Breaking News

ಅಪ್ರಾಪ್ತ ಬಾಲಕಿ ಅಪಹರಣ, ಕೊಲೆ ಕೇಸ್: ಹಾರುಗೇರಿ ಪೊಲೀಸರಿಂದ ಮೂವರ ಬಂಧನ

Spread the love

ಬೆಳಗಾವಿ: ಅಪ್ರಾಪ್ತ ಬಾಲಕಿಯ ಅಪಹರಿಸಿ ಕೊಲೆ ಮಾಡಿದ ಆರೋಪದ ಅಪ್ರಾಪ್ತ ಬಾಲಕ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಆದರ್ಶ ದತ್ತು ಪಾರ್ಥನಳ್ಳಿ (24), ಕಿರಣ ಕೆಂಚಪ್ಪ ಜಗದಾಳ (24) ಹಾಗೂ ಅಪ್ರಾಪ್ತ ಬಾಲಕ ಬಂಧಿತರು.

ಹಾರೂಗೇರಿ ಪೊಲೀಸ್ ಠಾಣೆಯಲ್ಲಿ 2019ರ ನವೆಂಬರ್‌ನಲ್ಲಿ ಅಪ್ರಾಪ್ತ ಬಾಲಕಿಯ ಅಪರಣದ ಕುರಿತು ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ಬಾಲಕಿಯೊಂದಿಗೆ ಸಲುಗೆ ಹೊಂದಿದ್ದ ಮಾಹಿತಿ ಪಡೆದುಕೊಂಡು ಆದರ್ಶ ಪಾರ್ಥನಳ್ಳಿ ಎಂಬಾತನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಏನಿದು ಘಟನೆ?

ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಆದರ್ಶ ಅಪ್ತಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ. 2019 ನವೆಂಬರ್ ತಿಂಗಳಲ್ಲಿ ಆಕೆಯನ್ನು ಧಾರವಾಡಕ್ಕೆ ಕರೆದೊಯ್ದಿದ್ದ. 2020ರ ಮೇ ವರೆಗೆ ಧಾರವಾಡದಲ್ಲಿಯೇ ವಾಸವಾಗಿದ್ದ ಆದರ್ಶ ಬಳಿಕ 2020ರ ಮೇ ನಲ್ಲಿ ನಿಪ್ಪಾಣಿ ಸಮೀಪದ ಗ್ರಾಮವೊಂದರ ಸ್ನೇಹಿತನ ಸಂಬಂಧಿಕರ ಮನೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಇರಿಸಿದ್ದರು.

ಈ ವೇಳೆ ಬಾಲಕಿ ಆದರ್ಶನನ್ನು ಬಿಟ್ಟು ಬೇರೆಯವರೊಂದಿಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಇದರಿಂದ ಕುಪಿತಗೊಂಡ ಆತ ಸ್ನೇಹಿತರೊಂದಿಗೆ ಸೇರಿ 2020 ರ ಜೂ.9 ರಂದು ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕರೆತಂದು ಬಾಲಕಿಗೆ ಮದ್ಯ ಸೇವನೆ ಮಾಡಿಸಿದ್ದರು. ನಂತರ ಮಚ್ಚಿನಿಂದ ಕುತ್ತಿಗೆ ಕೊಯ್ದು ಆಕೆಯನ್ನು ಕೊಲೆ ಮಾಡಿ ಶವವನ್ನು ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದರು.

ಮೂವರನ್ನು ಕಣಕುಂಬಿಯ ಕೊಲೆ ಮಾಡಿರುವ ಸ್ಥಳ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಬಾಲಕಿಯ ಆಸ್ತಿಪಂಜರ ಪತ್ತೆಯಾಗಿದೆ.

ಪೊಲೀಸರು ಮೂವರು ಅಪಹರಣ ಮತ್ತು ಕೊಲೆಗೆ ಬಳಕೆ ಮಾಡಿರುವ ಮಚ್ಚು, ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದ್ದು, ನ್ಯಾಯಾಲಯ ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ