Breaking News

ಸಿಎಂ ಬಿ ಎಸ್ ಯಡಿಯೂರಪ್ಪ ಓರ್ವ ಸರ್ವಾಧಿಕಾರಿ ; ವಾಟಾಳ್ ನಾಗರಾಜ್ ಗಂಭೀರ ಆರೋಪ

Spread the love

ಬೆಳಗಾವಿ : ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳನ್ನು ನಾನು ನೋಡಿದ್ದೇನೆ. ಆದರೆ, ಬಿ ಎಸ್ ಯಡಿಯೂರಪ್ಪ ಅವರು ಓರ್ವ ಸರ್ವಾಧಿಕಾರಿ ಮುಖ್ಯಮಂತ್ರಿ. ನನ್ನನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರವೇಶ ಆಗದಂತೆ ನೋಡಿಕೊಂಡಿದ್ದಾರೆ. ನನ್ನ ವಿರುದ್ಧ ಶ್ರೀಮಂತರನ್ನು ನಿಲ್ಲಿಸಿ ಸೋಲಿಸುತ್ತಾರೆ ಎಂದು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ವಿಶೇಷ ಅಧಿವೇಶನ ನಡೆಸಬೇಕು. ಪ್ರವಾಹ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ, ವಿಶೇಷ ಪ್ಯಾಕೆಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ವಾಟಾಳ್ ನಾಗರಾಜ್ ಧರಣಿ ನಡೆಸಿದರು. ಸುವರ್ಣ ಸೌಧದ ಗೆಟ್ ಮುಂಭಾಗದಲ್ಲಿ ಮಲಗಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಪ್ರತಿ ಸಲ ಬೆಳಗಾವಿಯ ಸುವರ್ಣ ಸೌಧದ ಬಳಿ ಧರಣಿ ಮುಂದಾಗುತ್ತಿದ್ದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಹಿರೇಬಾಗೇವಾಡಿ ಟೋಲ್ ಬಳಿಯಲ್ಲಿ ತಡೆಯುತ್ತಿದ್ದರು.

ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಾಪಸ್ ಕಳುಹಿಸಿತ್ತಿದ್ದರು. ಆದರೆ, ಈ ಸಲ ಮಾತ್ರ ಪೊಲೀಸರಿಗೆ ಕಣ್ಣುತಪ್ಪಿಸಿದ ವಾಟಾಳ್ ನಾಗರಾಜ್ ಧಾರವಾಡದಿಂದ ಸಾರಿಗೆ ಬಸ್ ನಲ್ಲಿ ಆಗಮಿಸಿದರು.

ನೇರವಾಗಿ ಸುವರ್ಣ ಸೌಧದ ಬಳಿ ಬಂದು ಧರಣಿ ಮಾಡಲು ಆರಂಭಿಸಿದರು.ನಂತರ ಮಾಧ್ಯಮಗಳ ಜತೆಗೆ ಮಾತನಾಡಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ವರ್ಷಕ್ಕೆ ಒಮ್ಮೆ ಮಾತ್ರ ನಗುತ್ತಾರೆ. ಅವರಿಗೆ ನಗುವ ನರಗಳೇ ಇಲ್ಲ, ಮೈಯಲ್ಲಿ ದ್ವೇಷ, ಅಸುಹ್ಯೆ ಮಾಡುವ ವ್ಯಕ್ತಿಯ ಕೈಯಲ್ಲಿ ರಾಜ್ಯ ಸಿಕ್ಕಿದೆ. ಸಂಪುಟ ಮಂತ್ರಿಗಳಿಗೆ ಬಿ ಎಸ್ ಯಡಿಯೂರಪ್ಪ ಅವರನ್ನು ಪ್ರಶ್ನೆ ಮಾಡುವ ತಾಕತ್ತು ಇಲ್ಲ ಎಂದು ವಾಗ್ದಾಳಿ ಮಾಡಿದರು. : ಮೂರು ದಿನಕ್ಕೆ ಅಧಿವೇಶನ ಮುಗಿಸುವ ಸರ್ಕಾರದ ಪ್ರಸ್ತಾಪಕ್ಕೆ ವಿಪಕ್ಷಗಳ ನಕಾರ; 6 ದಿನ ಅಧಿವೇಶನ

ಬೆಳಗಾವಿ ಜಿಲ್ಲೆಯ ಸಂಸದರು, ಶಾಸಕರು ಕೇವಲ ಮಂತ್ರಿಯಾಗುವುದಕ್ಕೆ ಲಾಭಿ ಮಾಡುತ್ತಾರೆ. ಆದರೆ, ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯಾರೊಬ್ಬರು ಮಾತನಾಡಲ್ಲ. ಇಲ್ಲಿನ ಎಲ್ಲಾ ಜನಪ್ರತಿನಿಧಿಗಳು ಎಂಇಎಸ್ ಏಜೆಂಟರಂತೆ ವರ್ತನೆ ಮಾಡುತ್ತಾರೆ. ಇವರಿಗೆ ನಾಡಿನ ಅಭಿವೃದ್ಧಿಯ ಬಗ್ಗೆ ಕಳಕಳಿ ಇಲ್ಲ ಎಂದು ಟೀಕಿಸಿದ್ದರು.

ಪ್ರವಾಹ ಪೀಡಿತ ಸ್ಥಳ ಕಾಮಗಾರಿಗೆ ವಿಶೇಷ ಪ್ಯಾಕೆಜ್ ಘೋಷಣೆ ಮಾಡಲು ಆಗ್ರಹ’ಕಳೆದ ವರ್ಷ ಭೀಕರ ಪ್ರವಾಹ ಕಾರಣ, ಈ ವರ್ಷ ಕೊರೋನಾ ವೈರಸ್ ಹಾವಳಿಯಿಂದ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿದ್ದ ಅಧಿವೇಶನನ್ನು ರದ್ದು ಮಾಡಲಾಗಿದೆ. ಎರಡು ವರ್ಷಗಳಿಂದ ಸುವರ್ಣ ಸೌಧದ ಬಳಕೆ ಅಷ್ಟಕ್ಕೆ ಅಷ್ಟೆಯಾಗಿದೆ. ಇದೀಗ ಸರ್ಕಾರ ಜಿಲ್ಲಾ ಮಟ್ಟದ ಅನೇಕ ಕಚೇರಿಗಳನ್ನು ಸೌಧಕ್ಕೆ ಶಿಫ್ಟ್ ಮಾಡಲು ಆದೇಶ ನೀಡಿದೆ. ಅನೇಕ ಕಚೇರಿಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ