ಕೋಲಾರ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ರಾಜಕಾರಣದತ್ತ ಗಮನ ಹರಿಸುವಂತೆ ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಅಭಿಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ರು. ಕೋಲಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಜೊತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲವೆಂದು ಸ್ಪಷ್ಟಪಡಿಸಿದ್ರು. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ …
Read More »7 ಬಾರಿಯ ಸಂಸದ ಕೆ.ಹೆಚ್. ಮುನಿಯಪ್ಪ ರಾಜ್ಯ ರಾಜಕಾರಣಕ್ಕೆ? ಕ್ಷೇತ್ರ ಯಾವುದು?
ಕೋಲಾರ: ನಿರಂತರವಾಗಿ 1991ರಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಲೋಕಸಭೆಗೆ ಆಯ್ಕೆಯಾಗುತ್ತಾ ಬಂದಿರುವ ಅದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಪರಾಜಯಗೊಂಡ ಕೆ.ಹೆಚ್. ಮುನಿಯಪ್ಪ ಇದೀಗ ರಾಜ್ಯ ರಾಜಕಾರಣಕ್ಕೆ ಬರಲು ಒಲವು ತೋರಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು. ಕ್ಷೇತ್ರ ಯಾವುದು, ಡಿಕೆಶಿ ಮಾಸ್ಟರ್ ಪ್ಲ್ಯಾನ್ ಏನು? ಕೇಂದ್ರದ ಮಾಜಿ ಸಚಿವ, 72 ವರ್ಷದ ಕೆ.ಎಚ್. ಮುನಿಯಪ್ಪ ರಾಜ್ಯ ರಾಜಕಾರಣದತ್ತ ಮರಳಲು ಕೆಪಿಸಿಸಿ ಅಧ್ಯಕ್ಷ್ಯ ಡಿಕೆ ಶಿವಕುಮಾರ್ ಒತ್ತಾಯ ಕಾರಣ ಎನ್ನಲಾಗಿದೆ. …
Read More »ರೈಲ್ವೆ ಇಲಾಖೆ ಎಡವಟ್ಟು: ಕುರಿ ಮೇಯಿಸಲು ಹೋದವರು ಪಕ್ಕದ ಕಾಲುವೆಯಲ್ಲಿ ಮುಳುಗಿ ಸತ್ತೇ ಹೋದ್ರು..
ಕೋಲಾರ: ಬಾಳಿ ಬದುಕಬೇಕಿದ್ದ ಮೂವರು ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಕುರಿ ಮೇಯಿಸಲು ಹೋದವರು ಬಾರದ ಲೋಕಕ್ಕೆ ಹೋಗಿದ್ದರಿಂದ ಹೆತ್ತವರು ದಿಕ್ಕೇ ತೋಚದಂತಾಗಿದ್ದಾರೆ. ರೈಲ್ವೆ ಇಲಾಖೆಯವರು ಮಾಡಿರೋ ಅವೈಜ್ಞಾನಿಕ ಕಾಲುವೆ ಇದಕ್ಕೆಲ್ಲ ಕಾರಣವಾಗಿದೆ. ಮೊನ್ನೆ ಕೋಲಾರ ಜಿಲ್ಲೆ ಬಂಗಾರಪೇಟೆ ಸುತ್ತಮುತ್ತ ಭರ್ಜರಿ ಮಳೆ ಸುರಿದಿತ್ತು. ಪರಿಣಾಮ ಕುಂಬಾರಪಾಳ್ಯದ ರೈಲ್ವೆ ಅಂಡರ್ಪಾಸ್ನಲ್ಲಿ ನೀರು ತುಂಬಿತ್ತು. ಈ ವೇಳೆ ತಮ್ಮ ಮನೆಯಲ್ಲಿದ್ದ ಕುರಿಗಳನ್ನ ಮೇಯಿಸುತ್ತಾ ಅಲ್ಲೇ ಆಟವಾಡಿಕೊಂಡಿದ್ದ ಮಕ್ಕಳು ನೀರಿಗೆ ಇಳಿದಿದ್ದಾರೆ. ನೀರಿನ ಆಳ ತಿಳಿಯದೆ …
Read More »ನಮ್ಮ ಸಮಾಜದಲ್ಲಿ ದೇವಸ್ಥಾನದಲ್ಲಿದೇವರು ಕಾಣದೆ ಇದ್ದರು, ಜನರು ಕೈ ಮುಗಿತಾರೆ. ಆದರೆ, ಹೆಣ್ಣನ್ನ ನೋಡುವ ದೃಷ್ಟಿಯೇ ಬೇರೆಯಿದೆ:ಕೆಜಿಎಫ್ ಶಾಸಕಿ ರೂಪಾ ಶಶಿಧರ್
ಕೋಲಾರ : ನಮ್ಮ ಸಮಾಜದಲ್ಲಿ ದೇವಸ್ಥಾನದಲ್ಲಿದೇವರು ಕಾಣದೆ ಇದ್ದರು, ಜನರು ಕೈ ಮುಗಿತಾರೆ. ಆದರೆ, ಹೆಣ್ಣನ್ನ ನೋಡುವ ದೃಷ್ಟಿಯೇ ಬೇರೆಯಿದೆ. ಅದು ಬದಲಾದಲ್ಲಿ ಮಾತ್ರ ಹೆಣ್ಣಿನ ರಕ್ಷಣೆ ಸಾಧ್ಯ ಎಂದು ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಉತ್ತರ ಪ್ರದೇಶ ಘಟನೆಯನ್ನ ಕಟುವಾಗಿ ಖಂಡಿಸಿದ್ದಾರೆ. ಇನ್ನು ಯುವತಿಯ ಮೇಲೆರೆಗಿ ಮೃಗಗಳಂತೆ ಕೆಲವರು ವರ್ತಿಸಿದರೆ, ಪೊಲೀಸ್ ಅಧಿಕಾರಿಗಳು ರಾತ್ರೋ ರಾತ್ರಿ ಸುಟ್ಟು ಹಾಕಿದ್ದಾರೆ, ಅಲ್ಲಿ ಯಾರೂ ಕೇಳುವವರು ಮಾಡುವವರು ಇಲ್ಲ, ಸ್ವಂತ ತಂದೆ …
Read More »ಚಿನ್ನದ ನಿಕ್ಷೇಪ ವಿರುವುದು ಖಚಿತವಾದರೆ ಚಿನ್ನದ ಗಣಿ ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ
ಕೋಲಾರ: ವಿಶ್ವಕ್ಕೆ ಚಿನ್ನವನ್ನು ಕೊಟ್ಟ ಚಿನ್ನದ ನಾಡಿನಲ್ಲಿ ಎರಡು ದಶಕಗಳ ನಂತರ ಮತ್ತೆ ಚಿನ್ನದ ಗಣಿ ಪುನರಾರಂಭಕ್ಕೆ ತೆರೆಮರೆಯಲ್ಲಿ ತಯಾರಿಗಳು ನಡೆಯುತ್ತಿವೆ. ಈಗಾಗಲೇ ಚಿನ್ನದ ಗಣಿಯ ಭೂಮಿ ಹಾಗೂ ಮಣ್ಣಿನ ಪರೀಕ್ಷೆಗಳು ನಡೆಯುತ್ತಿದ್ದು, ಚಿನ್ನದ ನಾಡಿನ ಗತ ವೈಭವ ಮತ್ತೆ ಮರುಕಳಿಸುತ್ತಾ ಅನ್ನೋ ನಿರೀಕ್ಷೆ ಗರಿಗೆದರಿವೆ. ಜಿಲ್ಲೆಯ ಕೆಜಿಎಫ್ ನಗರ ಚಿನ್ನ ಬೆಳೆಯುತ್ತಿದ್ದ ನೆಲ. ಒಂದು ಕಾಲದಲ್ಲಿ ಇಡೀ ವಿಶ್ವಕ್ಕೆ ಚಿನ್ನವನ್ನು ಕೊಟ್ಟಂತಹ ಇತಿಹಾಸವೇ ಇದೆ. ಆದರೆ ಚಿನ್ನ ಬರಿದಾಗಿ …
Read More »ರೈಲ್ವೆ ಇಲಾಖೆ ದೆಹಲಿಯಿಂದ ಹಸು ಸಾಗಾಣೆಗಾಗಿ ಆರು ವಿಶೇಷ ಕೋಚ್ ವ್ಯವಸ್ಥೆ
ಕೋಲಾರ : ಜನಸಾಮಾನ್ಯರ ಮನವಿಗೆ ತಕ್ಷಣ ಸ್ಪಂದಿಸುವ ಮೂಲಕ ರೈಲ್ವೆ ಇಲಾಖೆ ಸಾಕಷ್ಟು ಹೆಸರು ಮಾಡಿದೆ. ಈ ಬಾರಿ ಕೂಡ ಗೋಪಾಲಕರ ಮನವಿ ಪುರಸ್ಕರಿಸಿದ ರೈಲ್ವೆ ಇಲಾಖೆ ದೆಹಲಿಯಿಂದ ಹಸು ಸಾಗಾಣೆಗಾಗಿ ಆರು ವಿಶೇಷ ಕೋಚ್ ವ್ಯವಸ್ಥೆ ಮಾಡಿದ್ದು, ಮೆಚ್ಚುಗೆ ಪಡೆದಿದೆ. ದುಬಾರಿ ಬೆಲೆಯ ಹೈಬ್ರಿಡ್ ತಳಿಯ ಹಸುಗಳು ಕೋಲಾರ ನಗರದ ನಿವಾಸಿಗಳಾದ ವೆಂಕಟೇಶ್, ಶಬರೀಶ್, ಸುನಿಲ್ ಅವರದ್ದು.ಹಸುವಿನ ವಹಿವಾಟು ನಡೆಸುವ ಇವರು 116 ಹಸುಗಳನ್ನು ಕಳೆದ ಆಗಸ್ಟ್ ತಿಂಗಳಲ್ಲಿ …
Read More »800 ರೂ.ಗಡಿ ದಾಟಿದ ಬಾಕ್ಸ್ ಟೊಮೆಟೋ! ರೈತರ ಮೊಗದಲ್ಲಿ ಸಂತಸ
ಕೋಲಾರ: ನಗರದಲ್ಲಿರುವ ಏಷ್ಯಾದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಲ್ಲಿ ಶುಕ್ರವಾರ ಬಾಕ್ಸ್ ಟೊಮೆಟೋ 810 ರೂ.ವರೆಗೂ ಹರಾಜಾಗಿದ್ದು, ಟೊಮೆಟೋ ಬೆಳೆದವರ ಸಂತಸಕ್ಕೆಕಾರಣವಾಗಿದೆ. ಹದಿನೈದು ಕೆ.ಜಿ. ತುಂಬಿದ ಬಾಕ್ಸ್ ಒಮ್ಮೊಮ್ಮೆ ಕೇವಲ ಹದಿನೈದು ರೂ.ಗಿಂತಲೂ ಕಡಿಮೆ ಕುಸಿದು ರೈತರು ಟೊಮೆಟೋವನ್ನು ಬೀದಿಗೆ ಎಸೆಯುವುದನ್ನು ಕಾಣುತ್ತಿದ್ದೆವು. ಆದರೆ, ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಟೊಮೆಟೋ ಬಾಕ್ಸ್ 800 ರ ಗಡಿ ದಾಟಿ ಹರಾಜಾಗಿರುವುದು ಧಾರಣೆ ಏರುಮುಖದ ನಿರೀಕ್ಷೆ ಹುಟ್ಟಿಸಿದೆ. ಮಳೆ …
Read More »ರೌಡಿಸಂನಿಂದ ಮೆರೆದಿದ್ದ ಕುಟುಂಬ ಈಗ ಗಾಂಜಾ ಘಾಟಿನಲ್ಲಿ
ಕೋಲಾರ: ಅವರೆಲ್ಲಾ ಒಂದು ಕಾಲದಲ್ಲಿ ಚಿನ್ನದ ನೆಲದಲ್ಲಿ ರೌಡಿಸಂ ಹೆಸರಲ್ಲಿ ನೆತ್ತರು ಹಸಿದ್ದವರು, ಆದರೆ ಕಳೆದ ಎರಡು ದಶಕಳಿಂದ ರೌಡಿಸಂನಿಂದ ದೂರ ಉಳಿದಿದ್ದವರು ಏನು ಮಾಡುತ್ತಿದ್ದರು ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ರೌಡಿಸಂನಿಂದ ಮೆರೆದಿದ್ದ ಕುಟುಂಬ ಈಗ ಗಾಂಜಾ ಘಾಟಿನಲ್ಲಿ ಮುಳುಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಿಲ್ಲೆ ಕೆಜಿಎಫ್ ನಗರದ ಕೃಷ್ಣಗಿರಿ ಲೈನ್‍ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 186 ಕೆ.ಜಿ.ಯಷ್ಟು ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. …
Read More »1 ಕೋಟಿ ಮೌಲ್ಯದ ಗಾಂಜಾ ವಶ…………….
ಕೋಲಾರ: ಕೆಜಿಎಫ್‍ನ ರಾಬರ್ಟ್ ಸನ್ ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು ಒಂದು ಕೋಟಿ ಮೌಲ್ಯದ 185 ಕೆಜಿಯಷ್ಟು ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಓರ್ವನನ್ನು ಬಂಧಿಸಿದ್ದು, ಆರೋಪಿಯನ್ನು ರೌಡಿ ಶೀಟರ್ ತಂಗಂ ಅಣ್ಣ ಜೋಸೆಫ್ ಎಂದು ಗುರುತಿಸಲಾಗಿದೆ. ಈತ ಸುಮಾರು ನಾಲ್ಕು ರಾಜ್ಯಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಓರ್ವ ಆರೋಪಿ ಸೇರಿ ಸುಮಾರು …
Read More »ರಸ್ತೆ ಒತ್ತುವರಿ ತೆರವುಗೊಳಿಸಲು ಶಾಸಕರಿಗೆ ಮನವಿ
ಕೋಲಾರ, (ಹಿ.ಸ): ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಎತೂರು ಗ್ರಾಮದಿಂದ ನಕ್ಕನಹಳ್ಳಿ ಗಡಿಗೆ ಹೋಗುವ ಬಂಡಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ಜನ ಸೇನೆಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಶಾಸಕಿ ರೂಪಕಲಾ ಶಶಿಧರ್‍ರವರಿಗೆ ಮನವಿ ಸಲ್ಲಿಸಿದರು. ಎತೂರುನಿಂದ ನಕ್ಕನಹಳ್ಳಿ ಗಡಿಗೆ ಹೋಗುವ ಬಂಡಿ ರಸ್ತೆ ಸರ್ವೇ ನೋ 52, 63/1, 62 ಹಾದು ಹೋಗುವ ರಸ್ತೆ ಈಗಲೇ ಸರ್ವೇ ಕಾರ್ಯ …
Read More »
Laxmi News 24×7