Breaking News

ಅಂತರಾಷ್ಟ್ರೀಯ

ಮೇಕೆದಾಟು ಅಧಿಸೂಚನೆ: ಕೇಂದ್ರಕ್ಕೆ ಜಾರಕಿಹೊಳಿ ಮನವಿ

ಬೆಂಗಳೂರು : ಮೇಕೆದಾಟು ಯೋಜನೆಗೆ ಕೂಡಲೇ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೆಖಾವತ್‌ ಅವರನ್ನು ಭೇಟಿ ಮಾಡಿದ ಅವರು ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನ ಕುರಿತು ಚರ್ಚಿಸಿದರು. ಇದೇ ವೇಳೆ ಕೃಷ್ಣಾ ನದಿ ನೀರು ಹಂಚಿಕೆ ಮತ್ತು ಆಲಮಟ್ಟಿಅಣೆಕಟ್ಟು ಎತ್ತರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದರು. ಮೇಕೆದಾಟು ಡ್ಯಾಂಗೆ ತಮಿಳುನಾಡು ಕ್ಯಾತೆ! …

Read More »

ಖ್ಯಾತ ಮಕ್ಕಳ ತಜ್ಞನನ್ನೇ ಬಲಿ ಪಡೆದ ಕೊರೊನಾ!

ಹಾಸನ: ಕಿಲ್ಲರ್ ಕೊರೊನಾ ಸೋಂಕಿಗೆ ಹಾಸನದ ಮತ್ತೊಬ್ಬ ವೈದ್ಯ ಬಲಿಯಾಗಿದ್ದಾರೆ. ಹಾಸನದ ಖ್ಯಾತ ಮಕ್ಕಳ ತಜ್ಞ ಡಾ. ರಾಜೀವ್ (64) ಇಂದು ಕೊರೊನಾಗೆ ಕೊನೆಯುಸಿರೆಳೆದಿದ್ದಾರೆ. ಎರಡು ವಾರಗಳ ಹಿಂದೆ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ನಾಲ್ಕು ದಶಕಗಳಿಂದ‌ ಜಿಲ್ಲೆಯಲ್ಲಿ ಸೇವೆ ಮಾಡುತ್ತಿದ್ದ ಡಾ.ರಾಜೀವ್ ವೈದ್ಯರಾಗಿ ಜಿಲ್ಲೆಯಲ್ಲಿ ಅಪಾರ ಹೆಸರು ಮಾಡಿದ್ದರು. ಮೂಲತಃ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಾನುಗೊಂದಿ ಗ್ರಾಮದವರಾಗಿದ್ದರು. …

Read More »

ವೇಶ್ಯೆ ಮನೆಗೆ ಹೋಗಿಬಂದ ಮರು ದಿನವೇ ಅದೆ ಮನೆಯಲ್ಲಿ ದರೋಡೆ;. ಮೈಸೂರಿನಲ್ಲಿ ಖತರ್‌ನಾಕ್‌ ಗ್ಯಾಂಗ್‌ ಅರೆಸ್ಟ್‌

ಮೈಸೂರು ; ಅವರೆಲ್ಲ ಶಾಲಾ, ಕಾಲೇಜು ಹಂತದ ಡ್ರಾಪ್‌ಔಟ್ ಸ್ಟೂಡೆಂಟ್ಸು. ಓದು ತಲೆಗೆ ಅತ್ತಲಿಲ್ಲ, ಮಾಡೋದಕ್ಕೆ ಕೆಲಸ ಇಲ್ಲ. ಆದ್ರೆ ದುಷ್ಚಟ, ಶೋಕಿಗಳಿಗೇನೂ ಕಮ್ಮಿ ಇಲ್ಲ. ದುಷ್ಚಟಕ್ಕೆ ದುಡ್ಡುಬೇಕಲ್ಲ, ಆಗ ಶುರುವಾಗಿದ್ದು ರೋಡ್ ರಾಬರಿಯಂತಹ ದುಷ್ಕೃತ್ಯಗಳು. ಗುಂಪು ಕಟ್ಟಿಕೊಂಡು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ. ಮೈಸೂರಿನಲ್ಲಿ 8 ಜನರ ಭಾರಿ ದರೋಡೆ ಗ್ಯಾಂಗ್‌ವೊಂದು ಬಲೆಗೆ ಬಿದ್ದಿದೆ . ಶರತ್, ಸುಮಂತ್, ಕಾರ್ತಿಕ್, ಮಹದೇವ್, ಸುನೀಲ್ ಕುಮಾರ್, …

Read More »

ಮಹಿಳೆಯರೇ ಅಂಗಡಿಯಲ್ಲಿ ಮೊಬೈಲ್‍ಗೆ ಕರೆನ್ಸಿ ಹಾಕಿಸುವ ಮುನ್ನ ಈ ಸುದ್ದಿ ಓದಿ

ಮಡಿಕೇರಿ : ಅಂಗಡಿಯಲ್ಲಿ ಮೊಬೈಲ್‍ಗೆ ಕರೆನ್ಸಿ ಹಾಕಿಸುವ ಯುವತಿಯರ ಹಾಗೂ ಹೆಣ್ಣು ಮಕ್ಕಳ ಮೊಬೈಲ್ ನಂಬರ್ ಗಳನ್ನು ಪಡೆದುಕೊಳ್ಳುತ್ತಿದ್ದ ವ್ಯಕ್ತಿಯೊಬ್ಬ ಮಹಿಳೆಯರಿಗೆ/ಹುಡುಗಿಯರ ಮೊಬೈಲ್‌ಗೆ ಪೋಲಿ ಸಂದೇಶಗಳನ್ನು ಕಳುಹಿಸುತ್ತಿದ್ದ ಕಾಮುಕನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಜನತೆ ಜಾಡಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿ ನಗರದಲ್ಲಿ ಮೊಬೈಲ್ ಅಂಗಡಿ ಹಾಗೂ ಕರೆನ್ಸಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಮುದಾಸಿರ್ ಎನ್ನವ ಕಾಮುಕನೇ ಹೀಗೆ ಹೊಡೆತ ತಿಂದಿರುವ ವ್ಯಕ್ತಿಯಾಗಿದ್ದು, ಈತ ಪದೇ ಪದೇ ಮೊಬೈಲ್‍ಗೆ ಅಶ್ಲೀಲ ಸಂದೇಶ …

Read More »

ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ವಿಶ್ವದ ನಾನಾ ಕಡೆಯಿಂದ ಶುಭಾಶಯದ ಮಹಾಪೂರ

ನವದೆಹಲಿ: ಇಂದು ಪ್ರಧಾನಿ ಮೋದಿಯವರು ತಮ್ಮ 70ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ದೇಶ-ವಿದೇಶಗಳಿಂದ ಜನಸಾಮಾನ್ಯರು ಹಾಗೂ ಗಣ್ಯರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಇನ್ನೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್‌ ಮಾಡಿರುವ ರಾಹುಲ್‌ ಗಾಂಧಿ ಮೋದಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು ಅಂತ ಹೇಳಿದ್ದಾರೆ. ಪ್ರಧಾನಿ ಮೋದಿಯವರ ಜನ್ಮದಿನವನ್ನು ಆಚರಿಸಲು ಬಿಜೆಪಿ ದೇಶಾದ್ಯಂತ …

Read More »

ಪ್ರಧಾನಿ ಮೋದಿ 70ನೇ ಹುಟ್ಟುಹಬ್ಬದ ಸಂಭ್ರಮ : ನೇಪಾಳ, ರಷ್ಯಾ ಅಧ್ಯಕ್ಷರಿಂದ ಶುಭಾಶಯ

ನವದೆಹಲಿ: ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು 70ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನೇಪಾಳ, ರಷ್ಯಾ ಅಧ್ಯಕ್ಷರು ಸೇರಿದಂತೆ ಬಹುತೇಕ ದೇಶದ ನಾಯಕರು ಶುಭಾಶಯ ತಿಳಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿಗೆ ಪತ್ರ ಬರೆದು ಪ್ರಧಾನಮಂತ್ರಿಯಾಗಿ ನೀವು ಮಾಡಿದ ಸಾಧನೆಯೂ ಅಂತಾರಾಷ್ಟ್ರೀಯ ಗೌರವಕ್ಕೆ ಅರ್ಹ. ನಿಮ್ಮ ನಾಯಕತ್ವದಲ್ಲಿ ಭಾರತ ಆರ್ಥಿಕ, ಸಾಮಾಜಿಕ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಭಾರತ ಮತ್ತು ರಷ್ಯಾ ಭಾಂದವ್ಯ ವೃದ್ದಿಸಲು …

Read More »

ಜಿಲ್ಲಾಧಿಕಾರಿಗಳಿಗೆ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ನಿರಾಶ್ರಿತರ ಮನವಿ ಅರ್ಪಣೆ ಬೆಳಗಾವಿಗೆ ತೆರಳಿ ಮನವಿ ಮಾಡಿಕೊಂಡ ನಿರಾಶ್ರಿತರು

ಬೆಳಗಾವಿ : ಕಳೆದ ವರ್ಷ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹಾನಿಯಾದ ಮನೆಗಳ ಫಲಾನುಭವಿಗಳು ನಿರಾಶ್ರಿತರಾಗಿದ್ದು, ಅವರಿಗೆ ಕೂಡಲೇ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ನಿರಾಶ್ರಿತರು ಮನವಿ ಸಲ್ಲಿಸಿದರು. ಇಂದಿಲ್ಲಿ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿದ ಅವಳಿ ತಾಲೂಕುಗಳ ನಿರಾಶ್ರಿತರು ನಿರಂತರ ಮಳೆ ಮತ್ತು ಘಟಪ್ರಭಾ ನದಿಯ ಭಾರಿ ಪ್ರವಾಹದಿಂದ ಸುಮಾರು 7861 ಮನೆಗಳು ಹಾನಿಯಾಗಿವೆ. 6225 ಮನೆಗಳು ಎ ವರ್ಗದಲ್ಲಿ …

Read More »

ಇಸ್ರೇಲ್‍ನಲ್ಲಿ 1000 ವರ್ಷಗಳಷ್ಟು ಹಳೆಯದಾದ ಚಿನ್ನದ ನಾಣ್ಯಗಳು ಪತ್ತೆ..!

ಟೆಲ್ ಅವಿವ್ ,ಸೆ.20-ಇಸ್ರೇಲ್‍ನಲ್ಲಿ ಸುಮಾರು 1,000 ವರ್ಷಗಳಷ್ಟು ಹಳೆಯದಾದ ನೂರಾರು ಬಂಗಾರದ ನಾಣ್ಯಗಳು ಪತ್ತೆಯಾಗಿವೆ. ಈ ಕುರಿತು ಇಲ್ಲೊಂದು ವರದಿ. ಸಹಸ್ರಮಾನಕ್ಕೂ ಹೆಚ್ಚು ಕಾಲ ಮಣ್ಣಿನ ಪಾತ್ರೆಗಳಲ್ಲಿ ಬಚ್ಚಿಡಲಾಗಿದ್ದ ನೂರಾರು ಚಿನ್ನದ ನಾಣ್ಯಗಳ ಗುಪ್ತ ನಿಧಿಯೊಂದನ್ನು ಇಸ್ರೇಲಿ ಯುವಕರು ಪತ್ತೆ ಮಾಡಿದ್ದಾರೆ.   ಈ ನಿಕ್ಷೇಪ ನಿಧಿಯನ್ನು ಇತ್ತೀಚೆಗೆ ಪತ್ತೆ ಮಾಡಲಾಗಿದೆ ಎಂದು ಇಸ್ರೇಲ್ ಆಂಟಿಕ್ವಿಟೀಸ್ ಅಥಾರಿಟಿ ತಿಳಿಸಿದೆ. ಹೊಸ ವಸತಿ ಪ್ರದೇಶವೊಂದರ ನಿರ್ಮಾಣ ಯೋಜನೆ ಕಾರ್ಯರೂಪಕ್ಕೆ ಬರಲಿರುವ ಮಧ್ಯ …

Read More »

ಮಾದಕ ವಸ್ತು ಸಾಗಣೆ : ಆರೋಪಿಗೆ ಗುಂಡು, 7 ಕೆ.ಜಿ ಗಾಂಜಾ ವಶ

ಆನೇಕಲ್, :ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿದಾಗ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ತಗುಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಅಯೂಬ್‍ ಖಾನ್ ಬಂಧಿತ ಆರೋಪಿ. ಈತನಿಂದ 7 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ತಾಲ್ಲೂಕಿನ ಬಿದರಗುಪ್ಪೆ ಗ್ರಾಮದ ಬಳಿ ಕಳ್ಳಹಳ್ಳಿ ಗ್ರಾಮದ ನಿವಾಸಿ ಅಯೂಬ್ ಖಾನ್ ಗಾಂಜಾ ತೆಗೆದುಕೊಂಡು ಹೋಗುತ್ತಿದ್ದಾನೆಂಬ ಮಾಹಿತಿ ಅತ್ತಿಬೆಲೆ ಪೊಲೀಸರಿಗೆ ಲಭಿಸಿದೆ. ತಕ್ಷಣ ಅತ್ತಿಬೆಲೆ ಠಾಣೆ ಇನ್‍ಸ್ಪೆಕ್ಟರ್ ಸತೀಶ್, ಪಿಎಸ್‍ಐ …

Read More »

ರಾಜ್ಯದಲ್ಲಿ ಮುಂದುವರೆದ ರೈತರ ಆತ್ಮಹತ್ಯೆ ಸರಣಿ..!

ಬೆಂಗಳೂರು   : ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ಸಾಲದ ಸುಳಿಯಿಂದ ಹೊರಬರಲಾರದೆ ಅನ್ನದಾತರು ನೇಣಿನ ಪಾಶಕ್ಕೆ ಕೊರಳೊಡ್ಡುವುದು ಮುಂದುವರೆಯುತ್ತಲೇ ಇದೆ. ದುರಂತವೆಂದರೆ ರಾಜ್ಯದಲ್ಲಿ ಕಳೆದ ಬಾರಿಗಿಂತ ಈ ಬಾರಿ ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಏರಿಕೆ ಕಂಡಿದೆ. ರಾಜ್ಯದಲ್ಲಿ ಏರಿಕೆ ಕಂಡ ರೈತರ ಆತ್ಮಹತ್ಯೆಸಾಲಮನ್ನಾ, ಬೆಳೆ ವಿಮೆ ಆಸರೆ ಇದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ರಾಜ್ಯದಲ್ಲಿ ನಿರಂತರವಾಗಿ ಅತಿವೃಷ್ಟಿ, ಅನಾವೃಷ್ಟಿಯ ಸಂಕಷ್ಟ ಎದುರಾಗುತ್ತದೆ. ಇದರ ಹೊಡೆತಕ್ಕೆ …

Read More »