Breaking News

ಕುಂದಾನಗರಿಯಲ್ಲಿ ರಾಜ್ಯೋತ್ಸವಕ್ಕೆ ಭಾರೀ ಸಿದ್ಧತೆ

Spread the love

ಬೆಳಗಾವಿ : ಮೈಸೂರಿಗೆ ಹೇಗೆ ದಸರಾ ಪ್ರಾಮುಖ್ಯವೋ ಹಾಗೆ ರಾಜ್ಯೋತ್ಸವ ಬೆಳಗಾವಿಗೆ ಪ್ರಾಮುಖ್ಯ.

ಇಲ್ಲಿ ನಡೆಯುವ ರಾಜ್ಯೋತ್ಸವ ಸಂಭ್ರಮ ಕಣ್ತುಂಬಿಕೊಳ್ಳೋದೇ ಸಂಭ್ರಮ.ಕೊರೋನಾ ಹಾಗೂ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ರಾಜ್ಯೋತ್ಸವ ಈ ಬಾರಿ ಅದ್ದೂರಿಯಾಗಿ ನೆರವೇರಲಿದೆ. ಈ ಮಧ್ಯೆಯೇ ರಾಜ್ಯೋತ್ಸವದಂದೇ ಕರಾಳ ದಿನಾಚರಣೆಗೆ MES ಮುಂದಾಗಿದೆ.ಇದು ಕನ್ನಡಿಗರನ್ನು ಕೆರಳಿಸಿದೆ.

 

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ ದಿನಕ್ಕೆ ಕರೆ ನೀಡುತ್ತಿರುವ ಎಂಇಎಸ್ ಪುಂಡರಿಗೆ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವಸೇನೆ ‌ಬೆಂಬಲಕ್ಕೆ ನಿಂತಿದೆ. ಶತಾಯ ಗತಾಯ ರಾಜ್ಯೋತ್ಸವದಂದೇ ಕರಾಳ ದಿನಾಚರಣೆ ಮಾಡೇ ಮಾಡ್ತೀವಿ ಅಂತಾ MES ತಿಳಿಸಿದೆ.

 

MESನ ಈ ಗೊಡ್ಡು ಬೆದರಿಕೆಗೆ ಬಗ್ಗದ ಬೆಳಗಾವಿ ಜಿಲ್ಲಾಡಳಿತ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಮಾಡಿಕೊಂಡಿದೆ‌.


Spread the love

About Laxminews 24x7

Check Also

ದರ್ಗಾ ಮೇಲೆ ಬಾಣ ಬಿಟ್ಟಂತ ಸನ್ನೆ: ಬೆಳಗಾವಿಯಲ್ಲಿ ಏಳು ಜನರ ಮೇಲೆ ಎಫ್ಐಆರ್ ದಾಖಲು

Spread the love ಬೆಳಗಾವಿ: ಶೋಭಾ ಯಾತ್ರೆ ವೇಳೆ ಹಿಂದೂ ನಾಯಕಿಯೊಬ್ಬರು ದರ್ಗಾ ಬಳಿ ಬಾಣ ಬಿಟ್ಟಂತೆ ಸನ್ನೆ ಮಾಡಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ