Breaking News

ಅಂತರಾಷ್ಟ್ರೀಯ

ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಲಾಭ ಪಡೆಯರಿ: ಯುವ ನಾಯಕ ರಾಹುಲ್‌ ಜಾರಕಿಹೊಳಿ

ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಲಾಭ ಪಡೆಯರಿ: ಯುವ ನಾಯಕ ರಾಹುಲ್‌ ಜಾರಕಿಹೊಳಿ   ಬೆಳಗಾವಿ: ಕರೋನಾ ಸೋಂಕಿನ ಭೀತಿ ಹೆಚ್ಚಳ ಕಾರಣ ಗ್ರಾಮೀಣ ಜನತೆಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವೈದ್ಯಕೀಯ ತಪಾಸಣಾ ಶಿಬಿರದ ಲಾಭ ಪಡೆಯಬೇಕು ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.   ಯಮಕನಮರಡಿ ಮತಕ್ಷೇತ್ರದ ಕಡೋಲಿ ಗ್ರಾಮದಲ್ಲಿ ಟೀಮ್‌ ರಾಹುಲ್‌ ಸತೀಶ್‌ ಜಾರಕಿಹೊಳಿ ವತಿಯಿಂದ ಭಾನುವಾರ …

Read More »

ಕವಟಗಿಮಠ, ವಿಶ್ವನಾಥ ಪಾಟೀಲ್ ಗೆ ಕೊರೋನಾ: ಸಭೆಯಲ್ಲಿದ್ದ ಬಿಜೆಪಿ ಮುಖಂಡರಿಗೆಲ್ಲ ಆತಂಕ

ಬೆಳಗಾವಿ – ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಮಾಜಿ ಶಾಸಕ, ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ.   ಮಹಾಂತೇಶ ಕವಟಗಿಮಠ ಶನಿವಾರ ಬೆಂಗಳೂರಿನಿಂದ ಹಿಂದಿರುಗಿದ್ದು, ಬಂದ ತಕ್ಷಣ ಕೊರೋನಾ ಟೆಸ್ಟ್ ಮಾಡಿಸಿದ್ದಾರೆ. ರಿಪೋರ್ಟ್ ಬರುವ ಮುನ್ನವೇ ಅವರು ಸಚಿವ ಉಮೇಶ ಕತ್ತಿ ಮನೆಯಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಭೆ ಮುಗಿದ ಬಳಿಕ ಕೊರೋನಾ ರಿಪೋರ್ಟ್ ಬಂದಿದ್ದು, ಅದರಲ್ಲಿ ಪಾಸಿಟಿವ್ …

Read More »

ಗಂಗಾ ರಾಮ್ ಲಕ್ಷ್ಮಣ ಕಾಂಬಳೆ ರೈತನ ಹೊಲಕ್ಕೆ ಶಾಟ್ ಸರ್ಕಿಟನಿಂದ ಬೆಂಕಿ

ವರ್ಷಗಟ್ಟಲೆ ಬಿಸಿಲು ಚಳಿ ಮಳೆಯೆನ್ನದೆ ಕಷ್ಟಪಟ್ಟು ದುಡಿಯುವ ರೈತರ ಗೋಳು ಕೇಳುವವರಾರು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಶಿರಗಾಂವ ಎಂಬ ಗ್ರಾಮದಲ್ಲಿ ಗಂಗಾ ರಾಮ್ ಲಕ್ಷ್ಮಣ್ ಕಾಂಬಳೆ ಎಂಬ ಬಡ ರೈತನ ಹೊಲದಲ್ಲಿ ನಿನ್ನೆ ಮಧ್ಯಾಹ್ನ ಏಕಾಏಕಿ ವಿದ್ಯುತ್ ತಂತಿಗಳ ನಡುವೆ ಘರ್ಷಣೆ ಉಂಟಾಗಿ ಕಬ್ಬಿನ ಹೊಲಕ್ಕೆ ಬೆಂಕಿ ಹತ್ತಿ ಸುಮಾರು ಎರಡೂವರೆ ಎಕರೆ ಕಬ್ಬು ಸುಟ್ಟು ಕರಕಲಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಆರಿಸಿದ್ದಾರೆ.ಆದರೆ …

Read More »

ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನಕ್ಕೆ ಬೇಡಿಕೆ; ಉಮೇಶ್ ಕತ್ತಿ ನಿವಾಸದಲ್ಲಿ ಗೌಪ್ಯ ಸಭೆ

ಬೆಳಗಾವಿ: ರಾಜ್ಯ ಸಚಿವ ಸಂಪುಟ (Cabinet) ಪುನಾರಚನೆ ವಿಚಾರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಆಹಾರ ಸಚಿವ ಉಮೇಶ್ ಕತ್ತಿ (Umesh Katti) ನೇತೃತ್ವದಲ್ಲಿ ನಿನ್ನೆ (ಜ.22) ಗೌಪ್ಯ ಸಭೆ ನಡೆದಿದೆ. ಜಾರಕಿಹೊಳಿ ಸಹೋದರರನ್ನ ಹೊರಗಿಟ್ಟು ಉಮೇಶ್ ಕತ್ತಿ ಜಿಲ್ಲೆಯ ಬಿಜೆಪಿ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಉಮೇಶ್ ಕತ್ತಿ ನಿವಾಸದಲ್ಲಿ ಸಭೆ ನಡೆದಿದ್ದು, ಬೆಳಗಾವಿ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ವಿಚಾರದ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. …

Read More »

ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅಂತಿಮ‌ ದರ್ಶನ ಪಡೆದ ಸಿಎಂ ಬೊಮ್ಮಾಯಿ

ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಅವರ ಪಾರ್ಥೀವ ಶರೀರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂತಿಮ‌ ನಮನ ಸಲ್ಲಿಸಿದರು.ಜ. ಮಂಜುನಾಥ ಅವರ ಬೆಂಗಳೂರಿನ ಕಾಮಾಕ್ಷಿಪಾಳ್ಯದ ನಿವಾಸಕ್ಕೆ ಭೇಟಿ ನೀಡಿದ್ದ ಸಿಎಂ ನ್ಯಾಯಮೂರ್ತಿಗಳ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.ನ್ಯಾಯಮೂರ್ತಿ ಮಂಜುನಾಥ್ ಅವರು ಅತ್ಯುತ್ತಮ ವಕೀಲರಾಗಿ, ವಕೀಲರ ಸಂಘದ ಅಧ್ಯಕ್ಷರಾಗಿ, ಹೈ ಕೋರ್ಟ್ ನ್ಯಾಯಾಧೀಶರಾಗಿ, ಕರ್ನಾಟಕ ನದಿ ನೀರು ಮತ್ತು ಗಡಿ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಸಲ್ಲಿಸಿದ …

Read More »

ಪಾದಯಾತ್ರೆ ಹತ್ತಿಕ್ಕಲು ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

    ಗೋಕಾಕ: ಕಾಂಗ್ರೆಸ್ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ಮೊಟಕುಗೊಳಿಸಿಲು ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಆರೋಪಿಸಿದರು.   ನಗರದ ಹಿಲ್ಲ್‌ ಗಾರ್ಡನ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಯಶಸ್ವಿ ಆಗಬಾರದು, ಪಾದಯಾತ್ರೆ ಬೆಂಗಳೂರು ತಲುಪಬಾರದು ಎಂಬ ಉದ್ದೇಶ ಸರ್ಕಾರದಾಗಿತ್ತು. ಈಗ ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ಮೂಲಕ ಅದನ್ನು ಬಿಜೆಪಿ ಸರ್ಕಾರವೇ ಸಾಬೀತು ಮಾಡಿದೆ …

Read More »

ಯುವಕರ ಪಾಲಿನ ಸ್ಪೂರ್ತಿ ಚಿಲುಮೆ ಸುಭಾಷ್ ಚಂದ್ರ ಬೋಸ್: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ

    ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು, ಇಲ್ಲಿನ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್‌ ಅವರ 125 ನೇ ಜಯಂತಿಯನ್ನು ಆಚರಿಸಿದರು, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಗೌರವ ಅರ್ಪಿಸಿದರು. ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದರು.   ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಸ್ವಾತಂತ್ರ್ಯ ಸೇನಾನಿ ನೇತಾಜಿ …

Read More »

ಕೊಪ್ಪಳ ಜಿಲ್ಲೆ ಆರೋಗ್ಯ ಇಲಾಖೆ ಎಡವಟ್ಟು; ಲಸಿಕೆ ಪಡೆಯದಿದ್ದರೂ 2ನೇ ಡೋಸ್ ಲಸಿಕೆ ಪಡೆದಿರುವುದಾಗಿ ಮೆಸೇಜ್

ಕೊಪ್ಪಳ: ಕೊರೊನಾ ವಿಚಾರದಲ್ಲಿ ಸರ್ಕಾರ ಅನೇಕ ಬಾರಿ ಪದೇ ಪದೇ ಎಡವುತ್ತಿದ್ದು, ಆರೋಗ್ಯ ಇಲಾಖೆ ಎಡವಟ್ಟಿನಿಂದಾಗಿ ಲಸಿಕೆ ಪಡೆಯದವರಿಗೂ ಲಸಿಕೆ ಸಂಪೂರ್ಣವಾಗಿದೆ ಎನ್ನುವ ಪ್ರಮಾಣ ಪತ್ರ ದೊರೆತಿರುವುದು ಲಸಿಕೆ ಹಾಕಿಸಿಕೊಳ್ಳದವರನ್ಬು ಚಿಂತೆಗೀಡುಮಾಡಿದೆ. ಜಿಲ್ಲೆಯ ಆರೋಗ್ಯ ಇಲಾಖೆ ಮಹಾ ಎಡವಟ್ಟು ಮಾಡಿದೆ. 2ನೇ ಡೋಸ್ ಲಸಿಕೆಯನ್ನು ಪಡೆಯದಿದ್ದರೂ ಪಡೆದಿರುವುದಾಗಿ ಹಲವರ ಮೊಬೈಲ್‌ಗೆ ಮೆಸೇಜ್ ಬಂದಿದೆ. ಇದರಿಂದ ಜನ ಆರೋಗ್ಯ ಇಲಾಖೆ ನಡೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು …

Read More »

ಕೊರೊನಾ ಕೇಸ್​​ ಹೆಚ್ಚಳ; ಇಂದು ತಮಿಳುನಾಡು ಸಂಪೂರ್ಣ ಲಾಕ್‌ಡೌನ್

ಚೆನ್ನೈ: ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ಆರ್ಭಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ ಮಾಡಿ ಸಿಎಂ ಎಂ.ಕೆ. ಸ್ಟಾಲಿನ್ ಆದೇಶ ಹೊರಡಿಸಿದ್ದಾರೆ. ಜನವರಿ 16ರಂದು ವಿಧಿಸಿದ್ದ ಲಾಕ್‌ಡೌನ್ ನಿಯಮಗಳೇ ಇಂದೂ ಅನ್ವಯಿಸುತ್ತವೆ ಎಂದು ಸಿಎಂ ತಿಳಿಸಿದ್ದಾರೆ. ಇನ್ನು, ಸೋಂಕಿನ ಪ್ರಕರಣಗಳು ಹರಡುವುದನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಮುಖ್ಯಮಂತ್ರಿ ಸ್ಟಾಲಿನ್ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಮೊಬೈಲ್​ ಆ್ಯಪ್​ ಆಧಾರಿತ ಆಟೋ, ಟ್ಯಾಕ್ಸಿಗಳು ಮತ್ತು ಇತರ ವಾಹನಗಳು …

Read More »

ಸಾಂಸ್ಕೃತಿಕ ನಗರಿ ಮೈಸೂರಿನಲ್ಲೊಂದು ಅಪರೂಪದ ಮದುವೆ; ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಜೋಡಿಯಾದ 85 ವರ್ಷದ ವರ 65 ವರ್ಷದ ವಧು

ಮೈಸೂರು: ಓದಿಗೆ ಜ್ಞಾನಾರ್ಜನೆಗೆ ವಯಸ್ಸಿಲ್ಲ ಅನ್ನೋ ಮಾತನ್ನು ನೀವು ಕೇಳಿರುತ್ತೀರಾ. ಆದರೆ ಇದೀಗ ಮದುವೆಗೂ ವಯಸ್ಸಿಲ್ಲ ಅನ್ನುವ ಮಾತನ್ನು ಮೈಸೂರಿನ ಹಿರಿಯ ಜೀವಗಳು ನಿಜ ಮಾಡಿದ್ದಾರೆ. ಜೀವನದ ಸಂಧ್ಯಾಕಾಲದಲ್ಲಿ ಹಸೆಮಣೆ ಏರಿ‌ ಅಚ್ಚರಿ ಮೂಡಿಸಿದ್ದಾರೆ. ಸ್ವಂತ ಮಕ್ಕಳು‌ ಮೊಮ್ಮಕ್ಕಳು ಮುಂದೆ ನಿಂತು ಹಿರಿಯ ಜೀವಗಳಿಗೆ ಮದುವೆ ಮಾಡಿಸಿರೋದು ವಿಶೇಷ. 85 ವರ್ಷದ ವರ 65 ವರ್ಷದ ವಧು ಇಂತಹ ಅಪರೂಪದ ಮದುವೆಗೆ ಸಾಕ್ಷಿಯಾಗಿರುವುದು‌ ಸಾಂಸ್ಕೃತಿಕ ನಗರಿ ಮೈಸೂರು. ಮೈಸೂರಿನ ಉದಯಗಿರಿಯ …

Read More »