Breaking News

ಬಿಜಾಪುರ

ಮಳೆ ನಿಂತರೂ ಭೀಮಾ ನದಿಯ ಹರಿವು ಮಾತ್ರ ಕಡಿಮೆಯಾಗಿಲ್ಲ.

ವಿಜಯಪುರ: ಮಳೆ ನಿಂತರೂ ಭೀಮಾ ನದಿಯ ಹರಿವು ಮಾತ್ರ ಕಡಿಮೆಯಾಗಿಲ್ಲ. ಇದರಿಂದ ಜನ ನೀರಿನ ಮಧ್ಯೆ ಜೀವನ ಕಳೆಯುವಂತಾಗಿದೆ. ವಿಜಯಪುರ ಜಿಲ್ಲೆಯ ಇಂಡಿ, ಚಡಚಣ, ಆಲಮೇಲ ತಾಲೂಕಿನ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಚಡಚಣ ತಾಲೂಕಿನ ಹೊಳೆಸಂಕ, ಧೂಳಖೇಡದಲ್ಲಿ ಪ್ರವಾಹ ಕಡಿಮೆಯಾಗಿಲ್ಲ. ಇಂಡಿ ತಾಲೂಕಿನ ಮೀರಗಿಯಲ್ಲೂ ನೆರೆ ಕಡಿಮೆಯಾಗಿಲ್ಲ. ತಾರಾಪುರ, ಕುಮಸಗಿ, ದೇವಣಗಾಂವ್ ಗ್ರಾಮಗಳು ಇನ್ನೂ ನಡುಗಡ್ಡೆಯಾಗಿಯೇ ಉಳಿದಿವೆ. ಮನೆ ನಿಂತರೂ ಪ್ರವಾಹದ ಅಬ್ಬರ ನಿಂತಿಲ್ಲ. ಮಳೆ ನೀರು …

Read More »

ಬೆಳೆ ನಾಶದಿಂದ ಬೇಸತ್ತು ನದಿ ಪಾಲಾಗ್ತೀವಿ ಅಂತಾ ಮರವೇರಿದ ತಾಯಿ-ಮಗ, ಮುಂದೇನಾಯ್ತು?

ವಿಜಯಪುರ: ಬೆಳೆ ನಾಶದಿಂದ ಬೇಸತ್ತು ತಾಯಿ ಮತ್ತು ಆಕೆಯ ಮಗ ಮರವೇರಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಗ್ರಾಮದಲ್ಲಿ ನಡೆದಿದೆ. ಬೆಳೆ ನಾಶದಿಂದ ಮನನೊಂದಿದ್ದ ತಾಯಿ ಹಾಗೂ ಮಗನನ್ನು ರಕ್ಷಣೆ ಮಾಡಲಾಗಿದೆ. ಭೀಮಾ ನದಿ ಪ್ರವಾಹಕ್ಕೆ ಸಿಲುಕಿ ತಮ್ಮ ಜಮೀನಿನಲ್ಲಿದ್ದ ಬಾಳೆ ಹಾಗೂ ಕಬ್ಬು ಬೆಳೆ ಹಾಳಾದ ಕಾರಣ ತನ್ನ 110 ವರ್ಷದ ತಾಯಿ‌ ನೀಲಮ್ಮಳ ಜೊತೆ ಶಿವಮಲಪ್ಪ ಕೋಳಿ ಮರವೇರಿ ಕುಳಿತಿದ್ದ. ಇಡೀ ಬೆಳೆ ಹಾಳಾಗಿದೆ. ನಮ್ಮನ್ನ ರಕ್ಷಣೆ …

Read More »

ಧಾರಾಕಾರ ಮಳೆಗೆ ಎಲ್ಲವೂ ಹಾನಿ.. ಜನಜೀವನ ಅಸ್ತವ್ಯಸ್ತ

ವಿಜಯಪುರ: ಧಾರಾಕಾರ ಮಳೆಗೆ ಡೋಣಿ ನದಿ ತುಂಬಿ ಹರಿಯುತ್ತಿದೆ. ನದಿತೀರದ ಉಕುಮನಾಳ, ಸಾರವಾಡದಲ್ಲಿ ಪ್ರವಾಹ ಭೀತಿ ಶುರುವಾಗಿದೆ. ತಾಳಿಕೋಟೆ ಸೇತುವೆ ಜಲಾವೃತವಾದ ಹಿನ್ನೆಲೆಯಲ್ಲಿ ಹಡಗಿನಾಳ, ಕಲ್ಲದೇವನಹಳ್ಳಿ, ಶಿವಪುರ, ಹರನಾಳ, ಮೂಕಿನಾಳ ಗ್ರಾಮಗಳ ಸಂಪರ್ಕ ಕಟ್ ಆಗಿದೆ. ತಾಳಿಕೋಟೆ ಬಳಿಯ ಹನುಮಾನ್ ಮಂದಿರ ನೀರಿನಲ್ಲಿ ಮುಳುಗಿದೆ. ಕಟಾವಿಗೆ ಬಂದಿದ್ದ ಕಬ್ಬು ನಾಶ: ಇನ್ನು ನದಿಯ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಜಲಾವೃತಗೊಂಡಿದೆ. ಗದ್ದೆಗಳಲ್ಲಿ ನೀರು ನಿಂತಿರುವುದನ್ನು ನೋಡಿ ರೈತರು ಕಂಗಾಲಾಗಿದ್ದಾರೆ. …

Read More »

ಸಕ್ಕರೆ ಕಾರ್ಖಾನೆಯಲ್ಲಿ ಆಯತಪ್ಪಿ ಬಿದ್ದು ಕಾರ್ಮಿಕ ಸಾವು

ವಿಜಯಪುರ: ಕೆಲಸ ಮಾಡುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ಕಡಣಿಯಲ್ಲಿರುವ KPR ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಆಲಮೇಲ ಪಟ್ಟಣದ ಸುರೇಶ ಪೂಜಾರಿ(19) ಎಂದು ಗುರುತಿಸಲಾಗಿದೆ. ಕಾರ್ಖಾನೆಯಲ್ಲಿ ಸೂಕ್ತ ಸುರಕ್ಷತಾ ಸಾಧನಗಳಿಲ್ಲದ ಕಾರಣ ಸುರೇಶ ಮೃತಪಟ್ಟಿದ್ದಾನೆಂದು ಮೃತನ ಸಂಬಂಧಿಕರ ಆರೋಪಿಸಿದ್ದಾರೆ. ಮೃತನ‌ ನಿವಾಸದ ಬಳಿ ಸಂಬಂಧಿಕರು ಹಾಗೂ ಸ್ಥಳಿಯರಿಂದ ಪ್ರತಿಭಟನೆ ನಡೆದಿದ್ದು ಸೂಕ್ತ ಪರಿಹಾರ ನೀಡಲು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

Read More »

ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗ್ತಿದ್ದವನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ವಿಜಯಪುರ: ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿ ಹೋಗಿದ್ದವನನ್ನು ಅಗ್ನಿಶಾಮಕ ಸಿಬ್ಬಂದಿ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.ವಿಜಯಪುರ ತಾಲೂಕಿನ ಅತ್ತಾಲಟ್ಟಿ ಬಳಿ ಘಟನೆ ನಡೆದಿದ್ದು, ಅತ್ತಾಲಟ್ಟಿ ನಿವಾಸಿ ಬಂದೇನವಾಜ್ ಮೊಕಾಶಿಯವರನ್ನು ರಕ್ಷಣೆ ಮಾಡಲಾಗಿದೆ. ಸಕಾಲಕ್ಕೆ ತೆರಳಿ ಅಗ್ನಿಶಾಮಕ ದಳದ ಸಿಬ್ಬಂದಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಸಾರವಾಡದಿಂದ ಅತ್ತಾಲಟ್ಟಿಗೆ ಹೊರಟಿದ್ದ ವೇಳೆ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ವ್ಯಕ್ತಿ ಕೊಚ್ಚಿ ಹೋಗಿದ್ದ. ಕಳೆದ ರಾತ್ರಿ ನಡೆದ ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ. …

Read More »

ಪೊಲೀಸ್​ ಠಾಣೆ ಅಭಿವೃದ್ಧಿಗಾಗಿ ಎಂದು ಸಾಹೇಬರ ಹೆಸರು ಬಳಸಿ, ಮುಖ್ಯಪೇದೆ ಹಣ ವಸೂಲಿ

ವಿಜಯಪುರ: ಬೈಕ್ ಸವಾರರಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ವಸೂಲಿ ಮಾಡತ್ತಿರುವ ಘಟನೆ ಜಿಲ್ಲೆಯ ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಬಸವನಬಾಗೇವಾಡಿ ಠಾಣೆ ಹೆಡ್‌ ಕಾನ್ಸ್‌ಟೇಬಲ್ H.S.ಹೊಸಮನಿ ವಿರುದ್ಧ ಇಂತಹದೊಂದು ಆರೋಪ ಕೇಳಿಬಂದಿದೆ. ಬೈಕ್​ಗಳಿಗೆ ದಂಡ ಹಾಕುವ ನೆಪದಲ್ಲಿ ಪೊಲೀಸಪ್ಪ ಹಣ ಪೀಕುತ್ತಿದ್ದಾರಂತೆ. ಈ ಬಗ್ಗೆ ಪ್ರಶ್ನಿಸಿದ್ರೆ ಪೊಲೀಸ್ ಠಾಣೆಗೆ ಉಪಕರಣ ಖರೀದಿ ಮಾಡಲು ಮತ್ತು ಸಿಸಿಕ್ಯಾಮರಾಗಾಗಿ PSI ಸೂಚನೆ ಮೇರೆಗೆ ಹಣ ಸಂಗ್ರಹಿಸುತ್ತಿರುವುದಾಗಿ ಗ್ರಾಮಸ್ಥರಿಗೆ ಹೇಳುತ್ತಿದ್ದಾರಂತೆ. ಪ್ರತಿ ಬೈಕ್ …

Read More »

ಬೈಕ್ ಮುಖಾಮುಖಿ: ಮೂವರ ಸಾವು, ಎಲ್ಲಿ?

ವಿಜಯಪುರ: ಎರಡು ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ರೆ. ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಬೈಕ್ ಸವಾರರು ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೆ ಹೋಗುವಾಗ ದುರ್ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಎರಡೂ ಬೈಕ್​ಗಳು ಹೊತ್ತಿ ಉರಿದಿವೆ. ಮೃತರಿಗೆ ತಲೆಗೆ ಮಾತ್ರ ಗಾಯವಾಗಿದ್ದು, ಬೈಕ್ ಗಳು ಭಸ್ಮವಾಗಿವೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ …

Read More »

ಗರ್ಭಿಣಿಯನ್ನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್​​ವೊಂದು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ

ವಿಜಯಪುರ:  ಗರ್ಭಿಣಿಯನ್ನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್​​ವೊಂದು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಟಾಪ್ ನರ್ಸ್ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ವಿಜಯಪುರ ಹೊರವಲಯದ ಆಕಾಶವಾಣಿ ಕೇಂದ್ರದ ಬಳಿ ಘಟನೆ ನಡೆದಿದೆ.   ನಸುಕಿನ ಜಾವ 5 ಗಂಟೆ ಸುಮಾರಿಗೆ ಆ್ಯಂಬುಲೆನ್ಸ್​​ ಬಾಗೇವಾಡಿಯಿಂದ ಗರ್ಭಿಣಿಯನ್ನ ಕರೆದುಕೊಂಡು ಜಿಲ್ಲಾಸ್ಪತ್ರೆಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ. ಇಎಂಟಿ  ಸ್ಟಾಪ್ ನರ್ಸ್ ತುಳಸಿ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನ ಖಾಸಗಿ ಆಸ್ಪತ್ರೆಗೆ …

Read More »

ನಮ್ಮ ಹೀರೋ ಮಾಡಿದ, ಹೀರೊಯಿನ್ ಮಾಡಿದ್ರು ಅಂತ ಮುಂದೆ ಫಾಲೋ ಮಾಡಿದ್ರೆ ಗತಿಯೇನು: ನಟಿ, ರಾಜಕಾರಣಿ ತಾರಾ

ಬೆಂಗಳೂರು: ನಮ್ಮನ್ನ ಅನುಸರಿಸುವವರು ಇದ್ದಾರೆ. ಹೀಗಾಗಿ ನಮ್ಮ ಹೀರೋ ಮಾಡಿದ, ಹೀರೊಯಿನ್ ಮಾಡಿದ್ರು ಅಂತ ಮುಂದೆ ಫಾಲೋ ಮಾಡಿದ್ರೆ ಗತಿಯೇನು ಎಂದು ನಟಿ, ರಾಜಕಾರಣಿ ತಾರಾ ಪ್ರಶ್ನಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗಕ್ಕೆ ಯಾವುದೇ ದುರ್ನಾತ ಬಡಿಯದಿರಲಿ ಅಂತ ದೇವರಿಗೆ ನಮಸ್ಕಾರ ಮಾಡಿದೆ. ನಾನು ಸಿಎಂಗೆ ಇಂದು ಸಲಹೆ ನೀಡುವೆ. ನಾವೆಲ್ಲರೂ ಎಲ್ಲ ಬೆಳವಣಿಗೆ ವೀಕ್ಷಿಸುತ್ತಿದ್ದೀವಿ ಎಂದರು. ಡ್ರಗ್ಸ್ ವಿಚಾರ ನಮ್ಮ ರಂಗಕ್ಕೆ …

Read More »

ಎಟಿಎಂ ಸೆಕ್ಯೂರಿಟಿ ಗಾರ್ಡ್ ನನ್ನು ಬರ್ಬರ ಹತ್ಯೆ

ವಿಜಯಪುರ: ಎಟಿಎಂ ಸೆಕ್ಯೂರಿಟಿ ಗಾರ್ಡ್ ನನ್ನು ಬರ್ಬರವಾಗಿ ಹತ್ಯೆಗೈದು ಹಣ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.ಸಿಂದಗಿ ಪಟ್ಟಣದ ಶಾಪೂರ ಕಾಂಪ್ಲೆಕ್ಸ್‌ನಲ್ಲಿದ್ದ ಐಸಿಐಸಿಐ ಬ್ಯಾಂಕ್‍ನ ಎಟಿಎಂನಲ್ಲಿ ಈ ಘಟನೆ ನಡೆದಿದೆ. ರಾಹುಲ್ ರಾಠೋಡ್ (22) ಕೊಲೆಯಾದ ಯುವಕ. ಈತ ಜಿಲ್ಲೆಯ ಮದಬಾವಿ ತಾಂಡಾ ನಿವಾಸಿಯಾಗಿದ್ದು, ಐಸಿಐಸಿಐ ಬ್ಯಾಂಕ್ ಎಟಿಎಂನ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಮಂಕಿ ಕ್ಯಾಪ್ ಹಾಕಿಕೊಂಡು ಬಂದಿದ್ದ ಮೂವರು ಸೋಮವಾರ ರಾತ್ರಿ ಸುತ್ತಿಗೆಯಿಂದ …

Read More »