Breaking News

ಮಿತ್ರಮಂಡಳಿ ಅದೆಲ್ಲಾ ಹಳೆ ಕಥೆ..ಈಗ ನಾವೆಲ್ಲಾ ಒಂದೇ..ರಮೇಶ ಜಾರಕಿಹೊಳಿ

Spread the love

ಬಿಜೆಪಿಯ ಎಲ್ಲಾ ಶಾಸಕ ಮಿತ್ರರು, ಸಚಿವರು ಒಟ್ಟಾಗಿದ್ದೇವೆ. ಮಿತ್ರಮಂಡಳಿ ಅದೆಲ್ಲಾ ಹಳೆ ಕಥೆ, ಈಗ ನಾವೆಲ್ಲಾ ಒಂದೇ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಖಾತೆ ಹಂಚಿಕೆಯಲ್ಲ ಅಸಮಾಧಾನ ವಿಚಾರ ಸಂಬಂಧ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಬೆಂಗಳೂರಿನಲ್ಲಿ ಮಾತನಾಡಿದ ರಮೇಶ ಜಾರಕಿಹೊಳಿ ಸುಧಾಕರ್ ಜೊತೆ ಈ ಸಂಬಂಧ ದೂರವಾಣಿ ಮೂಲಕ ಮಾತನಾಡಿದ್ದೇನೆ. ಮುನಿರತ್ನ ಜೊತೆ ಮಾತನಾಡಬೇಕಿತ್ತು. ಆದ್ರೆ ಎತ್ತಿನಹೊಳೆ ಯೋಜನೆ ವೀಕ್ಷಣೆಗೆ ತೆರಳುತ್ತಿದ್ದೇನೆ. ಸಾಯಂಕಾಲ ಬಂದು ಎಲ್ಲರೂ ಕೂಡಿಕೊಂಡು ಮಾತಾಡಿಕೊಳ್ಳುತ್ತೆ, ಎಲ್ಲವೂ ಸರಿಯಾಗುತ್ತದೆ. ಮುಖ್ಯಮಂತ್ರಿಗಳು ಸಮರ್ಥವಾಗಿ ಬಗೆಹರಿಸುತ್ತಾರೆ ಎಂದರು. ಇನ್ನು ಖಾತೆ ಹಂಚಿಕೆ ಸಂಬಂಧ ಸಿಎಂ ಜೊತೆ ಈವರೆಗೂ ನಾನು ಮಾತನಾಡಿಲ್ಲ. ಪ್ರಸಂಗ ಬಂದ್ರೆ ಮಾತನಾಡುತ್ತೇನೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಇನ್ನು ಖಾತೆ ಹಂಚಿಕೆ ಮತ್ತು ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ಅದೇ ರೀತಿ ಮಿತ್ರಮಂಡಳಿ ಎಲ್ಲಾ ಹಳೆ ಕಥೆ, ಈಗ ಬಿಜೆಪಿಯ ಎಲ್ಲಾ ಶಾಸಕರು, ಸಚಿವರು ಒಕ್ಕಟ್ಟಾಗಿದ್ದೇವೆ ಎಂದು ಇದೇ ವೇಳೆ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ಯುದ್ಧದ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯ ಮಾಡಬಾರದು: ಆರ್.ಅಶೋಕ್

Spread the loveಬೆಂಗಳೂರು: ರಾಜ್ಯದಲ್ಲಿ ಗ್ಯಾಸ್ ಅಭಾವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ  ರಾಜಕೀಯ ಮಾಡಬಾರದು ಎಂದು ವಿಪಕ್ಷ ನಾಯಕ ಆರ್.ಅಶೋಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ