ಮುಂಬೈ: ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ಒಳನುಗ್ಗಿದ್ದ ಚೋರರು ಮನೆಯಲ್ಲಿದ್ದ ಚಿನ್ನ, ಒಡವೆ ಹಣವನ್ನೆಲ್ಲಾ ಕದ್ದು ಪರಾರಿಯಾದರು ಅನ್ನೋ ಸುದ್ದಿನ ನಾವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗೃಹಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಅವುಗಳು ಸಹ ಕದಿಯಲು ಯೋಗ್ಯವೆಂಬಂತೆ ಭಾಸವಾಗುತ್ತಿದೆ. ಅಲ್ಲಿಗೂ ಸೈಕಲ್ ಗ್ಯಾಪ್ನಲ್ಲಿ 9 ಮೂಟೆ ಮಾರಿಬಿಟ್ಟಿದ್ದಾರೆ! ಅಂತೆಯೇ, 100 ರೂಪಾಯಿಯ ಗಡಿ ಮುಟ್ಟಿರುವುದರಿಂದ ಈರುಳ್ಳಿ ಸಹ ಕದಿಯಲು ಸೂಕ್ತವಾದ, ಅತ್ಯಮೂಲ್ಯ ವಸ್ತುವಾಗಿ ಮಾರ್ಪಟ್ಟಂತಿದೆ. ಹೌದು, ಮಹಾರಾಷ್ಟ್ರದ …
Read More »ಗೇಲ್ ಆಡಿದ ಎಲ್ಲ ಮ್ಯಾಚ್ ವಿನ್ , ಪಂಜಾಬ್ ಪ್ಲೇ ಆಫ್ ಕನಸು ಜೀವಂತ
ಶಾರ್ಜಾ: ಕ್ರೀಸ್ ಗೇಲ್ ಸ್ಫೋಟಕ ಬ್ಯಾಟಿಂಗ್ ಮತ್ತು ಮನ್‌ದೀಪ್ ಸಿಂಗ್ ಅವರ ಅರ್ಧಶತಕದಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಕೋಲ್ಕತ್ತಾ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 9 ವಿಕೆಟ್ ನಷ್ಟಕ್ಕೆ 149 ರನ್ ಹೊಡೆಯಿತು. ಸುಲಭದ ಸವಾಲನ್ನು ಬೆನ್ನಟ್ಟಿದ್ದ ಪಂಜಾಬ್ 18.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 150 ರನ್ ಹೊಡೆಯಿತು. 12 ಪಂದ್ಯಗಳಿಂದ …
Read More »ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು ಎಂದು ರಾಜ್ಯ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
ಬೆಂಗಳೂರು : ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು ಎಂದು ರಾಜ್ಯ ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ. ಸರಣಿ ಟ್ವೀಟ್ ಮೂಲಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಸಿದ್ದರಾಮಯ್ಯನವರೇ ನಿಮ್ಮ ಆಡಳಿತವು ರೈತರಿಗೆ ಟಿಪ್ಪು ಆಡಳಿತದಂತಿತ್ತು. ರೈತರ ಪಾಲಿಗೆ ಮರಣಕೂಪದಂತಿದ್ದ ನಿಮ್ಮ ಅವಧಿಯಲ್ಲಿ 3000 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡದ್ದು ದುರ್ದೈವ. ಅನ್ನದಾತರು ಸಾವಿಗೆ ಶರಣಾಗುತ್ತಿದ್ದರೆ ನೀವು ಮಾತ್ರ …
Read More »ದಿವಂಗತ ಶಾಸಕ ಬಿ. ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಜೆ ಜಾರಿದ ಪ್ರಸಂಗ ನಡೆದಿದೆ.
ಬಸವಕಲ್ಯಾಣ : ದಿವಂಗತ ಶಾಸಕ ಬಿ. ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುವಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಜೆ ಜಾರಿದ ಪ್ರಸಂಗ ನಡೆದಿದೆ. ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ನಿಂತು ಮಾತನಾಡುವಾಗ ಪಂಜೆ ಸಡಿಲಗೊಂಡು ಬೀಳುವ ಹಂತದಲ್ಲಿತ್ತು. ಅದನ್ನು ಗಮನಿಸಿದ ನಗರ ಠಾಣೆ ಪಿಎಸ್ ಐ ಗುರುಪಾಟೀಲ್ ಅವರು ವೇದಿಕೆಗೆ ಆಗಮಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಮತ್ತು ಹಮನಾಬಾದ ಶಾಸಕ ರಾಜಶೇಖರ್ ಪಾಟೀಲ್ …
Read More »ನೀಟಾಗಿ ಡ್ರೆಸ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಒಬ್ಬ ಗೃಹಿಣಿಯಂತೆ ನುಗ್ಗಿ ಮಹಿಳೆಯರ ಆಭರಣಗಳನ್ನು ಕಳವು ಮಾಡುತ್ತಿದ್ದ ಕಳ್ಳಿಯನ್ನು
ನೀಟಾಗಿ ಡ್ರೆಸ್ ಮಾಡಿಕೊಂಡು ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳಿಗೆ ಒಬ್ಬ ಗೃಹಿಣಿಯಂತೆ ನುಗ್ಗಿ ಮಹಿಳೆಯರ ಆಭರಣಗಳನ್ನು ಕಳವು ಮಾಡುತ್ತಿದ್ದ ಕಳ್ಳಿಯನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ . ಬಂಧಿತ ಮಹಿಳೆಯನ್ನು ಕಮಲಮ್ಮ (26) ಎಂದು ಗುರುತಿಸಲಾಗಿದ್ದು ಆಕೆ ನಾಗರಹೊಳೆಯ ನಿವಾಸಿಯೆಂದು ತಿಳಿದುಬಂದಿದೆ . ಪೊಲೀಸರ ಪ್ರಕಾರ ಕಮಲಮ್ಮನ ಕಳುವು ಮಾಡುವ ರೀತಿ ಸುಲಭವಾಗಿತ್ತು . ಮದುವೆ ನಡೆಯುತ್ತಿದ್ದ ಛತ್ರಗಳಿಗೆ ಆಕೆ ಸದ್ಗೃಹಿಣಿಯಂತೆ ಡ್ರೆಸ್ ಮಾಡಿಕೊಂಡು ಮದುವೆಮನೆಗಳ …
Read More »ಗಜಪಡೆ. ಸದ್ಯ ಗಜಪಡೆಯನ್ನು ಸಿದ್ದಪಡಿಸಲಾಗುತ್ತಿದೆ. ಆನೆಗಳಿಗೆ ಅರಮನೆಯ ಆವರಣದ ತಾತ್ಕಾಲಿಕ ಸ್ನಾನದ ಹೊಂಡದಲ್ಲಿ ಸ್ನಾನ ಮಾಡಿಸಿ ಸಿಂಗರಿಸಲಾಗುತ್ತಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿಯ ಪ್ರಮುಖ ಆಕರ್ಷಣೆ ಎಂದರೆ ಅದು ಗಜಪಡೆ. ಸದ್ಯ ಗಜಪಡೆಯನ್ನು ಸಿದ್ದಪಡಿಸಲಾಗುತ್ತಿದೆ. ಆನೆಗಳಿಗೆ ಅರಮನೆಯ ಆವರಣದ ತಾತ್ಕಾಲಿಕ ಸ್ನಾನದ ಹೊಂಡದಲ್ಲಿ ಸ್ನಾನ ಮಾಡಿಸಿ ಸಿಂಗರಿಸಲಾಗುತ್ತಿದೆ. ಕಲಾವಿದ ನಾಗಲಿಂಗಪ್ಪ ನೇತೃತ್ವದಲ್ಲಿ ಗಜಪಡೆಗೆ ಬಣ್ಣ ಹಚ್ಚುವ ಕೆಲಸ ಆರಂಭವಾಗಿದೆ. ಹುಣಸೂರು ಮೂಲದ ಒಟ್ಟು 5 ಕಲಾವಿದರು ದಸರಾ ಆನೆಗಳಿಗೆ ಪ್ರತೀ ಬಾರಿಯಂತೆ ವಿಶೇಷ ಬಣ್ಣಗಳಿಂದ ಅಲಂಕರಿಸುತ್ತಿದ್ದಾರೆ. …
Read More »ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಹೀಗಾಗಿ ಕಂದಾಯ ಸಚಿವ R.ಅಶೋಕ್ 25 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿದ್ದರು
ಬೆಂಗಳೂರು: ಹೊಸಕೆರೆ ಹಳ್ಳಿಯ ದತ್ತಾತ್ರೇಯ ನಗರ ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿತ್ತು. ಹೀಗಾಗಿ ಕಂದಾಯ ಸಚಿವ R.ಅಶೋಕ್ 25 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿದ್ದರು. ಇದು ಸಂತ್ರಸ್ಥರಿಗೆ ಕೊಂಚ ಖುಷಿ ನೀಡಿತ್ತು. ಆದರೆ ಪರಿಹಾರ ಹಣ ಪಡೆದವರಿಗೆ ಬಿಬಿಎಂಪಿ ಶಾಕ್ ನೀಡಲಿದೆ. ದತ್ತಾತ್ರೇಯನಗರದಲ್ಲಿ ರಾಜಕಾಲುವೆ ಒತ್ತುವರಿಯಾದ ಹಿನ್ನೆಲೆಯಲ್ಲಿ ಒತ್ತುವರಿ ಜಾಗ ಪತ್ತೆಗೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಹಾರ ಪಡೆದ 344 …
Read More »ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸರಳವಾಗಿ ಜಂಬೂಸವಾರಿ ಮೆರವಣಿಗೆ ನಡೆಯುತ್ತಿದ್ದ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ಆಗಿದ್ರೆ ಕೊರೊನಾ ದಸರಾ ಜಂಬೂಸವಾರಿ ಹೇಗಿರುತ್ತೇ ಅನ್ನೋ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕೊರೊನಾ ನಡುವೆ ಜಂಬೂ ಸವಾರಿ ಮೆರವಣಿಗೆ! ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೇವಲ ಆಚರಣೆಗೆ ಮಾತ್ರ ಜಂಬೂಸವಾರಿ ಸೀಮಿತವಾಗಿದೆ. ಕೇವಲ ಅರಮನೆಯ …
Read More »ಸುರೇಶ್ ಅಂಗಡಿ ಸಿಎಂ ಆಗುತ್ತಿದ್ರು ಅಂತಾ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಹೇಳಿಕೆ ಕೊಟ್ರಾ ಅನ್ನೋ ಮಾತು ಕೇಳಿಬಂದಿದೆ.
ಬೆಳಗಾವಿ: ಸುರೇಶ್ ಅಂಗಡಿ ಬದುಕಿದ್ದರೆ 2-3 ತಿಂಗಳಲ್ಲಿ ದೊಡ್ಡ ಹುದ್ದೆ ಸಿಗುತ್ತಿತ್ತು ಎಂದು ಗೋಕಾಕ್‌ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಸುರೇಶ್ ಅಂಗಡಿಗೆ ಒಳ್ಳೆಯ ಭವಿಷ್ಯವಿರುತ್ತಿತ್ತು. ಅವರಿಗೆ ವಿಚಿತ್ರ ಹುದ್ದೆ ಸಿಗುತ್ತಿತ್ತು ಎಂದು ರಮೇಶ್ ಹೇಳಿದ್ದಾರೆ. ಈ ಮೂಲಕ ಸುರೇಶ್ ಅಂಗಡಿ ಸಿಎಂ ಆಗುತ್ತಿದ್ರು ಅಂತಾ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಹೇಳಿಕೆ ಕೊಟ್ರಾ ಅನ್ನೋ ಮಾತು ಕೇಳಿಬಂದಿದೆ. ಆದರೆ ಸುರೇಶ್ ಅಂಗಡಿ ನಮ್ಮನ್ನಗಲಿದ್ದು ದುರ್ದೈವ. ಒಳ್ಳೆಯವರನ್ನು ಆ ದೇವರು …
Read More »ನವರಾತ್ರಿಯ ಕೊನೆಯ ದಿನ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುತಾತ್ಮರಿಗೆ ನಮನ ಸಲ್ಲಿಸಿ, ಶಸ್ತ್ರಾಸ್ತ್ರ ಪೂಜೆ ಸಲ್ಲಿಸಿದ್ದಾರೆ.
ಪಶ್ಚಿಮ ಬಂಗಾಳ: ನವರಾತ್ರಿಯ ಕೊನೆಯ ದಿನ, ಆಯುಧ ಪೂಜೆಯ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹುತಾತ್ಮರಿಗೆ ನಮನ ಸಲ್ಲಿಸಿ, ಶಸ್ತ್ರಾಸ್ತ್ರ ಪೂಜೆ ಸಲ್ಲಿಸಿದ್ದಾರೆ. ಡಾರ್ಜಿಲಿಂಗ್ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕ ಬಳಿ ತೆರಳಿ ರಾಜನಾಥ್ಸಿಂಗ್ ಹುತಾತ್ಮರಿಗೆ ಗೌರವ ಸಲ್ಲಿಸಿದ್ದಾರೆ. ಜೊತೆಗೆ ರಕ್ಷಣಾ ಸಚಿವರು ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದ್ರು. ಈ ವೇಳೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಉಪಸ್ಥಿತರಿದ್ದರು. ಸದ್ಯ …
Read More »
Laxmi News 24×7