Breaking News

ಬೆಂಗಳೂರು

ಸಿಲಿಕಾನ್ ಸಿಟಿಯ ಸ್ಥಿತಿ ದಿನದಿನಕ್ಕೆ ಘನಘೋರು, ಒಂದೇ 24 ಮಂದಿ ಕೊರೊನಾಗೆ ಬಲಿ

ಬೆಂಗಳೂರು: ಸಿಲಿಕಾನ್ ಸಿಟಿಯ ಸ್ಥಿತಿ ದಿನದಿನಕ್ಕೆ ಘನಘೋರವಾಗುತ್ತಿದೆ. ದೆಹಲಿ, ಮುಂಬೈನಂತೆ ಬೆಂಗಳೂರು ಕೂಡ ಕೊರೊನಾ ಸಾವಿನ ಕೂಪವಾಗುತ್ತಾ ಅನ್ನೊ ಅನುಮಾನ ಶುರುವಾಗಿದೆ. ರಾಜ್ಯದಲ್ಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಬೆಂಗಳೂರೇ ಬಹುಪಾಲು ಪಡೆದಿದೆ. ಮಹಾನಗರಿ ಬೆಂಗಳೂರಲ್ಲಿ ಶತಕದಾಚೆಗೆ ಜಿಗಿದಿರೋ ಕೊರೊನಾ ಹೆಮ್ಮಾರಿ ಬರೋಬ್ಬರಿ 1,172 ಮಂದಿಗೆ ವಕ್ಕರಿಸಿದೆ. ಸಾವುಗಳ ಸಂಖ್ಯೆ ಸಹ ಎಲ್ಲಾ ದಾಖಲೆ ಮುರಿದಿದೆ. ಬೆಂಗಳೂರಲ್ಲಿಂದು 24 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾಗೆ ಹೆದರಿ ಜನ ಬೆಂಗಳೂರು ಬಿಡುತ್ತಿರುವಾಗಲೇ ಕೊರೊನಾ …

Read More »

ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ

ಬೆಂಗಳೂರು: ಪ್ರಸಕ್ತ ವರ್ಷದ ಮೂರನೇ ಚಂದ್ರಗ್ರಹಣ ಅಂದ್ರೆ ಗುರು ಪೂರ್ಣಿಮೆ ದಿನವೇ ಸಂಭವಿಸಲಿದೆ. ಅರೆನೆರಳಿನ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ, ಬೆಳಗ್ಗೆ 9.59ಕ್ಕೆ ಪೂರ್ಣ ಗೋಚರ ಕಂಡು, ಬೆಳಗ್ಗೆ 11.37ಕ್ಕೆ ಗ್ರಹಣ ಮೋಕ್ಷ ಕಾಣಲಿದೆ. ಒಟ್ಟು 2 ಗಂಟೆ 45 ನಿಮಿಷಗಳ ಕಾಲ ಚಂದ್ರನಿಗೆ ಗ್ರಹಣ ಹಿಡಿಯಲಿದೆ. ಆದರೆ ಭಾರತದಲ್ಲಿ ಈ ಚಂದ್ರಗ್ರಹಣ ಗೋಚರಿಸುವುದಿಲ್ಲ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ. ಜೋತಿಷ್ಯ ಶಾಸ್ತ್ರದ …

Read More »

ರಾಜ್ಯದಲ್ಲಿ ಇಂದು 1839 ಜನರಿಗೆ ಕೊರೋನಾ

ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸಂಖ್ಯೆ ಸರಣಿ ಮುಂದುವರೆದಿದೆ. ರಾಜ್ಯದಲ್ಲಿ ಇಂದು 1839 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 21549ಕ್ಕೆ ಏರಿಕೆಯಾಗಿದೆ. ಇವರಲ್ಲಿ 9244 ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 11966 ಆಗಿದೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ …

Read More »

ಲಾಕ್ ಡೌನ್ : ಎಣ್ಣೆಗಾಗಿ ಮಗುಬಿದ್ದ ಮದ್ಯಪ್ರಿಯರು..

ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೇ, ಜನರು ಮಾತ್ರ ಯಾವುದೇ ಭಯವಿಲ್ಲದೇ ಓಡಾಡುತ್ತಿದ್ದಾರೆ. ಭಾನುವಾರದ ದಿನವಾದ ನಾಳೆ ಸಂಪೂರ್ಣ ಲಾಕ್ ಡೌನ್ ಇರುವ ಕಾರಣದಿಂದಾಗಿ, ಮದ್ಯಪ್ರಿಯರು ಮಾತ್ರ ನಾಳೆ ಎಲ್ಲಿ ಎಣ್ಣೆ ಸಿಗೋದಿಲ್ಲವೋ ಎನ್ನುವಂತೆ ಬಾರ್, ವೈನ್ ಶಾಪ್ ಗಳ ಮುಂದೆ ಕ್ಯೂ ನಿಂತು ಮದ್ಯ ಖರೀದಿಸಲು ಮುಗಿ ಬಿದ್ದಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಂದೆಡೆ ಆದ್ರೇ.. ಸೋಂಕಿನ ಭೀತಿಯಿಂದ ತಮ್ಮ ಊರುಗಳತ್ತ ಗುಳೇ …

Read More »

ಎಂಎಲ್‍ಸಿ ಪುಟ್ಟಣ ಅವರಿಗೂ ಕೊರೊನಾ ಸೋಂಕು

ಬೆಂಗಳೂರು: ಎಂಎಲ್‍ಸಿ ಪುಟ್ಟಣ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಪುಟ್ಟಣ ಅವರು ನಿಮ್ಮ ಆಶೀರ್ವಾದದಿಂದ ಬೇಗ ಗುಣಮಖನಾಗಿ ಬರುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜ್ವರ ಇದ್ದುದರಿಂದ, ಕ್ವಾರಂಟೈನ್ ನಲ್ಲಿ ಇದ್ದೆ. ಗುರುವಾರ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ತಪಾಸಣೆಯ ವರದಿ ಪಾಸಿಟಿವ್ ಬಂದಿರುವುದರಿಂದ ಶುಕ್ರವಾರ ಅಂದರೆ ನಿನ್ನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದೇವರ …

Read More »

ಕೊರೊನಾ ಭಯಕ್ಕೆ ಗಂಟುಮೂಟೆ ಸಮೇತ ಊರಿಗೆ ಹೊರಟ ಜನ

ಬೆಂಗಳೂರು: ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಇತ್ತ ಕೊರೊನಾ ಭಯದಿಂದ ಮತ್ತು ಭಾನುವಾರ ಕರ್ಫ್ಯೂ ಜಾರಿಯಾಗುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ. ಬೆಂಗಳೂರಿಗರು ಮತ್ತೆ ಲಾಕ್‍ಡೌನ್ ಆಗುತ್ತೆ ಎಂಬ ಭಯದಲ್ಲಿ ತಮ್ಮ ತಮ್ಮ ಸ್ವ-ಗ್ರಾಮಕ್ಕೆ ತೆರಳುತ್ತಿದ್ದಾರೆ. ಅನೇಕರು ಗಂಟು ಮೂಟೆ ಸಮೇತ ಊರುಗಳತ್ತ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ನವಯುಗ ಟೋಲ್ ಬಳಿ ಕಿಲೋಮೀಟರ್ ದೂರದವರೆಗೂ …

Read More »

ಇಬ್ಬರು ಆಂಕರ್ ಗಳಿಗೆ ಹಾಗೂ ಇಬ್ಬರು ಕ್ಯಾಮರಾಮನ್ ಗಳಿಗೆ ಸೋಂಕು

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು,  ಇಬ್ಬರು ಆಂಕರ್ ಗಳಿಗೆ ಹಾಗೂ ಇಬ್ಬರು ಕ್ಯಾಮರಾಮನ್ ಗಳಿಗೆ ಸೋಂಕು ತಗುಲಿದೆ. ರಾಜ್ಯಮಟ್ಟದ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಮಹಿಳಾ ಆಂಕರ್ ಗಳಿಗೆ ಮತ್ತು ಇಬ್ಬರು ಕ್ಯಾಮರಾ ಮನ್ ಗಳಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಅವರನ್ನು ನಿಗದಿತ ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರ ಜೊತೆ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸಿ ಕ್ವಾರಂಟೈನ್ ಗೆ …

Read More »

ರಾಜ್ಯಾದ್ಯಂತ ಜುಲೈ 4 ರಿಂದ 7 ರವರೆಗೆ ಭಾರೀ ಮಳೆ: ಹವಾಮಾನ ಇಲಾಖೆ

ಹವಾಮಾನ ಇಲಾಖೆ ರಾಜ್ಯದ ಜನತೆಗೆ ಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಕರಾವಳಿ ಜಿಲ್ಲೆಗಳಲ್ಲಿ ಜುಲೈ 4 ರಿಂದ 7 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಇನ್ನೂ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ಉತ್ತರ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, …

Read More »

ಶಿವಣ್ಣ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳದಿರಲು ನಿರ್ಧಾರಿಸಿದ್ದಾರೆ.

ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಈಗಾಗಲೇ ಅನೇಕ ನಟರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೀಗ ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರು ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದೇ ತಿಂಗಳ 12ರಂದು ಶಿವಣ್ಣ ಅವರ ಹುಟ್ಟುಹಬ್ಬವಿದೆ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳು ಶಿವಣ್ಣ ಅವರ ಮುಂದೆ ಜಮಾಯಿಸುತ್ತಿದ್ದರು. ಹೂವಿನ ಹಾರ, ಕೇಕ್ ತಂದು ಸಂಭ್ರಮಿಸುತ್ತಿದ್ದರು. ಆದರೆ ಈ ಕೊರೊನಾದಿಂದ ಯಾವುದೇ ಸಂಭ್ರಮಕ್ಕೂ …

Read More »

ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ………..

ರಾಜ್ಯದ ಹಲವೆಡೆ ಮುಂಗಾರು ಮಳೆ ಆರಂಭವಾಗಿದ್ದು, ಮೋಡ ಕವಿದ ವಾತಾವರಣ ಇರಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಳೆಯಾಗುವ ಸಾಧ್ಯತೆ ಇದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ …

Read More »