Breaking News

ಬೆಂಗಳೂರು

ರಾಜ್ಯದ ಉಚಿತ ಬಸ್​ ವ್ಯವಸ್ಥೆ ಅವಧೀ ಮುಗಿದಿದೆ.ಒಂದು ವಾರದಲ್ಲಿ ಬೆಂಗಳೂರಿನಿಂದ ಊರುಗಳತ್ತ ತೆರಳಿದ 1,‌08,300 ಕಾರ್ಮಿಕರು

ದೇಶಾದ್ಯಂತ ಮೇ 17ರವರೆಗೆ ಲಾಕ್ ಡೌನ್ ಮುಂದುವರಿಸಲಾಗಿದೆ. ಕೆಲ ರಿಯಾಯಿತಿಗಳನ್ನು ನೀಡಲಾಗಿದ್ದು, ರಾಜ್ಯದೊಳಗಿನ ಕಾರ್ಮಿಕರು ತಮ್ಮ ತಮ್ಮ ಮನೆಗಳಿಗೆ ಸೇರಲಾರಂಭಿಸಿದ್ದಾರೆ. ಆದರೆ, ರಾಜ್ಯದಲ್ಲಿ ಸಿಲುಕಿಕೊಂಡಿರುವ ಹೊರ ರಾಜ್ಯದ ಕಾರ್ಮಿಕರು ಗೋಳು ಕೇಳುವವರೇ ಇಲ್ಲದಂತಾಗಿದೆ. ಬೆಂಗಳೂರು(ಮೇ.08): ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಆದೇಶ ಮೇರೆಗೆ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 1,‌08,300 ಕಾರ್ಮಿಕರನ್ನು ಕೆಎಸ್​ಆರ್​​ಟಿ ಬಸ್​ಗಳಲ್ಲಿ ಸ್ಥಳಾಂತರ ಮಾಡಲಾಗಿದೆ. ಸುಮಾರು 3610 ಬಸ್​ಗಳಲ್ಲಿ ವಲಸೆ ಕಾರ್ಮಿಕರು …

Read More »

ಪಾದಾರಾಯನಪುರದಲ್ಲಿ 35 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕನಿಗೆ ಡೆಡ್ಲಿ ವೈರಸ್ ದೃಢ

ಬೆಂಗಳೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಗುರುವಾರ ಒಂದೇ ದಿನ ಏಳು ಮಂದಿಗೆ ಕಿಲ್ಲರ್ ಕೊರೊನಾ ದೃಢವಾಗಿದೆ. ಶಿವಾಜಿನಗರದಲ್ಲಿ ನಾಲ್ವರಿಗೆ, ಪಾದರಾಯನಪುರದಲ್ಲಿ ಇಬ್ಬರಿಗೆ ಮತ್ತು ಯಶವಂತಪುರದಲ್ಲೂ ಓರ್ವರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ ಪಾದರಾಯನಪುರದಲ್ಲಿ ಮತ್ತೆ ಕೊರೊನಾ ರಣಕೇಕೆ ಹಾಕುತ್ತಿದೆ. ಪಾದಾರಾಯನಪುರದಲ್ಲಿ 35 ವರ್ಷದ ಮಹಿಳೆ ಮತ್ತು 23 ವರ್ಷದ ಯುವಕನಿಗೆ ಡೆಡ್ಲಿ ವೈರಸ್ ದೃಢವಾಗಿದೆ. ಬೇರೆ ಬೇರೆ ಮನೆಗಳಲ್ಲಿ ಇದ್ದ …

Read More »

ಹೊರ ರಾಜ್ಯದಿಂದ ಬೆಂಗ್ಳೂರಿಗೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಫಿಕ್ಸ್

ಬೆಂಗಳೂರು: ಹೊರರಾಜ್ಯಗಳಿಂದ ಬೆಂಗಳೂರಿಗೆ ಸಾಕಷ್ಟು ಮಂದಿ ಬರುತ್ತಿರುವ ಹಿನ್ನೆಲೆ ಅವರಿಂದ ನಗರದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಬೆಂಗಳೂರು ಜಿಲ್ಲಾಡಳಿತ ಹೊಸ ಪ್ಲಾನ್ ಮಾಡಿದೆ. ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬರುವವರಿಗೆ ಕಡ್ಡಾಯವಾಗಿ ಕೈಗೆ ಸ್ಟಾಂಪಿಂಗ್ ಮಾಡಲಾಗುತ್ತದೆ. ಅವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರಲೇಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಹೊರ ರಾಜ್ಯದವರಿಂದ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು …

Read More »

ಅಬಕಾರಿ ಸುಂಕ ಏರಿಕೆ – ಮದ್ಯ ಮಾರಾಟ ಇಳಿಕೆ……

ಬೆಂಗಳೂರು: ಸಿಎಂ ಯಡಿಯೂರಪ್ಪ ಮದ್ಯದ ಮೇಲೆ ಶೇ.17 ಅಬಕಾರಿ ಸುಂಕ ವಿಧಿಸಿದ ಬೆನ್ನಲ್ಲೇ ಬುಧವಾರಕ್ಕೆ ಹೋಲಿಸಿದ್ದಲ್ಲಿ ಮದ್ಯ ಮಾರಾಟ ಇಳಿಕೆಯಾಗಿದೆ. ಬುಧವಾರ ಒಟ್ಟು 230 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದ್ದರೆ ಗುರುವಾರ ಒಟ್ಟು 165 ಕೋಟಿ ರೂ. ಮದ್ಯ ಮಾರಾಟವಾಗಿದೆ ಎಂದು ಕೆಎಸ್‍ಬಿಸಿಎಲ್ (ಕರ್ನಾಟಕ ಪಾನೀಯ ನಿಯಮ) ತಿಳಿಸಿದೆ. ಇಂದು 152 ಕೋಟಿ ರೂ. ಮೌಲ್ಯದ 27.56 ಲಕ್ಷ ಲೀಟರ್ ಇಂಡಿಯನ್ ಮೇಡ್ ಲಿಕ್ಕರ್(ಐಎಂಎಲ್), 13 ಕೋಟಿ ಮೌಲ್ಯದ …

Read More »

15 ರಜೆ ಮುಗಿಸಿ ಕೆಲಸಕ್ಕೆ ಬಂದ ಮಹಿಳೆ – 2ನೇ ದಿನವೇ ಅನುಮಾನಾಸ್ಪದವಾಗಿ ಸಾವು

ಬೆಂಗಳೂರು: ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಇಂಡ್ಲವಾಡಿ ರಸ್ತೆಯ ಸ್ಟ್ರೈಡ್ಸ್ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಇಂಡ್ಲವಾಡಿ ಮೂಲದ ಮಂಜುಳಾ (26) ಮೃತ ಮಹಿಳೆ. ಮೃತ ಮಂಜುಳಾ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಬಂದಿದ್ದು, ನಂತರ ಸಾವನ್ನಪ್ಪಿದ್ದಾಳೆಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹದಿನೈದು ದಿನ ವಿತರಣೆ ಪಾಳಿಯಂತೆ ರಜೆಯಲ್ಲಿದ್ದು, ಬುಧವಾರ ಕೆಲಸಕ್ಕೆ ಹಾಜರಾಗಿದ್ದಳು. ಎಂದಿನಂತೆ …

Read More »

ಇಂದು 12 ಮಂದಿಗೆ ಕೊರೊನಾ- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ

– ಬಾಗಕೋಟೆಯ ರೋಗಿ-607ರಿಂದ ಮೂವರಿಗೆ ಕೊರೊನಾ – ದಾವಣಗೆರೆಯಲ್ಲಿ ಕೊರೊನಾಗೆ ಮತ್ತೊಂದು ಸಾವು – ಬೆಳಗಾವಿಯ 13ರ ಬಾಲಕಿಗೆ ಸೋಂಕು ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು 12 ಮಂದಿಗೆ ಕೊರೊನಾ ಕಾಣಿಸಿಕೊಂಡಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆಯಾಗಿದೆ. ದಾವಣಗೆರೆಯ 55 ವರ್ಷದ ಮಹಿಳೆ (ರೋಗಿ-694) ಕೊರೊನಾಗೆ ಇಂದು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ದಾವಣಗೆರೆಯಲ್ಲಿ ಈವರೆಗೂ ಕೊರೊನಾದಿಂದ ನಾಲ್ವರು …

Read More »

ಕಂಠಪೂರ್ತಿ ಕುಡಿದವ್ರ ಕಿಕ್ಕಿಳಿಸಿದ ರಾಜ್ಯ ಸರ್ಕಾರ……..

ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದ ಒಂದೂವರೆ ತಿಂಗಳ ಬಳಿಕ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ಕೊಟ್ಟಿತ್ತು. ಇದೀಗ ಎಣ್ಣೆ ಮತ್ತಿನಲ್ಲಿ ತೇಲಾಡುತ್ತಿದ್ದ ಮದ್ಯಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ. ಮದ್ಯದ ಮೇಲೆ ಕೋವಿಡ್ -19 ಸೆಸ್ ವಿಧಿಸಲಾಗಿದೆ. ಇಂದಿನಿಂದ ಮದ್ಯದ ಹೊಸದರ ಜಾರಿಗೆ ಬರಲಿದೆ. ಸರ್ಕಾರ ಅವಕಾಶ ಕೊಟ್ಟಿದ್ದೆ ತಡ ವೈನ್ ಶಾಪ್, ಎಂಆರ್‌ಪಿ ಶಾಪ್ ಎದುರು ಅಪಾರ ಜನರು ಸೇರುತ್ತಿದ್ದಾರೆ. ಮಧ್ಯಾಹ್ನ ಎನ್ನದೇ ಮದ್ಯಪ್ರಿಯರು ಕಾದುನಿಂತು ಎಣ್ಣೆ ತೆಗೆದುಕೊಂಡು ಹೋಗಿದ್ದಾರೆ. ಸಂಜೆಯಾಗುತ್ತಲೇ …

Read More »

78 ವರ್ಷದ ವೃದ್ಧ ಕೊರೊನಾದಿಂದ ಗುಣಮುಖ…….

ಬೆಂಗಳೂರು: 78 ವರ್ಷದ ವೃದ್ಧ ಕೊರೊನಾದಿಂದ ಗುಣಮುಖರಾಗಿ ವಿಕ್ಟೋರಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗುಜರಾತ್ ಮೂಲದ ವೃದ್ಧ ಕರ್ನಾಟಕದಲ್ಲೇ ವಾಸವಾಗಿದ್ದರು. ಮೊದಲು ವೃದ್ಧನಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಾದಾಗ ಕೋವಿಡ್-19 ಸೋಂಕು ತಗುಲಿರೋದು ದೃಢಪಟ್ಟಿತ್ತು. ತಮ್ಮ ಆತ್ಮಮನೋಬಲದಿಂದ ಡೆಡ್ಲಿ ಕೊರೊನಾಗೆ ಸೆಡ್ಡು ಹೊಡೆದು ಬಂದಿದ್ದಾರೆ. ಮಾರ್ಚ್ 1ಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಮಾರ್ಚ್ 17ರಂದು ಗುಣಮುಖರಾಗಿ ಹೊರ ಬಂದಿದ್ದರು. ತಮಗೆ ಹೇಗೆ ಚಿಕಿತ್ಸೆ ನೀಡಲಾಯ್ತು ಎಂಬಿತ್ಯಾದಿ …

Read More »

‘ಸಾಲ ತೀರಿಸಬೇಕು, ಬಾಡಿಗೆ ಕಟ್ಟಬೇಕು, ಕೆಲಸಗಾರರಿಗೆ ಸಂಬಳ ನೀಡಬೇಕು‘: ನಮಗೂ ಎಣ್ಣೆ ಮಾರಲು ಅವಕಾಶ ಕೊಡಿ ಎಂದು ಸಿಎಂಗೆ ಬಾರ್​ ಮಾಲೀಕರ ಮನವಿ

ಬೆಂಗಳೂರು: ಕೊರೋನಾ ಲಾಕ್​ಡೌನ್​​ ನಡುವೆಯೇ ಕೊನೆಗೂ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಎರಡು ದಿನಗಳಿಂದ ಮಹಿಳೆಯರು ಮತ್ತು ಪುರುಷರು ಎನ್ನದೇ ಎಲ್ಲಾ ವಯೋಮಾನದವರು ಬೆಳಿಗ್ಗೆ 7 ಗಂಟೆಯಿಂದಲೇ ವೈನ್ ಸ್ಟೋರ್​​ಗಳು, ಎಂಆರ್​​ಪಿ ಎಣ್ಣೆ ಅಂಗಡಿಗಳ ಮುಂದೆ ನಿಂತು ಮದ್ಯ ಖರೀದಿ ಮಾಡುತ್ತಿದ್ದಾರೆ. ಕೊರೋನಾ ವೈರಸ್​​ ಕಾರಣ ಮದ್ಯಪ್ರಿಯರು ಸರತಿ ಸಾಲಿನಲ್ಲಿ ನಿಂತು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವುದು ನೋಡುತ್ತಿದ್ದೇವೆ. ಹೀಗಿರುವಾಗ ರಾಜ್ಯದಲ್ಲಿ ಎಂಆರ್​​ಪಿ ಹಾಗೂ ಎಂಎಸ್​ಐಎಲ್ ಮಳಿಗೆಗಳಲ್ಲಿ ಮಾತ್ರ ಮದ್ಯ …

Read More »

ಬಾರ್, ರೆಸ್ಟೋರೆಂಟ್ ಸದ್ಯಕ್ಕೆ ಓಪನ್ ಮಾಡಲ್ಲ: ಸಚಿವ ನಾಗೇಶ್

ಬೆಂಗಳೂರು, : ಮೂರನೇ ಅವಧಿಯ ಲಾಕ್ಡೌನ್ ನಡುವೆಯೂ ಷರತ್ತುಗಳ ನಡುವೆ ಮೇ.04ರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರವು ಸಂಪೂರ್ಣ ಅನುಮತಿ ನೀಡಿದೆ. ಎಂಎಸ್ಐಎಲ್ ಹಾಗೂ ವೈನ್ ಶಾಪ್ ಮೂಲಕ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ಭರ್ಜರಿ ಗಳಿಕೆಯೂ ಆಗುತ್ತಿದೆ. ಆದರೆ, ಇದರ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬುತ್ತಿದೆ. ಆದ್ರೆ, ಇದೆಲ್ಲವೂ ಸತ್ಯಕ್ಕೆ ದೂರವಾಗಿದ್ದು, ಈ ಬಗ್ಗೆ …

Read More »