ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಖಂಡ ಕರ್ನಾಟಕದ ಬಗ್ಗೆ ಚಿಂತಿಸುತ್ತಿಲ್ಲ. ಕೇವಲ ಶಿವಮೊಗ್ಗ ಜಿಲ್ಲೆಗಷ್ಟೇ ಸೀಮಿತವಾಗಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನಕೊಡುತ್ತಿಲ್ಲ’ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಕಿಡಿಕಾರಿದರು. ಗುರುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ. ಇದರಿಂದ ಬಹಳ ನೋವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ನನಗೆ ಮುಖ್ಯ. ಇದೆಲ್ಲವನ್ನೂ ಕೇಳಬೇಕೋ, ಬೇಡವೋ? ಕೂಗಾಟ ಮಾಡಬೇಕೋ, ಬೇಡವೋ?’ ಎಂದು …
Read More »ರಾಜ್ಯದಲ್ಲಿ ಭಾರೀ ಏರಿಕೆ ಕಂಡ ಕೊರೋನಾ : ನಿಜವಾಯ್ತು ಭವಿಷ್ಯ
ಬೆಂಗಳೂರು : ರಾಜ್ಯದಲ್ಲಿ ಗುರುವಾರ 9,366 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 4.94 ಲಕ್ಷಕ್ಕೆ ಏರಿಕೆಯಾಗಿದೆ. ಬಹುತೇಕ ಶುಕ್ರವಾರ ಒಟ್ಟು ಸೋಂಕಿತರ ಸಂಖ್ಯೆ 5 ಲಕ್ಷದ ಗಡಿ ದಾಟುವ ಸಾಧ್ಯತೆ ಇದೆ. ಈ ಮೂಲಕ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ಬಳಿಕ 5 ಲಕ್ಷ ಸೋಂಕಿನ ಗಡಿ ದಾಟುತ್ತಿರುವ 4ನೇ ರಾಜ್ಯ ಎಂಬ ಅಪಕೀರ್ತಿಗೆ ರಾಜ್ಯ ಭಾಜನವಾಗುತ್ತಿದೆ. ಇನ್ನು ಗುರುವಾರ 93 ಮಂದಿ ಸೋಂಕಿಗೆ ಬಲಿಯಾಗಿದ್ದು …
Read More »ಬಿಜೆಪಿ ಮುಖಂಡನ ಕೊಲೆ ಪ್ರಕರಣ: ಪತ್ನಿ ಸೇರಿ ಹಲವರ ವಿಚಾರಣೆ
ಧಾರವಾಡ : ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಸಿಬಿಐ ಅಧಿಕಾರಿಗಳ ತಂಡವು ಎರಡು ದಿನಗಳಿಂದ ಧಾರವಾಡದಲ್ಲಿಯೇ ಠಿಕಾಣಿ ಹೂಡಿದ್ದು ಗುರುವಾರರಂದು ಯೋಗೀಶ್ ಗೌಡರ ಪತ್ನಿ ಮಲ್ಲಮ್ಮ ಸೇರಿ ಹಲವು ಕಾಂಗ್ರೆಸ್ ಮುಖಂಡರ ವಿಚಾರಣೆ ನಡೆಸಿತು. ಕೊಲೆಯಾದ ಯೋಗೀಶಗೌಡ ಅವರ ಪತ್ನಿ ಮಲ್ಲಮ್ಮ ಹಾಗೂ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಲು ಪ್ರಮುಖ ಪಾತ್ರ ವಹಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, …
Read More »ಪ್ರಧಾನಿ ಮೋದಿ – ಸಿಎಂ ಯಡಿಯೂರಪ್ಪ ಭೇಟಿ: ಹೆಚ್ಚು ಪರಿಹಾರಕ್ಕೆ ಬೇಡಿಕೆ
ನವದೆಹಲಿ: ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇವತ್ತು ಬೆಳಿಗ್ಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿಯವರ ನಿವಾಸದಲ್ಲಿ ಸಿಎಂ ಭೇಟಿಗೆ ಸಮಯ ನಿಗದಿಯಾಗಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿಂದ ಭಾರಿ ಹಾನಿಯಾಗಿದ್ದು, ಹೆಚ್ಚಿನ ಪರಿಹಾರ ಬಿಡುಗಡೆಗೆ ಬೇಡಿಕೆ ಇಡಲಿದ್ದಾರೆ. ನಿನ್ನೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದ ಯಡಿಯೂರಪ್ಪ ಇಂದು ಬೆಳಗ್ಗೆ ಪ್ರಧಾನಿಯವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಪಕ್ಷ ಮತ್ತು ಸರ್ಕಾರ ಮೊದಲಾದ ವಿಚಾರಗಳ …
Read More »ರಷ್ಯಾದ ಕೋವಿಡ್ -19 ಲಸಿಕೆ ಬಗ್ಗೆ ಹೊರ ಬಿತ್ತು ‘ಆಘಾತಕಾರಿ ಮಾಹಿತಿ’
ಡಿಜಿಟಲ್‌ಡೆಸ್ಕ್: ರಷ್ಯಾದ ಕೋವಿಡ್ -19 ಲಸಿಕೆ – ಭಾರತದಲ್ಲಿ ಸ್ಪುಟ್ನಿಕ್ ವಿ ವಿತರಣೆಗಾಗಿ ಡಾ. ರೆಡ್ಡಿ’ಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಜೊತೆ ಪಾಲುದಾರಿಕೆ ಮಾಡುವುದಾಗಿ ರಷ್ಯಾದ ನೇರ ಹೂಡಿಕೆ ನಿಧಿಗೆ (ಆರ್ಡಿಐಎಫ್) ಘೋಷಿಸುತ್ತಿದೆ ಎಂದು ಸೋವಿಯತ್ ರಾಷ್ಟ್ರದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಮಾಸ್ಕೋ ಟೈಮ್ಸ್ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೇ ವೇಳೇ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತ ತಮ್ಮ ಲಸಿಕೆ ನೀಡಿದ ಸುಮಾರು 14% ರೋಗಿಗಳು ಅಡ್ಡಪರಿಣಾಮಗಳಿಂದ ಬಳಲುತ್ತಿದ್ದಾರೆ ಎಂದು …
Read More »ನಾವು ಏನೂ ಮಾತನಾಡೋ ಹಾಗಿಲ್ಲ -ಐಂದ್ರಿತಾ ರೈ
ನಿನ್ನೆಯಷ್ಟೆ ಸ್ಯಾಂಡಲ್ವುಡ್ ಡ್ರಗ್ಸ್ ಜಾಲದ ಕುರಿತಾಗಿ ದಿಗಂತ್-ಐಂದ್ರಿತಾ ದಂಪತಿಗೆ ಸಿಸಿಬಿ ವಿಚಾರಣೆ ನಡೆಸಿತ್ತು. ಮತ್ತೆ ಕರೆದರೆ ಹೋಗೋದಾಗಿ ಕೂಡ ತಿಳಿಸಿದ್ದರು. ಇನ್ನು, ಇಂದು ಬೆಳಿಗ್ಗೆ ಮನೆಯ ಬಾಲ್ಕನಿಯಲ್ಲಿ ಕಂಡು ಬಂದ ದಿಗಂತ್ ತಾಯಿ ಹಾಗೂ ಐಂದ್ರಿತಾ ರೇ, ಮಾಧ್ಯಮದವರ ಜೊತೆ ಮಾತನಾಡಿದ್ರು. ದಂಪತಿಗೆ ಸಿಸಿಬಿ ವಿಚಾರಣೆ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆ, ‘ನಾವು ಏನೂ ಮಾತನಾಡೋ ಹಾಗಿಲ್ಲ. ಇನ್ನೂ ವಿಚಾರಣೆ ಕಂಪ್ಲೀಟ್ ಆಗಿಲ್ಲ. ಯಾವುದೇ ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತಿಲ್ಲ ಅಂತ …
Read More »ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವ ಸ್ಥಾನಕ್ಕೆ ಹರ್‌ಸಿಮ್ರತ್ ಕೌರ್ ರಾಜೀನಾಮೆ
ದೆಹಲಿ: ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಗುರುವಾರ ಮೋದಿ ಸಂಪುಟ ತ್ಯಜಿಸಿದ್ದಾರೆ. ಕೇಂದ್ರದ ರೈತ ವಿರೋಧಿ ಕ್ರಮವನ್ನು ವಿರೋಧಿಸಿ ಸಚಿವೆ ಹರ್‌ಸಿಮ್ರತ್ ಕೌರ್ ಸಂಪುಟವನ್ನು ತೊರೆಯುವುದಾಗಿ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಲೋಕಸಭೆಯಲ್ಲಿ ಘೋಷಿಸಿದ ಬೆನ್ನಲ್ಲೇ ಹರ್‌ಸಿಮ್ರತ್ ಕೌರ್ ತಮ್ಮ ರಾಜೀನಾಮೆಯನ್ನು ಮೋದಿ ಅವರಿಗೆ ಸಲ್ಲಿಸಿದ್ದಾರೆ. ಪಕ್ಷದ ವಕ್ತಾರ ಹರ್‌ಚರಣ್ ಬೈನ್ಸ್ ಅವರು ಈ ವಿಚಾರವನ್ನೂ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೇಂದ್ರವು …
Read More »ಪುಲ್ವಾಮಾ ರೀತಿಯ ಉಗ್ರ ದಾಳಿ ಸಂಚು ವಿಫಲಗೊಳಿಸಿದ ಸೇನೆ; 52 ಕೆಜಿ ಸ್ಫೋಟಕ ಪತ್ತೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹೆದ್ದಾರಿ ಬಳಿ 52 ಕೆ.ಜಿ ಸ್ಫೋಟಕ ವಸ್ತುಗಳನ್ನು ಭಾರತೀಯ ಸೇನೆ ಪತ್ತೆ ಮಾಡಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಶೋಧ ಕಾರ್ಯ ಆರಂಭಿಸಿದ್ದೆವು. ಹಣ್ಣಿನ ತೋಟವೊಂದರಲ್ಲಿ ಹೂತು ಹಾಕಿದ್ದ ಸಿಂಟೆಕ್ಸ್ ಟ್ಯಾಂಕ್ ಒಳಗಡೆ 52 ಕೆಜಿ ಸ್ಫೋಟಕ ವಸ್ತು ಪತ್ತೆಯಾಗಿದೆ. ಈ ಸ್ಫೋಟಕಗಳನ್ನು 416 ಪೊಟ್ಟಣಗಳಾಗಿ ವಿಂಗಡಿಸಲಾಗಿದ್ದು ಪ್ರತಿಯೊಂದು ಪೊಟ್ಟಣವೂ 125 ಗ್ರಾಂ ತೂಕ ಹೊಂದಿದೆ ಎಂದು ಸೇನಾಪಡೆ ಹೇಳಿಕೆ ನೀಡಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. …
Read More »ಸಂಪುಟ ಪುನಾರಚನೆಯತ್ತ ಚಿತ್ತ | ವರಿಷ್ಠರ ತೀರ್ಮಾನಕ್ಕೆ ಬದ್ಧ: ಬಿ.ಎಸ್. ಯಡಿಯೂರಪ್ಪ
ಬೆಂಗಳೂರು: ಸಚಿವ ಸಂಪುಟದಿಂದ ಕೆಲವರನ್ನು ಕೈ ಬಿಟ್ಟು ಎಂಟು ಮಂದಿಯನ್ನು ಸೇರಿಸಿಕೊಳ್ಳುವ ಮೂಲಕ ಸಂಪುಟ ಪುನಾರಚನೆಯ ಪ್ರಸ್ತಾವ ಮುಂದಿಟ್ಟುಕೊಂಡು ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ. ಪುನಾರಚನೆಗೆ ಒಪ್ಪದೇ ಇದ್ದರೆ ಮೂವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಆಲೋಚನೆ ಅವರದ್ದಾಗಿದೆ ಎಂದು ಮುಖ್ಯಮಂತ್ರಿ ಆಪ್ತ ಮೂಲಗಳು ತಿಳಿಸಿವೆ. ಎಲ್ಲವೂ ಯಡಿಯೂರಪ್ಪ ಅಂದುಕೊಂಡಂತೆ ನಡೆದರೆ ಇದೇ ಭಾನುವಾರ(ಸೆ.20) ಸಂಪುಟ …
Read More »ನಾಳೆ ರಾಜ್ಯಾದ್ಯಂತ ಮೆಗಾ ಇ-ಲೋಕ ಅದಾಲತ್
ಬೆಂಗಳೂರು: ರಾಜ್ಯದ ನ್ಯಾಯಾಂಗದ ಇತಿಹಾಸದಲ್ಲಿ ಪ್ರಥಮ ಪ್ರಯೋಗವಾಗಿ ಸೆ. 19ರಂದು ರಾಜ್ಯಾದ್ಯಂತ “ಮೆಗಾ ಇ-ಲೋಕ ಅದಾಲತ್’ ನಡೆಯಲಿದೆ. ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ರಾಜ್ಯ ಕಾನೂನು ಸೇವೆ ಗಳ ಪ್ರಾಧಿಕಾರವು “ಡಿಜಿಟಲ್ ವೇದಿಕೆ’ ಕಲ್ಪಿಸಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಕರ್ನಾಟಕ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ್ ಅವರು ಈ ಕುರಿತು “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ. ಮೊದಲ ಪ್ರಯತ್ನ ಮೆಗಾ ಇ-ಲೋಕ …
Read More »