Breaking News

ಬೆಂಗಳೂರು

ಯುಜಿಸಿಇಟಿ ದಾಖಲೆ ಅಪ್‌ಲೋಡ್‌ ಪ್ರಕ್ರಿಯೆ ಮುಂದೂಡಿಕೆ

ಬೆಂಗಳೂರು: ಈಗ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ನಡೆಯುತ್ತಿರುವ ಹಿನ್ನೆಲೆಯಲ್ಲಿ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿಇಟಿ) ದಾಖಲೆಗಳನ್ನು ಅಪ್‌ಲೋಡ್‌ ಮಾಡುವ ಪ್ರಕ್ರಿಯೆಯನ್ನು ಮುಂದೂಡಲಾಗಿದೆ.     ಈ ಕುರಿತು ಟ್ವೀಟ್‌ ಮಾಡಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು, ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಪರಿಷ್ಕೃತ ವೇಳಾಪಟ್ಟಿಯನ್ನು ಇದೇ 5ರಂದು ಪ್ರಕಟಿಸಲಾಗುವುದು ಎಂದು ಅವರು ಸೂಚಿಸಿದ್ದಾರೆ. http://kea.kar.nic.in ಇಲ್ಲಿ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳ ಗಮನಕ್ಕೆ …

Read More »

ಸಿಎಂ ಅಧ್ಯಕ್ಷತೆಯಲ್ಲಿಂದು ಸಂಪುಟ ಸಭೆ: ಮಹತ್ವದ ಎರಡು ತೀರ್ಮಾನಗಳ ಸಾಧ್ಯತೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗವನ್ನು 2020-23ರವರೆಗೆ ಮುಂದುವರಿಕೆ ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ-2020ಕ್ಕೆ ಅನುಮೋದನೆ ಪಡೆಯುವುದು ಸೇರಿದಂತೆ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಗುರುವಾರ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಈ ಸಭೆಯಲ್ಲಿ ಖಾಸಗಿ ವೈದ್ಯಕಿಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ಮಂಡನೆಗೆ ನಿರ್ಧರಿಸಲಾಗಿದೆ. ಕೊರೋನಾ ಸಂದರ್ಭದಲ್ಲಿ …

Read More »

ಜಿಎಸ್‌ಟಿ ನಷ್ಟ ಭರ್ತಿಗೆ 11324 ಕೋಟಿ ರೂ ಸಾಲ.: ಕೇಂದ್ರದ ಒಂದನೇ ಆಯ್ಕೆ ಒಪ್ಪಿದ ರಾಜ್ಯ!

ಬೆಂಗ: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪರಿಹಾರದ ಕುರಿತು ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಪೈಕಿ ರಾಜ್ಯಕ್ಕೆ ಹೆಚ್ಚು ಅನುಕೂಲವಾಗುವ ಮೊದಲನೇ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಈ ಪ್ರಕಾರ, 18,289 ಕೋಟಿ ಪರಿಹಾರ ಪಡೆಯಲು ತೀರ್ಮಾನಿಸಿದೆ. 18,289 ಕೋಟಿ ರು,ಅಥವಾ 25,508 ಕೋಟಿ ರು. ಪರಿಹಾರದ 2 ಆಯ್ಕೆಗಳನ್ನು ಕೇಂದ್ರ ಸರ್ಕಾರ ನೀಡಿತ್ತು. ಈ ಕುರಿತ ಮೌಲ್ಯಮಾಪನ ಮಾಡಿದ ಬಳಿಕ ರಾಜ್ಯದ ಹಣಕಾಸುಗಳಿಗೆ ಅನುಕೂಲವಾಗುವ ಒಟ್ಟು …

Read More »

GST: ಸಾಲದ ‘ಆಯ್ಕೆ’: ಹೆಚ್ಚು ಸಾಲ ಪಡೆಯಲು ಆಯ್ಕೆ-1 ಆರಿಸಿದ ರಾಜ್ಯ ಸರಕಾರ

ಬೆಂಗಳೂರು: ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ನೀಡಿದ್ದ ಎರಡು ಆಯ್ಕೆಗಳ ಪೈಕಿ, ರಾಜ್ಯ ಸರಕಾರ ಮೊದಲನೆಯದನ್ನು ಆರಿಸಿಕೊಂಡಿದೆ. ಅಂದರೆ ಜಿಎಸ್‌ಟಿ ಜಾರಿಯಿಂದಾದ ಕೊರತೆಗಷ್ಟೇ ಪರಿಹಾರ ಪಡೆಯಲು ನಿರ್ಧರಿಸುವ ಮೂಲಕ ಸದ್ಯದ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಸಾಲ ಪಡೆಯಲು ನೆರವಾಗುವ ಆಯ್ಕೆ-1ರ ಮೊರೆ ಹೋಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಐದು ತಿಂಗಳ ಜಿಎಸ್‌ಟಿ ಪರಿಹಾರವಾಗಿ 18,289 ಕೋಟಿ ರೂ. ಪಡೆಯಲು ರಾಜ್ಯ ಸರಕಾರ ಅರ್ಹವಾಗಿದೆ. ಇದರಲ್ಲಿ 6,965 ಕೋಟಿ ರೂ. ಉಪಕರದಿಂದ …

Read More »

ಗ್ರೇಡ್ 2 ಶಿಕ್ಷಕರ ಬಡ್ತಿ, ವಿವಿಧ ಬೇಡಿಕೆಗೆ ಸಚಿವ ಸುರೇಶ್ ಕುಮಾರ್ ಭರವಸೆ; ಧರಣಿ ಕೈಬಿಟ್ಟ ಪರಿಷತ್ ಸದಸ್ಯರು

ಬೆಂಗಳೂರು : ಮೈಸೂರು ವಿಭಾಗದಲ್ಲಿ ಪ್ರೌಢ ಶಾಲಾ ಗ್ರೇಡ್-2 ಸಹ ಶಿಕ್ಷಕರಿಂದ ಮುಖ್ಯೋಪಾಧ್ಯಾಯ ಹುದ್ದೆಗೆ ಬಡ್ತಿ ನೀಡುವುದು ಸೇರಿದಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಣ ಸಚಿವರ ಕಚೇರಿ ಎದುರು ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ವಿಧಾನಪರಿಷತ್ ಸದಸ್ಯರು ವಾಪಸು ಪಡೆದಿದ್ದಾರೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಹಲವಾರು ಬೇಡಿಕೆಗಳ ಕುರಿತಂತೆ ಬುಧವಾರ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಎಸ್. ಎಲ್. ಭೋಜೆಗೌಡ ಮತ್ತು ರಮೇಶ್ ಗೌಡ ಜೊತೆ ಸಭೆ …

Read More »

ಕೃಷಿ ಮಾರಾಟ ಮಂಡಳಿ 50 ಕೋಟಿ ವಂಚನೆ ಕೇಸ್‌: ಕಿಂಗ್‌ಪಿನ್‌ ಬಂಧನ

ಬೆಂಗಳೂರು : 2019ರಲ್ಲಿ ನಡೆದಿದ್ದ ರಾಜ್ಯ ಕೃಷಿ ಮಾರಾಟ ಮಂಡಳಿಯ (ಕೆಎಸ್‌ಎಎಂಬಿ) 50 ಕೋಟಿ ಹಣ ದುರುಪಯೋಗ ಪ್ರಕರಣದ ಕಿಂಗ್‌ಪಿನ್‌ ವಿಜಯ್‌ ಆಕಾಶ್‌, ಆತನ ಪುತ್ರ ಹಾಗೂ ಅಳಿಯ ಕೊನೆಗೂ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಚೆನ್ನೈ ಮೂಲದ ವಿಜಯ್‌ ಆಕಾಶ್‌, ಆತನ ಪುತ್ರ ಪ್ರೇಮರಾಜ್‌ ಹಾಗೂ ದಿನೇಶ್‌ ಬಾಬು ಬಂಧಿತರಾಗಿದ್ದು, ಕೃತ್ಯ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಚೆನ್ನೈನಲ್ಲಿ ಬಂಧಿಸಿ ನಗರಕ್ಕೆ ಸಿಸಿಬಿ ತಂಡ ಕರೆ ತಂದಿದೆ. ಈಗಾಗಲೇ …

Read More »

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಬಸ್ ಪಾಸ್ ದರ ಏರಿಕೆ ಇಲ್ಲ : ಡಿಸಿಎಂ ಲಕ್ಷ್ಮಣ್ ಸವದಿ

ಬೆಂಗಳೂರು : ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಬಸ್ ಪಾಸ್‍ಗಳ ದರವನ್ನು ಹೆಚ್ಚಿಸುವುದಿಲ್ಲ ಮತ್ತು ಈ ಹಿಂದೆ ಇದ್ದ ಮಾನದಂಡಗಳನ್ನು ಬದಲಿಸುವ ಯಾವುದೇ ಉದ್ದೇಶವಿಲ್ಲ, ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿದ್ಯಾರ್ಥಿಗಳ …

Read More »

‘ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ ತೆರಳುವ ಪ್ರಯಾಣಿಕರಿಗೆ ಗುಡ್ ನ್ಯೂಸ್

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯಿಂದ ಇದುವರೆಗೆ ರಾಜ್ಯ ಸೇರಿದಂತೆ ರಾಜಧಾನಿಯ ಅನೇಕ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ಮತ್ತೊಂದು ಹೆಜ್ಜೆ ಎನ್ನುವಂತೆ ಕೆ ಎಸ್ ಆರ್ ಟಿ ಸಿ ಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ಮಾರ್ಗದಲ್ಲಿ ಪ್ಲೈ ಬಸ್ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ. ಈ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಗುಡ್ ನ್ಯೂಸ್ ನೀಡಿದೆ. ಈ ಕುರಿತಂತೆ ಕೆ ಎಸ್ ಆರ್ …

Read More »

ಆರ್.ಪಿ.ಶರ್ಮಾ ಔಟ್ ಆಫ್ ಡೇಂಜರ್ – ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು : ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಅವರಿಗೆ ಮಿಸ್ ಫೈರಿಂಗ್ ನಿಂದ ಗುಂಡು ಹಾರಿದೆ. ಆರ್ ಪಿ ಶರ್ಮಾ ಅವರು ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಮಿಸ್ ಫೈರಿಂಗ್ ನಿಂದ ಘಟನೆ ನಡೆದಿದೆ. ಮಿಸ್ ಫೈರಿಂಗ್ ನಿಂದ ಆರ್ ಪಿ ಶರ್ಮಾ …

Read More »

ಮಳೆಯಿಂದ ತತ್ತರಿಸಿದ ಜನತೆಗೆ ಮುಖ್ಯ ಮಾಹಿತಿ: ಸೆ. 5 ರವರೆಗೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದ್ದು ಸೆಪ್ಟೆಂಬರ್ 3 ರಿಂದ 5 ರವರೆಗೆ ಒಳನಾಡಿನ ಜಿಲ್ಲೆಗಳು ಮತ್ತು ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂದಿನ ಎರಡು ದಿನಗಳ ಕಾಲ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, …

Read More »