Breaking News

ಅಂತರಾಷ್ಟ್ರೀಯ

ಭೂ ಸುಧಾರಣೆ ತಿದ್ದುಪಡಿ ಸೇರಿದಂತೆ ವಿಧಾನಸಭೆಯಲ್ಲಿಂದು 12 ವಿಧೇಯಕಗಳ ಮಂಡನೆ

ಬೆಂಗಳೂರು, – 2020ನೇ ಸಾಲಿನ ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ)ವಿಧೇಯಕ , ವಿವಾದಿತ ಭೂ ಸುಧಾರಣೆ ತಿದ್ದುಪಡಿ ವಿಧೇಯಕ ಸೇರಿದಂತೆ 12 ವಿಧೇಯಕಗಳು ವಿಧಾನಸಭೆಯಲ್ಲಿಂದು ಮಂಡನೆಯಾದವು. ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2020ನೇ ಸಾಲಿನ ಕರ್ನಾಟಕ ಲೋಕಾಯುಕ್ತ (ಎರಡನೇ ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು. ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಮೂಲಕ ಪ್ರಾರಂಭಿಕ ವಿಚಾರಣೆ ಮತ್ತು ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರಕ್ಕೆವರದಿಗಳನ್ನು ಸಲ್ಲಿಸಲು ಕುಂದು ಕೊರತೆಗಳು ಅಥವಾ ದೂರುಗಳ ಶೀಘ್ರ …

Read More »

ಚೆನ್ನೈ ವಿರುದ್ಧದ ಸೋಲಿನ ಸರಣಿಯನ್ನು ಮುರಿಯುವುದೇ ರಾಯಲ್ಸ್‌ ?

ಮಣಿಪಾಲ: ಐಪಿಎಲ್‌ನ 13 ನೇ ಋತುವಿನ ನಾಲ್ಕನೇ ಪಂದ್ಯವು ಇಂದು ಶಾರ್ಜಾದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ಮತ್ತು ರಾಜಸ್ಥಾನ್‌ ರಾಯಲ್ಸ್‌ (ಆರ್‌ಆರ್‌) ನಡುವೆ ನಡೆಯುತ್ತಿದೆ. ಐಪಿಎಲ್ 13ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಈ ಬಾರಿಯ ಐಪಿಎಲ್‌ನಲ್ಲಿ ತಮ್ಮ ಎರಡನೇ ಪಂದ್ಯವನ್ನು ಆಡುತ್ತಿರುವ ಮಹೇಂದ್ರ ಸಿಂಗ್‌ ಧೋನಿ ಅವರ ಸಿಎಸ್‌ಕೆ ತಂಡವನ್ನು ಗೆಲ್ಲುವ ನೆಚ್ಚಿನ ತಂಡ …

Read More »

ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಯಡಿಯೂರಪ್ಪ

ಬೆಂಗಳೂರು, : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ, ಬಾಕಿ ವೇತನವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಮಾರ್ಚ್​ನಿಂದ ಅತಿಥಿ ಉಪನ್ಯಾಸಕರ ಗೌರವ ಧನ ಬಿಡುಗಡೆ ಮಾಡದೆ ಮೊಂಡುತನ ತೋರುತ್ತಿದ್ದ ರಾಜ್ಯ ಸರ್ಕಾರ, ಇದೀಗ ಸಂದನದಲ್ಲಿ ತನ್ನದೇ ಪಕ್ಷದ ಎಂಎಲ್ಸಿಯ ಪ್ರತಿಭಟನೆ ಬಳಿಕ ಎಚ್ಚೆತ್ತುಕೊಂಡಿದ್ದು, ಏಪ್ರಿಲ್ ನಿಂದ ಆಗಸ್ಟ್ ವರೆಗೆ ವೇತನ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ …

Read More »

SBIನಿಂದ ಸಾಲಪಡೆದವರಿಗೆ ಸಿಹಿ ಸುದ್ದಿ: EMIಯಿಂದ ಎರಡು ವರ್ಷ ಮುಕ್ತಿ, ಆದರೆ ಷರತ್ತುಗಳು ಅನ್ವಯ

ಡಿಜಿಟಲ್‌ಡೆಸ್ಕ್‌: ಆರು ತಿಂಗಳ ಆರ್ ಬಿಐ ಇಎಂಐ ಮೊರಟೋರಿಯಂ ಯೋಜನೆಯು 2020ರ ಆಗಸ್ಟ್ 31ಕ್ಕೆ ಕೊನೆಗೊಂಡಿದ್ದರೂ, ಬ್ಯಾಂಕುಗಳು ಸಾಲ ಗಾರರಿಗೆ ತಮ್ಮ ಸಾಲಗಳನ್ನು ಪುನರ್ ರಚಿಸಲು ಅವಕಾಶ ನೀಡಲು ಮುಂದಾಗಿದ್ದಾವೆ.. ಗೃಹ ಸಾಲ, ಕಾರು ಸಾಲ ಅಥವಾ ವೈಯಕ್ತಿಕ ಸಾಲಗಳ ಮೇಲೆ ಇಎಂಐ ಕಟ್ಟಲು ಕಷ್ಟವಾಗುವ ಸಾಲಗಾರರು ಸಾಲದ ಮರುಹೊಂದಾಣಿಕೆಯನ್ನು ಪಡೆಯಬಹುದಾಗಿದೆ. ಎಸ್ ಬಿಐ ಈಗಾಗಲೇ ಈ ಪ್ರಕ್ರಿಯೆ ಆರಂಭಿಸಿದ್ದು, ಬ್ಯಾಂಕ್ ನ ವೆಬ್ ಸೈಟ್ ಗೆ ಭೇಟಿ ನೀಡಿ …

Read More »

IPL 2020: RR VS CSK Live score ಚೆನ್ನೈ ಸೂಪರ್ ಕಿಂಗ್ಸ್‌ಗೆ ರಾಜಸ್ಥಾನ್‌ ರಾಯಲ್ಸ್‌ ಸವಾಲು

ಶಾರ್ಜಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ನಾಲ್ಕನೆ ಪಂದ್ಯದಲ್ಲಿ ಇವತ್ತು ರಾಜಸ್ಥಾನ್‌ ರಾಯಲ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಅನ್ನು ಎದುರಿಸುತ್ತಿದೆ. ಇದು ರಾಜಸ್ಥಾನ್‌ ರಾಯಲ್ಸ್‌ಗೆ ಟೂರ್ನಿಯ ಮೊದಲ ಪಂದ್ಯವಾದ್ರೆ, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಎರಡನೇ ಪಂದ್ಯ. ರಾಜಸ್ಥಾನ್‌ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡುವ ತವಕದಲ್ಲಿದ್ರೆ, ಚೆನ್ನೈ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಉಭಯ ತಂಡಗಳ ನಡುವಿನ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಟಿವಿ9 ಪಂದ್ಯದ ಕ್ಷಣ ಕ್ಷಣದ ಮಾಹಿತಿಗಳನ್ನು ಕ್ರಿಕೆಟ್‌ ಪ್ರೇಮಿಗಳಿಗಾಗಿ ಇಲ್ಲಿ …

Read More »

ಇಂಗು ಬಚ್ಚಲು ಗುಂಡಿ ಅಭಿಯಾನಕ್ಕೆ ಚಾಲನೆ

ತೆಲಸಂಗ: ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ನಿರ್ಮಲ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಇಂಗು ಬಚ್ಚಲು ಗುಂಡಿ ನಿರ್ಮಾಣ(ಸೋಕ್‌ ಪಿಟ್‌) ಅಭಿಯಾನ ಪ್ರಾರಂಭವಾಗಿದೆ. ಅಂತರ್ಜಲ ವೃದ್ಧಿಗೆ ಹಾಗೂ ಆರೋಗ್ಯ ಸುರಕ್ಷತೆಗೆ ಪ್ರತಿಯೊಬ್ಬರೂ ಸರಕಾರದ ಸಹಾಯಧನದೊಂದಿಗೆ ಇಂಗು ಬಚ್ಚಲು ಗುಂಡಿ ನಿರ್ಮಾಣ ಮಾಡಿಕೊಳ್ಳಬೇಕು ಎಂದು ತಾಪಂ ಇಒ ರವಿ ಬಂಗಾರೆಪ್ಪನವರ ಹೇಳಿದರು. ಗ್ರಾಮದಲ್ಲಿ ಇಂಗು ಬಚ್ಚಲು ಗುಂಡಿ ನಿರ್ಮಾಣ ಅಭಿಯಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ 46 ಗ್ರಾಪಂಗಳಲ್ಲಿ …

Read More »

ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ 7.5 ಮೀಸಲಾತಿಗೆ ಆಗ್ರಹ

ಬೆಳಗಾವಿ: ‘ವಾಲ್ಮೀಕಿ ನಾಯಕ ಸಮುದಾಯಕ್ಕೆ ಶೇ 7.5ರಷ್ಟು ಹೆಚ್ಚುವರಿ ಮೀಸಲಾತಿ ನೀಡಬೇಕು’ ಎಂದು ನಾಯಕ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ ಒತ್ತಾಯಿಸಿದರು. ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜಕ್ಕೆ 1978ರಿಂದ ಇಲ್ಲಿಯವರೆಗೆ ಕೇವಲ ಶೇ. 3ರಷ್ಟು ಮೀಸಲಾತಿ ನೀಡುತ್ತಾ ಬರಲಾಗಿದೆ. ಇದರಿಂದಾಗಿ ನಾವು ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು. ‘ನಾವು ತೀರಾ ಹಿಂದುಳಿದಿದ್ದೇವೆ. ಇಷ್ಟು ಕಡಿಮೆ ಪ್ರಮಾಣದ ಮೀಸಲಾತಿಯಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಂದೆ ಬರಲು …

Read More »

ವಿವಿಧ ಬೇಡಿಕೆಗೆ ಆಗ್ರಹಿಸಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರು

ಬೆಳಗಾವಿ: ಮಾಸಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೃಹತ್​ ಜಾಥಾ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರು . ಮಾಸಿಕ 12 ಸಾವಿರ ವೇತನ ನೀಡಬೇಕು ಹಾಗೂ ಈ ಹಿಂದೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ಬಿಡುಗಡೆಗೊಳಿಸಬೇಕು ಅಂತ ಒತ್ತಾಯಿಸಿದ್ರು. ಕೊರೊನಾ ವಾರಿಯರ್​ಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಅಂತ ರಾಜ್ಯ ಸರ್ಕಾರದ …

Read More »

ಬಾಯಿಲೇರ್ ಪ್ರದೀಪನ ಪೂಜಾ ಸಮಾರಂಭ

ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ಇರುವ ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆಯ ಬಾಯಿಲೇರ್ ಪ್ರದೀಪನ ಪೂಜೆ ಮಾಡಲಾಯಿತು. ಈ ಸಮಾರಂಭದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅಧಿಕರಾವ ಪಾಟೀಲ ( GM) ದತ್ತಕುಮಾರ್ ರಕ್ತಾಲೇ ( CC) ಪ್ರಮೋದ್ ಸಾಬಳೆ ( Boiler Engineer) ಪ್ರಶಾಂತ್ ಪಾಟೀಲ (HR) ಎಲ್ಲಾ ಕಾರ್ಮಿಕರು ಮತ್ತು ರೈತ ಭಾಂದವರು ಉಪಸ್ಥಿತರಿದ್ದರು.

Read More »

ಕೃಷಿ ಮಸೂದೆ: ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿದ ಕೇಜ್ರಿವಾಲ್

ನವದೆಹಲಿ: ಕೃಷಿ ಮಸೂದೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಮಸೂದೆಯನ್ನು ಖಂಡಿಸಿದ್ದಾರೆ. ಕೃಷಿ ಮಸೂದೆಯನ್ನು ಅಪಾಯಕಾರಿ ಎಂದು ಹೇಳಿರುವ ಕೇಜ್ರಿವಾಲ್, ರಾಜ್ಯಸಭೆಯಲ್ಲಿ ಮತಗಳನ್ನು ವಿಭಾಗಿಸದೇ ಮಸೂದೆ ಅಂಗೀಕಾರ ಮಾಡಿರುವುದನ್ನು ಖಂಡಿಸಿದ್ದಾರೆ. ಇದೇ ವೇಳೆ ದುರ್ವರ್ತನೆ ತೋರಿ ಅಮಾನತುಗೊಂಡು, ಪ್ರತಿಭಟನೆ ನಡೆಸುತ್ತಿರುವ ಸಂಸದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಜ್ರಿವಾಲ್, ಪ್ರತಿಭಟನಾ ನಿರತ 8 ಸಂಸದರು ಬಿಸಿಲು, ಸೊಳ್ಳೆಗಳ ಕಾಟವನ್ನು ಲೆಕ್ಕಿಸದೇ ರೈತರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರು ತಮಗಾಗಿ …

Read More »