Breaking News

ಅಂತರಾಷ್ಟ್ರೀಯ

ರಾಜ್ಯದಲ್ಲಿ 7,76,901 ಜನರಿಗೆ ಸೋಂಕು, 10,608 ಬಲಿ!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸವಂತೂ ಕಡಿಮೆಯಾಗೋ ಯಾವ ಲಕ್ಷಣಗಳೂ ಕಾಣ್ತಿಲ್ಲ. ಬದಲಾಗಿ ಪರಿಸ್ಥಿತಿ ಕೈ ಮೀರಿ ಹೋಗೋ ಎಲ್ಲಾ ಲಕ್ಷಣಗಳೂ ಎದ್ದು ಕಾಣ್ತಿದೆ. ಯಾಕಂದ್ರೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ವೈರಸ್ ಎಲ್ಲೆ ಮೀರಿ ಅರ್ಭಟಿಸ್ತಿದೆ. ಅಟ್ಯಾಕ್.. ಡೆಡ್ಲಿ ಅಟ್ಯಾಕ್‌.. ಯಾರೂ ಊಹಿಸಿಕೊಳ್ಳಲಾಗದಂತಹ ಅಟ್ಯಾಕ್‌.. ಜಿಲ್ಲೆ ಜಿಲ್ಲೆಗಳಲ್ಲಿ.. ನಗರ ನಗರಗಳಲ್ಲಿ.. ಗಲ್ಲಿ ಗಲ್ಲಿಯಲ್ಲಿ ಹೆಮ್ಮಾರಿಯ ಡೆಡ್ಲಿ ದಾಳಿ. ಕರುನಾಡಲ್ಲಿ ಹೆಮ್ಮಾರಿ ವೈರಸ್​ನ ಅಟ್ಟಹಾಸ ಮಿತಿ ಮೀರ್ತಿದೆ. ಸೋಂಕಿನ ವಿಷ …

Read More »

ಹಲವೆಡೆ ರಾತ್ರಿ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ.

ಬೆಂಗಳೂರು: ನಗರದ ಹಲವೆಡೆ ರಾತ್ರಿ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಆರ್.ಆರ್.ನಗರದ ಮೀನಾಕ್ಷಿ ಕಲ್ಯಾಣ ಮಂಟಪ ಜಲಾವೃತಗೊಂಡಿದೆ. ನೀರು ಹೊರಹಾಕಲು ಕಲ್ಯಾಣ ಮಂಟಪ ಸಿಬ್ಬಂದಿ ಪರದಾಡುತ್ತಿದ್ದಾರೆ. ಇನ್ನು ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ನಿನ್ನೆ ನಡೆಯಬೇಕಿದ್ದ ರಿಸೆಪ್ಷನ್ ರದ್ದಾಗಿತ್ತು. ಆದರೆ ಇಂದೂ ಕೂಡ ಇದೇ ಪರಿಸ್ಥಿತಿ ಇದ್ದು, ಡೈನಿಂಗ್ ಹಾಲ್​ನಲ್ಲಿ ನಿಂತಿರುವ ನೀರನ್ನು ಸಿಬ್ಬಂದಿ ಹೊರ ಹಾಕುವ ಪ್ರಯತ್ನದಲ್ಲಿರುವ ದೃಶ್ಯ ಕಂಡು ಬಂದಿದೆ. ಬೈಕ್ ಸವಾರ ಅಪಾಯದಿಂದ ಪಾರು: …

Read More »

ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳು ಮಹಿಳೆ ಕಿವಿ ಕಟ್ ಮಾಡಿರುವ ಘಟನೆ ಕುಕನೂರು ಗ್ರಾಮದಲ್ಲಿ ನಡೆದಿದೆ.

ರಾಯಚೂರು: ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳು ಮಹಿಳೆ ಕಿವಿ ಕಟ್ ಮಾಡಿರುವ ಘಟನೆ ಕುಕನೂರು ಗ್ರಾಮದಲ್ಲಿ ನಡೆದಿದೆ. ಹನುಮಂತರಾಯ ಮನೆಗೆ ಕಳ್ಳತನಕ್ಕೆ ಬಂದಿದ್ದ ಮೂವರು ಕಿರಾತಕರು ಕಳ್ಳತನಕ್ಕೆ ಮಹಿಳೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಕಿವಿ ಕತ್ತರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಗ್ರಾಮದಲ್ಲಿ ಭಾರಿ ಮಳೆ ಸುರಿದ ಪರಿಣಾಮ ವಿದ್ಯುತ್ ಕಡಿತಗೊಂಡಿತ್ತು. ಈ ವೇಳೆ ಮೂವರು ಖದೀಮರು ಕಳ್ಳತನಕ್ಕೆ ಬಂದಿದ್ದರು. ಹನುಮಂತರಾಯನ ಮನೆಯಲ್ಲಿ ನಗದು, ಚಿನ್ನಾಭರಣ ಕದ್ದಿದ್ದಾರೆ. ಈ ವೇಳೆ ಅವರ ಕೃತ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಮಹಿಳೆಯ …

Read More »

ಬೆಂಗಳೂರಲ್ಲಿ ಹಾಡಹಗಲೇ ಇಂಥಾ ಘಟನೆ ನಡೆಯುತ್ತಾ ಅನ್ನೋ ಭಯ ಹುಟ್ಟಿಸುತ್ತಿದೆ.

ಬೆಂಗಳೂರು: ಇತ್ತೀಚೆಗಷ್ಟೇ ಚಾಕು ಹಿಡಿದ ವ್ಯಕ್ತಿಯೊಬ್ಬ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಇಬ್ಬರ ಕೊಂದು ಹಾಕಿದ ಘಟನೆ ಮಾಸುವ ಮುನ್ನವೇ ಮತ್ತೊಂದು ಅಂಥದ್ದೇ ಭಯಾನಕ ವಿಡಿಯೋವೊಂದು ವೈರಲ್ ಆಗಿದೆ. ಬೆಂಗಳೂರಿನಲ್ಲಿ ಸದ್ಯ ವೈರಲ್ ಆಗಿರೋ ವಿಡಿಯೋ ನೋಡ್ತಿದ್ರೆ ನಿಜಕ್ಕೂ ಬೆಂಗಳೂರಲ್ಲಿ ಹಾಡಹಗಲೇ ಇಂಥಾ ಘಟನೆ ನಡೆಯುತ್ತಾ ಅನ್ನೋ ಭಯ ಹುಟ್ಟಿಸುತ್ತಿದೆ. ಕೈಯಲ್ಲಿ ಡ್ಯಾಗರ್ ಹಿಡಿದು ಡರೋಡೆಗೆ ಸ್ಕೆಚ್! ಯೆಸ್.. ಸಿಟಿ ಮಾರ್ಕೆಟ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಲೈವ್ ರಾಬರಿಯ …

Read More »

ಹೆಣ್ಣುಮಕ್ಕಳ ತಂದೆತಾಯಿಗಳೇ ಕಾರಣ ಎಂಬ ಆಘಾತಕಾರಿ ಹೇಳಿಕೆ ನೀಡಿ ತಮ್ಮ ಸರ್ಕಾರವನ್ನು ಮುಜುಗರಕ್ಕೆ ನೂಕಿದ್ದಾರೆ .

ಜಾರ್ಖಂಡ್​ನಲ್ಲಿ ಆಡಳಿತರೂಢ ಜೆಎಮ್​ಎಮ್ ಪಕ್ಷದ ಲೊಮಿನ್ ಹೆಂಬ್ರೊಮ್ ಎಂಬ ಹೆಸರಿನ ಶಾಸಕ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಅಪಹರಣದಂಥ ಪ್ರಕರಣಗಳು ಹೆಚ್ಚಾಗಲು ಹೆಣ್ಣುಮಕ್ಕಳ ತಂದೆತಾಯಿಗಳೇ ಕಾರಣ ಎಂಬ ಆಘಾತಕಾರಿ ಹೇಳಿಕೆ ನೀಡಿ ತಮ್ಮ ಸರ್ಕಾರವನ್ನು ಮುಜುಗರಕ್ಕೆ ನೂಕಿದ್ದಾರೆ . ಕಳೆದ ವಾರ ರಾಜ್ಯದ ದುಮ್ಕಾ ಎಂಬಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಹೆಂಬ್ರೊಮ್ ಹಾಗೆ ಹೇಳಿದ್ದಾರೆ . ಇದೇ ಕ್ಷೇತ್ರದಲ್ಲಿ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿರುವುದರಿಂದ ಜೆ …

Read More »

ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಖಂಗಾಂ ಎಂಬ ಪುಟ್ಟ ಹಳ್ಳಿಯಿಂದ ವೃದ್ಧೆಯೊಬ್ಬರು ಬರೋಬ್ಬರಿ 2,200 ಕಿ.ಮೀ ದೂರವಿರುವ ಮಾತಾ ವೈಷ್ಣೋದೇವಿಯ ದೇವಸ್ಥಾನಕ್ಕೆ ತೆರಳಲು ಮುಂದಾಗಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಬುಲ್ಧಾನಾ ಜಿಲ್ಲೆಯ ಖಂಗಾಂ ಎಂಬ ಪುಟ್ಟ ಹಳ್ಳಿಯಿಂದ ವೃದ್ಧೆಯೊಬ್ಬರು ಬರೋಬ್ಬರಿ 2,200 ಕಿ.ಮೀ ದೂರವಿರುವ ಮಾತಾ ವೈಷ್ಣೋದೇವಿಯ ದೇವಸ್ಥಾನಕ್ಕೆ ತೆರಳಲು ಮುಂದಾಗಿದ್ದಾರೆ. ಅದು ಬಸಲ್ಲಿ ಅಥವಾ ಕಾರಿನಲ್ಲಿ ಅಲ್ಲ; ಬದಲಿಗೆ ಸೈಕಲ್​ನಲ್ಲಿ. ಹೌದು, ರೇಖಾ ದೇವ್ಭಂಕರ್​ ಎಂಬುವ 68 ವರ್ಷದ ವೃದ್ಧೆ ಮಹಾರಾಷ್ಟ್ರದ ತಮ್ಮ ಹಳ್ಳಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿಯ ಸನ್ನಿಧಾನಕ್ಕೆ ಹೋಗಿ ದೇವಿಯ ದರ್ಶನ ಪಡೆಯಲು ಮುಂದಾಗಿದ್ದಾರೆ. ಪ್ರಯಾಣದ ವೇಳೆ ತಮಗೆ ಬೇಕಾಗುವ ಅಗತ್ಯ ವಸ್ತುಗಳನ್ನ …

Read More »

ಸಿಡಿಲು ಬಡಿದು ಕುರಿಗಾರರ 45 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಸವದತ್ತಿ : ಇಂದು ತಾಲೂಕಿನಾದ್ಯಂತ ಸುರಿದ ಗುಡುಗು ಸಹಿತ ಸಿಡಿಲು ಭಾರಿ ಮಳೆಗೆ ನವಿಲುತೀರ್ಥ ಡ್ಯಾಮ್ ಹತ್ತಿರ ಸಿಡಿಲು ಬಡಿದು ಕುರಿಗಾರರ 45 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.   ಸ್ಥಳಕ್ಕೆ ಶಾಸಕ ಹಾಗೂ ವಿಧಾನಸಭೆಯ ಉಪಸಭಾದ್ಯಕ್ಷ ಆನಂದ ಮಾಮನಿ ಹಾಗೂ ತಾಲೂಕು ದಂಡಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಂತರ ಕುರಿಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ತಾಲೂಕು ದಂಡಾಧಿಕಾರಿಗಳಿಗೆ ಆನಂದ ಮಾಮನಿ ಸೂಚಿಸಿದರು.  

Read More »

ವಿಶ್ವದ ಎಲ್ಲಾ ರಾಷ್ಟ್ರಗಳಿಗೂ ಕೊರೊನಾ ಲಸಿಕೆ ಲಭ್ಯವಾಗುವಂತೆ ಮಾಡಲು ಈಗಿನಿಂದಲೇಸಿದ್ಧತಾ ಕಾರ್ಯ:W.H.O.

ವಿಶ್ವಸಂಸ್ಥೆ, ಅ.20- ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಹಕಾರ ನೀಡುತ್ತಿರುವ ವಿಶ್ವಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳಲ್ಲಿ ಒಂದಾದ ಯೂನಿಸೆಫ್ (ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ) ವರ್ಷಾಂತ್ಯದ ವೇಳೆಗೆ ಕೋವಿಡ್-19 ಲಸಿಕೆಗೆ ಪೂರ್ವಭಾವಿಯಾಗಿ 52 ಕೋಟಿ ಸಿರಿಂಜ್‍ಗಳನ್ನು ಸಿದ್ಧವಾಗಿಟ್ಟುಕೊಳ್ಳಲಿದೆ.ಮುಂದಿನ ವರ್ಷದ ಆರಂಭದಲ್ಲಿ ಕೊರೊನಾ ಲಸಿಕೆ ಮತ್ತು ಔಷಧಿಗಳು ಲಭ್ಯವಾಗಲಿದ್ದು, ಇವುಗಳ ಪೂರೈಕೆ ಮತ್ತು ನಿರ್ವಹಣೆಯಲ್ಲಿ ಯಾವುದೇ ರೀತಿಯ ಅಡಚಣೆಯಾಗದಂತೆ ಈ ವರ್ಷದ ಅಂತ್ಯದ ವೇಳೆಗೆ 52 ದಶಲಕ್ಷ ಸಿರಿಂಜ್‍ಗಳನ್ನು ದಾಸ್ತಾನು …

Read More »

ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರ ಎದುರು ಪ್ರವಾಹ ಸಂತ್ರಸ್ತೆಯೊಬ್ಬರು ತಮ್ಮ ಅಳಲು ತೋಡಿಕೊಳ್ಳಲು ಮುಂದಾದರು.

ಬಾಗಲಕೋಟೆ: ತಾವು ಪ್ರತಿನಿಧಿಸುವ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಕೊಟ್ಟ ವೇಳೆ ಅವರ ಎದುರು ಪ್ರವಾಹ ಸಂತ್ರಸ್ತೆಯೊಬ್ಬರು ತಮ್ಮ ಅಳಲು ತೋಡಿಕೊಳ್ಳಲು ಮುಂದಾದರು. ತಮಗೊಂದು ಸೂರಿಗಾಗಿ ಸಿದ್ದರಾಮಯ್ಯ ಕಚೇರಿಗೆ ಅರ್ಜಿ ಸಲ್ಲಿಸಲು ಬಾದಾಮಿ ತಾಲೂಕಿನ ನೆಲವಿಗಿ ಗ್ರಾಮದ ಯಲ್ಲವ್ವ ಹನಮಂತಪ್ಪ ಗಾರವಾಡ ಬಂದಿದ್ದರು. ಆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಅವರು ತಮ್ಮ ಆಕ್ರೋಶ ಹೊರಹಾಕಿದರು.    ಇದ್ದವರು ಸರ್ಕಾರದಿಂದ ಎರಡೆರಡು ಮನೆ ಹಾಕಿಸಿಕೊಂಡಾರ. …

Read More »

ಬಿಎಸ್‌ವೈ ಇಳಿಸಲು ಬಿಜೆಪಿಯಲ್ಲಿ ದೊಡ್ಡ ಚರ್ಚೆ ನಡೆದಿದೆ. ಸಿದ್ದರಾಮಯ್ಯ

ಬೆಂಗಳೂರು: ಬಿಎಸ್‌ವೈ ಇಳಿಸಲು ಬಿಜೆಪಿಯಲ್ಲಿ ದೊಡ್ಡ ಚರ್ಚೆ ನಡೆದಿದೆ. ನಾವಂತೂ ರಾಜ್ಯ ಸರ್ಕಾರವನ್ನು ಬೀಳಿಸೋಕೆ ಹೋಗಲ್ಲ ಎಂದು ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುವ ವೇಳೆ ಹೇಳಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಮಾರಂಭವೊಂದರಲ್ಲಿ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ, ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗೋದು ಎಂದು ಹೇಳಿದ್ದರು. ಈ ಹೇಳಿಕೆ ಸಂಬಂಧಿಸಿ ಪ್ರತಿಕ್ರಿಯೆಸಿರುವ ಸಿದ್ದು ಈ ರೀತಿ ಹೇಳಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಶಾಸಕ …

Read More »