Breaking News

ಕೋಲಾರ

ಕೋಲಾರ: ಜಿಲ್ಲೆಯಲ್ಲಿ 79 ಮಂದಿಗೆ ಸೋಂಕು

ಕೋಲಾರ: ಜಿಲ್ಲೆಯಲ್ಲಿ ಹೊಸದಾಗಿ 79 ಮಂದಿಗೆ ಕೊರೊನಾ ಸೋಂಕು ಹರಡಿರುವುದು ಬುಧವಾರ ದೃಢಪಟ್ಟಿದ್ದು, ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 763ಕ್ಕೆ ಏರಿಕೆಯಾಗಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ವಿಷಮ ಶೀತ ಜ್ವರವಿರುವ 72 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 5 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 28 ಮಂದಿಗೆ ಸೋಂಕು ಬಂದಿದೆ. ವಿಷಮ ಶೀತ ಜ್ವರಪೀಡಿತ 27 ಮಂದಿಗೆ ಹಾಗೂ ಆರೋಗ್ಯ …

Read More »

ಲಾಂಗ್ ಹಿಡಿದು ದಾರಿ ಹೋಕರಿಗೆ ಬೆದರಿಕೆ ಹಾಕಿದ್ದು ಅಲ್ಲದೇ ಬಾರ್ ಮಾಲೀಕನಿಗೆ ಬಿಯರ್ ನೀಡುವಂತೆ ಒತ್ತಾಯ

    ಕೋಲಾರ: ಕೆಜಿಎಫ್‍ನಲ್ಲಿ ರೌಡಿಶೀಟರ್ ಓರ್ವ ಸಿನಿಮಾ ಸ್ಟೈಲ್ ನಲ್ಲಿ ಲಾಂಗ್ ಹಿಡಿದು ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ. ಕುಡಿದ ಅಮಲಿನಲ್ಲಿ ಲಾಂಗ್ ಹಿಡಿದು ದಾರಿ ಹೋಕರಿಗೆ ಬೆದರಿಕೆ ಹಾಕಿದ್ದು ಅಲ್ಲದೇ ಬಾರ್ ಮಾಲೀಕನಿಗೆ ಬಿಯರ್ ನೀಡುವಂತೆ ತಮಿಳಿನಲ್ಲಿ ಒತ್ತಾಯ ಮಾಡಿದ್ದಾನೆ. ಕೋಲಾರ ಜಿಲ್ಲೆಯ ಕೆಜಿಎಫ್‍ನಗರದ ಸಲ್ಡಾನಾ ಸರ್ಕಲ್‍ನ ಬಾರ್ ಮುಂದೆ ಎರಡು ದಿನದ ಹಿಂದೆ ಈ ನಡೆದಿದೆ ಎನ್ನಲಾಗಿದೆ. ಸೂಸೈ ಪಾಳ್ಯ ನಿವಾಸಿ ರೌಡಿಶೀಟರ್ ಎಡ್ವಿನ್ ಕುಡಿದ …

Read More »

ಕೋಲಾರದ ಚಿನ್ನದ ಗಣಿಯಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲು ನಿರ್ಧಾರ; ಸಚಿವ ಜಗದೀಶ್ ಶೆಟ್ಟರ್ ಮಾಹಿತಿ

ಕೋಲಾರ  : ಕೋಲಾರ ಜಿಲ್ಲೆಯ ಕೆಜಿಎಫ್​ನ ಬಿಜಿಎಂಎಲ್​ನ ಕೋಲಾರ ಗೋಲ್ಡ್ ಫೀಲ್ಡ್ಸ್ ಒಡೆತನದ ಬಳಕೆಯಾಗದ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು ಮುಂದಾಗಿದೆ. ಚಿನ್ನದ ಗಣಿಯು 12 ಸಾವಿರ ಎಕರೆ ವಿಶಾಲವಾದ ಪ್ರದೇಶದಲ್ಲಿದ್ದು, ಇಲ್ಲಿ ಇದುವರೆಗೂ ಬಳಸದ 3,200 ಎಕರೆ ಜಾಗದಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಈ ಸ್ಥಳ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿ ಇರುವುದರಿಂದ ಕೇಂದ್ರದ ಸಮ್ಮತಿ ಅತ್ಯಗತ್ಯವಾಗಿದೆ. ಶನಿವಾರ ಬೃಹತ್ ಕೈಗಾರಿಕಾ ಸಚಿವ ಜಗದೀಶ್ …

Read More »

ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ಯುವಕನ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ

ಕೋಲಾರ: ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಸಿನಿಮಾದಲ್ಲಿ ಹೊಡೆಯುವ ರೀತಿಯಲ್ಲೇ ಯುವಕನ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಲಾಗಿದೆ.ಕೋಲಾರದ ಕೆಜಿಎಫ್ ನಗರದ ಚಾಮರಾಜಪೇಟೆ ವೃತ್ತದಲ್ಲಿ ಘಟನೆ ನಡೆದಿದ್ದು, ಹುಟ್ಟುಹಬ್ಬದ ಶೋಕಿ ಹಾಗೂ ಏರಿಯಾಗಳ ನಡುವಿನ ಗ್ಯಾಂಗ್ ವಾರ್ ಟ್ರೆಂಡ್ ಕ್ರಿಯೇಟ್ ಮಾಡಿ, ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಯುವಕ ಸ್ಟಾಲಿನ್ ಮೃತ ಪಟ್ಟಿದ್ದಾನೆ. ಯುವಕನನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. …

Read More »

ನಾಲ್ಕು ತಿಂಗಳಲ್ಲಿ ಬಯಲುಸೀಮೆ ಕೋಲಾರ ಜನರ ದಾಹ ನೀಗಲಿದೆ.

ಕೋಲಾರ: ಮುಂದಿನ ನಾಲ್ಕು ತಿಂಗಳಲ್ಲಿ ಬಯಲುಸೀಮೆ ಕೋಲಾರ ಜನರ ದಾಹ ನೀಗಲಿದೆ. ಯರಗೋಳ್ ಯೋಜನೆ ಮೂಲಕ 4 ನಗರಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ.ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಗ್ರಾಮದಲ್ಲಿ ಬೃಹದಾಕಾರವಾಗಿ ಆಣೆಕಟ್ಟು ತಲೆ ಎತ್ತಿದೆ. ಕೋಲಾರ ಸೇರಿದಂತೆ ಮೂರು ತಾಲೂಕುಗಳಿಗೆ ಕುಡಿಯುವ ನೀರು ಒದಗಿಸಲು 2008 ರಲ್ಲಿ ಯರಗೋಳ್ ಯೋಜನೆ ಆರಂಭವಾಗಿತ್ತು. ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಿಗೆ ಹಾಗೂ 45 ಇನ್ನಿತರ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಂದಿನ …

Read More »

ಕಳೆದ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಾಂಪ್ಲೆಕ್ಸ್ ನಲ್ಲಿದ್ದ ಅಂಗಡಿಗಳ ಬೀಗ ಮುರಿದು ಕಳ್ಳತನ

ಕೋಲಾರ: ನಗರದಲ್ಲಿ ಕೊರೊನಾ ಆತಂಕದ ಮಧ್ಯೆ ಕಳ್ಳರ ಕೈಚಳಕ ಆರಂಭವಾಗಿದ್ದು, ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ. ಕೋಲಾರ ನಗರದ ಅರ್ಬನ್ ಬ್ಯಾಂಕ್ ಕಾಂಪ್ಲೆಕ್ಸ್ ನಲ್ಲಿ ಕಳೆದ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಕಾಂಪ್ಲೆಕ್ಸ್ ನಲ್ಲಿದ್ದ ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಅದೃಷ್ಟವಶಾತ್ ಅರ್ಬನ್ ಬ್ಯಾಂಕ್ ಹೊರತುಪಡಿಸಿ ಉಳಿದಂತೆ ಮೆಡಿಕಲ್ ಸ್ಟೋರ್, ಡೆಂಟಲ್ ಕ್ಲಿನಿಕ್, ಟೈಲರ್ ಅಂಗಡಿ, ಫೈನಾನ್ಸ್ ಆಫೀಸ್ ಸೇರಿದಂತೆ ಎಂಟು ಅಂಗಡಿಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಅಂಗಡಿಗಳಲ್ಲಿ …

Read More »

ಗಲಭೆ ಪ್ರಕರಣಗಳಲ್ಲಿ ಭಾಗಿಯಾದವರು ಎಷ್ಟೇ ದೂರ ಹೋದರು ಸಹ ಅವರಿಗೆಬಂಧಿಸುತ್ತೇವೆ: ಪ್ರವೀಣ್ ಸೂದ್

ಕೋಲಾರ: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣಗಳಲ್ಲಿ ಭಾಗಿಯಾದವರು ಎಷ್ಟೇ ದೂರ ಹೋದರು ಸಹ ಅವರಿಗೆ ಶಿಕ್ಷೆ ನೀಡಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಕೋಲಾರಕ್ಕೆ ಭೇಟಿ ನೀಡಿ ನಗರದ ಹೊರ ವಲಯದ ಟಮಕ ಬಳಿಯ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಮಾಡಿ ನಂತರ ಕೋಲಾರಕ್ಕೆ ಬಂದಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. …

Read More »

ಪ್ರೀತಿಸಿದ ಯುವತಿಯನ್ನು ಹಾಡಹಗಲೇಸಿನಿಮಾ ಸ್ಟೈಲ್ ನಲ್ಲಿ ಕಿಡ್ನಾಪ್

ಕೋಲಾರ: ಪ್ರೀತಿಸಿದ ಯುವತಿಯನ್ನು ಹಾಡಹಗಲೇ ನಡುರಸ್ತೆಯಲ್ಲಿ ಯುವಕ ಅಪಹರಿಸಿದ ಘಟನೆ ಇಂದು ಕೋಲಾರದಲ್ಲಿ ನಡೆದಿದೆ.ಶಿವ ಯುವತಿಯನ್ನು ಅಪಹರಿಸಿದ ಯುವಕ. ಪ್ರೀತಿಸಿ ಇನ್ನೇನು ಮದುವೆಯಾಗಬೇಕು ಎಂದುಕೊಂಡಿದ್ದ ವೇಳೆ ಯುವತಿಯ ಕುಟುಂಬಸ್ಥರು ನಿರಾಕರಿಸಿದ್ದರು. ಈ ಹಿನ್ನೆಲೆ ಸಿನಿಮಾ ಸ್ಟೈಲ್‍ನಲ್ಲಿ ಪ್ರಿಯಕರ ತನ್ನ ಪ್ರಿಯತಮೆಯನ್ನ ಕಿಡ್ನಾಪ್ ಮಾಡಿದ್ದಾನೆ. ಜನ ನಿಬಿಡ ಪ್ರದೇಶದಲ್ಲಿ ಹಾಡ ಹಗಲೆ ಪ್ರೀತಿಸಿದ ಯುವತಿಯನ್ನ ಕಿಡ್ನಾಪ್ ಮಾಡಿದ ಯುವಕನ ಕೈ ಚಳಕಕ್ಕೆ ಈಡೀ ಕೋಲಾರ ನಗರ ಬೆಚ್ಚಿ ಬಿದ್ದಿದೆ. ಕೋಲಾರ ನಗರದ …

Read More »

ಕೊರೊನಾ ಹಿನ್ನೆಲೆ ಕೋಲಾರದಲ್ಲಿ ಗಲ್ಲಿ ಗಣೇಶ ನಿಷೇಧ:

ಕೋಲಾರ: ಕೊರೊನಾ ಹಿನ್ನೆಲೆ ಈ ಬಾರಿ ಸಾರ್ವಜನಿಕವಾಗಿ ಬೀದಿಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡಲು ಅವಕಾಶವಿಲ್ಲವೆಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಹಿನ್ನೆಲೆ ಗಣೇಶ ಹಬ್ಬವನ್ನು ಆಡಂಬರದಿಂದ ಆಚರಣೆ ಮಾಡದೆ, ಸರಳವಾಗಿ ಮತ್ತು ಭಕ್ತಿ-ಭಾವದಿಂದ ಆಚರಣೆ ಮಾಡುವಂತೆ ಜನರಲ್ಲಿ ಮನವಿ ಮಾಡಿದರು. ಈ ಹಿಂದೆ ಗಣೇಶ ಮೂರ್ತಿಗಳನ್ನು ಗಲ್ಲಿಗಳಲ್ಲಿ ಪ್ರತಿಷ್ಟಾಪನೆ ಮಾಡುವ ಜೊತೆಗೆ ಸಾರ್ವಜನಿಕವಾಗಿ ವಿಸರ್ಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ …

Read More »

ಬ್ರಾಹ್ಮಣರಿಗೆ ಜಾತಿ ಹಾಗೂ ಆದಾಯ ಪತ್ರ ನೀಡುತ್ತಿರುವುದಕ್ಕೆ ಯಡಿಯೂರಪ್ಪ ಅವರಿಗೆ ಕೃತಜ್ಞತೆ

ಕೋಲಾರ: ಎಂಎಲ್‍ಸಿ ಆಕಾಂಕ್ಷಿಯಾಗಿದ್ದ ನನಗೆ ಮಂಡಳಿ ಅದ್ಯಕ್ಷರನ್ನಾಗಿ ಮಾಡಿದ್ದು, ಪ್ರಾರಂಭದಲ್ಲಿ ಇಷ್ವವಿರಲಿಲ್ಲ. ಆದರೆ ಇದೀಗ ತೃಪ್ತಿ ತಂದಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಕೋಲಾರದಲ್ಲಿ ಹೇಳಿದ್ದಾರೆ.ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದು, ಶಾಸಕನಾಗಿ, ಎಂಎಲ್‍ಸಿ ಆಗಬೇಕೆಂಬುವ ಆಸೆ ಇತ್ತು. ಆದರೆ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿದ್ದು, ಇದೀಗ ತೃಪ್ತಿತಂದಿದೆ ಎಂದರು. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಯಡಿಯೂರಪ್ಪ …

Read More »