ಬೆಂಗಳೂರು: ಮುಷ್ಕರ ನಿರತ ಬಿಎಂಟಿಸಿ ನೌಕರರಿಗೆ ಸರಕಾರ ಭಾರೀ ಪೆಟ್ಟು ನೀಡಿದ್ದು, ಶನಿವಾರ ಒಂದೇ ದಿನ 2,443 ನೌಕರರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇಷ್ಟು ನೌಕರರನ್ನು ಅಮಾನತು ಮಾಡಿರುವುದು ಇದೇ ಮೊದಲು. ಮುಷ್ಕರ ನಿಷೇಧಿಸಿದ್ದರೂ ಅನಧಿಕೃತವಾಗಿ ಭಾಗವಹಿಸಿದ್ದು ಮತ್ತು ಇತರರನ್ನು ಪ್ರಚೋದಿಸಿದ ಆರೋಪದ ಹಿನ್ನೆಲೆಯಲ್ಲಿ ಈ ಎಲ್ಲ ಸಿಬಂದಿಯನ್ನು ಅಮಾನತು ಮಾಡಲಾಗಿದೆ. ಸಾವಿರ ಮೀರಿದ ಸಂಖ್ಯೆ ಇತರ ಸಾರಿಗೆ ನಿಗಮಗಳ ವ್ಯಾಪ್ತಿಯಲ್ಲಿ ಇದುವರೆಗೆ 1 ಸಾವಿರಕ್ಕೂ ಅಧಿಕ ನೌಕರರನ್ನು ವಜಾಗೊಳಿಸಲಾಗಿದೆ. …
Read More »ರಾಜ್ಯದಲ್ಲಿ ಕೊರೋನಾ ಹೆಚ್ಚಳ ಹಿನ್ನಲೆ, ಸರ್ಕಾರಕ್ಕೆ ಹೈಕೋರ್ಟ್ ಮಹತ್ವದ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಸಲಾಗಿದೆ. ಕೋವಿಡ್ ಪರೀಕ್ಷೆ ವರದಿ ನೀಡುವುದರಲ್ಲಿ ವಿಳಂಬವಾಗುತ್ತಿದೆ. ಎಸ್‌ಎಂಎಸ್, ವಾಟ್ಸಾಪ್ ಮೂಲಕ ಶೀಘ್ರ ವರದಿಗೆ ಸೂಚನೆ ನೀಡಲಾಗಿದೆ. 24 ಗಂಟೆಯೊಳಗೆ ವರದಿ ನೀಡಲು ಹೈಕೋರ್ಟ್ ಸೂಚನೆ ನೀಡಿದ್ದು, ಟೆಸ್ಟ್ ಮಾಡಿಸಿದವರು ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ತಿಳಿಸಿದೆ. ಬೆಡ್ ನಿರ್ವಹಣೆಗೆ ವ್ಯವಸ್ಥೆ ಇರುವುದಾಗಿ ಸರ್ಕಾರದಿಂದ ಹೇಳಿಕೆ ನೀಡಲಾಗಿದೆ. ಬೆಡ್ ಒದಗಿಸುವುದು ಸರ್ಕಾರದ ಕರ್ತವ್ಯ. …
Read More »ನಾಳೆ ಆರ್ ಅಶೋಕ್ ನೇತೃತ್ವದಲ್ಲಿ ಸಭೆ ಲಾಕ್ ಆಗತ್ತಾ ಬೆಂಗಳೂರು …?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ ಕೂಡ ಸಿಗದ ದುಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿರ್ದೇಶನದಂತೆ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಬೆಂಗಳೂರು ಮಹಾನಗರದ ಎಲ್ಲಾ ಶಾಸಕರು, ಸಂಸದರು, ರಾಜ್ಯ ಸಭಾ ಸದಸ್ಯರು ಹಾಗೂ ಸಚಿವರುಗಳ …
Read More »ಎರಡು ಸಲ ವ್ಯಾಕ್ಸಿನ್ ಪಡೆದರೂ ಬಂತು ಕೊರೋನಾ
ಬೆಂಗಳೂರು, ಏಪ್ರಿಲ್ 17: ಕೋವಿಡ್19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಮೊದಲ ಸಾಲಿನಲ್ಲಿ ನಿಂತು ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರು ಸಾಮಾಜಿಕ ಅಂತರ ಕಾಪಾಡುವ ಜತೆಗೆ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಕಾನೂನು ಕ್ರಮ ಜರುಗಿಸುವ ಮೂಲಕ ಕೊರೋನಾ ತಡೆಗಟ್ಟಲು ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ, ಪೊಲೀಸರೇ ಕೊರೋನಾ ಸೋಂಕಿನಿಂದ ಬಳಲುವಂತಾಗಿದೆ. ಬೆಂಗಳೂರು ನಗರದ ಎಂಟು ಪೊಲೀಸ್ ವಲಯಗಳಲ್ಲಿ 90 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ …
Read More »ಯಾರು ಕೊರೊನಾ ಇಲ್ಲ ಅಂತ ಬೇಜಬ್ದಾರಿತನ ತೋರಿಸುತ್ತಾರೋ ಅವರ ಕಪಾಳಕ್ಕೆ ಹೊಡೆಯಿರಿ: ಸುನೇತ್ರಾ ಪಂಡಿತ್
ಬೆಂಗಳೂರು: ಯಾರು ಕೊರೊನಾ ಇಲ್ಲ ಅಂತ ಬೇಜಬ್ದಾರಿತನ ತೋರಿಸುತ್ತಾರೋ ಅವರ ಕಪಾಳಕ್ಕೆ ಹೊಡೆಯಿರಿ ಅಂತ ನಟಿ ಸುನೇತ್ರಾ ಪಂಡಿತ್ ಹೇಳಿದ್ದಾರೆ. ಸುಮ್ಮನಳ್ಳಿ ಚಿತಾಗಾರ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಕ್ಕ ಕೋವಿಡ್ ನಿಂದ ಸತ್ತೋದ್ಳು. ಒಂದು ದಿನ ಕೇರ್‍ಲೆಸ್ ಹಾಗೂ ಮಿಸ್ ಗೈಡ್ ಆಗಿದ್ದಕ್ಕೆ ಅಂತ ಹೇಳೋಕೆ ನಾನು ಬಯಸಲ್ಲ. ಆದರೆ ಅದೂ ಒಂದು ಕಾರಣ ಎಂದು ಹೇಳಿದರು. ನಮ್ಮ ಅಕ್ಕ ಹೊರಟೋದ್ಳು. ಅವಳಿಗೆ ಮಕ್ಕಳಿದ್ದಾರೆ, ಆ ಮಕ್ಕಳು ಏನ್ …
Read More »ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ ಪಕ್ಷದಿಂದ ಉಚ್ಛಾಟನೆ
ಬೆಂಗಳೂರು: ಬಸವಕಲ್ಯಾಣ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಪಕ್ಷದಿಂದ ಉಚ್ಛಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಮಲ್ಲಿಕಾರ್ಜುನ್ ಖೂಬಾ ಬಂಡಾಯ ಅಭ್ಯರ್ಥಿಯಾಗಿ ಬಸವಕಲ್ಯಾಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇಂದು ಮತದಾನ ಅರ್ಧ ಮುಗಿದ ನಂತರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ …
Read More »ನಟ ನಿಖಿಲ್ ಕುಮಾರಸ್ವಾಮಿಗೂ ಕೊರೊನಾ ಪಾಸಿಟಿವ್
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿಗೂ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಸಂಬಂಧ ಟ್ವೀಟ್ ಮಾಡಿರುವ ನಿಖಿಲ್, ನಾನು ಇಂದು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದು ಪ್ರಾಥಮಿಕ ವರದಿ ಪಾಸಿಟಿವ್ ಬಂದಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಕಳೆದ ಕೆಲ ದಿನಗಳಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ. ನಾನು …
Read More »ಬಿಜೆಪಿ ನಾಯಕರು ಆಡಳಿತಕ್ಕಿಂತಲೂ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ,ಕೊರೋನಾ 2ನೇ ಅಲೆಗೆ ಬಿಜೆಪಿ ನಾಯಕರೇ ಕಾರಣ : ಸಿದ್ದರಾಮಯ್
ಬೆಂಗಳೂರು, ಏ.17- ಕೋವಿಡ್ ನಿಯಂತ್ರಣದ ಸಲುವಾಗಿ ಜನರಿಗೆ ಶಿಷ್ಠಾಚಾರವನ್ನು ಬೋಧಿಸುವ ಬಿಜೆಪಿ ನಾಯಕರು ಸಾರ್ವಜನಿಕವಾಗಿ ನಿಯಮಗಳನ್ನು ಏಕೆ ಉಲ್ಲಂಘಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕರು ಆಡಳಿತಕ್ಕಿಂತಲೂ ಚುನಾವಣಾ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಕೋವಿಡ್ 2ನೆ ಅಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಪಲ್ಯವನ್ನು ಬಹಿರಂಗಗೊಳಿಸಿದೆ ಎಂದು ಹೇಳಿದ್ದಾರೆ. ಜನ ಕೋವಿಡ್‍ಗೆ ಚಿಕಿತ್ಸೆ ಸಿಗದೆ ಅಸಹಾಯಕರಾಗಿದ್ದಾರೆ. ಮೊದಲ ಹಂತದ ಅಲೆಯಲ್ಲಾದ ಭಾರೀ ಅನಾವುತಗಳಿಂದ ಕೇಂದ್ರ, ರಾಜ್ಯ …
Read More »ಚುನಾವಣಾ ಪ್ರಚಾರದಲ್ಲಿದ್ದ ಕೆಲವರಿಗೆ ಸೋಂಕು: ಲಕ್ಷ್ಮಣ್ ಸವದಿಗೆ ಕ್ವಾರಂಟೈನ್ ಆಗಲು ಸೂಚನೆ
ಬೆಂಗಳೂರು : ಬಸವಕಲ್ಯಾಣ ಉಪಚುನಾವಣೆಯ ಪ್ರಚಾರ ಪಾಲ್ಗೊಂಡಗೊಂಡಿದ್ದ ಪಕ್ಷದ ಕೆಲವರಿಗೆ ಕೋವಿಡ್ ಸೋಂಕು ತಗುಲಿದ್ದು ಮುಂಜಾಗ್ರತ ಕ್ರಮವಾಗಿ ವೈದ್ಯರ ಸಲಹೆಯಂತೆ ಕ್ವಾರಂಟೈನ್ ಆಗಲು ಸೂಚಿಸಿದ್ದಾರೆ ಎಂದುಸಾರಿಗೆ ಸಚಿವ ಲಕ್ಷ್ಮಣ್ ಸವದಿ ಎಂದಿದ್ದಾರೆ. ಈ ಕುರಿತು ಬಗ್ಗೆ ಸ್ವತಃ ಸಚಿವರೇ ಟ್ವೀಟ್ ಮಾಡಿದ್ದು ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಲ್ಲಿ ನಾನು ಕೆಲವು ದಿನಗಳ ಕಾಲ ತೊಡಗಿದ್ದ ಸಂದರ್ಭದಲ್ಲಿ ನನ್ನೊಂದಿಗೆ ಭಾಗವಹಿಸಿದ್ದ ಕೆಲವರಿಗೆ ಕೋವಿಡ್ ಸೋಂಕು ತಗುಲಿದ್ದು ಕಂಡುಬಂದಿದೆ. ಅಷ್ಟೇ ಅಲ್ಲ, ನನ್ನ ಗನ್‍ಮ್ಯಾನ್‍ಗೂ …
Read More »ಒಳಗಿನವರಿಂದಲ್ಲ, ಹೊರಗಿನಿಂದ ಬರುತ್ತಿರುವ ಕೈದಿಗಳಿಂದ ಕಾರಾಗೃಹದಲ್ಲಿ ಕೊರೋನಾ ಹೆಚ್ಚುತ್ತಿದೆ!
ಬೆಂಗಳೂರು: ಒಳಗಿರುವವರಿಂದಲ್ಲ, ಹೊರಗಿನಿಂದ ಬರುತ್ತಿರುವ ಕೈದಿಗಳಿಂದ ರಾಜ್ಯದ ಕಾರಾಗೃಹಗಳಲ್ಲಿ ಮಹಾಮಾರಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ ಎಂದು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಹೇಳಿದೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯನ್ನು ನೋಡಲ್ ಕೇಂದ್ರವನ್ನಾಗಿ ಮಾಡಲಾಗಿದೆ. ಕಳೆದ 2 ತಿಂಗಳುಗಳಿಂದ ಆಸ್ಪತ್ರೆ ಒಟ್ಟು 31 ಮಂದಿ ಸೋಂಕಿತ ಕೈದಿಗಳಿಗೆ ಚಿಕಿತ್ಸೆ ನೀಡಿದೆ. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಮತ್ತು ಕೇಂದ್ರ ಕಾರಾಗೃಹದ ಕಾರ್ಯಕಾರಿ ಸಮಿತಿ …
Read More »
Laxmi News 24×7