ಆನೇಕಲ್: ಬೆಳ್ಳಂ ಬೆಳಗ್ಗೆಯೇ ಖಾಕಿ ಗನ್ ಸದ್ದು ಮಾಡಿದೆ. 4 ಕೊಲೆ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಗ್ರಾಮಗಳಾದ ಅವಡದೇವನಹಳ್ಳಿ, ಮುತ್ಯಾನಲ್ಲೂರಿನಲ್ಲಿ ನಡೆದಿದೆ. ಅವಡದೇವನಹಳ್ಳಿಯಲ್ಲಿ ಗೋಪಿ ಮತ್ತು ಗಂಗಾ ಎಂಬ ಇಬ್ಬರು ಆರೋಪಿಗಳ ಮೇಲೆ ಫೈರಿಂಗ್ ಆದ್ರೆ ಮುತ್ಯಾನಲ್ಲೂರಿನಲ್ಲಿ ಅನಂತ್, ಬಸವನ ಮೇಲೆ ಫೈರಿಂಗ್ ನಡೆದಿದೆ. ಅಕ್ಟೋಬರ್ 30ರಂದು ಶೆಟ್ಟಿಹಳ್ಳಿಯಲ್ಲಿ ವಿನೀತ್ ಕೊಲೆ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ಖಚಿತ ಮಾಹಿತಿಯ …
Read More »ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯವನ್ನು ವ್ಯವಸ್ಥಿತವಾಗಿ ನಾಶ ಮಾಡುವ ಎಲ್ಲ ರೀತಿಯ ಹುನ್ನಾರಗಳನ್ನೂ ಮಾಡುತ್ತಿದೆ:. ಸಿದ್ದರಾಮಯ್ಯ
ಬೆಂಗಳೂರು, ನ.1- ನ್ಯಾಯಯುತವಾಗಿ ನೀಡಬೇಕಾದ ತೆರಿಗೆ ಪಾಲನ್ನು ಕೇಂದ್ರ ನೀಡದೆ ವಂಚಿಸುತ್ತಿರುವುದರಿಂದ ನಮ್ಮಂತಹ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿವೆ. ಅನುದಾನವಿಲ್ಲದೆ ಮೂಲಸೌಕರ್ಯ ಕಲ್ಪಿಸಲಾಗಿದೆ. ರಾಜ್ಯಕ್ಕೆ ಹರಿದುಬರಬೇಕಾದ ಬಂಡವಾಳ ಹೂಡಿಕೆ ಸಮರ್ಪಕವಾಗಿ ಬರದಿದ್ದರೆ ಉದ್ಯೋಗ ಸೃಷ್ಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯವು ಅಭಿವೃದ್ಧಿ ಹೊಂದಬೇಕಾದಷ್ಟು ಪ್ರಮಾಣದಲ್ಲಿ ಅಭಿವೃದ್ಧಿಯಾಗುವುದಿಲ್ಲ. ಕರ್ನಾಟಕವು ಮುಂದಿನ ದಿನಗಳಲ್ಲಿ ಹಿಂದುಳಿದ ಅಥವಾ ಬಡ …
Read More »ಸಾಕಷ್ಟು ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆಗೆ ಸಾಕ್ಷಿ ಆಗಿರುವ ಉಪ ಚುನಾವಣೆ ಮತದಾನಕ್ಕೆ ಇನ್ನೊಂದೇ ದಿನ
ಬೆಂಗಳೂರು: ಸಾಕಷ್ಟು ಜಿದ್ದಾಜಿದ್ದಿನ ಮತ್ತು ಪ್ರತಿಷ್ಠೆಗೆ ಸಾಕ್ಷಿ ಆಗಿರುವ ಉಪ ಚುನಾವಣೆ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ನಿನ್ನೆ ಬಹಿರಂಗ ಪ್ರಚಾರ ಅಂತ್ಯ ಆಗಿದ್ದು, ಇವತ್ತು ಮನೆ ಮನೆಗೆ ತೆರಳಿ ಮತಯಾಚಿಸುವುದಕ್ಕೆ ಅವಕಾಶ ಇದೆ. 21 ದಿನಗಳಿಂದ ನಡೆದಿದ್ದ ಪ್ರಚಾರ ಈಗ ನಿರ್ಣಾಯಕ ಹಂತ ತಲುಪಿದೆ. ಬಹಿರಂಗ ಪ್ರಚಾರದ ಅವಧಿ ಮುಗಿದಂತೆ ಕ್ಷೇತ್ರದ ಮತದಾರರಲ್ಲದವರೂ ಕೂಡಾ ಕ್ಷೇತ್ರವನ್ನು ಖಾಲಿ ಮಾಡಿ ತೆರಳಬೇಕಾಗುತ್ತದೆ. ನಾಳೆ ಮತದಾನ ನಡೆಯಲಿದೆ. ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಜೆಪಿ …
Read More »ದಿನನಿತ್ಯದ ಸೋಂಕು, ಸಾವು ಮತ್ತು ಸಕ್ರಿಯ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದಮತ್ತೆ ಲಾಕ್ಡೌನ್
ಬೆಂಗಳೂರು, ನ.1- ಕಿಲ್ಲರ್ ಕೊರೊನಾ ವೈರಸ್ ಹಾವಳಿ ಇಳಿಮುಖವಾಗುತ್ತಿರುವ ಸಂತಸದಲ್ಲಿದ್ದ ಯೂರೋಪ್ ಖಂಡದ ಅನೇಕ ರಾಷ್ಟ್ರಗಳ ಜನತೆಗೆ ಹೆಮ್ಮಾರಿಯ ಎರಡನೆ ಹಂತದ ದಾಳಿ ಬರಸಿಡಿಲು ಬಡಿದಂತಾಗಿದೆ. ಕೊರೊನಾ ಎರಡನೆ ಅಲೆಯ ಆರ್ಭಟ ತೀವ್ರವಾಗಿದ್ದು, ದಿನನಿತ್ಯದ ಸೋಂಕು, ಸಾವು ಮತ್ತು ಸಕ್ರಿಯ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ವಿವಿಧ ದೇಶಗಳಲ್ಲಿ ಮತ್ತೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಫ್ರಾನ್ಸ್, ಜರ್ಮನಿ, ಸ್ಪೇನ್ ನಂತರ ಈಗ ಇಂಗ್ಲೆಂಡ್ನಲ್ಲಿ ಲಾಕ್ಡೌನ್ ಜಾರಿಗೊಳಿಸಲಾಗಿದೆ. ನಾಲ್ಕು ವಾರಗಳ ಕಾಲ ಲಾಕ್ಡೌನ್ …
Read More »ಉಪಚುನಾವಣೆ : ಬಹಿರಂಗ ಪ್ರಚಾರಕ್ಕೆ ತೆರೆ, ಇನ್ನೇನಿದ್ದರೂ ಮನೆಮನೆ ಮತಬೇಟೆ
ಬೆಂಗಳೂರು, ನ.1- ಮಿನಿ ಕುರುಕ್ಷೇತ್ರ ಎಂದೇ ಭಾವಿಸಲಾಗಿರುವ ಶಿರಾ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಮತದಾರರ ಮನವೊಲಿಕೆಗೆ ಪ್ರಮುಖ ರಾಜಕೀಯ ಪಕ್ಷಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಗಳಾದ ಅಶ್ವತ್ಥನಾರಾಯಣ, ಗೋವಿಂದ್ಕಾರಜೋಳ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರು …
Read More »ಕುಸುಮಾರನ್ನು ಗೆಲ್ಲಿಸಲು ಡಿಕೆಶಿ ಕೊನೆ ಕ್ಷಣದ ಕಸರತ್ತು, ಅಬ್ಬರದ ಪ್ರಚಾರ
ಬೆಂಗಳೂರು, ನ.1-ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಕಾಂಗ್ರೆಸ್ ಪಡೆ ಇಂದು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಬೆಳಗ್ಗೆ ಬರೇಕಾ, ಅತುಮನೇಸಾರ್ ಚರ್ಚ್ಗೆ ಭೇಟಿ ನೀಡಿದರು. ನಂತರ ಯಶವಂತಪುರದ ಜುಮ್ಮಾ ಮಸೀದಿಗೂ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಬಾರದು ಎಂಬ ಅರಿವು ನಮಗೂ ಇದೆ. ಹಾಗಾಗಿ ಚರ್ಚ್ ಮತ್ತು ಮಸೀದಿಗೆ …
Read More »ಆರ್.ಆರ್.ನಗರದಲ್ಲಿ ಕಾಂಗ್ರೆಸ್ನಿಂದ ಹಣ ಹಂಚಿಕೆ ಹಣ ಹಂಚೋದರಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಫಾಸ್ಟ್: H.D.K.
ಬೆಂಗಳೂರು: ಉಪ ಚುನಾವಣೆ ಕ್ಷೇತ್ರ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಂದು ನಗರದ ಪೀಣ್ಯದಲ್ಲಿ ತುರ್ತುಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಹಣ ಹಂಚಿಕೆಯ ಆರೋಪವನ್ನ ಮಾಡಿದರು. ಮನೆಯಲ್ಲಿ ಎಷ್ಟು ಮತಗಳಿವೆ ಎಂದು ಲಿಸ್ಟ್ ಮಾಡಿಕೊಂಡು ಹಣ ಹಂಚಿಕೆ ಮಾಡಲಾಗುತ್ತಿದೆ. ಕನಕಪುರದಿಂದ ಬಂದಿರುವ ಅರ್ಜುನ್ ಮತ್ತು ಅರುಣ್ ಎಂಬವರು ಹಣ ಹಂಚುವ ವೇಳೆ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರಸ್ ನವರು ದೊಡ್ಡ ಮಟ್ಟದಲ್ಲಿ ಹಣ ಹಂಚುವ …
Read More »ಬೆಟ್ಟದ ಮೇಲೆ ಯುವಕರ ತಂಡವೊಂದು 65 ಅಡಿ ಉದ್ದದ ಬೃಹತ್ ಬಾವುಟ ಹಾರಿಸಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ, ಆದರೆ ನಾಡ ಯುವಕರ ತಂಡವೊಂದು ಇತಿಹಾಸ ಪ್ರಸಿದ್ಧ ಬೆಟ್ಟದ ತುತ್ತತುದಿಯಲ್ಲಿ ರಾಜ್ಯೋತ್ಸವವನ್ನು ಸ್ಮರಣೀಯವಾಗಿ ಆಚರಿಸಿದ್ದಾರೆ. ಇತಿಹಾಸ ಪ್ರಸಿದ್ಧ ಮಾಗಡಿ ಕೆಂಪೇಗೌಡರು ಆಳಿದ ಭೈರವದುರ್ಗ ಬೆಟ್ಟದ ಮೇಲೆ ಯುವಕರ ತಂಡವೊಂದು 65 ಅಡಿ ಉದ್ದದ ಬೃಹತ್ ಬಾವುಟ ಹಾರಿಸಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುದೂರು ಹೋಬಳಿಯ ಭೈರವೇಶ್ವರ ನಗರದ ಯುವಕರು, ಪ್ರತಿವರ್ಷವು ಬೃಹತ್ ಆದ ಬಾವುಟವನ್ನು …
Read More »ಮದ್ಯ ಸೇವಿಸುವವರಿಗೆ ‘ಕೊರೊನಾ’ದಿಂದ ಗಂಭೀರ ಸಮಸ್ಯೆ ಎದುರಾಗಲಿದೆ.
ಬೆಂಗಳೂರು: ಮದ್ಯ ಸೇವಿಸುವವರಿಗೆ ‘ಕೊರೊನಾ’ದಿಂದ ಗಂಭೀರ ಸಮಸ್ಯೆ ಎದುರಾಗಲಿದೆ. ಮದ್ಯಪ್ರಿಯರ ಲಿವರ್ ಮೇಲೆ ‘ಕೊರೊನಾ’ ಪ್ರಭಾವ ಅಪಾರವಾಗಿರುತ್ತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಸೋಂಕಿನಿಂದ ಮೃತಪಟ್ಟ ಕೆಲವರಲ್ಲಿ ಲಿವರ್ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ಮದ್ಯಪಾನ ಮಾಡುವವರಿಗೆ ವೈದ್ಯರು ವಾರ್ನಿಂಗ್ ಕೊಟ್ಟಿದ್ದಾರೆ. ಸೋಂಕಿತರು ಲಿವರ್ ಮೇಲಾಗುವ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ಶ್ವಾಸಕೋಶದೊಂದಿಗೆ ವಿವಿಧ ಅಂಗಗಳ ಮೇಲೂ ಪರಿಣಾಮ ಬೀರುತ್ತೆ. ಮದ್ಯಪಾನ ಮಾಡುವವರ ಲಿವರ್ ದುರ್ಬಲವಾಗುವ …
Read More »ಶಾಲೆಗಳಿಗೆ ನೀಡಿದ್ದ ಮಧ್ಯಾಂತರ ರಜೆ ಮುಗಿದಿದೆ ಶಿಕ್ಷಕರು ಶಾಲೆಗೆ ಬರಬೇಕು ಶಿಕ್ಷಣ ಇಲಾಖೆ ಸೂಚನೆ
ಬೆಂಗಳೂರು: ಶಾಲೆಗಳಿಗೆ ನೀಡಿದ್ದ ಮಧ್ಯಾಂತರ ರಜೆ ಮುಗಿದಿದ್ದು, ಕನ್ನಡ ರಾಜ್ಯೋತ್ಸವ ಆಚರಣೆಗೆ ನ.1ರಂದು ಎಲ್ಲ ಶಿಕ್ಷಕರು ಹಾಜರಾಗಬೇಕು, 2ರಿಂದ ಶಿಕ್ಷಕರು ಶಾಲೆಗೆ ಬರಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲಾರಂಭಕ್ಕೆ ಸಂಬಂಧಿಸಿ ಶಿಕ್ಷಣ ಇಲಾಖೆ ಅಥವಾ ಸರಕಾರ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ವಿದ್ಯಾಗಮವೂ ತಾತ್ಕಾಲಿಕವಾಗಿ ರದ್ದಾಗಿದೆ. ಹೀಗಾಗಿ ಶಿಕ್ಷಕರು ಶಾಲೆಗೆ ಬಂದು ಯಾವ ಕಾರ್ಯ ಮಾಡಬೇಕು ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು ಎಂದು ಶಿಕ್ಷಕರು ಆಗ್ರಹಿಸಿದ್ದಾರೆ. ವಿದ್ಯಾಗಮ ಚಟುವಟಿಕೆಯಲ್ಲಿ ಈವರೆಗೆ …
Read More »