ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ 2ನೇ ಅತೀ ದೊಡ್ಡ ಮತದಾರರಾಗಿ ಕುರುಬ ಸಮುದಾಯದವರಿದ್ದಾರೆ. ಹೀಗಾಗಿ ಈ ಬಾರಿಯ ಬೆಳಗಾವಿ ಲೋಕಸಭೆಯ ಟಿಕೆಟ್ ಕುರುಬ ಸಮುದಾಯದವರಿಗೆ ನೀಡಬೇಕು ಎಂದು ಕುರುಬ ಸಮುದಾಯದ ಮುಖಂಡ ರಾಜೇಂದ್ರ ಸಣ್ಣಕ್ಕಿ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಸಂಬಂಧ ನಡೆದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
ಸಣ್ಣಕ್ಕಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಸಮಾಜದ ಎರಡೂವರೆ ಲಕ್ಷ ಮತದಾರರಿದ್ದಾರೆ. 2ನೇ ಅತೀ ದೊಡ್ಡ ಸಮುದಾಯ ನಮ್ಮದಾಗಿದೆ. ಹೀಗಾಗಿ ನಮ್ಮ ಸಮುದಾಯದವರಿಗೆ ಎಲ್ಲಾ ಪಕ್ಷಗಳು ಪ್ರಾತಿನಿಧ್ಯ ನೀಡಬೇಕು. ನಾನು ವ್ಯಕ್ತಿಗತವಾಗಿ ಇವರಿಗೆ ಟಿಕೆಟ್ ನೀಡಿ ಎಂದು ಹೇಳುವುದಿಲ್ಲ. ಸಮಾಜದ ಯಾರಿಗಾದ್ರೂ ಟಿಕೆಟ್ ನೀಡಿದ್ರೂ ನಮಗೆ ಸಂತೋಷ ಆಗುತ್ತದೆ ಎಂದು ಹೇಳಿದ್ದಾರೆ.