Breaking News

ಇಡಿ ಅಧಿಕಾರಿಗಳು ಫಿಲ್ಡ್​​ಗೆ ಇಳಿದು ಹುಡುಕಿದ್ರು ಸಿಗದ ಬಿಬಿಎಂಪಿ ಕೊರೆದ 9,588 ಕೊಳವೆ ಬಾವಿಗಳು

Spread the love

ಬೆಂಗಳೂರು: ನಗರದಲ್ಲಿ ಕೊಳವೆ ಬಾವಿ (Borewells) ಹಾಗೂ ಶುದ್ಧಕುಡಿಯುವ ನೀರಿನ ಘಟಕ (Drinking water plants) ಸ್ಥಾಪನೆ ವಿಚಾರದಲ್ಲಿ ನಡೆದ ಮಹಾ ಭ್ರಷ್ಟಾಚಾರದ (Corruption) ಬೆನ್ನು ಬಿದ್ದ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವಂತಾಗಿದೆ. ಬಿಬಿಎಂಪಿ (BBMP) ವತಿಯಿಂದ ಕೊರೆಯಲಾದ ಸಾವಿರಾರು ಕೊಳವೆ ಬಾವಿಗಳೇ ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲ. ಸ್ಥಳ ಪರಿಶೀಲನೆ ವೇಳೆಯೂ 9,588 ಕೊಳವೆ ಬಾವಿಗಳ ಪೈಕಿ 5 ಸಾವಿರ ಕೊಳವೆ ಬಾವಿಗಳ ಲೆಕ್ಕ ಸಿಗುತ್ತಿಲ್ಲ. ನೂರಾರು ಕೋಟಿ ಖರ್ಚು ಮಾಡಿ ಕೊರೆಸಿದ ಕೊಳವೆ ಬಾವಿಗಳೇ ನಾಪತ್ತೆಯಾಗಿದೆ. ಹಾಗಿದ್ದರೆ ಬಿಬಿಎಂಪಿಯಿಂದ ಕೊರೆದಿರುವ ಕೊಳವೆ ಬಾವಿಗಳು ಎಲ್ಲಿವೆ?

2016, 2017-2018 ರಲ್ಲಿ ಕೊಳವೆ ಬಾವಿ, R.O ಘಟಕಗಳ ಸ್ಥಾಪನೆ ಹೆಸರಲ್ಲಿ ನಡೆದ ಒಟ್ಟು 969 ಕೋಟಿ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಮನಿ ಲಾಂಡ್ರಿ ಆ್ಯಕ್ಟ್ ಅಡಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೋಟೀಸ್ ಜಾರಿ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಆರ್ ರಮೇಶ್ ನೀಡಿದ ದೂರಿನ್ವಯ ತನಿಖೆ ನಡೆಯುತ್ತಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ