ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಇಬ್ಬರು ನಟಿಯರು ಅರೆಸ್ಟ್ ಆದ ಬಳಿಕ ಕೇಸ್‍ನಲ್ಲಿ ರಾಜಕೀಯ ನಂಟಿನ ಕುರಿತ ಚರ್ಚೆ ಜೋರಾಗಿದೆ. ಶಾಸಕ ಜಮೀರ್ ಅಹ್ಮದ್ ಅವರ ಹೆಸರನ್ನು ಪ್ರಕರಣದಲ್ಲಿ ಬಿಜೆಪಿ ಎಳೆದು ತಂದಿದೆ. ಇದರ ಬೆನ್ನಲ್ಲೇ ಇನ್ನೆರಡು ದಿನಗಳಲ್ಲಿ ಜಮೀರ್ ಬಂಧನವಾಗುತ್ತದೆ ಎಂದು ಬಿಜೆಪಿ ವಕ್ತಾರ ರವಿ ಕುಮಾರ್ ಹೇಳಿದ್ದಾರೆ.ಮಾತನಾಡಿದ ರವಿ ಕುಮಾರ್ ಅವರು, ಇನ್ನು ಕೆಲ ದಿನಗಳಲ್ಲಿ ಶಾಸಕ ಜಮೀರ್ ಅವರನ್ನು ಪ್ರಕರಣದಲ್ಲಿ ಬಂಧನ ಮಾಡುವ ಸಮಯ …
Read More »ಸಂಜನಾ ಅವರೊಂದಿಗೆ ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ
ಬೆಂಗಳೂರು: ಡ್ರಗ್ಸ್ ಮಾಫಿಯಾದಲ್ಲಿ ಸಿಸಿಬಿ ಪೊಲೀಸರು ಬಂಧಿಸಿರುವ ನಟಿ ಸಂಜನಾ ಅವರೊಂದಿಗೆ ನಾನು ಕೊಲಂಬೋಗೆ ಹೋಗಿದ್ದು ಸಾಬೀತಾದರೆ ನನ್ನ ಆಸ್ತಿಯೆಲ್ಲ ಸರ್ಕಾರಕ್ಕೆ ಬರೆದುಕೊಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಸವಾಲು ಎಸೆದಿದ್ದಾರೆ. ನಟಿ ಸಂಜನಾ ಅವರ ವಿಚಾರದಲ್ಲಿ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳ ಕುರಿತು ಕೊನೆಗೂ ಮೌನ ಮುರಿದ ಜಮೀರ್ ಅವರು, ಸಂಜನಾ ಹಾಗೂ ನಾನು ಕೊಲಂಬೋಗೆ ಹೋಗಿರುವ ಬಗ್ಗೆ ಖುದ್ದು ಸಿಎಂ ತನಿಖೆ ಮಾಡಲಿ ಎಂದು …
Read More »ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟಿದ್ದ ಆರೋಪಿ ಮುಜಾಯಿದ್‍ನನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಇಟ್ಟಿದ್ದ ಆರೋಪಿ ಮುಜಾಯಿದ್‍ನನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡ್ಕೊಂಡಿದ್ದ ಮುಜಾಯಿದ್, ಗಲಭೆ ದಿನ ನೂರಕ್ಕೂ ಹೆಚ್ಚು ಮಂದಿಯನ್ನು ಡಿಜೆ ಹಳ್ಳಿ ಠಾಣೆ ಬಳಿಯಿಂದ ಅಖಂಡ ಮನೆ ಬಳಿ ಕರೆದೊಯ್ದಿದ್ದ. ಇಷ್ಟು ದಿನ ಒಂದೊಂದು ದಿನ ಒಂದೊಂದು ಜಿಲ್ಲೆಯಲ್ಲಿ ತಲೆಮರೆಕೊಂಡಿದ್ದ ಎಂಬ ಮಾಹಿತಿ ಲಭಿಸಿದೆ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಇಡಲು …
Read More »ಸಿಸಿಬಿ ತನಿಖೆಯಿಂದ ಕೆಲವರ ಬಣ್ಣ ಬಯಲಾಗಿದೆ. ಸಧ್ಯದಲ್ಲಿಯೇ ಎಲ್ಲರ ಬಣ್ಣ ಬಯಲಾಗುತ್ತೆ:B.S.Y.
ಬೆಂಗಳೂರು: ಡ್ರಗ್ಸ್ ಮಾಫಿಯಾ ವಿಚಾರವಾಗಿ ಸಿಎಂ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಸಿಸಿಬಿ ತನಿಖೆ ನಡೆಸುತ್ತಿದೆ. ಕೆಲವರ ಬಣ್ಣ ಬಯಲಾಗಿದೆ. ಸದ್ಯದರಲ್ಲಿಯೇ ಪ್ರಕರಣದಲ್ಲಿ ಭಾಗಿಯಾಗಿದ ಎಲ್ಲರ ಬಣ್ಣ ಬಯಲಾಗುತ್ತಿದೆ ಎಂದಿದ್ದಾರೆ. ಡ್ರಗ್ಸ್ ಪ್ರಕರಣವನ್ನ ಸರ್ಕಾರ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಹಿಂದಿನ ಸರ್ಕಾರದಂತೆ ನಾವು ನಿರ್ಲಕ್ಷ್ಯ ಮಾಡುವುದಿಲ್ಲ. ಎಂತಹ ಒತ್ತಡಕ್ಕೂ ನಮ್ಮ ಸರ್ಕಾರ ಮಣಿಯುವುದಿಲ್ಲ. ನ್ಯಾಯಾಯುತವಾಗಿ ತನಿಖೆ ನಡೆಸುತ್ತೇವೆ. ಸಿಸಿಬಿ ತನಿಖೆಯಿಂದ ಕೆಲವರ ಬಣ್ಣ ಬಯಲಾಗಿದೆ. ಸಧ್ಯದಲ್ಲಿಯೇ ಎಲ್ಲರ ಬಣ್ಣ ಬಯಲಾಗುತ್ತೆ …
Read More »ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ………
ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಈಗಾಗಲೇ ಸಿಸಿಬಿ ತನಿಖೆ ಎದುರಿಸುತ್ತಿದ್ದಾರೆ. ಮೊನ್ನೆಯಷ್ಟೇ ಸಾಂತ್ವನ ಕೇಂದ್ರದಲ್ಲಿ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು ಎಂದು ಮೂಲಗಳು ತಿಳಿಸಿತ್ತು. ಆದರೆ ಇಂದು ಈ ಇಬ್ಬರು ನಟಿಯರ ನಡುವೆ ಫ್ರೆಂಡ್‍ಶಿಪ್ ಆದ ಪ್ರಸಂಗ ನಡೆಯಿತು. ಹೌದು. ವಿಚಾರಣೆ ನಡೆಸುತ್ತಿರುವಾಗ ಈ ಇಬ್ಬರು ನಟಿಯರೂ ಪದೇ ಪದೇ ಅನಾರೋಗ್ಯದ ನೆಪವೊಡ್ಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಇಬ್ಬರ ಆರೋಗ್ಯ ತಪಾಸಣೆಗಾಗಿ …
Read More »ಕೇವಲ ಎರಡು ದಿನಗಳ ಮಳೆಗೆ ಸಿಲಿಕಾನ್ ಸಿಟಿ ಡ್ರೈನೇಜ್ ಸಿಟಿಯಾಗಿ ಪರಿವರ್ತನೆಗೊಂಡಿದೆ.
ಬೆಂಗಳೂರು, ಸೆ.10- ಕೇವಲ ಎರಡು ದಿನಗಳ ಮಳೆಗೆ ಸಿಲಿಕಾನ್ ಸಿಟಿ ಡ್ರೈನೇಜ್ ಸಿಟಿಯಾಗಿ ಪರಿವರ್ತನೆಗೊಂಡಿದೆ. ಮೊನ್ನೆ ಮತ್ತು ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಬಿಬಿಎಂಪಿ ವ್ಯಾಪ್ತಿಯ 40ಕ್ಕೂ ಹೆಚ್ಚು ವಾರ್ಡ್‍ಗಳಲ್ಲಿ ಸಾಕಷ್ಟು ಅನಾಹುತ ಸಂಭವಿಸಿದೆ. ಕೆಲ ಪ್ರದೇಶಗಳ ಪ್ರಮುಖ ರಸ್ತೆಗಳು ಕೊಳಚೆ ಗುಂಡಿಗಳಾಗಿ ಪರಿವರ್ತನೆಗೊಂಡಿದ್ದು , ಕೆಲವರ ಮನೆಗಳಿಗೆ ಕೊಳಚೆ ನೀರು ನುಗ್ಗಿ ಇಡೀ ಪ್ರದೇಶ ದುರ್ನಾತ ಬೀರುತ್ತಿದೆ. ನಾಯಂಡಹಳ್ಳಿ ಸಮೀಪ ರಾಜ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ್ದ ತಡೆಗೋಡೆ …
Read More »ಕೆಪಿಎಸ್‌ಸಿಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ
ಬೆಂಗಳೂರು, : ಕರ್ನಾಟಕ ಲೋಕ ಸೇವಾ ಆಯೋಗವು ವಿವಿಧ ಇಲಾಖೆಯ ಹುದ್ದೆಗಳ ಪೂರ್ವಭಾವಿ ಹಾಗೂ ಇಲಾಖಾ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದೇ ತಿಂಗಳ 17ರಂದು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಮೂಹ ‘ಎ’ ವೃಂದದ ಸಹಾಯಕ ನಿಯಂತ್ರಕರ 54 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಬೆಂಗಳೂರು ಕೇಂದ್ರ ಹಾಗೂ ಆಯೋಗದ ವಿಭಾಗೀಯ ಕೇಂದ್ರಗಳಾದ …
Read More »ಅಕ್ಟೋಬರ್ ಅಂತ್ಯಕ್ಕೆ ಕರೊನಾ ಲಸಿಕೆ; ಸಾಧ್ಯತೆ ತಳ್ಳಿ ಹಾಕಲಾಗದು; ಹೀಗಿದೆ ತಜ್ಞರ ವಿಶ್ಲೇಷಣೆ
ನವದೆಹಲಿ: ಆಕ್ಸ್ಫರ್ಡ್ ವಿವಿ ಹಾಗೂ ಬ್ರಿಟನ್ನ ಆಸ್ಟ್ರಾಜೆನೆಕಾ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸದ್ಯಕ್ಕೆ ಸ್ಥಗಿತಗೊಂಡಿದೆ. ಸಂಶೋಧನೆಯಲ್ಲಿ ಮೂಂಚೂಣಿಯಲ್ಲಿದ್ದ ಕಂಪನಿ ಮೂರನೇ ಹಂತದ ಪರೀಕ್ಷೆಯಲ್ಲಿ ತೊಡಗಿದೆ. ಇದು ಯಶಸ್ವಿಯಾಗಿದ್ದರೆ, ಅಕ್ಟೋಬರ್ ಅಂತ್ಯಕ್ಕೆಲ್ಲ ಲಸಿಕೆ ದೊರೆಯುವ ಬಗ್ಗೆ ಭಾರಿ ನಿರೀಕ್ಷೆ ಹೊಂದಲಾಗಿತ್ತು. ಆಕ್ಸ್ಫರ್ಡ್ ಲಸಿಕೆ ಪಡೆದ ವ್ಯಕ್ತಿಗೆ ಗಂಭೀರ ಅಡ್ಡ ಪರಿಣಾಮ ಉಂಟಾದ ಬೆನ್ನಲ್ಲೇ, ಔಷಧ ತಯಾರಿಕೆಯಲ್ಲಿ ಯಾವುದೇ ತರಾತುರಿಯಿಲ್ಲ. ಎಲ್ಲ ಮಾನದಂಡಗಳನ್ನು ಪೂರೈಸಿದ ಬಳಿಕವಷ್ಟೇ ಲಸಿಕೆಗೆ ಮಾನ್ಯತೆ …
Read More »ಇದು ರಾಜ್ಯ ಸರ್ಕಾರದ ದುಷ್ಟತನದ ಪರಮಾವಧಿ: ಸಿದ್ದರಾಮಯ್ಯ
ಬೆಂಗಳೂರು : ರಾಜ್ಯದ ಜನತೆ ಸಾಲು-ಸಾಲು ಸಂಕಷ್ಟಗಳಿಂದ ಹೆಣಗುತ್ತಿದ್ದರೂ ರಾಜ್ಯ ಸರ್ಕಾರವು ಎಂಟು ದಿನಗಳ ಕಾಲ ನಾಮ್‌ಕೆವಾಸ್ತೆ ವಿಧಾನಮಂಡಲ ಅಧಿವೇಶನ ನಡೆಸುತ್ತಿರುವುದು ಜನದ್ರೋಹಿ ಹಾಗೂ ದುಷ್ಟತನದ ಪರಮಾವಧಿ. ಸರ್ಕಾರ ಕೂಡಲೇ ಅಸಾಂವಿಧಾನಿಕವಾಗಿ ನಡೆದುಕೊಳ್ಳುವುದನ್ನು ಬಿಟ್ಟು ಅಧಿವೇಶನವನ್ನು ಹದಿನೈದು ದಿನಗಳ ಕಾಲ ವಿಸ್ತರಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ …
Read More »ಬಿಡುವು ಕೊಟ್ಟು ಬಿದ್ದ ಮಳೆಗೆ ರಾಜ್ಯ ತತ್ತರ: ಹಾಳಾಯ್ತು ಬೆಳೆ, ಮನೆಗಳಿಗೆ ನುಗ್ಗಿದ ಚರಂಡಿ ನೀರು
ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ.. ಚಿಕ್ಕ ನದಿಯೇ ಭೋರ್ಗರೆಯುತ್ತಿದೆ.. ರಸ್ತೆಗಳಿಗೂ ನೀರು ನುಗ್ಗಿದೆ, ಮನೆ ಮುಂದೆಯೇ ನೀರು ಬಂದು ನಿಂತಿದೆ.. ವರುಣನ ಅಬ್ಬರಕ್ಕೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ. ಬೆಳಗಾವಿಗೆ ಮತ್ತೆ ಎದುರಾಯ್ತು ಜಲಕಂಟಕ! ಭಯ.. ಮತ್ತದೇ ಭಯ.. ನೆರೆ ನರಕದಿಂದ ಪಾರಾಗಿ ತಿಂಗಳ ತುಂಬೋ ಮೊದಲೇ, ಬೆಳಗಾವಿ ಜನರಲ್ಲಿ ಮತ್ತೆ ಪ್ರವಾಹ ಆತಂಕ ಕಾಡ್ತಿದೆ. ಯಾಕಂದ್ರೆ, ಕಳೆದೆರಡು ದಿನದಿಂದ ಸುರೀತಿರೋ ಮಳೆಯಿಂದಾಗಿ, ಮಲಪ್ರಭಾ ನದಿ ಅಪಾಯದ ಮಟ್ಟಕ್ಕೇರಿದೆ. ಕಿತ್ತೂರಿನ …
Read More »