ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಭಾನುವಾರ ಬರೋಬ್ಬರಿ 9,319 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,98,551ಕ್ಕೆ ಏರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಇಂದು 95 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6,393ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 38 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 95 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ …
Read More »ವಿವಿಗಳ ಘಟಕ ಕಾಲೇಜುಗಳಾಗಿ 3 ಕಾಲೇಜು ಅಭಿವೃದ್ಧಿ:ಡಿಸಿಎಂ ಅಶ್ವತ್ಥನಾರಾಯಣ
ಬೆಂಗಳೂರು : ವಿದ್ಯಾರ್ಥಿಗಳ ಹಾಜರಾತಿಯ ಕೊರತೆ ಎದುರಿಸುತ್ತಿರುವ ಮೂರು ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡಗಳನ್ನು ಹತ್ತಿರದ ವಿಶ್ವವಿದ್ಯಾಲಯಗಳಿಗೆ ಹಸ್ತಾಂತರಿಸಿದ್ದು, ಅಲ್ಲಿ ವಿಶ್ವವಿದ್ಯಾಲಯಗಳೇ ಕಾಲೇಜುಗಳನ್ನು ತೆರೆಯಲಿವೆ ಎಂದು ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ದಾವಣಗೆರೆ …
Read More »ನಂದಿನಿ ಸಿಹಿ ಮಾರಾಟ : ಭಾರೀ ಬಂಪರ್
ಬೆಂಗಳೂರು : ಗೌರಿ ಗಣೇಶ ಹಬ್ಬ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ನಂದಿನಿ ಸಿಹಿ ಉತ್ಸವಕ್ಕೆ ರಾಜ್ಯಾದ್ಯಂತ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಂದು ತಿಂಗಳಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಶೇ.68ರಷ್ಟುಹೆಚ್ಚಳವಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಮಾಹಿತಿ ನೀಡಿದೆ. ಕೋವಿಡ್-19 ಹಿನ್ನೆಲೆಯಲ್ಲಿ ನಂದಿನಿ ಹಾಲು ಸೇರಿದಂತೆ ಚೀಸ್, ಪನ್ನೀರ್ ಮತ್ತು ಸಿಹಿ ಉತ್ಪನ್ನಗಳ ಮಾರಾಟದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು. ಆದರೆ, ಗೌರಿ ಗಣೇಶ ಮತ್ತು …
Read More »ಬೆನ್ನು ನೋವಿನ ನೆಪ ಹೇಳಿ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿ
ಬೆಂಗಳೂರು: ಡ್ರಗ್ಸ್ ಮಾಫಿಯಾ ಜಾಲದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ನಾನು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಯಲ್ಲಿರುವ ರಾಗಿಣಿ ವಿಚಾರಣೆ ವೇಳೆ ಹಲವು ಸತ್ಯಸಂಗತಿಗಳು ಬೆಳಕಿಗೆ ಬರುತ್ತಿದೆ. ಬೆಂಗಳೂರಿನ ಡೈರಿ ಸರ್ಕಲ್‍ನ ಕಿದ್ವಾಯಿ ಆಸ್ಪತ್ರೆ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿಯನ್ನು ಶನಿವಾರ ಸಿಸಿಬಿ ವಿಚಾರಣೆ ಮಾಡಿಲ್ಲ. ನನಗೆ ಜ್ವರ, ಬೆನ್ನು ನೋವಿ ಎಂದು ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ …
Read More »ರಾಜ್ಯದಲ್ಲಿ ಗರಿಷ್ಠ ಸೋಂಕಿತರು : ದಾಖಲೆ ಸಂಖ್ಯೆ
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಶನಿವಾರ 9,746 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಎರಡನೇ ಗರಿಷ್ಠ ಸಂಖ್ಯೆಯ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3.61 ಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 2ರಂದು ದಾಖಲಾಗಿದ್ದ 9,860 ಪ್ರಕರಣದ ಬಳಿಕ ಶನಿವಾರ ಎರಡನೇ ಅತಿ ಹೆಚ್ಚು ಸೋಂಕು ವರದಿಯಾಗಿದೆ. ಅಲ್ಲದೆ, ದಾಖಲೆಯ 9,102 ಮಂದಿ ಗುಣಮುಖರಾಗಿದ್ದಾರೆ. ಇನ್ನು ಶನಿವಾರ 128 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 6,298ಕ್ಕೆ …
Read More »ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿ
ಬೆಂಗಳೂರು : ಪದವಿ ಪೂರ್ವಶಿಕ್ಷಣ ಇಲಾಖೆಯು 2019-20 ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಸೆ. 7 ರಿಂದ 19 ರವರೆಗೆ ನಡೆಯಲಿದೆ. ಪರೀಕ್ಷೆಗಳು ಬೆಳಗ್ಗೆ 10.15 ರಿಂದ 1.30 ಹಾಗೂ 2.15 ರಿಂದ 5.30 ರ ಅವಧಿಯಲ್ಲಿ ನಡೆಯಲಿವೆ. ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವೇಳಾ ಪಟ್ಟಿ ಸಮಯ ಬೆಳಗ್ಗೆ 10.15 ರಿಂದ 1.30ರವರೆಗೆ, ಮಧ್ಯಾಹ್ನ 2.15 ರಿಂದ ಸಾಯಂಕಾಲ 5.30ರವರೆಗೆ ಸೆ.7ರ ಬೆಳಗ್ಗೆ ಉರ್ದು, ಸಂಸ್ಕೃತ, …
Read More »ಮೇಘನಾ ರಾಜ್ ಬಳಿ ಕ್ಷಮೆ ಕೋರಿದ ಇಂದ್ರಜಿತ್ ………..
ಬೆಂಗಳೂರು: ಪತಿ ಚಿರಂಜೀವಿ ಸರ್ಜಾ ಬಗ್ಗೆ ಹೇಳಿಕೆ ನೀಡಿರುವುದಕ್ಕೆ ನಟಿ ಮೇಘನಾ ರಾಜ್ ಅವರು ವಾಣಿಜ್ಯ ಮಂಡಳಿಗೆ ಬರೆದ ಪತ್ರದ ಬೆನ್ನಲ್ಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕ್ಷಮೆ ಕೋರಿದ್ದಾರೆ.ಮಾತನಾಡಿದ ಇಂದ್ರಜಿತ್, ಚಿರು ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಈಗಾಗಲೇ ನಾನು ನೀಡಿದ್ದ ಹೇಳಿಕೆಯನ್ನು ವಾಪಸ್ ಪಡೆದಿದ್ದೇನೆ. ಚಿರು ನನಗೆ ಆತ್ಮೀಯ ಸ್ನೇಹಿತ. ನನ್ನ ಹೇಳಿಕೆಯಿಂದ ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು. ಈ ಸಂಬಂಧ ನಾನು ಬಹಿರಂಗ …
Read More »ನನ್ನ ಮಗಳ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು.:ರಾಗಿಣಿ ತಾಯಿ ರೋಹಿಣಿ
ಬೆಂಗಳೂರು: ನನ್ನ ಮಗಳ ಮೇಲೆ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಅವಳನ್ನು ಸಿಕ್ಕಿಹಾಕಿಸಲು ನೋಡುತ್ತಿದ್ದಾರೆ ಎಂದು ನಟಿ, ಡ್ರಗ್ ಪ್ರಕರಣದಲ್ಲಿ ಆರೋಪಿಯಾಗಿರುವ ರಾಗಿಣಿ ತಾಯಿ ರೋಹಿಣಿ ದ್ವಿವೇದಿ ಹೇಳಿದ್ದಾರೆ. ಈ ಕುರಿತುಮಾತನಾಡಿದ ಅವರು, ನನ್ನ ಮಗಳ ಮೇಲಿನ ಎಲ್ಲ ಆರೋಪಗಳು ಸುಳ್ಳು. ಅವಳನ್ನು ಸಿಕ್ಕಿ ಹಾಕಿಸಲಾಗುತ್ತಿದೆ. ಇದೆಲ್ಲವೂ ಸುಳ್ಳು, ನನ್ನ ಮಗಳು ಪ್ರಕಣದಿಂದ ಮುಕ್ತಳಾಗಿ ಬರುತ್ತಾಳೆ. ನಾನು ಎಲ್ಲ ರೀತಿಯ ದಾಖಲೆಗಳನ್ನು ಸಲ್ಲಿಸುತ್ತೇನೆ. ಶೀಘ್ರವೇ ನನ್ನ ಮಗಳು ಆರೋಪದಿಂದ ಮುಕ್ತಳಾಗುತ್ತಾಳೆ ಎಂದು …
Read More »ಮಾಜಿ ಸಚಿವ, ದಿ.ಜೀವರಾಜ್ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರಾಗಿಣಿ ಜೊತೆ ಮಾಜಿ ಸಚಿವ, ದಿ. ಜೀವರಾಜ್ ಪುತ್ರ ಆದಿತ್ಯ ಆಳ್ವಾ ಸೇರಿದಂತೆ 12 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸಿಸಿಬಿಯ ನಾರ್ಕೊಟಿಕ್ಸ್ ಎಸಿಪಿ ಗೌತಮ್ ನೀಡಿದ ಸ್ವಯಂಪ್ರೇರಿತ ದೂರಿನ ಆಧಾರದ ಮೇಲೆ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಾಗಿತ್ತು. ಬಂಧಿತ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ್ದ ಬಗ್ಗೆ ಸಾಕ್ಷಿ ಹಾಗೂ ಪುರಾವೆಗಳು ಸಿಕ್ಕಿರುವ ಹಿನ್ನೆಯಲ್ಲಿ ಗೌತಮ್ …
Read More »ಎನ್‍ಡಿಪಿಎಸ್ ಆಕ್ಟ್ ಸೆಕ್ಷನ್ 21, 21ಸಿ, 27ಬಿ, 27ಎ, 29, ಐಪಿಸಿ 120ಬಿ ಅಡಿ ಎಫ್‍ಐಆರ್ ದಾಖಲಾಗಿದೆ
ಬೆಂಗಳೂರು: ಎರಡು ಬಾರಿ ಎಂಡಿಎಂಎ (ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಡ್ರಗ್ ತೆಗೆದುಕೊಂಡಿರೋದಾಗಿ ನಟಿ ರಾಗಿಣಿ ದ್ವಿವೇದಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಗೆಳೆಯ ರವಿಶಂಕರ್ ತಂದುಕೊಟ್ಟಿದ್ದ ಎಂಡಿಎಂಎ ಡ್ರಗ್ ಮನೆಯಲ್ಲಿಯೇ ಬಳಕೆ ಮಾಡಿದ್ದೇನೆ ಎಂದು ರಾಗಿಣಿ ಹೇಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎರಡು ಬಾರಿಯೂ ರವಿಶಂಕರ್ ಡ್ರಗ್ಸ್ ತಂದಿದ್ದನು. ಇತ್ತ ರಾಗಿಣಿ, ರವಿಶಂಕರ್ ಮತ್ತು ರಾಹುಲ್ ಬಳಸುತ್ತಿದ್ದ ಮೊಬೈಲ್ ಮಾಹಿತಿಯನ್ನ ಪುನಃ ಕಲೆ ಹಾಕಲಾಗಿದೆ. …
Read More »