Breaking News

ಬೆಂಗಳೂರು

ಕೇಂದ್ರ ಸಚಿವ ಭೂಪೇಂದ್ರ ಯಾದವ್‌ – ಹೆಚ್‌ಡಿಕೆ ಮಹತ್ವದ ಚರ್ಚೆ

ನವದೆಹಲಿ:ಕರ್ನಾಟಕದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತವಾಗಿ ತಡೆಯೊಡ್ಡಿ ಜನರ ಜೀವ ರಕ್ಷಣೆ ಮಾಡುವ ಬಗ್ಗೆ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು. ಸಂಸತ್‌ ಭವನದಲ್ಲಿರುವ ಅರಣ್ಯ ಸಚಿವರ ಕಚೇರಿಯಲ್ಲಿ ನಡೆದ ಈ ಭೇಟಿಯ ವೇಳೆ ಕುಮಾರಸ್ವಾಮಿ ಅವರು ಮಾತನಾಡಿ, …

Read More »

ತುರ್ತು ಪ್ರತಿಕ್ರಿಯೆ ಸಹಾಯಕ್ಕೆ 112 ಜೊತೆ 14416 ಸಂಯೋಜನೆ

ಬೆಂಗಳೂರು: ಮಾನಸಿಕ ಆರೋಗ್ಯ ಸಂಕಷ್ಟ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಸಮಯೋಚಿತ ಸಹಾಯ ಒದಗಿಸಲು ಹಾಗೂ ಆತಹತ್ಯೆ ಅಪಾಯ ಸೇರಿದಂತ ಮಾನಸಿಕ ಚಿಕಿತ್ಸೆಗೆ ಸಂಬಂಧಿಸಿದ ತುರ್ತು ಸಮಯದಲ್ಲಿ ನಮ್ಮ 112 ಸಹಯೋಗದೊಂದಿಗೆ ಟೆಲಿ ಮನಸ್‌‍ (14416) ಸಂಯೋಜನೆಗೊಂಡಿದೆ. ನಗರದಲ್ಲಿ ಸಂಕಷ್ಟದ ಸಂದರ್ಭಗಳಲ್ಲಿ ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿ ಸುವ ದಿಕ್ಕಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.ನಗರದಲ್ಲಿ ತುರ್ತು ಮಾನಸಿಕ ಆರೋಗ್ಯ ಪ್ರತಿಕ್ರಿಯೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಇಂದು ಹಮಿಕೊಂಡಿದ್ದ ತುರ್ತು ಸ್ಪಂದನ ಸಹಾಯ ವ್ಯವಸ್ಥೆ …

Read More »

ಸಿ.ಟಿ.ರವಿ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು: ಕಾಂಗ್ರೆಸ್‌‍ ಸದಸ್ಯ ನಸೀರ್‌ ಅಹಮದ್‌ ವಿರುದ್ಧ ಆಕ್ಷೇಪಣಾ ಪದ ಬಳಸಿದ್ದ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಪಕ್ಷ ಸಭಾಪತಿಗಳಿಗೆ ಒತ್ತಾಯಿಸಿದ ಪರಿಣಾಮ ವಿಧಾನಪರಿಷತ್‌ನಲ್ಲಿ ಕಾವೇರಿದ ಬಿಸಿ ಬಿಸಿ ಚರ್ಚೆ ನಡೆಯಿತು. ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರವು ನಡೆಯಿತು. ಗಮನ ಸೆಳೆಯುವ ಹಾಗೂ ಲಿಖಿತ ಮೂಲಕ ಪ್ರಶ್ನೆಗಳಿಗೆ ಉತ್ತರಿಸುವುದು ಮುಗಿದ ನಂತರ ಸಭಾಪತಿ ಹೊರಟ್ಟಿಯವರಿಗೆ ಮುಖ್ಯ ಸಚೇತಕ ಸಲೀಂ …

Read More »

ಪ್ರಧಾನಿಗೆ ಅವಹೇಳನ: ವಿಧಾನ ಪರಿಷತ್‌ ನಲ್ಲಿ ಕೋಲಾಹಲ, ನಜೀರ್‌ ಕ್ಷಮೆಗೆ ಬಿಜೆಪಿ ಪಟ್ಟು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್‌‍ ಸದಸ್ಯ ನಸೀರ್‌ ಅಹದ್‌ ಕ್ಷಮೆ ಕೇಳಬೇಕೆಂದು ಪ್ರತಿಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದು ಗದ್ದಲ ಎಬ್ಬಿಸಿದ ಪರಿಣಾಮ ವಿಧಾನ ಪರಿಷತ್‌ ಕಲಾಪವನ್ನು ಸಭಾಪತಿ ಕೆಲಕಾಲ ಮುಂದೂಡಿದ ಪ್ರಸಂಗ ಜರುಗಿತು. ಸಭಾಪತಿ ಬಸವರಾಜ್‌ ಹೊರಟ್ಟಿ ಅವರು, ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್‌‍ ಸದಸ್ಯ ನಸೀರ್‌ ಅಹಮದ್‌ಗೆ ಪೀಠದಿಂದ ಸ್ಪಷ್ಟ ಸೂಚನೆ ನೀಡಿದರು. ನಾನು ಕ್ಷಮೆ ಕೇಳುವುದಿಲ್ಲ. ಬೇಕಿದ್ದರೆ, …

Read More »

ವಿಧಾನಸಭೆಯಲ್ಲಿ ʻಕುರ್ಚಿ ಕದನʼ ಪ್ರಸ್ತಾಪ; ಸಿಎಂ – ಡಿಸಿಎಂ ಒಗ್ಗಟ್ಟು ಪ್ರದರ್ಶನ

ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಪವರ್ ಶೇರ್ ವಿಚಾರ ಚರ್ಚೆಗೆ ಬಂದಾಗ ಸಿಎಂ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌  ಒಗ್ಗಟ್ಟು ಪ್ರದರ್ಶಿಸಿ ವಿಪಕ್ಷಗಳಿಗೆ ಟಕ್ಕರ್ ಕೊಟ್ಟ ಪ್ರಸಂಗ ನಡೆಯಿತು. ನಾನು ಹಾಗೂ ಸಿಎಂ ಪರಸ್ಪರರ ಕಷ್ಟದಲ್ಲಿ ಜೊತೆಯಾಗಿ ನಿಂತವರು. ಮುಂದೆಯೂ ಕಷ್ಟದಲ್ಲಿ ಪರಸ್ಪರ ಜೊತೆಯಾಗ್ತೇವೆ. ಸಿದ್ದರಾಮಯ್ಯ ನನ್ನ ಪರ ಇದ್ದಾರೆ. ನಾವಿಬ್ರೂ ಹೀಗೇ ಜೊತೆಯಾಗಿ ಇರ್ತೀವಿ. ಏನೇ ತೀರ್ಮಾನ ಇದ್ರೂ ಪಕ್ಷ ಮಾಡುತ್ತೆ. 2028ಕ್ಕೆ ಏನಾಗುತ್ತೆ ಅಂತ ನೋಡೋಣ ಎಂದು …

Read More »

7 ಸಾವಿರ ಆಸ್ತಿಗಳ ಹರಾಜಿಗೆ ಮುಂದಾದ ಜಿಬಿಎ

ಬೆಂಗಳೂರು: ತೆರಿಗೆ ಬಾಕಿ ಪಾವತಿಸದ ಮಾಲೀಕರ 7 ಸಾವಿರ ಆಸ್ತಿಗಳನ್ನು  ಹರಾಜು ಹಾಕಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ  ಮುಂದಾಗಿದೆ. ಜಿಬಿಎ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆಗಳಲ್ಲಿ ಒಟ್ಟು 437 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿಯಿದೆ.  ತೆರಿಗೆ ಪಾವತಿಸದ್ದಕ್ಕೆ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಜಾರಿ ಮಾಡಲಾಗಿತ್ತು. ನೋಟಿಸ್‌ ಜಾರಿ ಮಾಡಿಯೂ ತೆರಿಗೆ ಪಾವತಿಸದ್ದಕ್ಕೆ ಜಪ್ತಿ ಮಾಡುವ ಆದೇಶ ಪ್ರಕಟವಾಗಿದೆ. ಜಪ್ತಿ ಆದೇಶಗಳ ಬಳಿಕವೂ ತೆರಿಗೆ ಪಾವತಿಸಿದೇ ಇದ್ದರೆ ಫೆಬ್ರವರಿ …

Read More »

ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ

ವಿಧಾನ ಪರಿಷತ್ (ವಿಧಾನಸೌಧ): ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ. ಈ ಪೈಕಿ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಇತ್ಯರ್ಥ ಪಡಿಸಲಾಗಿದ್ದು, ಇನ್ನು ಉಳಿದವರ ಸಮಸ್ಯೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. ವಿಶೇಷ ಅಧಿವೇಶನದ ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯರಾದ ಪಿ.ಎಚ್‌.ಪೂಜಾರ‌ ಅವರ ಪ್ರಶ್ನೆಗೆ …

Read More »

ಪರೋಕ್ಷವಾಗಿ ಶಾಸಕ ಯತ್ನಾಳರಿಗೆ ತಿವಿದ ಸಚಿವ ಎಂ.ಬಿ.ಪಾಟೀಲ

ವಿಜಯಪುರ: ರಾಜ್ಯಪಾಲರು ಬಿಜೆಪಿಯವರು ಏನ್ ಹೇಳ್ತಾರೆ ಅದನ್ನ ಮಾಡ್ತಾರೆ. ಈ ರೀತಿ ಮಾಡ್ತಾರೆ ಎಂದು ನಮಗೆ ಗೊತ್ತಿತ್ತು.. ರಾಜ್ಯಪಾಲರಿಂದ ಇನ್ನೇನೂ ನಿರೀಕ್ಷೆ ಮಾಡಲಾಗಲ್ಲಾ ಎಂದು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ‌.ಬಿ.ಪಾಟೀಲ ಕಿಡಿ ಕಾರಿದರು. ದ್ವೇಷ ಭಾಷಣ ವಿಧೇಯಕ ಗೌವರ್ನರ್ ತಿರಸ್ಕಾರ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು. ದ್ವೇಷ ಭಾಷಣ ವಿಧೇಯಕ ಹಿಂದೆ ಒಂದು ಧರ್ಮದ ಟಾರ್ಗೆಟ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ …

Read More »

ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿ ಅನುಮಾನಾಸ್ಪದ ಸಾವು

ಬೆಂಗಳೂರು: ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ವ್ಯಕ್ತಿಯೋರ್ವ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ  ಭಾರತಿನಗರದ  ಫ್ರೂಟ್ಸ್ ಮಾರ್ಕೆಟ್ ಬಳಿ ನಡೆದಿದೆ. ಇರ್ಫಾನ್ ಮುಲ್ಲಾನಿ (26) ಮೃತ ವ್ಯಕ್ತಿ. ಜನವರಿ 30ರಂದು ಘಟನೆ ನಡೆದಿದೆ. ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಇರ್ಫಾನ್ ಇದ್ದಕ್ಕಿದ್ದಂತೆ ನಾಲ್ಕನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ. ಯಾರಾದರು ಮೇಲಿಂದ ತಳ್ಳಿದ್ರಾ ಅನ್ನೋ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಅನುಮಾನದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಭಾರತಿನಗರ ಪೊಲೀಸರು …

Read More »

ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ.ರಾಯ್ ಆತ್ಮಹತ್ಯೆ!

ಬೆಂಗಳೂರು : ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ ರಾಯ್ ಅವರು‌ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ‌ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಶೋಕ್ ನಗರ ಠಾಣಾ ವ್ಯಾಪ್ತಿಯ ಲ್ಯಾಂಗ್ ಫೋರ್ಡ್ ಟೌನ್‌ನಲ್ಲಿರುವ ತಮ್ಮದೇ ಕಚೇರಿಯಲ್ಲಿ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸಿ.ಜೆ.ರಾಯ್, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತದೇಹವನ್ನು ಆನೇಕಲ್‌ನ ನಾರಾಯಣ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಅಶೋಕ್ ನಗರ ಠಾಣೆ ಪೊಲೀಸರು ಭೇಟಿ …

Read More »