ಬೆಂಗಳೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನದ ಗಾಥೆಯ ಕುರಿತಾದ ಮಹಾನಾಯಕ ಧಾರವಾಹಿ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ಇದೀಗ ಈ ಧಾರವಾಹಿಯ ಪ್ರಸಾರವನ್ನು ನಿಲ್ಲಿಸುವಂತೆ ಖಾಸಗಿ ವಾಹಿನಿ ಮೇಲೆ ಕೆಲವರು ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಮಹಾನಾಯಕ ಧಾರವಾಹಿ ನಿಲ್ಲಿಸುವಂತೆ ಹಲವಾರು ದೂರವಾಣಿ ಕರೆಗಳು ಬರುತ್ತಿವೆ. ಮಧ್ಯರಾತ್ರಿ ಕರೆ ಮಾಡಿ ಧಾರವಾಹಿ ನಿಲ್ಲಿಸುವಂತೆ ಕೆಲವರು ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಘವೇಂದ್ರ ಹುಣಸೂರು, ಇಂತಹ ಯಾವುದೇ ಬೆದರಿಕೆಗೆ ಹೆದರುವುದಿಲ್ಲ. ಮಹಾನಾಯಕ ಧಾರವಾಹಿ ನಿಲ್ಲುವುದಿಲ್ಲ. ಮಹಾನಾಯಕ ನಮ್ಮ ಹೆಮ್ಮೆಯಾಗಿದೆ. ಅದರ ಬಗ್ಗೆ ನಮಗೆ ವೈಯಕ್ತಿಕವಾಗಿ ಬಹಳ ಪ್ರೀತಿಯಿದೆ ಎಂದು ಹೇಳಿದ್ದಾರೆ.