ಬೆಂಗಳೂರು: ಎಐಎಡಿಎಂಕೆ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರನ್ನು ಕೇಂದ್ರ ಜೈಲಿನ ಪರಪ್ಪನ ಅಗ್ರಹಾರದಿಂದ ಬುಧವಾರ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಆದಾಗ್ಯೂ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೋವಿಡ್ -19 ಗಾಗಿ 66 ವರ್ಷದ ವಿ.ಕೆ.ಶಶಿಕಲಾ ಅವರಿಗೆ ಚಿಕಿತ್ಸೆ ನೀಡುವ ವೈದ್ಯರು ಮುಂದಿನ ಎರಡು-ಮೂರು ದಿನಗಳವರೆಗೆ ಅವಳನ್ನು ಡಿಸ್ಚಾರ್ಜ್ ಮಾಡದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಆಕೆಯ ಬಿಡುಗಡೆ ಸಂಬಂಧಿತ ಔಪಚಾರಿಕತೆಗಳು ಬುಧವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಪೂರ್ಣಗೊಳ್ಳಲಿವೆ ಎಂದು ಗೃಹ ಇಲಾಖೆಯ ಮೂಲಗಳು ತಿಳಿಸಿದೆ. …
Read More »ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ:ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು: ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ, ದೇಶಕ್ಕಾಗಿ ನಮ್ಮ ಅಪ್ಪ-ಅಮ್ಮನೂ ದುಡಿದಿದ್ದಾರೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವ್ರು ಹೇಳಿದ್ದಾರೆ. ಫ್ರೀಡಂ ಪಾರ್ಕ್ʼನಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವ್ರು, ‘ ಈ ದೇಶ ನಿಮ್ಮಪ್ಪನ ಆಸ್ತಿಯಲ್ಲ, ದೇಶಕ್ಕಾಗಿ ನಮ್ಮ ಅಪ್ಪ-ಅಮ್ಮನೂ ದುಡಿದಿದ್ದಾರೆ.ಅನ್ನದಾತದ ವಿರೋಧಿ ಕಾಯ್ದೆಗಳನ್ನ ತಕ್ಷಣ ವಾಪಸ್ ಪಡೆಯಿರಿ. ಇನ್ನು ಗೋಹತ್ಯೆ ನಿಷೇಧ ಕಾಯ್ದೆಯನ್ನ ತರಬೇಕೋ ಬೇಡ್ವಾ ಅಂತಾ ನಾವು ನಿರ್ಧರಿಸ್ಬೇಕು. ಹಸು ಸಾಕುವ ಕುರಿತು ನಿಮ್ಮಿಂದ ಕಲಿಯಬೇಕಿಲ್ಲ’ …
Read More »ಮೂವರು ಸಚಿವರ ಖಾತೆಗಳಲ್ಲಿ ಮತ್ತೆ ಬದಲಾವಣೆ : ಸುಧಾಕರ್ ಗೆ ಮತ್ತೆ ವೈದ್ಯಕೀಯ ಶಿಕ್ಷಣ
ಬೆಂಗಳೂರು: ಬಿಎಸ್ ವೈ ಸಂಪುಟದ ಸಚಿವರುಗಳ ಖಾತೆಯಲ್ಲಿ ಮತ್ತೆ ಬದಲಾವಣೆ ಮಾಡಲಾಗಿದೆ. ಡಾ.ಕೆ ಸುಧಾಕರ್, ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಅವರುಗಳ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತವೂ ದೊರೆತಿದೆ. ಆರೋಗ್ಯ ಸಚಿವ ಕೆ ಸುಧಾಕರ್ ಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಮೊನ್ನೆ ಖಾತೆ ಬದಲಾವಣೆ ಸಂದರ್ಭದಲ್ಲಿ ಈ ಖಾತೆಯನ್ನು ಮಾಧುಸ್ವಾಮಿಯವರಿಗೆ ನೀಡಲಾಗಿತ್ತು. ಇದಕ್ಕೆ ಸುಧಾಕರ್ ಆಕ್ಷೇಪ ವ್ಯಕ್ತಪಡಿಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಜೆ ಸಿ …
Read More »ಬೆಳಗಾವಿ ಸೇರಿ ರಾಜ್ಯದ 19 ಪೊಲೀಸರಿಗೆ ರಾಷ್ಟ್ರಪತಿ ಪದಕ
ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಪ್ರಶಂಸನೀಯ ಸೇವಾ ಪದಕಕ್ಕೆ ಕರ್ನಾಟಕದ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಜನರಾಗಿದ್ದಾರೆ. ರಾಜ್ಯ ಗುಪ್ತದಳ ಐಜಿಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅಯ್ಯಂಕಿ, ಬೆಳಗಾವಿ ಉತ್ತರ ವಲಯದ ಎಸಿಬಿಯ ಎಸ್ಪಿ ಬಿ.ಎಸ್. ನೇಮೆಗೌಡ, ಬೆಂಗಳೂರಿನ ಸಿಐಡಿಯ ಆರ್ಥಿಕ ಅಪರಾಧಗಳ ಘಟಕದ ಡಿವೈಎಸ್ಪಿ ಬಸವಣ್ಣಪ್ಪ ರಾಮಚಂದ್ರ, ಬೆಂಗಳೂರು ರೈಲ್ವೆ ವಿಭಾಗದ ಡಿವೈಎಸ್‍ಪಿ ಡಿ.ಅಶೋಕ್, ಬಿಡಿಎ ವಿಶೇಷ ಕಾರ್ಯಪಡೆಯ ಡಿವೈಎಸ್‍ಪಿ ಸಿ.ಬಾಲಕೃಷ್ಣ, ಪೊಲೀಸ್ ಕೇಂದ್ರ ಕಚೇರಿಯ ಅಪರಾಧ …
Read More »ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನೇಣಿಗೆ ಶರಣು !
ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನಿನ್ನೆ ರಾತ್ರಿ ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿರುವಂತ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಫೇಸ್ಬುಕ್ ಪೋಸ್ಟ್ ನಲ್ಲಿಯೂ ನಟಿ ಜಯಶ್ರೀ ರಾಮಯ್ಯ ತಮಗೆ ದಯಾಮರಣ ಕೊಡಿ ಅಂತಾ ಹಾಕಿಕೊಂಡಿದ್ದರು. ಆ ವೇಳೆಯೇ ಜಯಶ್ರೀ ರಾಮಯ್ಯ ಎಷ್ಟರ ಮಟ್ಟಿಗೆ ಅವರು ಖಿನ್ನತೆಗೆ ಒಳಗಾಗಿದ್ದಾರೆ ಅನ್ನೋದು ಭಾರೀ ಚರ್ಚೆಗೆ ಕಾರಣವಾಗಿತ್ತು. ತಮ್ಮ ಫೇಸ್ಬುಕ್ನಲ್ಲಿ …
Read More »ಬಸ್ ಪಾಸ್ ಇದ್ರು ನಡೆದುಕೊಂಡು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು..!
ಗದಗ (ಜ. 24): ಕೊರೋನಾ ಹಾವಳಿಯಿಂದ ಆನ್ ಲೈನ್ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದು, ಈಗ ತಾನೇ ಕಾಲೇಜು ಕಡೇ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಒಂದು ಕಡೇ ಕೊರೊನಾ ಆತಂಕ ಇನ್ನೊಂದೆಡೆ ಸಮರ್ಪಕ ಸಾರಿಗೆ ಸಂಸ್ಥೆಯ ಬಸ್ ವ್ಯವಸ್ಥೆ ಇರದಿದಕ್ಕೆ ವಿದ್ಯಾರ್ಥಿಗಳು ಪಡಬಾರದ ಕಷ್ಟವನ್ನು ಅನುಭವಿಸುತ್ತಿದ್ದಾರೆ. ತಾಲೂಕಿನ ಹಾತಲಗೇರಿ ಗ್ರಾಮದ ವಿದ್ಯಾರ್ಥಿಗಳು ನಿತ್ಯ ಗದಗ ನಗರಕ್ಕೆ ನಡೆದುಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾತಲಗೇರಿ ಗ್ರಾಮದಲ್ಲಿ ಸುಮಾರು 40 ರಿಂದ 50 ವಿದ್ಯಾರ್ಥಿಗಳು, …
Read More »ಜ.26ರಂದು ಬೆಂಗಳೂರಲ್ಲಿ ದೆಹಲಿ ಮಾದರಿಯ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ..!
ಬೆಂಗಳೂರು,ಜ.24-ಕೃಷಿ ಕಾಯ್ದೆಗಳನ್ನು ವಿರೋಸಿ ದೆಹಲಿಯಲ್ಲಿ ನಡೆಸುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಜ.26ರಂದು ರಾಜ್ಯದಲ್ಲಿ ರೈತ ಸಂಘಟನೆಗಳು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಹಮ್ಮಿಕೊಂಡಿವೆ. ಬೆಂಗಳೂರು ನಗರದಲ್ಲಿ ಸಾವಿರಾರು ಟ್ರ್ಯಾಕ್ಟರ್‍ಗಳ ರ್ಯಾಲಿ ನಡೆಸುವ ಮೂಲಕ ದೆಹಲಿ ರೈತ ಚಳುವಳಿಗೆ ಬೆಂಬಲ ನೀಡಲಾಗುವುದು ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ವೀರಸಂಗಯ್ಯ ಹೇಳಿದರು. ರಾಜ್ಯ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸಂಘ, ಪ್ರಾಂತರೈತ ಸಂಘ, ಐಕ್ಯ ಹೋರಾಟ ಸಮಿತಿ ಸೇರಿದಂತೆ 4 …
Read More »ಕಿಸಾನ್ ಸಂಸದ್ ಸಭೆಗೆ ವೈಯಕ್ತಿಕ ಕಾರಣದಿಂದ ಸಭೆಗೆ ಹಾಜರಾಗುತ್ತಿಲ್ಲ: ಮಾಜಿ ಪ್ರಧಾನಿ ದೇವೇಗೌಡ
ಬೆಂಗಳೂರು: ಕಿಸಾನ್ ಸಂಸದ್ ಸಭೆಗೆ ವೈಯಕ್ತಿಕ ಕಾರಣದಿಂದ ಸಭೆಗೆ ಹಾಜರಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಶನಿವಾರ ಹೇಳಿದ್ದಾರೆ. ಹಿರಿಯ ವಕೀಲ ಪ್ರಶಾಂತ್ ಭೂಷಣ ಅವರಿಗೆ ಪತ್ರ ಬರೆದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಕಿಸಾನ್ ಸಂಸದ್ ಸಭೆಗೆ ವೈದ್ಯಕೀಯ ಕಾರಣಗಳಿಂದಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ದೈಹಿಕವಾಗಿ ಹಾಜರಾಗದಿದ್ದರೂ ನಾನು ರೈತರ ಪರವಾಗಿದ್ದೇನೆಂದು ಹೇಳಿದ್ದಾರೆ. ಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ರೈತರ ಮತ್ತು ಸ್ನೇಹಿತರ …
Read More »ಭಾನುವಾರ ರಾಜ್ಯಾದ್ಯಂತ ನಡೆಯಬೇಕಿದ್ದ F.D..A.ಪರೀಕ್ಷೆ ಮುಂದೂಡಿಕೆ
ಬೆಂಗಳೂರು – ರಾಜ್ಯಾದ್ಯಂತ ಭಾನುವಾರ ನಡೆಯಬೇಕಿದ್ದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆ ಹಠಾತ್ ಮಂದೂಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆ ನಡೆಸಬೇಕಿತ್ತು. ರಾಜ್ಯದಲ್ಲಿ 1100 ಪೋಸ್ಟ್ ಗಳಿಗಾಗಿ ಸುಮಾರು 3.74 ಲಕ್ಷ ಜನರು ಪರೀಕ್ಷೆ ಬರೆಯಬೇಕಿತ್ತು. ಆದರೆ ಪ್ರಶ್ನೆ ಪತ್ರಿಕೆ ಸೋರಿಕೆಯ ದೊಡ್ಡ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಹಠಾತ್ ಮುಂದೂಡಲಾಗಿದೆ. ಬೆಂಗಳೂರು ಪೊಲೀಸರು 6 ಜನರನ್ನು ಬಂಧಿಸಿದ್ದು, ಸುಮಾರು 6 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಈ ಕುರಿತು ತನಿಖೆ …
Read More »ಇನ್ನು 2 ದಿನ ಪರಪ್ಪನ ಅಗ್ರಹಾರ ಪಂಜರದಲ್ಲೇ ರಾ’ಗಿಣಿ’
ಬೆಂಗಳೂರು,ಜ.23- ಜಾಮಿನಿನ ಮೇಲೆ ಹೊರಬಂದಿದ್ದ ನಟಿ ರಾಗಿಣಿ ದ್ವಿವೇದಿ, ಷರತ್ತು ಪೂರೈಸದ ಹಿನ್ನೆಲೆಯಲ್ಲಿ ಇನ್ನು ಎರಡು ದಿನಗಳ ಕಾಲ ಜೈಲಿನಲ್ಲೇ ಮುಂದುವರೆಬೇಕಿದೆ. ರಾಗಿಣಿಗೆ ಎರಡು ಲಕ್ಷ ರೂ. ಬಾಂಡ್‍ನೊಂದಿಗೆ ಜಾಮೀನು ನೀಡಲಾಗಿತ್ತು. ಆದರೆ ಇದನ್ನು ಸಕಾಲಕ್ಕೆ ಪೂರೈಸದ ಹಿನ್ನೆಲೆಯಲ್ಲಿ ನಾಳೆ ಭಾನುವಾರ ಇರುವ ಕಾರಣ ಇನ್ನು ಎರಡು ದಿನ ಅವರು ಜೈಲಿನಲ್ಲೇ ಇರಬೇಕಾಗುತ್ತದೆ.ಇದಲ್ಲದೆ ಕೊರೊನಾ ಹಿನ್ನೆಲೆಯಲ್ಲಿ ನೇರವಾಗಿ ನ್ಯಾಯಾಲಯಕ್ಕೆ ಜಾಮೀನುದಾರರು ಮತ್ತು ಶ್ಯೂರಿಟಿ ಹಣ ಕಟ್ಟಲು ಸಾಧ್ಯವಿಲ್ಲ. ಅಂತರ್ಜಾಲದ ಮೂಲಕವೇ …
Read More »