ಚಿಕ್ಕಮಗಳೂರು: ಹೋಟೆಲ್‍ನ ಕ್ವಾರಂಟೈನ್ ಘಟಕ ಮಾಡುತ್ತಾರೆಂದು ವಿಷಯ ತಿಳಿದು ಹೋಟೆಲ್ ಸಿಬ್ಬಂದಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕೋಟೆ ಬಡಾವಣೆಯಲ್ಲಿರೋ ವೈಟ್ ಫೆದರ್ ಹೋಟೆಲ್‍ನಲ್ಲಿ ವಿದೇಶ ಹಾಗೂ ಹೊರರಾಜ್ಯ ಬಂದ ಪ್ರಯಾಣಿಕರಿಗೆ ಕ್ವಾರಂಟೈನ್ ಘಟಕಕ್ಕೆ ಜಿಲ್ಲಾಡಳಿತ ಚಿಂತಿಸಿತ್ತು. ಈ ವಿಷಯ ತಿಳಿದ ಕೂಡಲೇ ಹೋಟೆಲ್ ಸಿಬ್ಬಂದಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇತ್ತ ಈ ಹೋಟೆಲ್‍ನಲ್ಲಿ ಕ್ವಾರಂಟೈನ್ ಘಟಕ ಮಾಡಲು ಸ್ಥಳೀಯರು ಕೂಡ …
Read More »ರೈತರು ಹೇಳಿದ್ದೇ ದರ – ಈರುಳ್ಳಿ, ಟೊಮಾಟೊ, ಕಲ್ಲಂಗಡಿ ಖರೀದಿಸಿದ ವೈ.ಎಸ್.ವಿ.ದತ್ತ
ಚಿಕ್ಕಮಗಳೂರು: ಬದುಕಿಗಾಗಿ ಬೆಳೆ ಬೆಳೆದು ಲಾಕ್‍ಡೌನ್‍ನಿಂದ ಕೊಳ್ಳುವವರಿಲ್ಲದೆ ಕಂಗಾಲಾಗಿದ್ದ ರೈತರ ಹೊಲಗಳಿಗೆ ಹೋಗಿ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸಾಂಕೇತಿಕವಾಗಿ ರೈತರು ಹೇಳಿದ ಬೆಲೆಗೆ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದಾರೆ. ಒಂದೆರಡು ಎಕ್ರೆಯಲ್ಲಿ ರೈತರು ಬದುಕಿಗಾಗಿ ನಾನಾ ಬೆಳೆ ಬೆಳೆದಿರುತ್ತಾರೆ. ಬೆಲೆ ಇದ್ದಾಗ ಬೆಳೆ ಇರಲ್ಲ. ಬೆಳೆ ಇದ್ದಾಗ ಬೆಲೆ ಇರಲ್ಲ. ರಾಜ್ಯದ ರೈತರದ್ದು ಶೋಚನಿಯ ಪರಿಸ್ಥಿತಿ. ರೈತರ ಬಹುಪಾಲು ಜೀವನ ಮಧ್ಯವರ್ತಿಗಳ ಜೇಬು ಸೇರುತ್ತೆ. ಅದರಲ್ಲೂ …
Read More »ಕಾಫಿ ಉದ್ಯಮದ ಮೇಲೆ ಕೊರೊನಾ ಕಾರ್ಮೋಡ…………
ಹಾಸನ: ಕೊರೊನಾ ಮಹಾಮಾರಿ ಹೊಡೆತಕ್ಕೆ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಫಿಗೆ ಒಳ್ಳೆ ಬೆಲೆನೂ ಸಿಗುತ್ತಿಲ್ಲ. ಇತ್ತ ಕಾಫಿಯನ್ನು ಕೊಳ್ಳುವವರು ಇಲ್ಲದಂತಾಗಿದೆ. ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದ ಕಾಫಿತೋಟದ ಮಾಲೀಕರು ಈ ಬಾರಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಇದ್ದಕ್ಕಿದ್ದಂತೆ ವಕ್ಕರಿಸಿದ ಕೊರೊನಾ ಮಹಾಮಾರಿಯಿಂದಾಗಿ ಕಾಫಿ ಬೆಳೆಗೆ ಬೇಡಿಕೆ ಕುಸಿದಿದೆ. ಕಾಫಿ ಕೊಳ್ಳುವವರು ಕೂಡ ಮುಂದೆ ಬರುತ್ತಿಲ್ಲ. ಇದರಿಂದ ಸರಿಯಾದ ಬೆಲೆ ಕೂಡ ಸಿಗದಂತಾಗಿದೆ. ಇದೇ ರೀತಿ ಮುಂದುವರಿದರೆ …
Read More »ಚೌಕಾಬಾರದಲ್ಲಿ ಗೆದ್ದ 500 ರೂ.ಗಾಗಿ ಅಣ್ಣನನ್ನೇ ಕೊಲೆಗೈದ ತಮ್ಮ……..
ಚಿಕ್ಕಮಗಳೂರು: ಮದ್ಯದ ಅಮಲಿನಲ್ಲಿ ತಮ್ಮನೇ ಅಣ್ಣನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿಯ ಉಪ್ಪಾರ ಬೀರನಹಳ್ಳಿ ಪಿಡಬ್ಲ್ಯುಡಿ ಕ್ವಾಟರ್ಸ್‍ನಲ್ಲಿ ನಡೆದಿದೆ. ಸಹೋದರರಿಬ್ಬರು ಮನೆ ಮುಂದೆ ಚೌಕಾಬಾರ ಆಟವಾಡುತ್ತಿದ್ದಾಗ ಕ್ಷುಲಕ್ಕ ಕಾರಣಕ್ಕೆ ಗಲಾಟೆ ಆರಂಭವಾಗಿದೆ. ತಮ್ಮ ಕಿರಣ್ ಬಳಿ ಅಣ್ಣ ಅರುಣ್ ಚೌಕಾಬಾರ ಆಟದಲ್ಲಿ 500 ರೂಪಾಯಿ ಸೋತಿದ್ದ. ಈ ವೇಳೆ ತಮ್ಮ ಕಿರಣ್ ಮೊದಲು ಸೋತ ಹಣ ಕೊಡು, ಆಮೇಲೆ ಆಡೋಣ ಎಂದು ದುಂಬಾಲು …
Read More »ಕೋವಿಡ್-19 ವಾರಿಯರ್ಸ್‌ಗೆ ಆರತಿ ಎತ್ತಿ, ಹೂಮಳೆಗೈದ ಗುರೂಜಿ……
ಚಿಕ್ಕಮಗಳೂರು: ಕೊರೊನಾ ವಾರಿಯರ್ಸ್ ಗಳಿಗೆ ಗೌರಿಗದ್ದೆ ದತ್ತಶ್ರಮದ ಅವಧೂತ ವಿನಯ್ ಗುರೂಜಿ ಆರತಿ ಎತ್ತಿ, ಹೂಮಳೆಗೈದಿದ್ದಾರೆ. ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಗೌರಿಗದ್ದೆ ದತ್ತಾಶ್ರಮದಲ್ಲಿ ಬುದ್ಧ ಪೂರ್ಣಿಮೆಯ ಅಂಗವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಮರ್ಪಿಸಿದರು. ಹೆಲ್ತ್ ವಾರಿಯರ್ಸ್‍ಗೆ ವಿನಯ್ ಗುರೂಜಿ ಅವರು ಆರತಿ ಎತ್ತಿದರು. ಬಳಿಕ ಮೇಲ್ಭಾಗದಲ್ಲಿ ಕುಳಿತಿದ್ದ ಅವರ ಬಳಿಗೆ ಹೋಗಿ ಹೂಗಳನ್ನ ಸುರಿದು ಪುಷ್ಪಾರ್ಚನೆಯ ಮೂಲಕ ಗೌರವಿಸಿದ್ದಾರೆ. ಈ ವೇಳೆ ಮಾತನಾಡಿದ ವಿನಯ್ ಗುರೂಜಿ, ವೈದ್ಯರು, …
Read More »ಒಂದೂವರೆ ತಿಂಗಳ ಬಳಿಕ ಎಣ್ಣೆ ಸಿಕ್ಕ ಖುಷಿಗೆ ಮದ್ಯವ್ಯಸನಿಗಳು ಜಗತ್ತನ್ನೇ ಮರೆತು, ಮೈಮರೆತು ಎಣ್ಣೆಯ ನಶೆಯಲ್ಲಿ ತೇಲುತ್ತಿದ್ದಾರೆ.
ಚಿಕ್ಕಮಗಳೂರು: ಒಂದೂವರೆ ತಿಂಗಳ ಬಳಿಕ ಎಣ್ಣೆ ಸಿಕ್ಕ ಖುಷಿಗೆ ಮದ್ಯವ್ಯಸನಿಗಳು ಜಗತ್ತನ್ನೇ ಮರೆತು, ಮೈಮರೆತು ಎಣ್ಣೆಯ ನಶೆಯಲ್ಲಿ ತೇಲುತ್ತಿದ್ದಾರೆ. ಹೊಟ್ಟೆ ತುಂಬಾ ಕುಡಿದು ಎಲ್ಲೆಂದರಲ್ಲಿ ಬಿದ್ದರೂ ಕುಡುಕರಿಗೆ ಇನ್ನೂ ಸಮಾಧಾನ ಆಗಿಲ್ಲ ಅನಿಸುತ್ತಿದೆ. ಯಾಕಂದ್ರೆ ಮದ್ಯ ಪ್ರಿಯರು ಫುಲ್ ಟೈಟಾಗಿ ಮೈಮೇಲೆ ಜ್ಞಾನ ಇಲ್ಲದಂತೆ ಎದ್ದು-ಬಿದ್ದೋ ತೇಲ್ತಿರೋ ಘಟನೆ ಜಿಲ್ಲೆಯ ವಿವಿಧ ಭಾಗದಲ್ಲಿ ಇನ್ನೂ ನಿಂತಿಲ್ಲ. ಫುಲ್ ಟೈಟಾಗಿ ರಸ್ತೆ ಮಧ್ಯೆ ಪ್ರಜ್ಞೆ ತಪ್ಪಿ ಮಲಗುತ್ತಿರುವ ಸನ್ನಿವೇಶಗಳು ಕಡಿಮೆಯಾಗಿಲ್ಲ. ಕೊರೊನಾ …
Read More »ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ
ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ. ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ …
Read More »ಹಣ ಕೊಡ್ಲಿಲ್ಲ ಅಂತ ಮಾಲೀಕನ ಟಿಪ್ಪರ್ ಎಗರಿಸಿದ ಭೂಪ………
ಚಿಕ್ಕಮಗಳೂರು: ಹೆಂಡತಿ-ಮಕ್ಕಳಿಗೆ ಹಣ ಬೇಕು. ನಿಮ್ಮ ಕಾಲಿಗೆ ಬೀಳ್ತೀನಿ ಅಂದ್ರು ಮಾಲೀಕ ಹಣ ಕೊಡಲಿಲ್ಲ ಅಂತ ಹೇಳದೆ-ಕೇಳದೆ ಎಣ್ಣೆ ಏಟಲ್ಲಿ 14 ಚಕ್ರದ ಟಿಪ್ಪರ್ ಲಾರಿಯನ್ನ ತೆಗೆದುಕೊಂಡು ಊರಿಗೆ ಹೋಗಲು ಯತ್ನಿಸಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ. ಮಂಗಳೂರು ಮೂಲದ ರಂಗಪ್ಪ ಎಂಬವನು ಕಡೂರು ತಾಲೂಕಿನಲ್ಲಿ ಪ್ರಭಾಕರ್ ಅವರ ಬಳಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್ ಆತಂಕದಿಂದ ಇಡೀ ದೇಶವೇ ಲಾಕ್‍ಡೌನ್ ಆದಮೇಲೆ ಡ್ರೈವರ್ ರಂಗಪ್ಪ ಒಂದೂವರೆ ತಿಂಗಳು …
Read More »ಮಲೆನಾಡಲ್ಲಿ ಭಾರೀ ಮಳೆ, ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ…
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭರಣಿ ಮಳೆ ಅಬ್ಬರಕ್ಕೆ ಮಲೆನಾಡಿಗರು ತತ್ತರಿಸಿದೆ. ಮೂಡಿಗೆರೆಯಲ್ಲಿ ಸಂಜೆಯಿಂದ ಧಾರಾಕಾರ ಮಳೆ ಸುರಿದಿದ್ದು, ಜನ ಆತಂಕಕ್ಕೀಡಾಗಿ, ಕಳೆದ ವರ್ಷದ ಮಳೆಯನ್ನು ನೆನಪಿಸಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ತೋರಣಮಾವು ಗ್ರಾಮದಲ್ಲಿ ಮಳೆ ಆರಂಭಕ್ಕೂ ಮುನ್ನ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದಿದೆ. ನೋಡನೋಡ್ತಿದ್ದಂತೆ ತೆಂಗಿನ ಸಂಪೂರ್ಣ ಸುಟ್ಟು ಕರಕಲಾಗಿದೆ. ಚಿಕ್ಕಮಗಳೂರು ತಾಲೂಕಿನ ಬಯಲುಸೀಮೆ ಭಾಗ ಕಳಸಾಪುರ, ಬೆಳವಾಡಿ ಹಾಗೂ …
Read More »ಬಿರುಗಾಳಿ ಸಹಿತ ಮಳೆ,ಎಷ್ಟೇ ಮಳೆ ಸುರಿದರೂ ಕ್ಯೂನಿಂದ ಮಾತ್ರ ಕದಲಿಲ್ಲ. ಎಣ್ಣೆಯನ್ನು ಪಡೆಯುವ ವರೆಗೂ
ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸೋಮವಾರ ಸಂಜೆ ಭಾರೀ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ಬೃಹತ್ ಮರ ಬಿದ್ದಿ ಪರಿಣಾಮ ಕಾರ್ ಜಖಂ ಆಗಿದೆ. ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ತರೀಕೆರೆಯಲ್ಲಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನಿರಂತರ ಮಳೆಯಿಂದಾಗಿ ಹೆಚ್ಚಿದ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಕೊರೊನಾ, ಲಾಕ್‍ಡೌನ್ ಮಧ್ಯೆ ಮಳೆಯೂ ಸುರಿಯುತ್ತಿದೆ ಎಂದು ಭಯಭೀತರಾಗಿದ್ದಾರೆ. ತರೀಕೆರೆ, ಮೂಡಿಗೆರೆ, ಕಡೂರು ತಾಲೂಕಿನ ಹಲವೆಡೆ …
Read More »
Laxmi News 24×7