Breaking News

ಚಿತ್ರಸಾಹಿತಿ ಕಲ್ಯಾಣ್ ಪತ್ನಿ ಕುಟುಂಬದ ಆಪ್ತನ ಬಳಿ ಸಿಕ್ತು ಮಾಟ ಮಂತ್ರದ ವಸ್ತುಗಳು!

Spread the love

ಬೆಳಗಾವಿ: ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ವಶಕ್ಕೆ ಪಡೆದಿರುವ ಶಿವಾನಂದ ವಾಲಿ ಬಳಿ ಮಾಟ ಮಂತ್ರದ ವಸ್ತುಗಳು ಸಿಕ್ಕಿವೆ.

 ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ನಿವಾಸಿ ಶಿವಾನಂದ ವಾಲಿ ವಿರುದ್ಧ ಮಾಟ ಮಂತ್ರದ ಆರೋಪ ಕೇಳಿ ಬಂದಿದೆ.

ಶಿವಾನಂದ ವಾಲಿ ಕೆ.ಕಲ್ಯಾಣ್ ಪತ್ನಿ ಕುಟುಂಬದ ಆಪ್ತ. ಈ ಹಿಂದೆ ಕೆ‌.ಕಲ್ಯಾಣ್ ಶಿವಾನಂದ ವಾಲಿ ವಿರುದ್ಧ ಅಪಹರಣ ಆರೋಪ ಮಾಡಿದ್ದರು. ಪತ್ನಿ, ಅತ್ತೆ, ಮಾವರನ್ನು ಅಪಹರಣ ಮಾಡಿದ್ದಾರೆಂದು ಆರೋಪಿಸಿದ್ದರು. ನಂತರ ಪುಸಲಾಯಿಸಿ ಪತ್ನಿ, ಅತ್ತೆ, ಮಾವ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. 19 ಲಕ್ಷ 80 ಸಾವಿರ ರೂ. ಹಣ ಶಿವಾನಂದ ಅಕೌಂಟ್‌ಗೆ ವರ್ಗಾವಣೆ ಮಾಡಲಾಗಿದೆಯಂತೆ.

ಅಷ್ಟೇ ಅಲ್ಲದೇ ಜಾಯಿಂಟ್ ಪ್ರಾಪರ್ಟಿ ಆಸ್ತಿ ತನ್ನ ಹೆಸರಿಗೆ ಮಾಡಿಸಿಕೊಂಡ ಆರೋಪ ಕೂಡ ಇದೆ. ಈ ಬಗ್ಗೆ ಬೆಳಗಾವಿಯ ಮಾಳಮಾರುತಿ ಠಾಣೆಗೆ ಕೆ.ಕಲ್ಯಾಣ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಶಿವಾನಂದ ವಾಲಿಯನ್ನು ಬೀಳಗಿ ಪೊಲೀಸರು ವಶಕ್ಕೆ ಪಡೆದಿದ್ದರು. ನಿನ್ನೆ ಮಾಳಮಾರುತಿ ಠಾಣೆಗೆ ಶಿವಾನಂದನನ್ನು ಹಸ್ತಾಂತರಿಸಿದ್ದು, ಸದ್ಯ ಶಿವಾನಂದ ವಾಲಿ ಮಾಳಮಾರುತಿ ಠಾಣೆ ಪೊಲೀಸರ ವಶದಲ್ಲಿದ್ದಾರೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ