಗಳ ವರ್ಗಾವಣೆ:ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆ. 14: ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮೇಜರ್ ಸರ್ಜರಿ ಮಾಡಿದ್ದಾರೆ. ಅಧಿವೇಶನ ಆರಂಭದ ಮೊದಲ ದಿನವೇ ಹನ್ನೊಂದು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆಯಕಟ್ಟಿನ ಜಾಗಕ್ಕೆ ದಕ್ಷ ಹಾಗೂ ಅನುಭವವುಳ್ಳ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರವನ್ನು ಕೈಗೆ ತೆಗೆದುಕೊಳ್ಳುವ ಸರ್ಕಸ್ ಮಾಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆಯುಕ್ತರಾಗಿದ್ದ ಅನ್ಬುಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಆ …

Read More »

ಪೆಟ್ರೊಲ್‌, ಡಿಸೇಲ್‌ ಜಿಎಸ್‌ಟಿ ವ್ಯಾಪ್ತಿಗೆ ತರಲು ಕಾಂಗ್ರೆಸ್‌ ಹೋರಾಟ ಮಾಡಲಿ: ಸಿಟಿ ರವಿ

ಬೆಂಗಳೂರು: ಕಾಂಗ್ರೆಸ್‌ ನವರಂತೆ ದೇಶದ ಚಿನ್ನವನ್ನ ಪ್ರಧಾನಿ ಮೋದಿ ಅವರು ಅಡ ಇಟ್ಟಿಲ್ಲ. ಬೆಲೆ ಏರಿಕೆ ಮಾಡಿ ಮೋದಿ ಅವರು ಭ್ರಷ್ಟಾಚಾರ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‌ ನಿಂದಾದ ಬದಲಾವಣೆಗಳು, ಜಾಗತಿಕ ಮಟ್ಟದಲ್ಲಿ ಹಣದುಬ್ಬರದಿಂದಾಗಿ ಬೆಲೆ ಏರಿಕೆಯಾಗಿದೆ. ಅತಿ ಹೆಚ್ಚು ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿದೆ. ಕಾಂಗ್ರೆಸ್‌ಗೆ ಬೆಲೆ ಏರಿಕೆ ಬಗ್ಗೆ ಮಾತಾಡುವ ನೈತಿಕತೆ …

Read More »

ಎತ್ತಿನಹೊಳೆ ಯೋಜನೆ ಅನುಷ್ಠಾನ: ಬೊಮ್ಮಾಯಿ

https://laxminews24x7.com/bvlaxminews-58312-2/   ಬೆಂಗಳೂರು: ಎತ್ತಿನ ಹೊಳೆ ಯೋಜನೆ ಅನುಷ್ಠಾನ ವಿಚಾರದಲ್ಲಿ ಅಡೆತಡೆ ನಿವಾರಿ ಸಲು ಶೀಘ್ರ ಸಭೆ ಕರೆದು ಇತ್ಯರ್ಥಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ಯಲ್ಲಿ ಭರವಸೆ ನೀಡಿದ್ದಾರೆ. ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಡಾ| ಜಿ. ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಡಾ| ಜಿ. ಪರಮೇಶ್ವರ್‌ ಪ್ರಸ್ತಾವಕ್ಕೆ ಮಧ್ಯಪ್ರವೇಶಿಸಿ ಉತ್ತರ ನೀಡಿದ ಬೊಮ್ಮಾಯಿ ಅವರು ಯೋಜನೆ ಜಾರಿ ಬಗ್ಗೆ ಯಾವುದೇ ಅನುಮಾನ ಬೇಡ, ನಮ್ಮ ಸರಕಾರ …

Read More »

ಚರ್ಚ್,‌ಮಸೀದಿ ಬಿಟ್ಟು ದೇವಸ್ಥಾನಗಳ ಮೇಲೆ ಯಾಕೆ ಅಧಿಕಾರಿಗಳ ಕಣ್ಣು : ರೇಣುಕಾಚಾರ್ಯ ಕಿಡಿ

ಬೆಂಗಳೂರು: ಮೈಸೂರಿನಲ್ಲಿ ದೇಗುಲಗಳ ತೆರವು ಕಾರ್ಯದಿಂದ ಸಾಕಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಸ್ವಪಕ್ಷದವರೇ ಈ ಕಾರ್ಯಕ್ಕೆ ವಿರೋಧಿಸಿದ್ದಾರೆ. ಇದೀಗ ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಸಕ ಎಂಪಿ ರೇಣುಕಾಚಾರ್ಯ, ಗುಡುಗಿದ್ದಾರೆ. ಚರ್ಚ್, ಮಸೀದಿ ಬಿಟ್ಟು ಯಾಕೆ ಅಧಿಕಾರಿಗಳು ಕೇವಲ ದೇವಾಲಯಗಳನ್ನೇ ಟಾರ್ಗೆಟ್ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ದೇವಸ್ಥಾನದ ಮೇಲೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡೋದು ಸರಿಯಲ್ಲ. ಈಗಾಗಲೇ 1700 ದೇಗುಲ‌ನೆಲಸಮ ಮಾಡೋದಕ್ಕೆ ನೋಟಿಫಿಕೇಷನ್ ಬಂದಿದೆ. ನಮಗೆ ಚರ್ಚ್, ಮಸೀದಿ ಒಂದೇ. ಆದ್ರೆ …

Read More »

‘ನಿನಗೆ ಕನ್ನಡ ಪದಗಳು ಗೊತ್ತಾಗಲ್ಲ’: ದೇಶಪಾಂಡೆ ಕಿಚಾಯಿಸಿದ ಸಿದ್ದು

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಆಸ್ಕರ್‌ ಪರ್ನಾಂಡಿಸ್‌ ಅವರ ನಿಧನದ ಸಂತಾಪ ಸೂಚಕದ ಮೇಲಿನ ಚರ್ಚೆ ವೇಳೆ ಆರ್.ವ್ಹಿ.ದೇಶಪಾಂಡೆ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಚಾಯಿಸಿದ್ದರೆ. ‘ನಿನ್ಗೆ ಅನೇಕ ಕನ್ನಡದ ಪದಗಳು ಗೊತ್ತಾಗಲ್ಲ ದೇಶಪಾಂಡೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಫರ್ನಾಂಡಿಸ್‌ ಅವರು ಕೇಂದ್ರದಲ್ಲಿ ಸರ್ಫೇಸ್‌ ಟ್ರಾನ್ಸ್‌ ಪೋರ್ಟ್‌ ಮಿನಿಸ್ಟರ್ ಇದ್ದರು ಎಂದು ಹೇಳಿದ್ದರು ಅದನ್ನ ನೆನಪಿಸಿಕೊಂಡ ಸಿದ್ದರಾಮಯ್ಯ, ಅದು ಕನ್ನಡದಲ್ಲಿ ಅದನ್ನು ‘ಭೂ ಸಾರಿಗೆ’ ಎಂದು ಹೇಳುತ್ತಾರೆ ಎಂದರು. …

Read More »

ಬೆಳಗ್ಗೆ ಎದ್ದು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ದೇವಸ್ಥಾನ ಒಡೆಯುತ್ತಿದ್ದಾರೆ: ರೇವಣ್ಣ

ಬೆಂಗಳೂರು: ಬೆಳಗ್ಗೆ ಎದ್ದರೆ ನಾವು ಹಿಂದೂ ಹಿಂದೂ ಎನ್ನುವ ಬಿಜೆಪಿಯವರು ಇದೀಗ ಹಿಂದೂ ದೇವಸ್ಥಾನ ಒಡೆಯುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡಿನ ದೇವಸ್ಥಾನಕ್ಕೆ‌ ತನ್ನದೇ ‌ಇತಿಹಾಸ‌ವಿದೆ. ಪುರಾತನ ಕಾಲದಲ್ಲಿ‌ ದೇವಸ್ಥಾನ ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಬೇಡವೆಂದು ಹೇಳುತ್ತಿಲ್ಲ. ಆದರೆ ದೇವಸ್ಥಾನ ಸಮಿತಿ ಜೊತೆ ಚರ್ಚಿಸಬೇಕು. ಪರ್ಯಾಯ ದೇವಸ್ಥಾನ ನಿರ್ಮಿಸಿ ನಂತರ ತೆರವು ಮಾಡಲಿ ಎಂದರು. ಜೆಡಿಎಸ್ ಇಲ್ಲದೆ …

Read More »

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ: ಈ ವಾಹನಗಳ ಸಂಚಾರಕ್ಕೆ ನಿರ್ಬಂಧ

ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿ ಕಾಮಗಾರಿ ಶುರುವಾಗಲಿದ್ದು, ದ್ವಿಚಕ್ರ ವಾಹನ, ಆಟೋ ಹಾಗೂ ಟ್ರ್ಯಾಕ್ಟರ್‌ಗಳ ಓಡಾಟವನ್ನು ನಿಷೇಧಿಸಲಾಗಿದೆ. ಯೋಜನೆಗಾಗಿ ಒಟ್ಟು 8,172 ಕೋಟಿ ರೂ. ವ್ಯಯಿಸುತ್ತಿದ್ದು, 2022ರ ಅಕ್ಟೋಬರ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ನೀಡಲಾಗಿದೆ. ಈ ಕಾಮಗಾರಿ ಮುಗಿದಲ್ಲಿ ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಈಗಿರುವ 3 ಗಂಟೆಗೆ ಬದಲಾಗಿ 90 ನಿಮಿಷಕ್ಕೆ ಇಳಿಯಲಿದೆ. 2019ರಿಂದ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ದಶಪಥಗಳ ಹೆದ್ದಾರಿ ವಿಸ್ತರಣೆ …

Read More »

ಹಿಂದಿ ಹೇರಿಕೆ ಖಂಡಿಸಿ ಟ್ವಿಟರ್ ಅಭಿಯಾನ, ಕನ್ನಡಿಗರು ಕೈ ಜೋಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮನವಿ

ಬೆಂಗಳೂರು: ಸೆಪ್ಟೆಂಬರ್ 14ರಂದು ದೇಶಾದ್ಯಂತ ಹಿಂದಿ ದಿವಸ್(Hindi Diwas) ಆಚರಣೆ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಟ್ವಿಟರ್ನಲ್ಲಿ ದೇಶದ ಜನತೆಗೆ ಹಿಂದಿ ದಿನದ ಶುಭಾಶಯ ಕೋರಿದ್ದಾರೆ. ಆದ್ರೆ ಹಿಂದಿ ದಿವಸ್ ಹಾಗೂ ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದಿಯನ್ನು ಹಿಂದಿಯೇತರ ಭಾಷಿಕ ಸಮುದಾಯಗಳ ಮೇಲೆ ಹೇರುವ ಒಕ್ಕೂಟ ಸರ್ಕಾರದ ದುರುದ್ದೇಶ ಖಂಡಿಸಿ ಕರ್ನಾಟಕ …

Read More »